POLICE BHAVAN KALABURAGI

POLICE BHAVAN KALABURAGI

27 December 2016

Kalaburagi District Reported Crimes

ಅಪಘಾತ ಪ್ರಕರಣ :
ಜೇವರಗಿ ಪೊಲೀಸ್ ಠಾಣೆ.: ದಿನಾಂಕ: 17.09.2016 ರಂದು ಸಾಯಂಕಾಲ 5.00 ಗಂಟೆ ಶ್ರೀ ದೇವಿಂದ್ರಪ್ಪ ತಂದೆ ಮಹಾಂತಪ್ಪ ಮುದ್ದಾ ಸಾ: ಕಡಕೋಳ ಇವರು ದಿನಾಂಕ: 16.09.16 ರಂದು ಸಾಯಂಕಾಲ ನ್ನ  ತಾಯಿ ಶಂಕರೆಮ್ಮ ಮತ್ತು ನಮ್ಮೂರ ಪಾರ್ವತಿ ಗಂಡ ಹಣಮಂತರಾಯ ದೋರಿ ಇಬ್ಬರು ಕೂಡಿ ಜೇವರಗಿ ಪಟ್ಟಣದ ಅಂಬೇಡ್ಕರ ಸರ್ಕಲ ಹತ್ತಿರ ರೋಡಿನಲ್ಲಿ ಬರುತ್ತಿದ್ದಾಗ ಆ ಸಮಯಕ್ಕೆ ಮಿನಿ ವಿಧಾನ ಸೌದ ರೋಡಿನ ಕಡೆಯಿಂದ ನಂಬರ ಇಲ್ಲದ ಆಟೋ ರೀಕ್ಷಾ ಚಾಲಕ ಸುರೇಶ ತಂದೆ ಸಿದ್ದಪ್ಪ ಹಳ್ಳಿ ಸಾ: ಜೇವರಗಿ ಇತನು ತನ್ನ ಆಟೋ ರೀಕ್ಷಾವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನಮ್ಮ ತಾಯಿ ಶಂಕರಮ್ಮ ಮತ್ತು ಪಾರ್ವತಿ ದೋರಿ ಇವರಿಗೆ ಜೋರಾಗಿ ಡಿಕ್ಕಿ  ಪಡಿಸಿ ಬಾರಿ ಗಾಯಗೊಳಿಸಿ ತನ್ನ ಆಟೋ ರೀಕ್ಷಾದೊಂದಿಗೆ ಓಡಿ ಹೋಗಿದ್ದು ಶ್ರೀಮತಿ ಶಂಕರೆಮ್ಮ ಗಂಡ ಮಹಾಂತಪ್ಪ ಮುದ್ದಾ ಸಾ: ಕಡಕೊಳ ತಾ: ಜೇವರಗಿ, ಇವರಿಗೆ ಹಚ್ಚಿನ ಉಪಚಾರ ಕುರಿತು ವಾನಲೆಸ್ ಆಸ್ಪತ್ರೆ ಮಿರಜ್ ದಲ್ಲಿ ಸೇರಿಕೆಯಾಗಿದ್ದು, ಅವಳಿಗೆ ಉಪಚಾರ ಫಲಕಾರಿಯಾಗದೆ ದಿನಾಂಕ: 22.10.16 ರಂದು ಬೆಳಗಿನ ಜಾವ 05.45 ಗಂಟೆಗೆ ಮೃತಪಟ್ಟಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.