POLICE BHAVAN KALABURAGI

POLICE BHAVAN KALABURAGI

06 November 2013

Gulbarga District Reported Crimes

ವರದಕ್ಷಣೆ ಕಿರುಕಳ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀಮತಿ ಪ್ರೇಮಾ @ ಪ್ರೇಮಿಲಾ ಗಂಡ ಶರಣಬಸಪ್ಪ ಸಾ:ಆಲಗೂಡ ರವರ ಲಗ್ನ ಈಗ ಸುಮಾರು 1 ½ ವರ್ಷದ ಹಿಂದೆ ಆಲಗೂಡ ಗ್ರಾಮದ ಶರಣಬಸಪ್ಪ ಬಿರಾದಾರ ಇವರೊಂದಿಗೆ ಆಗಿದ್ದು ಲಗ್ನವಾದ ನಂತರ ಒಂದು ತಿಂಗಳ ವರೆಗೆ ಗಂಡನ ಮನೆಯವರು ಚೆನ್ನಾಗಿ ನೊಂಡಿಕೊಂಡು ತದನಂತರ ಜಗಳ ತೆಗದು ಮದುವೆ ಕಾಲಕ್ಕೆ ತವರು ಮನೆಯವರು ಕಡಿಮೆ ವರದಕ್ಷೀಣೆ ಕೊಟ್ಟಿರತ್ತಾರೆ ಇನ್ನು ಹಣ , ಬಂಗಾರ ಮತ್ತು ಆಸ್ತಿಯಲ್ಲಿ ಪಾಲು ತೆಗೆದುಕೊಂಡು ಬರುವಂತೆ ಕಿರುಕುಳ ನೀಡುತ್ತಾ ಬಂದು ನಿನ್ನೆ ದಿನಾಂಕ 04-11-2013 ರಂದು ಸಾಯಾಂಕಾಲ 06-00 ಗಂಟೆ ಸುಮಾರಿಗೆ ಗಂಡ ಶರಣಬಸಪ್ಪ ಅತ್ತೆ ಪ್ರಭುಲಿಂಗಮ್ಮಾ, ಮಾವ ಗುರುಬಸಪ್ಪ, ನಾದಿನಿ ಶೋಭಾ ಇವರೆಲ್ಲರೂ ಸೇರಿ ಜಗಳ ತೆಗದು ಅವಾಶ್ಚ ಶಬ್ದಗಳಿಂದ ಬೈಯ್ದು ಕೈಗಳಿಂದ ಹೊಡೆ ಬಡೆ ಮಾಡಿ ಮಾನಸಿಕ ಮತ್ತು ದೈಹಿಕ ಹಾಗು ವರದಕ್ಷೀಣೆ ಕಿರುಕುಳ ನೀಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ :
ಬ್ರಹ್ಮಪೂರ ಠಾಣೆ : ದಿನಾಂಕ 05-11-2013 ರಂದು ಮದ್ಯಾಹ್ನ 2 ಗಂಟೆಯ ಸುಮಾರಿಗೆ ಶ್ರೀ.ಸುಬಣ್ಣ ಎ.ಎಸ್.ಐ. ಬ್ರಹ್ಮಪೂರ ಪೊಲಿಸ್ ಠಾಣೆ ರವರು  ಠಾಣಾ ವ್ಯಾಪ್ತಿಯಲ್ಲಿ ಗಸ್ತು ಕರ್ತವ್ಯ ಮುಗಿಸಿಕೊಂಡು ಹಳೆಯ ಎಸ್.ಪಿ. ಆಫೀಸ್ ರೋಡಿನ ಮುಖಾಂತರ ಕುಳಗೇರಿ ಕ್ರಾಸ್ ಕಡೆ ಬರುತ್ತಿದ್ದಾಗ ಹಳೆಯ ಎಸ್.ಪಿ.ಆಫೀಸದ್ ಹತ್ತಿರ ಕುಳಗೇರಿ ಕ್ರಾಸ್ ಕಡೆಗೆ ಬರುವ ರೋಡಿನ ಬದಿಗೆ ಹಳೆಯ ಮುತ್ರಾಲಯದ ಹತ್ತಿರ ಒಬ್ಬ ಅಪರಿಚಿತ ವಯೋವೃದ್ದ ಅಂದಾಜು ವಯಸ್ಸು 65-70 ವರ್ಷದ ವ್ಯಕ್ತಿ ಮರಣ ಹೊಂದಿ ಬಿದ್ದಿದ್ದು ಸದರಿ ಶವವನ್ನು ನೋಡಲು ಎಡಗಾಲ ಪಾದ ಪೂರ್ತಿಯಾಗಿ ಕೊಳೆತ ಸ್ಥೀತಿಯಲ್ಲಿ ಇದ್ದು ಮತ್ತು ಬಲ ಕಾಲಿನ ಪಾದದ ಮೇಲೆ ಕೂಡಾ ಹಳೆಯ ಗಾಯಗಳು ಆಗಿದ್ದು ಇರುತ್ತವೆ. ಸದರಿ ಶವದ ಮೈ ಮೇಲೆ ಒಂದು ಬಿಳಿ ಬಣ್ಣದ ಗೇರೆಯುಳ್ಳ ಶರ್ಟ ಮತ್ತು ಬಿಳಿ ಬಣ್ಣದ ದೋತ್ತರ ಇದ್ದು ಯಾವದೋ ಒಂದು ಕಾಯಿಲೆಯಿಂದ ಮರಣ ಹೊಂದಿದು ಕಂಡು ಬರುತ್ತದೆ. ಮತ್ತು ಅಕ್ಕಪಕ್ಕದ ಜನರಿಗೆ ಸದರಿ ಮೃತನ ಬಗ್ಗೆ ವಿಚಾರಿಸಲು ಯಾವುದೇ ಮಾಹಿತಿ ನೀಡಿರುವದಿಲ್ಲಾ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಸುಲಿಗೆ ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ ಬಸವರಾಜ ತಂದೆ ಚಂದ್ರಶೇಖರ ಬಾಳಿ ವ: 18 ಸಾ: ಭೀಮರಾಯನ ಗುಡಿ ತಾ: ಶಹಾಪುರ ಜಿ: ಯಾದಗಿರಿ ಹಾ.ವ: ಡಾ: ಸಿ.ಹೆಚ್. ಪಾಟೀಲ ರವರ ಮನೆಯಲ್ಲಿ ಬಾಡಿಗೆ 3 ನೇ ಕ್ರಾಸ್ ಗೊದುತಾಯಿ ನಗರ ಗುಲಬರ್ಗಾ ರವರು ದಿನಾಂಕ 04-11-2013 ರಂದು 9:00 ಪಿಎಮ್ ಕ್ಕೆ ತಾನು ಸೆಂಟ್ರಲ್ ಪಾರ್ಕದಲ್ಲಿ  ಕೆಲಸ ಮುಗಿಸಿಕೊಂಡು ಮನೆಗೆ ಸೈಕಲ ಮೇಲೆ ಬರುತ್ತಿರುವಾಗ ಗೋದುತಾಯಿ ಕಾಲೋನಿಯ ಹತ್ತಿರ ಇರುವ ಶಮ್ಸ್ ಫಂಕ್ಷನ ಹಾಲ ಗೇಟ ಎದುರಿಗೆ 3 ಜನ ಹುಡುಗರು ಎದುರಿಗೆ ಬಂದು ನನಗೆ ತಡೆದು ನಿಲ್ಲಿಸಿ ಅದರಲ್ಲಿ ಒಬ್ಬ ಒಮ್ಮೆಲೆ ಶರ್ಟ ಜೇಬದಲ್ಲಿ ಕೈಹಾಕಿ ಕಾರ್ಬನ್ ಮೋಬೈಲ್ ಅ.ಕಿ. 1650/- ರೂ ನಗದು ಹಣ 100/- ರೂ ಕಸಿದುಕೊಂಡನು ಆಗ ನಾನು ತಡೆದಾಗ ಇನ್ನೊಬ್ಬ ನನಗೆ ಕಪಾಳ ಮೇಲೆ ಹೊಡೆದು ಚಲ್ ಬೇ ಅಂತಾ ಬೈದನು ಇನ್ನೊಬ್ಬನು  ಯಾರಿಗಾದರು ಹೇಳಿದ್ರೆ ನಿನಗೆ ಜೀವ ಸಹಿತ ಬಿಡಲ್ಲ ಅಂತಾ ಅಂದು ಅಲ್ಲಿಂದ ಆ ಮೂರು ಜನರು ಹೋದರು. ಆಗ ನಾನು ಜೇವರ್ಗಿ ಕ್ರಾಸ ವರೆಗೆ ಬೆನ್ನತ್ತಿ ಹೋಗಿದ್ದು ಅಲ್ಲಿ ನಿಂತ ಒಬ್ಬನಿಗೆ ಆ ಹುಡುಗರ ಹೆಸರು ಕೇಳಲು ಅಮ್ಲೇಟ್ ಬಂಡಿ ಸಮೀರಮತ್ತು ಇನ್ನೂ ಇಬ್ಬರು ಅವನ ಗೆಳೆಯರು ಇರುತ್ತಾರೆ. ಅಂತಾ ಹೇಳಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.