POLICE BHAVAN KALABURAGI

POLICE BHAVAN KALABURAGI

02 March 2014

Gulbarga District Reported Crimes

ಹಲ್ಲೆ ಪ್ರಕರಣಗಳು :
ಅಫಜಲಪೂರ ಠಾಣೆ : ದಿನಾಂಕ 01-03-2014 ರಂದು 5;30 ಪಿ.ಎಂ ಕ್ಕೆ ಶ್ರೀ ಸಂದೀಪ ತಂದೆ ಧರೆಪ್ಪಾ ನರಳೆ ಸಾ: ಉಡಚಣ ರವರು  ಕರಜಗಿ ಗ್ರಾಮದಲ್ಲಿ ಅಂಬಿಗರ ಚೌಡಯ್ಯಾ ವೃತ್ತದ ಹತ್ತಿರ ಇದ್ದಾಗ ನನಗೆ ಪರಿಚಯ ಇದ್ದ ಕರಜಗಿ ಗ್ರಾಮದ ಯಲ್ಲಪ್ಪ ತಂದೆ ಭೀಮರಾವ ಹಡಪದ ಮತ್ತು ಲಕ್ಷ್ಮಣ ಹಡಪದ ಇವರು ನನಗೆ ಕರೆದರು ಆಗ ನಾನು ಅವರ ಹತ್ತಿರ ಹೋದಾಗ ಯಲ್ಲಪ್ಪ ಇವನು ವಿನಾಕಾರಣ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ನಿನಗ ಸೊಕ್ಕ ಬಹಳಾದ ಮಗನಾ ಕ್ರೋಜರ ಸ್ಟ್ಯಾಂಡನಾಗ ಬಹಳ ಧಿಮಾಕ ಮಾಡತಿ ಮಗನಾ ಅಂತಾ ಅಂದನು ಆಗ ನಾನು ನನಗ್ಯಾಕ ಬೈತಿ ಅಂತಾ ಕೇಳಿದ್ದಕ್ಕೆ ಲಕ್ಷ್ಮಣ ಇವನು ತನ್ನ ಹತ್ತಿರ ಇದ್ದ ಒಂದು ಸಣ್ಣ ಚಾಕುವಿನಿಂದ ನನಗೆ ಹೊಡೆಯಲು ಬಂದನು ಆಗ ನಾನು ಕೈ ಅಡ್ಡ ತಂದಾಗ ನನ್ನ ಬಲಗೈ ಹೆಬ್ಬೆರಳಿನ ಹತ್ತಿರ ರಕ್ತಗಾಯವಾಯಿತು. ನಂತರ ಯಲ್ಲಪ್ಪ ಇವನು ನನಗೆ ಕೈಯಿಂದ ಕಪಾಳ ಮೇಲೆ ಹೊಡೆದು ನೆಲಕ್ಕೆ ಕೆಡವಿ ಅಲ್ಲೆ ಬಿದ್ದಿದ್ದ ಕಲ್ಲಿನಿಂದ ನನ್ನ ಎದೆಯ ಮೇಲೆ ಗುದ್ದಿ ರಕ್ತಗಾಯ ಗುಪ್ತಗಾಯ ಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಟೇಷನ ಬಜಾರ ಠಾಣೆ : ಶ್ರೀಮತಿ. ನಿರ್ಮಲಾ ಗಂಡ ಗುಂಡಪ್ಪಾ ಲಂಡನಕರ್ ಸಾ : ಮಹಾವೀರ ನಗರ ಗುಲಬರ್ಗಾ ರವರು ದಿನಾಂಕ 31-01-2014 ರಂದು 12-30 ಪಿ.ಎಂ ಸುಮಾರಿಗೆ ಇಬ್ಬರು ಅಪರಿಚಿತ ಹುಡುಗರು ಬಿಳಿ ಫ್ಯಾಶನ ದ್ವಿಚಕ್ರವಾಹನದ ಮೇಲೆ ಬಂದು ನನಗೆ ನಿಮ್ಮಲ್ಲಿ ಮನೆ ಬಾಡಿಗೆಯಿಂದ ಸಿಗುತ್ತವೆಯೇ ಅಂತಾ ಕೇಳಿ ಮತ್ತು ನಿನ್ನೆ ರಾತ್ರಿ ಎಲ್ಲಿಗೆ ಹೋಗಿದ್ದಿರಿ ಅಂತಾ ಕೇಳಿದರು ಅದಕ್ಕೆ ನಾನು ಶಹಬಜಾರ ನಾಕಕ್ಕೆ ಹೋಗಿದ್ದು ಅಂತಾ ಹೇಳಿದೇನು ಅದಕ್ಕೆ ಅವರು ಶ್ರೀಮತಿ ಸುಸಲಾಬಾಯಿ ಗಂಡ ಅರ್ಜುನ ಹತ್ತಗುಂದಿ ಇವಳಿಗೆ ಹೊಲಸು ಶಬ್ದಗಳಿಂದ ಯಾಕೆ ಬೈದಿರಿ ಅಂತಾ ನನಗೆ ಬ್ಲೆಡಿನಿಂದ ಬಲಗೈಗೆ ಮತ್ತು ಹೊಟ್ಟೆಗೆ ಹೊಡೆದರು ಆಗ ನಾನು ಚಿರಾಡಿದಾಗ ಅವರಿಬ್ಬರು ಇನ್ನೊಮ್ಮೆ ಸಿಕ್ಕಾಗ ನಿನಗೆ ಬಿಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿ ಹೋದರು. ಇಬ್ಬರು ಅಪಿರಿಚಿತರಿದ್ದು ಅವರ ಹೆಸರು ವಿಳಾಸ ಗೊತ್ತಿಲ್ಲ ನೋಡಿದರೆ ಗುರ್ತಿಸುತ್ತೇನೆ. ಇದಕ್ಕೆಲ್ಲಾ ಸುಸಲಾಬಾಯಿ ಗಂಡ ಅರ್ಜುನ್ ಹತಗುಂದಿ ಇವಳ ಪ್ರಚೊದನೆ ಮೇಲಿಂದ ಘಟನೆ ಜರೂಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಞೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾನ ಕಳವು ಪ್ರಕರಣ :
ಸ್ಟೇಷನ ಬಜಾರ ಠಾಣೆ : ಶ್ರೀ ಆನಂತರಾಮ ತಂದೆ ನಾರಾಯಣರಾವ ಹದಗಲ ಸಾಃ ಮನೆ ನಂ.9-586/ಐ ಶೇಖರೋಜಾ ರೋಡ ಆಳಂದ ಕಾಲೋನಿ ಗುಲಬರ್ಗಾ ಇವರು ದಿನಾಂಕ 25-02-2014 ರಂದು 03-30 ಪಿ.ಎಮ್ ಕ್ಕೆ ತಮ್ಮ ಬಜಾಜ ಕವಾಸಕಿ 4ಎಸ್ ಮೋಟಾರ್ ಸೈಕಲ ನಂ. ಕೆಎ 32 ಜೆ 2072 ಚೆಸ್ಸಿ ನಂ 31FBDE23056  ಇಂಜೀನ ನಂ. 31MBDE25123 ಅಕಿ. 20,000/- ನೇದ್ದು ಡಿ.ಡಿ.ಪಿ.ಐ ಆಫೀಸ ಆವರಣದಲ್ಲಿ ನಿಲ್ಲುಗಡೆ ಮಾಡಿ ಆಫೀಸ್ ಕೆಲಸ ಮುಗಿಸಿಕೊಂಡು 03-45 ಪಿ.ಎಮ್ ಕ್ಕೆ ಬಂದು ನೋಡಲಾಗಿ ಯಾರೋ ಕಳ್ಳರು ಸದರಿ ಸೈಕಲ ಮೋಟಾರ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.