POLICE BHAVAN KALABURAGI

POLICE BHAVAN KALABURAGI

07 July 2017

Kalaburagi District Reported Crimes

ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ನರೋಣಾ ಠಾಣೆ : ದಿನಾಂಕ: 07/07/2017 ರಂದು ಸಾಯಂಕಾಲ ನರೋಣಾ ಗ್ರಾಮದ ಹನುಮಾನ ದೇವಸ್ಥಾನದ ಕಟ್ಟೆಯ ಮೇಲೆ ಸಾರ್ವಜನೀಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಅಂಕಿಸಂಖ್ಯೆಗಳನ್ನು ಬರೆದುಕೊಡುತ್ತಿರುವ ಬಗ್ಗೆ ಬಾತ್ಮಿ ಬಂದ ಮೇರೆಗೆ ಶ್ರೀ.ಗಜಾನನ.ಕೆ.ನಾಯಕ ಪಿ.ಎಸ್‌.ಐ ನರೋಣಾ ಪೊಲೀಸ್ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಮಾನ್ಯ ಡಿ.ಎಸ್.ಪಿ ಸಾಹೇಬ ಆಳಂದ ಹಾಗೂ ಸಿ.ಪಿ.ಐ ಸಾಹೇಬ ಆಳಂದರವರ ಮಾರ್ಗದರ್ಶನದಲ್ಲಿ, ನರೋಣಾ ಗ್ರಾಮದ ಹನುಮಾನ ದೇವಸ್ಥಾನದ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲಾಗಿ ದೇವಸ್ಥಾನದ ಮುಂಬಾಗದಲ್ಲಿರುವ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದು ಓಪನ್ ನಂಬರ್ ಬಂದರೆ ಒಂದು ರೂಪಾಯಿಗೆ 08 ರೂಪಾಯಿ ಗೆಲ್ಲಿರಿ, ಜಾಯಿಂಟ್ ನಂಬರ್ ಬಂದರೆ 01 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ, ಅಂತಾ ಕೂಗುತ್ತಾ ಮಟಕಾ ಅಂಕಿ ಸಂಖೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಿರುವುದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಅವನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ಬಾಬುರಾವ ತಂದೆ ಶಿವಪ್ಪ ಖೇಲ್ಡ, ಸಾ|| ನರೋಣಾ ಅಂತಾ ತಿಳಿಸಿದ್ದು ಸದರಿಯವನಿಗೆ ಅಂಗಶೋಧನ ಮಾಡಲಾಗಿ ಮಟಕಾ ಜೂಜಾಟಕ್ಕೆ ಬಳಸಿದ ಒಂದು ಮಟಕಾ ಅಂಕಿಸಂಖ್ಯೆಯುಳ್ಳ ಚೀಟಿ, ಒಂದು ಬಾಲ ಪೆನ್‌  ನಗದು ಹಣ 1050/- ರೂಪಾಯಿಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ನರೋಣಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 07-07-2017 ರಂದು ಮಾಶಾಳ ಗ್ರಾಮದ ಸುದಾರಿತ ಬೀಟ್ ಸಿಬ್ಬಂದಿಯಾದ ನಮ್ಮ ಠಾಣೆಯ ಶರಣು ಪಿಸಿ-881 ರವರು ಮಾಶಾಳ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಒಬ್ಬ ವ್ಯೆಕ್ತಿ ಮಟಕಾ ಜೂಜಾಟ ಆಡುತ್ತಿದ್ದಾನೆ ಅಂತಾ ನನ್ನ ಬೀಟಿನ ಬಾತ್ಮಿದಾರರು ತಿಳಿಸಿರುತ್ತಾರೆ  ಅಂಥಾ ತಿಳಿಸಿದ ಮೇರೆಗೆ ಪಿಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಡಿ.ಎಸ್.ಪಿ ಸಾಹೇಬರು ಆಳಂದ ಹಾಗೂ ಮಾನ್ಯ ಸಿ.ಪಿ.ಐ ಸಾಹೇಬರು ಅಫಜಲಪೂರ ರವರ ಮಾರ್ಗದರ್ಶನದಲ್ಲಿ ಮಾಶಾಳ ಗ್ರಾಮದ ಬಸ್ ನಿಲ್ದಾಣದಿಂದ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಪ್ರಯಾಣಿಕರಿಗೆ ಹಾಗೂ ಸಾರ್ವಜನಿಕರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆದು, ಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದ ಬಗ್ಗೆ ಖಚಿತಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಸುರೇಶ ತಂದೆ ಶಿವಪುತ್ರ ರಾವೂರ ಸಾ|| ಅಫಜಲಪೂರ ಹಾ|| || ಮಾಶಾಳ ಗ್ರಾಮ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 2110/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ: 07/07/2017 ರಂದು ರಾಘವೇಂದ್ರ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯ ಗಂಗಾನಗರ ಕಬರಸ್ಥಾನದ ಖುಲ್ಲಾ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಇಸ್ಪಿಟ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿದ್ದಾರೆ ಅಂತ ಮಾಹಿತಿ ಬಂದ ಮೇರೆಗೆ ಶ್ರೀಮತಿ ಅಕ್ಕಮಹಾದೇವಿ ಪಿಎಸ್.ಐ. ರಾಘವೇಂದ್ರ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಗಂಗಾನಗರ ಬಡಾವಣೆಯ ಆರೋಗ್ಯ ಕೆಂದ್ರದ ಹತ್ತಿರ ಜೀಪನ್ನು ನಿಲ್ಲಿಸಿ ಎಲ್ಲರೂ ಅಲ್ಲಿಂದ ನಡೆದುಕೊಂಡು ಹೋಗಿ ನೋಡಲು ಕಬರಸ್ಥಾನದ ಗೇಟ ಒಳಗಡೆ ಕಂಪೌಂಡ ಗೋಡೆಯ ಪಕ್ಕದಲ್ಲಿ 7-8 ಜನರು ದುಂಡಾಗಿ ಕುಳಿತು ಅಂದರ ಬಾಹರ ಜುಜಾಟ ಆಡುತ್ತಿದ್ದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಅವರ ಹೆಸರು ವಿಳಾಸ ವಿಚಾರಿಸಲು . 1) ರಾಜು ತಂದೆ ಮಲ್ಲಿಕಾರ್ಜುನ ಹರನಾಳ ಸಾ:ನ್ಯೂ ರಾಘವೇಂದ್ರ ಕಾಲೋನಿ ಕಲಬುರಗಿ. 2) ಶರಣು ತಂದೆ ಸಿದ್ರಾಮ ಕೊತ್ತಲಿ ಸಾ: ಗಂಗಾ ನಗರ ಕಲಬುರಗಿ 3) ಸಿದ್ದಲಿಂಗ @ ಸಿದ್ದು ತಂದೆ ಲಕ್ಷಿಕಾಂತ ಸಾವಳಗಿ ಸಾ: ಹೊಡ್ಡಿನ ಮನಿ ಲೇಔಟ ಕಲಬುರಗಿ 4) ಸಂಜೀವಕುಮಾರ ತಂದೆ ನಾಗಣ್ಣಾ ಜಮಾದಾರ ಸಾ: ಚೌಡೇಶ್ವರಿ ಕಾಲೋನಿ ಕಲಬುರಗಿ 5) ಅನೀಲ ತಂದೆ ಗಣಪತಿ ಇಂಗಳಗಿ ಸಾ: ಗಂಗಾ ನಗರ ಕಲಬುರಗಿ 6) ಗೋಪಿ ತಂದೆ ಬಸವರಾಜ ಬೀದನೂರ ಸಾ: ಗಂಗಾ ನಗರ ಕಲಬುರಗಿ 7) ಶರಣು ತಂದೆ ಹಣಮಂತ ಪಾಟೀಲ ಸಾ:ಹೊಡ್ಡಿನ ಮನಿ ಲೇಔಟ ಕಲಬುರಗಿ 8) ಅಮೀತ ತಂದೆ ತುಕಾರಾಮ ಚವ್ಹಾಣ ಸಾ:ನ್ಯೂ ರಾಘವೇಂದ್ರ ಕಾಲೋನಿ ಕಲಬುರಗಿ  ಅಂತಾ ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ 52 ಇಸ್ಪೀಟ ಎಲೆಗಳನ್ನು ಮತ್ತು ನಗದು ಹಣ  6650/- ರೂಗಳನ್ನು ವಶಪಡಿಸಿಕೊಂಡು ಸದರಿಯವರೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಪ್ರವೀಣ ತಂದೆ ದತ್ತಾತ್ರೇಯ ಸೋನಾರ ಸಾ||ಬಸವೇಶ್ವರ ನಗರ ಕೆಇಬಿ ಹಿಂದುಗಡೆ ಅಫಜಲಪೂರ ರವರ ತಂದೆಯಾದ ದತ್ತಾತ್ರೇಯ ತಂದೆ ವಿಠ್ಠಲ ಸೋನಾರ ಇವರು ಅಕ್ಕಸಾಲಿಗ ಕೆಲಸ ಮಾಡಲು ನಮ್ಮ ಸ್ವಂತ ಗ್ರಾಮವಾದ ಅಫಜಲಪೂರ ತಾಲೂಕಿನ ಬಂದರವಾಡಕ್ಕೆ ದಿನಾಲು ನಮ್ಮ ಮೋಟಾರ ಸೈಕಲ್ ನಂ ಕೆಎ-32, ಯು-894 ನೇದ್ದರ ಮೇಲೆ ಹೋಗಿ ಕೆಲಸ ಮಾಡಿ ಮರಳಿ ಅಫಜಲಪೂರ ಕ್ಕೆ ಬರುತ್ತಾರೆ.  ಎಂದಿನಂತೆ ನಮ್ಮ ತಂದೆ ದಿನಾಂಕ 05/07/2017 ರಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಮೋಟಾರ್ ಸೈಕಲ್ ಮೇಲೆ ಬಂದರವಾಡ ಗ್ರಾಮಕ್ಕೆ ಹೋಗಿದ್ದು ಇರುತ್ತದೆ  ಅದೇ ದಿನ 2.45 ಪಿಎಮ್ ಸುಮಾರಿಗೆ ನಮ್ಮ ಸಂಬಂಧಿಕರಾದ ಮಲ್ಲಾಬಾದ ಗ್ರಾಮದ ಮಲ್ಲಿಕಾರ್ಜುನ ತಂದೆ ಮೌನಪ್ಪ ಸುತಾರ ಇವರು ನನ್ನ ಮೋಬೈಲ ನಂಬರಗೆ ಪೋನ ಮಾಡಿ ತಿಳಿಸಿದ್ದೆನೆಂದರೆ ನಿಮ್ಮ ತಂದೆ ಮೋಟಾರ್ ಸೈಕಲ್ ಮೇಲೆ ಅಫಜಲಪೂರ ಕಡೆ ಬರುವಾಗ ಮಾತೋಳಿ ಮಲ್ಲಾಬಾದ ನಡುವೆ ಇರುವ ಬ್ರೀಡ್ಜ ದಾಟಿ ಅಫಜಲಪೂರ ಕಡೆ  ಹೋಗುತಿದ್ದಾಗ ಕೆಎಸ್ ಆರ್ ಟಿ ಬಸ ನಂ ಕೆಎ-28, ಎಫ್-2047 ನೇದ್ದರ ಚಾಲಕ ಅತಿವೇಗ ಹಾಗು ನಿಸ್ಕಾಳಜಿತನದಿಂದ ಚಲಾಯಿಸಿ ಓವರ್ ಟೇಕ್ ಮಾಡಿ ನಿಮ್ಮ ತಂದೆಯ ಮೋಟಾರ್ ಸೈಕಲಗೆ ಡಿಕ್ಕಿ ಪಡಿಸಿ ನಿಮ್ಮ ತಂದೆಗೆ ಅಫಘಾತ ಪಡಿಸಿರುತ್ತಾನೆ ಅಂತ ತಿಳಿಸಿದ ಬಳಿಕ ನಾನು ಹಾಗು ನನ್ನ ಗೆಳೆಯನಾದ  ಅಂಬರೀಶ ಅಂಬೂರೆ ಇಬ್ಬರು ಕೂಡಿ ಸ್ಥಳಕ್ಕೆ ಹೋಗಿ ನೋಡಲಾಗಿ ನಮ್ಮ ತಂದೆಯ ತಲೆಗೆ ಭಾರಿ ರಕ್ತಗಾಯವಾಗಿದ್ದು ಬಲಗೈಗೆ ಭಾರಿ ತರಚಿದ ಗಾಯವಾಗಿ ನಮ್ಮ ತಂದೆ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ ನಂತರ ಬಸ್ಸಿನಲಿದ್ದ ಪ್ರತ್ಯೇಕ್ಷದರ್ಶಿಗಳಾದ ಪ್ರಯಾಣಿಕರಿಗೆ ಹಾಗು ಮಲ್ಲಿಕಾರ್ಜುನ ಸುತಾರ ರವರಿಗೆ ಘಟನೆಯ ಬಗ್ಗೆ ವಿಚಾರಿಸಿದ್ದು ಇರುತ್ತದೆ ಸದರಿ ಬಸ್ಸಿನ ಚಾಲಕನ ಹೆಸರು ಧೂಳಪ್ಪ ತಂದೆ ಮಲ್ಕಪ್ಪ ಬಂಕಲಗಾ ಅಂತ ಇರುತ್ತದೆ   ನಮ್ಮ ತಂದೆಯನ್ನು ನಾನು ನನ್ನ ಗೆಳೆಯ ಅಂಬರೀಶ ಹಾಗು ಮಲ್ಲಿಕಾರ್ಜುನ ಸುತಾರ ಮೂರು ಜನರು ಕೂಡಿ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಸೋಲಾಪೂರದ ವಳಸಂಗಕರ ಆಸ್ಪತ್ರೆಗೆ ಚಿಕಿತ್ಸೆ ಕುರಿತು ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ದ್ವೀಚಕ್ರ ವಾಹನ ಕಳವು ಪ್ರಕರಣ :
ಕಮಲಾಪೂರ ಠಾಣೆ : ಶ್ರೀ ಶರಣಬಸಪ್ಪ ತಂದೆ ಸದಾಶಿವ ಸುಗೂರ ಸಾ: ಕಮಲಾಪೂರ ರವರದು ಕಮಲಾಪೂರ ದಿಂದ ಕಲಬುರಗಿ ಕಡೆಗೆ ಹೋಗುವ ರಾಷ್ಟ್ರಿಯ ಹೆದ್ದಾರಿಗೆ ಹೊಂದಿಕೊಂಡು ನಮ್ಮ ಹೊಲ ಇದ್ದು ನಾನು ಪ್ರತಿ ದಿವಸ ಹೊಲಕ್ಕೆ ಹೋಗಿ ಬರಲು ತೊಂದರೆಯಾಗುತ್ತಿದ್ದರಿಂದ ನಮ್ಮ ಅಳಿಯನಾದ ನಾಗಶಟ್ಟಿ ತಂದೆ ಮಡಿವಾಳಪ್ಪ ಶಟಗಾರ ಸಾ: ಬೇಲೂರ ತಾ: ಬಸವಕಲ್ಯಾಣ ಇವರ ಹೊರೊ ಸ್ಪೇಂಡರ ಮೋಟಾರ ಸೈಕಲ ನಂ ಕೆಎ 56 ಎಚ್. 6291 ನೇದ್ದು ತೆಗೆದುಕೊಂಡು ನಾನೆ ಉಪಯೋಗಿಸುತ್ತಾ ಬಂದಿದ್ದು ಇರುತ್ತದೆ.ಈ ಹಿಂದೆ ದಿನಾಂಕ 10.06.2017 ರಂದು ಮಧ್ಯಾನ 1 ಗಂಟೆಯ ಸುಮಾರಿಗೆ ನಾನು ಸದರಿ ಮೋಟಾರ ಸೈಕಲ ನಂ ಕೆಎ 56 ಎಚ್. 6291 ನೇದ್ದು ತೆಗೆದುಕೊಂಡು ನಮ್ಮ ಹೊಲಕ್ಕೆ ಹೋಗಿದ್ದು ಮೋಟಾರ ಸೈಕಲನ್ನು ರಾಷ್ಟ್ರಿಯ ಹೆದ್ದಾರಿ ಮೇಲೆ ಬಿಟ್ಟು ನಾನು ಹೊಲದಲ್ಲಿ ಹೋಗಿ ಕೆಲಸ ಮಾಡಿಕೊಂಡಿದ್ದು ಸಾಯಂಕಾಲ 5 ಗಂಟೆಯ ಸುಮಾರಿಗೆ ಒಂದು ಪಲ್ಸರ ಮೋಟಾರ ಸೈಕಲ ಮೇಲೆ ಇಬ್ಬರು ವ್ಯಕ್ತಿಗಳು ಬಂದು ರೋಡಿನ ಮೇಲೆ ಇದ್ದ ನನ್ನ ಮೋಟಾರ ಸೈಕಲ ಹತ್ತಿರ ಬಂದು ನನ್ನ ಮೋಟಾರ ಸೈಕಲನ್ನು ಪ್ರಾರಂಭ ಮಾಡುತ್ತಿದ್ದು ಆಗ ನಾನು ಸ್ವಲ್ಪ ದೂರದಲ್ಲಿ ಕೆಲಸ ಮಾಡುತ್ತಿದ್ದರಿಂದ ದೂರ ದಿಂದಲೆ ಯಾರೊ ನೀವು ಅಂತ ಕೂಗಿ ಅವರು ನನ್ನ ಕಡೆಗೆ ನೋಡುತ್ತಾ ನನ್ನ ಮೋಟಾರ ಸೈಕಲನ್ನು ಚಾಲು ಮಾಡಿ ಮೋಟಾರ ಸೈಕಲ ಮೇಲೆ ಕುಳಿತು ಕಲಬುರಗಿ ಕಡೆಗೆ ಹೊಗುತ್ತಿದ್ದು ಗಾಬರಿಗೊಂಡು ನಾನು ಒಡುತ್ತಾ ರೋಡಿನ ಕಡೆಗೆ ಬಂದು ನಮ್ಮ ಅಣ್ಣನಾದ ಶಿವಶಂಕರ ಇವರ ಮೋಟಾರ ಸೈಕಲ ತೆಗೆದುಕೊಂಡು ಅವರ ಬೆನ್ನು ಹತ್ತಿ ಮಹಾಗಾವ ಕ್ರಾಸ ವರೆಗೆ ಹೋಗಿ ಹುಡುಕಾಡಿದ್ದು ನನ್ನ ಮೋಟಾರ ಸೈಕಲ ಪತ್ತೆಯಾಗಿರುವದಿಲ್ಲ ಅಂದಿನಿಂದ ಇಲ್ಲಿಯರವರೆಗೆ ನಾನು ನಮ್ಮ ಅಣ್ಣ ನಮ್ಮ ಮೋಟಾರ ಸೈಕಲ ಪತ್ತೆ ಕುರಿತು ಎಲ್ಲಾ ಕಡೆಗೆ ಹುಡುಕಾಡಿದ್ದು ಮತ್ತು ನಮಗೆ ಪರಿಚಯಸ್ಥರಲ್ಲಿ ವಿಚಾರಿಸಿದ್ದು ಮತ್ತು ನನಗೆ ಪರಿಚಯದ ಯಾರಾದರು ತೆಗೆದುಕೊಂಡು ಹೋಗಿರಬಹುದು ಅಂತ ತಿಳಿದು ಕೆಲವು ದಿವಸ ಕಾದಿದ್ದು ನನ್ನ ಮೋಟಾರ ಸೈಕಲ ಯಾರು ತೆಗೆದುಕೊಂಡು ಹೋಗಿರುವದಿಲ್ಲ ಅಂತ ಗೊತ್ತಾಗಿದ್ದು ಇರುತ್ತದೆ. ಸದರಿ ನನ್ನ ಮೋಟಾರ ಸೈಕಲನ್ನು ಯಾರೊ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Kalaburagi District Reported Crimes

ಅಪಘಾತ ಪ್ರಕರಣಗಳು :
ಫರತಾಬಾದ ಠಾಣೆ : ಶ್ರೀ ಅಬ್ದುಲ ಕರೀಮ ತಂದೆ ಚಾಂದ ಪಾಶಾ ಸಾ: ಕೊಳಸಾ ಪೈಲ ಶಹಾಬಾದ ನಗರ ತಾ: ಚಿತ್ತಾಪೂರ ಇವರು ದಿನಾಂಕ: 06/07/2017 ರಂದು ಮದ್ಯಾಹ್ನ ಮನೆಯಲ್ಲಿದ್ದಾಗ ಅಲ್ಲಿಯೇ ನಮ್ಮ ಮನೆಯ ಪಕ್ಕದಲ್ಲಿ ವಾಸವಾಗಿರುವ ನನ್ನ ಅಕ್ಕಳಾದ ಶಬಾನಾಬೇಗಂ ಇವಳ  ಮಗನಾದ ಸರಪರಾಜನು ಪಿರೋಜಾಬಾದ ಗ್ರಾಮದ ಖಲೀಪತ ರಹೇಮಾನ ದರ್ಗಾದ ಉರಸಗೆ ಹೋಗುತ್ತೇನೆ ನನಗೆ ಹಣ ಬೇಕು ಅಂತಾ ಹೇಳಿ ನಮ್ಮ ಅಕ್ಕನ ಕಡೆಯಿಂದ ಹಣ  ತೆಗೆದುಕೊಂಡು ತನ್ನ ಗೆಳೆಯನಾದ ದಶರಥ ಇವನ ಮೋಟಾರ ಸೈಕಲ ಮೇಲೆ ನನ್ನ ಅಳಿಯ ಸರಫರಾಜ ಹಾಗೂ ಸಾಗರ ಇವರು ಹಿಂದೆ ಕುಳಿತುಕೊಂಡು ಹೋದರು. ನಂತರ ರಾತ್ರಿ 9 ಗಂಟೆಯ ಸುಮಾರಿಗೆ ಯಾರೋ ನಮ್ಮ ಅಳಿಯ ಸರ್ಪರಾಜ ಈತನ ಮೋಬೈಲದಿಂದ ನನಗೆ ಕರೆ ಮಾಡಿ ಈ ಮೋಬೈಲದವರು ಜೇವರ್ಗಿ - ಕಲಬುರಗಿ ಮುಖ್ಯ ರಸ್ತೆಯಿಂದ ಶಾಹಾಬಾದ ಕ್ರಾಸದಿಂದ  ಅಂದಾಜು 1 ಕಿಮಿ ದೂರದಲ್ಲಿ ಶಹಾಬಾದ ಕಡೆಗೆ ಬರುವ ರಸ್ತೆ ಮೇಲೆ ನಿಂತಿರುವ ಲಾರಿಯ ಹಿಂದೆ ಮೋಟಾರ ಸೈಕಲ ಡಿಕ್ಕಿ ಪಡಿಸಿ ಲಾರಿಯ ಕೆಳಗೆ ಮೂರು ಜನರು ಮೋಟಾರ ಸೈಕಲದೊಂದಿಗೆ ಸಿಕ್ಕಿಬಿದ್ದು ಬಾರಿ ರಕ್ತಗಾಯ ಹಾಗೂ ಗುಪ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ ಅಂತಾ ತಿಳಿಸಿದ್ದರಿಂದ ಗಾಬರಗೊಂಡು ನಾನು ಹಾಗೂ ನನ್ನ ಜೊತೆಯಲ್ಲಿ, ನನ್ನ ದೊಡ್ಡ ಅಕ್ಕಳ ಗಂಡನಾದ ಹಾಜಿಕರೀಮ ಹಾಗೂ ಅವರ ಮಗನಾದ ಮಹ್ಮದ ಆಸೀಪ ಇವರೊಂದಿಗೆ ಸ್ಥಳಕ್ಕೆ ಬಂದು ನೋಡಲಾಗಿ ನನ್ನ ಅಳಿಯ ಸರ್ಪರಾಜ ಅವನ ಗೆಳೆಯನಾದ ದಶರಥ ಹಾಗೂ ಸಾಗರ ಒಬ್ಬರ ಮೇಲೆ ಒಬ್ಬರು ಲಾರಿಯ ಕೆಳೆಗೆ ಬಿದ್ದು ಮೃತಪಟ್ಟಿದ್ದರು. ಅವರನ್ನು ಲಾರಿ ಕೆಳಗಿನಿಂದ ಒಬ್ಬರನ್ನು ಹೊರೆಗೆ ತೆಗೆದು ರಸ್ತೆಯ ಮೇಲೆ  ಹಾಕಿದ ನಂತರ ನನ್ನ ಅಳಿಯನಾದ ಸರ್ಪರಾಜ ಈತನಿಗೆ ನೋಡಲಾಗಿ ತಲೆಗೆ ಭಾರಿ ಗುಪ್ತ ಗಾಯವಾಗಿ ತಲೆಯಿಂದ ಮಿದುಳು ಹೊರಕ್ಕೆ ಬಂದಿದ್ದು ಮುಖಕ್ಕೆ ಗುಪ್ತಗಾಯವಾಗಿ ಹಾಗೂ ಕಿವಿಯಿಂದ ಮೂಗಿನಿಂದ ರಕ್ತ ಬಂದು ಮುಖಕ್ಕೆ ಮೈಕೈಗೆ ಅಲ್ಲಲ್ಲಿ ರಕ್ತಗಾಯವಾಗಿ ಗಾಯಗಳಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಅದರಂತೆ ದಶರಥನನ್ನು ನೋಡಲಾಗಿ ಈತನಿಗೂ ತಲೆಗೆ ಭಾರಿ ರಕ್ತಗಾಯವಾಗಿ ತಲೆಯಿಂದ ಮಿದುಳು ಹೊರಗೆ ಬಂದು ಮುಖ ಚಪ್ಪಟೆಯಾಗಿ ಅಲಲ್ಲಿ ರಕ್ತಗಾಯ ವಾಗಿದ್ದು ಹಾಗೂ ಸಾಗರನಿಗೆ ನೋಡಲಾಗಿ ಸಾಗರನ ಒಂದು ಕಣ್ಣೀನ ಗುಡ್ಡಿ ಹೊರಗೆ ಬಂದು ತಲೆಗೆ ಪೆಟ್ಟಾಗಿ ತಲೆಯಿಂದ ಮಿದುಳು ಹೊರಗೆ ಬಂದು ಮುಖಕ್ಕೆ ಚಪ್ಪಟೆಯಾಗಿ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಸದರಿ ಮೂರು ಜನರು ಕುಳಿತುಕೊಂಡು ಬಂದು ಅಪಘಾತವಾದ ಮೋಟಾರ ಸೈಕಲ ನಂಬರ ನೋಡಲಾಗಿ ಕೆಎ-32 ಇಕೆ-6887 ನೇದ್ದು ಇರುತ್ತದೆ. ರಸ್ತೆಯ ಮೇಲೆ ಯಾವುದೇ ಮುಂಜಾಗ್ರತೆ ಇಲ್ಲದೆ ನಿಲ್ಲಿಸಿದ ಲಾರಿ ನಂಬರ ನೋಡಲಾಗಿ ಕೆಎ 01 ಎಸಿ-9177 ನೇದ್ದು ಇರುತ್ತದೆ. ಸದರಿ ಲಾರಿಯ ಚಾಲಕನು ರಸ್ತೆಯ ಮೇಲೆ ತನ್ನ ವಾಹನವನ್ನು ರೋಡಿನ ಮೇಲೆರಾತ್ರಿ ರಾತ್ರಿ ಹೊತ್ತಿನಲ್ಲಿ ಪಾರ್ಕಿಂಗ ಲೈಟ ಹಾಕದೆ ಯಾವುದೇ ಮುಂಜಾ ಗ್ರತಾ ಕ್ರಮವಹಿಸದೆ ಲಾರಿಯನ್ನು ನಿಲ್ಲಿಸಿದ್ದರಿಂದ ದಶರಥ ಈತನು ತನ್ನ ಮೊಟಾರ ಸೈಕಲನ್ನು ಅತೀವೇಗ ಹಾಗೂ ನಿಷ್ಕಾಳಜಿತ ನದಿಂದ ನಡೆಯಿಸಿ ಕತ್ತಲ್ಲಲಿ ಲಾರಿಯ ಹಿಂದೆ ಜೋರಾಗಿ ಡಿಕಿ ಪಡೆಯಿಸಿದ್ದರಿಂದ ಮೋಟಾರ ಸೈಕಲ ಮೇಲಿದ್ದ ಎಲ್ಲರೂ ಲಾರಿ ಕೆಳಗೆ ಸಿಕ್ಕು ಬಾರಿ ಗುಪ್ತಗಾಯ ಹಾಗೂ ರಕ್ತಗಾಯ ಹೊಂದಿ ಸ್ಥಳದಲಿಯೇ ಮೃತಪಟ್ಟಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಳಖೇಡ ಠಾಣೆ : ಶ್ರೀ ಯಲ್ಲಾಲಿಂಗ ತಂದೆ ನಾಗಪ್ಪ ಹಳ್ಳಿ ಸಾ: ಮುಗನೂರ ಗ್ರಾಮ, ಇವರ  ದೊಡ್ಡಪ್ಪನ ಮಗನಾದ ಸಿದ್ದಪ್ಪ ತಂದೆ ಬಸವರಾಜ ನಮ್ಮೂರಿನ ಸಕ್ಕರಿ ನಾಗೇಮದ್ರಪ್ಪ ಸಾಹುಕಾರ ಇವರ ಹತ್ತಿರ ಒಕ್ಕಲುತನ ಕೆಲಸ ಮಾಡಿಕೊಂಡಿದ್ದು ಸಿದ್ದಪ್ಪನ ಹೆಂಡತಿಯ ತವರು ಮನೆ ಕುಕ್ಕುಂದಾ ಗ್ರಾಮ ಇದ್ದು ಅವನ ಹೆಂಡತಿ ಹೆರಿಗೆಗಾಗಿ ಹೋಗಿದ್ದು ದಿನಾಂಕ 05-07-2017 ರಂದು ರಾತ್ರಿ ನಾನು ನನ್ನ ಮನೆಯಲ್ಲಿ ಇದ್ದಾಗ ನಮ್ಮ ಅಣ್ಣನಾದ ಸಿದ್ದಪ್ಪ ಇತನು ಮನೆಗೆ ಬಂದು ನನ್ನ ಮೋಟಾರ ಸೈಕಲ ಮೇಲೆ ಕುಕ್ಕುಂದಾ ಗ್ರಾಮಕ್ಕೆ ಹೋಗಿ ರಾತ್ರಿ  ಊಟಕ್ಕೆ ಬುತ್ತಿಕಟ್ಟಿಕೊಂಡು ಬರೋಣ ನೀನು ಹಿಂದೆ ಬುತ್ತಿ ಹಿಡಿದುಕೊಂಡು ಕುಳಿತುಕೊಳ್ಳುವಂತೆ ನನ್ನ ಜೊತಿ ನಡಿ ಅಂತಾ ಕರೆದಿದ್ದರಿಂದ ನಾನು ಮತ್ತು ಸಿದ್ದಪ್ಪ ಕೂಡಿ ಆತನ ಹತ್ತಿರ ಇದ್ದ ಮೋಟಾರ ಸೈಕಲ ನಂ KA-32.EN-2154 ನೇದ್ದರ ಮೇಲೆ ಕುಳಿತು ಕುಕ್ಕುಂದಾ ಗ್ರಾಮಕ್ಕೆ ಹೋಗಿ ಬುತ್ತಿ ಕಟ್ಟಿಸಿಕೊಂಡು ನಾವು ಇಬ್ಬರು ಅದೆ ಮೋಟಾರ ಸೈಕಲ ಮೇಲೆ ಕುಳಿತು ಮರಳಿ ಕುಕ್ಕುಂದಾ ಗ್ರಾಮದಿಂದ ಮುಗನೂರ ಕಡೆಗೆ ಹೋಗುತ್ತಿದ್ದಾಗ ನಾನು ಬುತ್ತಿ ಹಿಡಿದುಕೊಂಡು ಮೋಟಾರ ಸೈಕಲ ಮೇಲೆ ಹಿಂದುಗಡೆ ಕುಳಿತಿದ್ದೆನು ನಮ್ಮ ಅಣ್ಣ ಸಿದ್ದಪ್ಪ ಈತನು ಮೋಟಾರ ಸೈಕಲ ರಸ್ತೆಯ ಎಡಬದಿಯಿಂದ ನಿಧಾನವಾಗಿ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಯಡಗಾ ಗ್ರಾಮ ದಾಟಿ ಶಿವಶರಣಪ್ಪ ತಾಡಪಳ್ಳಿ ಇವರ ಹೊಲದ ಹತ್ತಿರ ನಿನ್ನೆ ರಾತ್ರಿ 08-45 ಗಂಟೆಯ ಸುಮಾರಿಗೆ ಹೋಗುತ್ತಿದ್ದಾಗ ಸೇಡಂ ಕಡೆಯಿಂದ ಅಂದರೆ ಎದರುಗಡೆಯಿಂದ ಒಂದು ಟಂ-ಟಂ ಚಾಲಕ ತನ್ನ ವಶದಲ್ಲಿದ್ದ ಟಂ-ಟಂ ನ್ನು ಅತೀವೇಗ ಹಾಗು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ನಮ್ಮ ಮೋಟಾರ ಸೈಕಲಗೆ ಎದುರುಗಡೆಯಿಂದ ಜೋರಾಗಿ ಡಿಕ್ಕಿ ಪಡಿಸಿ ಅಫಗಾತ ಪಡಿಸಿದನು ಆಗ ನಾವು ಇಬ್ಬರು ಕೆಳಗೆ ಬಿದ್ದಾಗ ನನ್ನ ಬಲಗಾಲಿಗೆ ಭಾರಿಗಾಯವಾಗಿ ಮೊಣಕಾಲಿನ ಕೆಳಗೆ ಕಾಲು ಮುರಿದಿರುತ್ತದೆ ಮತ್ತು ನಮ್ಮ ಅಣ್ಣ ಸಿದ್ದಪ್ಪ ಇತನಿಗೆ ನೋಡಲಾಗಿ ಆತನ ಬಲಗಾಲಿಗೆ ಭಾರಿರಕ್ತಗಾಯ ವಾಗಿ ಕಾಲು ಮುರಿದಿದ್ದು ಎರಡು ಕಾಲುಗಳ ಮದ್ಯ ಭಾರಿ ಗಾಯವಾಗಿ ಮರ್ಮಾಂಗದ ಹತ್ತಿರ ಮತ್ತು ಇತರೆ ಕಡೆ ಭಾರಿ ರಕ್ತಗಾಯವಾಗಿದ್ದು ರೋಡಿನ ಮೇಲೆ ಹೋಗಿ ಬರುವ ವಾಹನಗಳ ಬೆಳಕಿನಲ್ಲಿ ನೋಡಿರುತ್ತೆನೆ ಅಲ್ಲಿಯೇ ಇದ್ದ ಟಂ-ಟಂ ನಂಬರ ನೋಡಲಾಗಿ  KA-32,C-0672 ಅಂತಾ ಇದ್ದು ಅಲ್ಲಿಯೇ ನಿಂತಿದ್ದ ಅದರ ಚಾಲಕನಿಗೆ ಹೆಸರು  ಕೇಳಿದಾಗ ಆತ  ತನ್ನ ಹೆಸರು ಸೂರ್ಯಕಾಂತ ತಂದೆ ಕಾಶಪ್ಪ ಹೊಸಮನಿ, ಸಾ: ಯಡಗಾ ಗ್ರಾಮ ಅಂತಾ ತಿಳಿಸಿದನು ನಂತರ ನಾನು ನಮ್ಮ ತಂದೆಗೆ ಫೋನ ಮಾಡಿ ಅಫಗಾತದ ಬಗ್ಗೆ ತಿಳಿಸಿದಾಗ ಅವರು ಬಂದು 108 ಅಂಬುಲನ್ಸಗೆ ಫೋನ ಮಾಡಿದರು ಜನರು ಜಮಾ ಆಗುವುದನ್ನು ನೋಡಿ ಟಂ-ಟಂ ಚಾಲಕ ತನ್ನ ವಾಹನ ಅಲ್ಲಿಯೇ ಬಿಟ್ಟುಓಡಿ ಹೋದನು ನಂತರ ನಮಗೆ 108 ಅಂಬುಲೆನ್ಸದಲ್ಲಿ  ಉಪಚಾರ ಕುರಿತು ಕಲಬುರಗಿಗೆ ಬರುತ್ತಿದ್ದಾಗ ನಮ್ಮ ಅಣ್ಣನಿಗೆ ಆದ ಭಾರಿ ಗಾಯಗಳಿಂದ ಆತ ದಾರಿ ಮದ್ಯದಲ್ಲಿ ಮೃತ ಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ಆಳಂದ ಠಾಣೆ : ಶ್ರೀ ಸೈಬಣ್ಣಾ ತಂದೆ ಮಹಾದೇವಪ್ಪಾ ಭೂಸಣಗಿ  ಸಾ: ಸುಲ್ತಾನಪೂರ ಗಲ್ಲಿ ಆಳಂದ ರವರು ಠಾಣೆ ರವರು ದಿನಾಂಕ : 12/05/2017 ರಂದು 09:00 ಪಿ.ಎಂ. ದಿಂದ 09:30 ಪಿ.ಎಂ.ದ ಮಧ್ಯದ ಅವಧಿಯಲ್ಲಿ ಉಮರ್ಗಾ ರೋಡಿಗೆ ಇರುವ ಕುಮಾರ ಹೋಟೆಲ ಎದುರುಗಡೆ ನಿಲ್ಲಿಸಿದ ನನ್ನ ಹಿರೋ ಹೊಂಡಾ Splender ಪ್ಲಸ್ ಮೋಟರ ಸೈಕಲ ನಂ:KA:32 Q-866 ಚೆಸ್ಸಿ ನಂ: 03K16F04183 ಇಂಜಿನ್ ನಂ:03K15E05016 ಅ.ಕೀ.20,000/-ರೂ ನೇದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ  ಟ್ರಾಕ್ಟರ ಜಪ್ತಿ :
ಶಾಹಾಬಾದ ನಗರ ಠಾಣೆ : ದಿನಾಂಕ: 06/07/2017 ರಂದು ಗೋಳಾ (ಕೆ) ಸಿಮಾಂತರದ ಕಾಗಿಣಾ ನದಿಯಿಂದ ಮರಳು ಕಳ್ಳತನದಿಂದ ಟ್ಯಾಕ್ಟರನಲ್ಲಿ ತುಂಬಿಕೊಂಡು ಸಾಗಿಸುತ್ತಿದ್ದಾರೆ  ಅಂತಾ  ಖಚಿತ ಬಾತ್ಮಿ ಬಂದ  ಮೇರೆಗೆ  ಪಿ.ಐ ಶಹಾಬಾದ  ಠಾಣೆ ಹಾಗು ಸಿನಬ್ಬಂದಿ ಮತ್ತು ಪಂಚರೊಂದಿಗೆ ಕಾಗಿಣಾ ನದಿಯ ಪಂಪಹೌಸ ಹತ್ತಿರ ಹೊದಾಗ ನದಿ ಕಡೆಯಿಂದ  ಒಂದು ಮರಳು ತುಂಬಿದ ಟ್ಯಾಕ್ಟರ ಬರುತ್ತಿದ್ದು ಸದರಿ ಟ್ರಾಕ್ಟರ ಚಾಲಕನು ನಮ್ಮ ಪೊಲೀಸ ಜೀಪ ನೋಡಿ ತನ್ನ ಟ್ರಾಕ್ಟರ ಸ್ಥಳದಲ್ಲಿಯೇ ನಿಲ್ಲಿಸಿ ಓಡಿ ಹೋದನು. ಸದರಿಯವನಿಗೆ ನೋಡಿದಲ್ಲಿ ಗುರ್ತಿಸುತ್ತೇನೆ.  ಸದರಿ ಟ್ರಾಕ್ಟರ ಪರಿಶೀಲಿಸಿ ನೋಡಲಾಗಿ` ಕೆಂಪು ಬಣ್ಣದ ಮಶಿ ಫರಗುಷನ ಟ್ರಾಕ್ಟರ ಇದ್ದು ಅದರ ನಂಬರ ನೋಡಲು ಕೆ.ಎ 32 ಟಿ.ಬಿ 1104 ಟ್ಯಾಲಿ ನಂಬರ ಕೆ.ಎ. 32 ಟಿ 2143   ಅ.ಕಿ 2 ಲಕ್ಷ ರೂ ಸದರಿ ಟ್ರಾಕ್ಟರನದಲ್ಲಿ ಮರಳು ತುಂಬಿದು ಮರಳಿನ ಅ.ಕಿ 1000-00 ರೂ ಮರಳು ತುಂಬಿದ ಟ್ರಾಕ್ಟರನ್ನು ಪಂಚರ ಸಮಕ್ಷಮದಲ್ಲಿ ಜಪ್ತಿಮಾಡಿಕೊಂಡು ಮರಳು ತುಂಬಿದ ಟ್ರಾಕ್ಟರನೊಂದಿಗೆ  ಮರಳಿ ಶಾಹಾಬಾದ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.