POLICE BHAVAN KALABURAGI

POLICE BHAVAN KALABURAGI

18 January 2015

Kalaburagi District Reported Crimes

ಕೊಲೆ ಪ್ರಕರಣ :
ಮಳಖೇಡ ಠಾಣೆ : ದಿನಾಂಕ  17.01.2015 ರಂದು ರಾತ್ರಿ 10-00 ಪಿ.ಎಂ ಸಮಯಕ್ಕೆ ಆದಿತ್ಯ ನಗರ ಮಳಖೇಡ ಕಾಲೋನಿಯ ಸೆಕುರಿಟಿ ಸುಪರವೈಸರ್ ಆದ ಗಜಾನಂದ ಇವರು ಶ್ರೀ ಎಮ್.ವಿ. ರಮಣಮೂರ್ತಿ ರವರಿಗೆ  ಪೋನ ಮಾಡಿ ತಿಳಿಸಿದೆನೆಂದರೆ, ನಮ್ಮ ಕಾಲೋನಿಯ ಸಿ ಬ್ಲಾಕನಲ್ಲಿ ಶೆಡ್ ಬಾಗಿಲು ಮುಂದೆ ಯಾರೋ ಒಬ್ಬನು ಸತ್ತು ಬಿದಿದ್ದಾನೆ. ಅವನ ಮುಖಕ್ಕೆ ತಲೆಗೆ ಭಾರಿ ಗಾಯಗಳಾಗಿದ್ದು  ಮುಖದ ತುಂಬಾರಕ್ತ ಆಗಿದೆ ಅವನ ಪಕ್ಕದಲ್ಲಿ ಒಂದು ಕಬ್ಬಿಣದ ಪೈಪ್ ಬಿದಿದ್ದೆ ಅಂತಾ ಹೇಳಿದನು. ಆಗ ನಾನು ನಮ್ಮ ಕಾಲೋನಿಗೆ ಹೋಗಿ ಅಲ್ಲಿ ಇದ್ದ ಸೆಕುರಿಟಿ ಸುಪರವೈಸರ ಗಜಾನಂದ ಈತನ ಸಂಗಡ ಸದರಿ ಸ್ಥಳಕ್ಕೆ ಹೋಗಿ ನೋಡಲಾಗಿ ಶಡ್ ನಂ C-4/12 ನೇದ್ದರ ಬಾಗಿಲು ಮುಂದೆ ನೋಡಲಾಗಿ ಒಬ್ಬನು ಗಂಡು ಮನುಷ್ಯನು ಸತ್ತು ಬಿದಿದ್ದನು. ಅವನ ಮುಖಕ್ಕೆ ತಲೆಗೆ ಭಾರಿ ರಕ್ತಗಾಯಗಳಾಗಿದ್ದವು. ಅವನ ಪಕ್ಕದಲ್ಲಿ ಒಂದು ಕಬ್ಬಿಣದ ಪೈಪ ಬಿದಿದ್ದು ಸದರಿಯವನು ಅಪರಿಚಿತನಾಗಿದ್ದು ಅವನ ಹೆಸರು ವಿಳಾಸ ಗೊತ್ತಾಗಿರುವದಿಲ್ಲಾ ಅವನು ಸುಮಾರು 35-40 ವರ್ಷದವನಾಗಿರುತ್ತಾನೆ. ಸದರಿಯವನಿಗೆ ಯಾರೋ ದುಷ್ಕರ್ಮಿಗಳು ಯಾವುದೋ ಉದ್ದೇಶಕ್ಕಾಗಿ ಕಬ್ಬಿಣದ ಪೈಪನಿಂದ ಹೊಡೆದು ಕೊಲೆ ಮಾಡಿರುತ್ತಾರೆ. ಅಂತಾ ಕಂಡು ಬರುತ್ತದೆ. ಸದರಿಯವನಿಗೆ ದಿ: 17-01-2015 ರಂದು ರಾತ್ರಿ 08:00 ಪಿ.ಎಂ ದಿಂದ ರಾತ್ರಿ 09-30 ಪಿ.ಎಂ ಗಂಟೆಯ ಮಧ್ಯದ ಅವಧಿಯಲ್ಲಿ ಕೊಲೆ ಮಾಡಿರಬಹುದು. ಅಂತಾ  ಶ್ರೀ ಎಮ್.ವಿ. ರಮಣಮೂರ್ತಿ ತಂದೆ  ಭರತರಾವ ಸಾ: ವಕ್ಕಾಲಂಕಾವಾರಿ ಸ್ಟ್ರೀಟ ವಿಕಾಸ ರೆಸಿಡೆನ್ಸಿ ಬಿಸಯಡ್ ಕಸಪಾ ಹೈಸ್ಕೂಲ ವಿಜಯನಗರಂ (ಎಪಿ) ಹಾವ: HR 2/4 ಆದಿತ್ಯಾನಗರ ಮಳಖೇಡ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.      
ಅಪಹರಣ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ 12, 13-01-15 ರಂದು ರಾತ್ರಿ  12-30 ಗಂಟೆ ಸುಮಾರಿಗೆ ನನ್ನ ಕೊನೆಯ ಮಗಳಾದ ನಂದಿನಿ ಏಕೇ ಮಾಡುತ್ತೇನೆ ಎಂದು ಹೇಳಿ ಮನೆಯಿಂದ ಹೊರೆಗೆ ಇರುವ ಬಾತರೂಮಿಗೆ ಹೋಗಿದ್ದು ,  ಸ್ವಲ್ಪ ಸಮಯದಲ್ಲಿ ನನ್ನ ಹೆಂಡತಿ ಮಗಳು ಬರದ ಕಾರಣ ಹೊರೆಗೆ ಬಂದು ನೋಡಲು ಮಗಳು ಕಾಣಿಸಿದ ಕಾರಣ ನನ್ನ ಹೆಂಡತಿ ರಾತ್ರಿ 1-30 ಗಂಟೆ ಸುಮಾರಿಗೆ ಪೋನ ಮಾಡಿ ವಿಷಯ ತಿಳಿಸಿದಳು. ಮುಂಬೈಗೆ ಹೋಗಿ ಕೆಲಸ ಮುಗಿಸಿಕೊಂಡು ದಿನಾಂಕ 14-01-15 ರಂದು ಬೆಳಿಗ್ಗೆ 11-30 ಗಂಟೆಗೆ ಬಂದು ಕಲಬುರಗಿಗೆ  ಬಂದು ನನ್ನ ಮಗಳಾದ ನಂದಿನಿ ಇವಳನ್ನು  ರೇಲ್ವೆ ಸ್ಟೇಷನ,  ಬಸಸ್ಟ್ಯಾಂಡ ಕಲಬುರಗಿ ನಗರದಲ್ಲಿ ಹುಡುಕಾಡಲೂ ಸಿಕ್ಕಿರುವುದಿಲ್ಲಾ. ದಿನಾಂಕ 17-01-15 ರಂದು ಬೆಳಿಗ್ಗೆ  ನಮ್ಮ ಓಣಿಯಲ್ಲಿ ಓಣಿಯ ಜನರು ನನ್ನ ಮಗಳಾದ ನಂದಿನಿ ಇವಳಿಗೆ ಓಣಿಯ ಶೇಖರ ತಂದೆ ಹಣಮಂತ ಕ್ಷತ್ರಿ ಇತನು ಪುಸಲಾಯಿಸಿ ಅಪಹರಣ ಮಾಡಿಕೊಂಡು ಹೋಗಿರುತ್ತಾನೆ  ಅಂತಾ ಶ್ರೀ ಶರಣಬಸಪ್ಪ ತಂದೆ ನಂದಕುಮಾರ ಸಾತಖೇಡ ಸಾ:ಆಳಂದ ಚೆಕ್ಕ ಪೋಸ್ಟ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಮಾಹಾಗಾಂವ ಠಾಣೆ : ದಿನಾಂಕ: 17-01-2015 ರಂದು ಬೆಳಿಗ್ಗೆ 6-00 ಗಂಟೆಯಿಂದ 7-00 ಗಂಟೆ ಮಧ್ಯದ ಅವಧಿಯಲ್ಲಿ ಕಲಬುರಗಿ ಹುಮನಾಬಾದ ಮಾರ್ಗ ಮಧ್ಯದಲ್ಲಿರುವ ಕುರಿಕೋಟಾ ಸೇತುವೆ ಹತ್ತಿರ ಯಾವುದೋ ಒಬ್ಬ ಚಾಲಕ ತನ್ನ ವಾಹನವನ್ನು ಅತೀವೇಗ ಹಾಗು ನಿಷ್ಕಾಳಜೀತನದಿಂದ ನಡೆಸಿಕೊಂಡು ಬಂದು ಫಿರ್ಯಾದಿಯ ಗಂಡನಾದ ರಾಮಲು ತಂದೆ ಸಾಬಣ್ಣಾ ಪೆಂಡಗೊಂಡ ಸಾ: ರುದ್ರಸಮುದ್ರಂ ತಾ:ಮಕ್ತಲ್ ಜಿ: ಮಹಿಬೂಬ ನಗರ ತೆಲಂಗಾಣ ರಾಜ್ಯ ಈತನಿಗೆ ಡಿಕ್ಕಿ ಹೊಡೆದ ಸದರಿ ಚಾಲಕನು ತನ್ನ ವಾಹನದೊಂದಿಗೆ ಓಡಿ ಹೋಗಿರುತ್ತಾರೆ. ಫಿರ್ಯಾದಿಯ ಗಂಡ ರಾಮಲು ಈತನಿಗೆ ಭಾರಿ ರಕ್ತಗಾಯ ವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ ಅಂತಾ ಶ್ರೀಮತಿ ರೇಣಮ್ಮಾ ಗಂಡ ರಾಮಲು ಪೆಡಗೊಂಡ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂಔ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.