POLICE BHAVAN KALABURAGI

POLICE BHAVAN KALABURAGI

20 May 2011

GULBARGA DISTRICT REPORTED CRIMES

ಜಾತಿ ನಿಂದನೆ ಪ್ರಕರಣ :

ಶಹಾಬಾದ ನಗರ ಠಾಣೆ : ಶ್ರೀ ಚಂದ್ರಮಾ ತಂದೆ ಪೀರಪ್ಪಾ ಕಾಂಬಳೆ ಸಾ:ದೇವನ ತೆಗನೂರ ರವರು ನಾನು ದೇವನ ತೆಗನೂರ
ಗ್ರಾಮದಲ್ಲಿ ಜಮೀನು ಹೊಂದಿದ್ದು ನನ್ನ ಅಣ್ಣನ ಮಗ ಶಿವಯೋಗಿ ಕಾಂಬಳೆ ಇವರಿಗೆ ಸೇರಿದ ಜಮೀನಿನಲ್ಲಿ ಬೆಳೆದ ತೊಗರಿ ಬೆಳೆಯನ್ನು ನಮ್ಮ ಹೊಲದಲ್ಲಿ ರಾಸಿ ಮಾಡಿ ಅದರ ಹೊಟ್ಟನ್ನು ನಮ್ಮ ಹೊಲದಲ್ಲಿ ಖಣೆ ಹಾಕಿ ಬಿಟ್ಟಿದ್ದೇವು ನಮ್ಮ ಹೊಲದ ಪಾಲುದಾರನಾದ ಶಿವಲಿಂಗಪ್ಪಾ ಪೂಜಾರಿ ಇತನು ನಮ್ಮ ಹೊಟ್ಟಿನ ಭಣಮಿಗೆ ಉರಿ ಹಚ್ಚಿ ಸುಟ್ಟು ಸುಮಾರು 50,000/- ರೂ ಲೂಕ್ಸಾನ ಮಾಡಿರುತ್ತಾನೆ. ನಮಗೆ ಆದ ಲುಕ್ಸಾನಾದ ಹಣ ಕೊಡುವದು ಬಾಕಿ ಇದ್ದ ಕಾರಣ ದುರುದ್ದೇಶದಿಂದ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಜಾತಿ ಎತ್ತಿ ಬೈದಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಸದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ :

ಕಮಲಾಪೂರ ಠಾಣೆ : ಶ್ರೀ. ಫತ್ರುಸಾಬ ತಂದೆ ಗುಡುಸಾಬ ಲಧಾಫ್ ಸಾ; ಡೊರ ಜಮಗಾ ತಾ:ಜಿ: ಗುಲಬರ್ಗಾ ರವರು ನನ್ನ ಮಗ ಖಾಸೀಮ್ ಅಲಿ ಈತನು ತಮ್ಮೂರ ರಿಯಾಜ ಪಟೇಲ್ ಕಾಂಟ್ರಾಕ್ಟರ್ ಅವರೊಂದಿಗೆ ಕಲ್ಮೂಡ ಗ್ರಾಮಕ್ಕೆ ಹೋಗಿದ್ದು, ಕಲ್ಮೂಡ ಗ್ರಾಮದ ಹೊಲದಲ್ಲಿ ಒಡ್ಡು ಹಾಕುವ ಕೆಲಸ ಮಾಡುತ್ತಿದ್ದಾಗ ಟಿಪ್ಪರ್ ನಂ: ಕೆಎ-39- 1165 ನೇದ್ದರ ಕ್ಯಾಬೀನ್ ಮೇಲೆ ಇಟ್ಟಿದ್ದ ಡಿಜೇಲ್ ಡಬ್ಬಿಯನ್ನು ಮೇಲಿಂದ ಕೆಳಗೆ ಇಳಿಸಿಕೊಟ್ಟು ಟಿಪ್ಪರ್ ಹಿಂದಿನ ಭಾಗದಿಂದ ಇಳಿಯತ್ತಿದ್ದಾಗ ಚಾಲಕನಾದ ದತ್ತಾತ್ರೇಯ ಈತನು ಹಿಂಬದಿಗೆ (ರಿವರ್ಸ) ಚಲಾಯಿಸುತ್ತಿದ್ದಾಗ ಖಾಸೀಂ ಈತನು ಟಿಪ್ಪರದ ಹಿಂದಿನ ಭಾಗ ತೆಲೆಗೆ ಬಡಿದು ನೆಲಕ್ಕೆ ಬಿದ್ದಾಗ ಟಿಪ್ಪರ್ ಹಿಂದಿನ ಟೈರ ಆತನ ಹೊಟ್ಟೆಯ ಭಾಗಕ್ಕೆ ಹರಿದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಮದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ :

ದೇವಲ ಗಾಣಗಾಪೂರ ಠಾಣೆ : ಶ್ರೀ. ಪುಂಡಲಿಕ ತಂದೆ ದತ್ತಪ್ಪ ದೊಡ್ಡಮನಿ ಸಾ|| ಕೆರಕನಳ್ಳಿ ತಾ: ಅಫಜಲಪುರ ರವರು ನನ್ನ ತಮ್ಮ ರಾಜಶೇಖರ ಇತನು ತೆಲ್ಲೂರ ಗ್ರಾಮದ ದತ್ತಪ್ಪ ಜಮದಾರ ರವರ ಟ್ಯಾಕ್ಟರ ಮೇಲೆ ಅವರ ಮಗ ರಾಘವೇಂದ್ರ ನೊಂದಿಗೆ ರಾಮಣ್ಣ ಗೌಡ ರವರ ಹೊಲಕ್ಕೆ ನೇಗಿಲು ಹೊಡೆಯಲು ಹೋಗಿದ್ದು ರಾಘವೇಂಧ್ರ ಇತನು ಹೊಸ ಟ್ಯಾಕ್ಟರ ಅತಿವೇಗ ಮತ್ತು ನಿಸ್ಕಾಳಜಿತನದಿಂದ ನಡೆಸುತ್ತ ತಿರುಗಿಸಿದ್ದರಿಂದ ರಾಜಶೇಖರ ಇತನು ಮೇಲಿಂದ ಕೆಳಗೆ ಬಿದ್ದು ಮರಣ ಹೊಂದಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.