POLICE BHAVAN KALABURAGI

POLICE BHAVAN KALABURAGI

22 December 2016

KALABURAGI DISTRICT REPORTED CRIME

ಅಪಘಾತ ಪ್ರಕರಣ:
ಶಹಾಬಾದ ನಗರ ಪೊಲೀಸ್ ಠಾಣೆ:  ದಿನಾಂಕ: 21/12/2016 ರಂದು ಶ್ರೀ ಮಹೇಶ ಶಾಖಾಧಿಕಾರಿ ಜೆ.ಎಸ್ ಕಂ ಶಹಾಬಾದ ಇವರು ಠಾಣೆಗೆ ಹಾಜರಾಗಿ ದಿನಾಂಕ: 19/12/2016 ರಂದು ಶಹಾಬಾದ ಏರಿಯಾದಲ್ಲಿ ಕೆ.ಇ.ಬಿ ಕಂಬ ಪರಿಶೀಲನೆ ಮಾಡುತ್ತಾ ಹೋದಾಗ ಶಹಾಬಾದ ವಾಡಿ ರಸ್ತೆಯ ಗುರುನಾಥ ಪೆಟ್ರೊಲ ಪಂಪ ಹತ್ತಿರ ರಸ್ತೆಯಲ್ಲಿ ಕೆ.ಇ.ಬಿ ಕಂಬಕ್ಕೆ ಯಾವುದೋ ವಾಹನ ಚಾಲಕನು ತನ್ನ ವಾಹನವನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಕೆ.ಇ ಬಿ ಕಂಬಕ್ಕೆ ಡಿಕ್ಕಿ ಪಡಿಸಿದ್ದರಿಂದ ಕೆ.ಇ.ಬಿ ಯ ಕಂಬ ಮತ್ತು ವೈರ ಒಟ್ಟು ಅ.ಕಿ 40,000-00 ರೂ ಕಿಮ್ಮತಿನ ಮಾಲು ಜೆ.ಎಸ್ ಕಂ ಇಲಾಖೆಗೆ ನಷ್ಟವಾಗಿರುತ್ತದೆ ಸದರಿ ವಾಹನದ ಚಾಲಕನು ಡಿಕ್ಕಿ ಪಡಿಸಿ ಓಡಿ ಹೋಗಿದ್ದರಿಂದ ಸದರಿ ವಾಹನ ಚಾಲಕನ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ರೈತ ಆತ್ಮ ಹತ್ಯೆ ಪ್ರಕರಣ:

ನರೋಣಾ ಪೊಲೀಸ್ ಠಾಣೆ: ಶ್ರೀಮತಿ.ಸುಗಲಾಬಾಯಿ ಗಂಡ ಹಣಮಂತರಾಯ ಹತ್ತರಕಿ ಸಾ: ವ್ಹಿ ಕೆ ಸಲಗರ ರವರು ಫಿಯಾದಿ ಸಲ್ಲಿಸಿದ್ದೇನೆಂಧರೆ ತನ್ನ ಪತಿ ಹಣಮಂತರಾಯ ಇವರಿಗೆ ಒಟ್ಟು 17 ಎಕರೆ ಜಮೀನು ಇದ್ದು ಸದರಿ ಜಮೀನಿನ ಮೇಲೆ ಒಂದು ಲಕ್ಷ ರೂಪಾಯಿ ಕೆ.ಜಿ.ಬಿ ಬ್ಯಾಂಕಿನಿಂದ ಬೆಳೆಸಾಲ ಹಾಗೂ ಸಂಬಂಧಿಕರಲ್ಲಿ ಒಂದು ಲಕ್ಷ ಐವತ್ತು ಸಾವಿರ ರೂಪಾಯಿ ಕೈಗಡ ತಂದು ವ್ಯವಸಾಯಕ್ಕಾಗಿ ಖರ್ಚು ಮಾಡಿದ್ದು ಹೋದ ವರ್ಷ ಮಳೆ ಬಾರದಿದ್ದರಿಂದ ಬೆಳೆ ವಿಫಲವಾಗಿದ್ದು ಈ ವರ್ಷ ಹೆಚ್ಚಿನ ಪ್ರಮಾಣದ ಮಳೆ ಬಂದು ಹೊಲದಲ್ಲಿ ನೀರು ನಿಂತು ತೋಗರಿ ಸಜ್ಜೆ ಹಾಗೂ ಉದ್ದಿನ ಬೆಳೆ ಹಾನಿಯಾಗಿದ್ದು ಸಾಲ ತೀರಿಸಲು ಕೃಷಿಯೇ ಆಧಾರವಾಗಿದ್ದರಿಂದ ಈ ಎಲ್ಲಾ ಸಾಲವನ್ನು ಹೇಗೆ ತೀರಿಸಬೇಕೆಂದು ನನ್ನ ಪತಿ ಹಣಮಂತರಾಯನು ದಿಕ್ಕು ತೋಚದೆ ಮನನೊಂದುಕೊಂಡು ಹೊಲದಲ್ಲಿ ಕ್ರಿಮಿನಾಷಕ ಔಷದಿ ಸೇವನೆಮಾಡಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಸಲ್ಲಿಸಿದ ದೂರು ಶಋಆಂಶದ ಮೇಲಿಂದ ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ಧಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.