POLICE BHAVAN KALABURAGI

POLICE BHAVAN KALABURAGI

30 December 2011

GULBARGA DIST REPORTED CRIMES

ಅಪಘಾತ ಪ್ರಕರಣ:
ಫರಹತಾಬಾದ ಪೊಲೀಸ್ ಠಾಣೆ:
ಶ್ರೀ ಏಜಾಜ ಅಹ್ಮದ ತಂದೆ ಅಬ್ದುಲ್ ರಹೀಮ ಪಟೇಲ ಸಾ: ಅಫಜಲಪೂರ ರವರು ನಾನು ಮತ್ತು ಚಾಲಕ ಶ್ರೀನಿವಾಸ ತಂದೆ ಮುದ್ದುಗೌಡ ಹಾಗೂ ಕ್ಲೀನರ ಬಬುಲು ಕೂಡಿಕೊಂಡು ಎಮ್ ಆರ್ ಬಸ್ ಎಂ ಹೆಚ್ -04 ಜಿ-5540 ನೇದ್ದು ಚಲಾಯಿಸಿಕೊಂಡು ಹೊರಟಿದ್ದು ಅದರ ಚಾಲಕ ಗುಲಬರ್ಗಾದಿಂದ ಅಫಜಲಪೂರಕ್ಕೆ ಹೋಗುವ ಕುರಿತು ಹೊರಟಿದ್ದರು ಬಸ್ ಚಾಲಕನಾದ ಶ್ರೀನಿವಾಸ ಈತನು ಎಮ್ ಆರ್ ಬಸ್ ನಂ. ಎಂ ಹೆಚ್ -04 ಜಿ-5540 ನೇದ್ದು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿದ್ದರಿಂದ ಟೈಯರಿನ ರಾಡ್ ಕಟ್ಟಾಗಿ ಮತ್ತು ಎಕ್ಸಲ್ ಕಟ್ಟಾಗಿ ರಸ್ತೆಯ ಎಡಗಡೆ ತೆಗ್ಗಿನಲ್ಲಿ ಪಲ್ಟಿಯಾಗಿರುತ್ತದೆ ಇದರಿಂದ ನನಗೆ ಅಥವಾ ಚಾಲಕನಿಗೆ ಯಾವುದೆ ಗಾಯ ಆಗಿರುವದಿಲ್ಲ ಅಂತ ತಿಳಿಸಿದ ಮೇರೆಗೆ ನಾನು ನೋಡಿಕೊಂಡು ಆತನ ವಿರುದ್ದ ದೂರು ಸಲ್ಲಿಸಿಲು ದೂರು ಸಲ್ಲಿಸಿದ ಮೇರೆಗೆ ಠಾಣೆ ಗುನ್ನೆ ನಂ: 224/2011 ಕಲಂ 279 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಜೂಜಾಟ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ
:ದಿನಾಂಕ:30/12/2011 ರಂದು ಶಹಾಬಾದದ ಇಂಡಿಯನ ಲಾಡ್ಜ್‌ ಎದರುಗಡೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಕುಳಿತು ಅಂದರ ಬಾಹರ ಎಂಬ ಇಸ್ಪೀಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಪಿಐ ರವರು ಸಿಬ್ಬಂದಿಯವರು ಹೋಗಿ ನೋಡಲು ಜೂಜಾಟ ಆಡುತ್ತಿದ್ದನ್ನು ಖಚಿತ ಪಡಿಸಿಕೊಂಡು ಅವರನ್ನು ವಶಕ್ಕೆ ತೆಗೆದುಕೊಂಡು ಅವರಿಂದ ನಗದು ಹಣ ಮತ್ತು ಇಸ್ಪೀಟ ಎಲೆಗಳು ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆ ಗುನ್ನೆ ನಂ: 204/2011 ಕಲಂ 87 ಕೆ.ಪಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಳ್ಳಲಾಗಿದೆ.
ಜೂಜಾಟ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:
ದಿನಾಂಕ 29/12/2011 ರಂದು ಮದ್ಯಾಹ್ನ ಸುಮಾರಿಗೆ ತಾಜಸುಲ್ತಾನಪುರ ಗ್ರಾಮದ ಸೀಮಾಂತರದಲ್ಲಿ ಬರುವ ಶ್ರೀ ರೇವಣಸಿದ್ದೇಶ್ವರ ಗುಡಿಯ ಹತ್ತಿರ ಅಂದರ ಬಾಹರ ಜೂಜಾಟ ಆಡುತ್ತಿದ್ದಾಗ ಪಿ.ಎಸ.ಐ ರವರು ಮತ್ತು ಸಿಬ್ಬಂದಿಯವರು ದಾಳಿ ಮಾಡಿ ಆನಂದ ತಂ/ ವಿಶ್ವನಾಥ ಬಾಲಣ್ಣನವರ ಸಾ: ಭವಾನಿ ನಗರ ಗುಲಬರ್ಗಾ, ಮಹೇಬೂಬ ತಂ/ ನಬಿಲಾಲ ಯಾದಪೂರ ಸಾ: ಭವಾನಿ ನಗರ, ರಹೀಮ ತಂ/ ರುಕುಮ ನದಾಫ ಸಾ: ಭವಾನಿ ನಗರ, ಪ್ರವೀಣ ತಂ/ ಕಲ್ಯಾಣಿ ದ್ಯಾಣ್ಣನವರ್‌ ಸಾ: ರಾಜೀವ ಗಾಂಧಿ ಕಾಲನಿ, ಶಿವರಾಜ ತಂ/ ಬಸವರಾಜ ತೋಟದ ಸಾ: ಭವಾನಿ ನಗರ ಗುಲಬರ್ಗಾ ರವರನ್ನು ದಸ್ತಗಿರಿ ಮಾಡಿ ಅವರಿಂದ ನಗದು ಹಣ 4600/- 52 ಇಸ್ಪೇಟ ಎಲೆಗಳು ಹಾಗೂ ಒಂದು ಮೋಬೈಲ ಅ, ಕಿ 500/.- ರೂ ಹೀಗೆ ಒಟ್ಟು 5100/.- ರೂ ಗಳು ವಶಪಡಿಸಿಕೊಂಡು ಠಾಣೆ ಗುನ್ನೆ ನಂ: 386/2011 ಕಲಂ 87 ಕೆ.ಪಿ ಆಕಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.