POLICE BHAVAN KALABURAGI

POLICE BHAVAN KALABURAGI

26 September 2016

KALABURAGI DISTRICT REPORTED CRIMES

ಅಪಘಾತ ಪ್ರಕರಣ:
ಫರಹತಾಬಾದ ಪೊಲೀಸ್ ಠಾಣೆ :ಶ್ರೀ  ಅಶೋಕ ತಂದೆ ಶಾಂತಪ್ಪ ಸಾವು ಹೊಸಮನಿ ಸಾ: ನೆಲ್ಲೊಗಿ ತಾ: ಜೆವರ್ಗಿ ಜಿ: ಕಲಬುರಗಿ ರವರು ಠಾಣೆಗೆ ಹಾಜರಾಗಿ ಇಂದು ದಿನಾಂಕ 25/09/2016 ರಂದು ಬೆಳಿಗ್ಗೆ 9 ಗಂಟೆಗೆ ನಮ್ಮ ಚಿಕ್ಕಪ್ಪನ ಮಗನಾದ ಆನಂದ ತಂದೆ ಅಪ್ಪಸಾಬ ಹೊಸಮನಿ ಮತ್ತು ಕಾರ ಚಾಲಕ ರಾಜು @ ರಾಜಶೇಖರ ಕೂಡಿ ಸುಜುಕಿ ಸಿಫ್ಟ್ ಕಾರ ನಂ. ಕೆಎ-32ಎಮ್-8035 ತೆಗೆದುಕೊಂಡು ಕಲಬುರಗಿಗೆ ಹೋಗುವಾಗ ಸರಡಿಗಿ (ಬಿ) ಗ್ರಾಮ ಇನ್ನೂ 1 ಕಿಮಿ ದೂರ ಇರುವಾಗ ರಾಷ್ಟ್ರೀಯ ಹೆದ್ದಾರಿ 218 ರ ತಿರುವಿನಮಲ್ಲಿ ಚಾಲಕ ರಾಜು @ ರಾಜಶೇಖರನು ಕಾರನ್ನು ಅತಿವೇಗದಿಂದ ಹಾಗೂ ಅಲಕ್ಷತನದಿಂದ ಓಡಿಸಿ ಎದುರಿನಿಂದ ಬರುತ್ತಿದ್ದ  ವಾಹನದಿಂದ ತಪ್ಪಿಸಲು ಹೋಗಿ ಒಮ್ಮೆಲೆ ಕಟ್ ಹೊಡೆದಿದ್ದಕ್ಕೆ ಕಾರ್ ಅದೆ ವೇಗದಲ್ಲಿ ಹೋಗಿ ರೋಡಿನ ಎಡಬದಿಯ ಮರಕ್ಕೆ ಅಪಘಾತವಾಗಿ ಕಾರಿನಲ್ಲಿ ಕುಳಿತಿದ್ದ ಆನಂದನಿಗೆ ಭಾರಿ ಗಾಯವಾಗಿ ಕಾರಿನಲ್ಲಿಯೆ ಮೃತಪಟ್ಟಿದ್ದು. ಕಾರಿನ ಚಾಲಕ ರಾಜು @ ರಾಜಶೇಖರನಿಗೆ ಗಾಯಗಳಾಗಿದ್ದು ಉಪಚಾರ ಕುರಿತು ಕಲಬುರಗಿಗೆ ತೆಗೆದುಕೊಂಡು ಹೋಗಿದ್ದು ಇರುತ್ತದೆ. ಕಾರಣ ಕಾರ ನಂ. ಕೆಎ-32 ಎಮ್ -8035 ನೇದ್ದರ ಚಾಲಕ ರಾಜಿ @ ರಾಜಶೇಖರ ಅಳ್ಳಗಿ ಈತನು ಅತೀ ವೇಗ ಹಾಗೂ ಅಲಕ್ಷತನದಿಂದ ಓಡಿಸಿ ಮರಕ್ಕೆ ಡಿಕ್ಕಿ ಮಾಡಿ ಆನಂದನ ಸಾವಿಗೆ ಕಾರಣನಾಗಿದ್ದು ಅವನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಅಂತಾ ಹೇಳಿ ಬರೆಯಿಸಿದ ಹೇಳಿಕೆ ನಿಜವಿರುತ್ತದೆ.  ಅಂತಾ ಕೊಟ್ಟ ದೂರಿನ ಮೇಲಿಂದ ಫರಹತಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಆಳಂದ ಠಾಣೆ:
ವರದಕ್ಷಿಣೆ ಕಿರುಕುಳ ಪ್ರಕರಣ:ದಿನಾಂಕ:25/09/2016 ರಂದು ಶ್ರೀಮತಿ ಗೋಮುಬಾಯಿ ಗಂಡ ವೆಂಕಟ್‌ ರಾಠೋಡ ಸಾ: ಜೆಮಗಾ (ಕೆ) ತಾಂಡಾ ತಾ: ಆಳಂದರವರು ಠಾಣೆಗೆ ಹಾಜರಾಗಿ ತನ್ನ ಮಗಳಾದ ನಿಖಿತಾಳಿಗೆ ಜೆಮಗಾ (ಕೆ) ತಾಂಡಾದ ಸಂಜುಕುಮಾರನೊಂದಿಗೆ ದಿನಾಂಕ 01-05-2016 ರಂದು ಮದುವೆ ಮಾಡಿ ಕೊಟ್ಟಿದ್ದು ಇರುತ್ತದೆ. ಮದುವೆಯಾದ ನಂತರ ಅವಳ ಗಂಡ ಅತ್ತೆ ಮಾವ ಇವರು ನನ್ನ ಮಗಳೊಂದಿಗೆ ಎರಡು-ಮೂರು ತಿಂಗಳ ಚನ್ನಾಗಿ ಇದ್ದು ನಂತರ ಅವಳಿಗೆ ಹೊಲ-ಮನೆ ಕೆಲಸ ಬರುವುದಿಲ್ಲ ನೀನು ನಮ್ಮ ಮನೆಗೆ ಹೊಂದಾಣಿಕೆ ಆಗುವದಿಲ್ಲ. ಅಂತಾ ಹೊಡೆ-ಬಡೆ ಮಾಡುತ್ತಾ ಅವಾಚ್ಯವಾಗಿ ಬೈಯುವುದು ಮತ್ತು ಅದೆ ತಾಂಡಾದಲ್ಲಿರುವ ನಮ್ಮ ಮನೆಗೆ ಬರದಂತೆ ಅವಳಿಗೆ ಹೆದರಿಸುವುದು ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಾ ಬಂದಿದ್ದು. ನನಗೆ ಗಂಡನ ಮನೆಯವರ ಕಿರಕುಳ ಸಾಕಾಗಿದೆ ಎಂದು ನನ್ನ ಮಗಳು ಆಗಾಗ ಹೊರಗಡೆ ಸಿಕ್ಕಾಗ ನಮಗೆ ಈ ವಿಷಯ ತಿಳಿಸಿರುತ್ತಾಳೆ. ಹೀಗಿದ್ದು ನಮ್ಮ ಅಳಿಯ ಸಂಜುಕುಮಾರ ದಿನಾಂಕ:23/09/2016 ರಂದು ಸಾಯಂಕಾಲ ನಮ್ಮ ಮಗಳು ಬಹಿರ್ದೆಸೆಗೆ ಹೋದವಳು ಮರಳಿ ಮನೆಗೆ ಬಂದಿರುವದಿಲ್ಲ ಎಂದು ವಿಷಯ ತಿಳಿಸಿದಾಗ ನಾವು ತಾಂಡಾದಲ್ಲಿ ಮತ್ತು ನಮ್ಮ ಬೀಗರು ನೆಂಟರಲ್ಲಿ ವಿಚಾರಿಸಲಾಗಿ ನಮ್ಮ ಮಗಳು ಎಲ್ಲಿಯು ಸಿಕ್ಕಿರುವುದಿಲ್ಲ. ಈ ಬಗ್ಗೆ ದಿನಾಂಕ 24/09/2016 ರಂದು ಆಳಂದ ಪೊಲೀಸ ಠಾಣೆಯಲ್ಲಿ  ನನ್ನ ಮಗಳು ಕಾಣೆಯಾದ ಬಗ್ಗೆ ದೂರು ಸಲ್ಲಿಸಿದ್ದು ಇರುತ್ತದೆ. ದಿನಾಂಕ:25/09/2016 ರಂದು ಬೆಳಿಗ್ಗೆ 8:00 ಗಂಟೆ ಸುಮಾರಿಗೆ ನಮ್ಮ ತಾಂಡಾದ ನೀಲಕಂಠ ಪವಾರ ಇತನು ನಮ್ಮ ಮನೆಗೆ ಬಂದು ತಾನು ತನ್ನ ಮೋಟರ ಸೈಕಲ ಮೇಲೆ ಆಳಂದಕ್ಕೆ ಹೋಗುವ ಕುರಿತು ತಾಂಡಾದಿಂದ ತಡೋಳ ರೋಡಿನ ಕಡೆಗೆ ಹೋಗುವಾಗ ತಡೋಳಾ ಗ್ರಾಮದ ಹತ್ತಿರದ ಸರಕಾರಿ ಗೈರಾಣ ಭೂಮಿಯಲ್ಲಿ ಇರುವ ಭಾವಿಯಲ್ಲಿ ಬಿದ್ದು ನಿಮ್ಮ ಮಗಳು ನಿಖಿತಾ ಮೃತ ಪಟ್ಟಿರುತ್ತಾಳೆ ಎಂದು ತಿಳಿಸಿದಾಗ ನಾವು ಎಲ್ಲರು  ಹೋಗಿ ನೋಡಲಾಗಿ ನನ್ನ ಮಗಳ ಶವವು ಭಾವಿಯಲ್ಲಿ ತೇಲುತ್ತಿದ್ದು. ನನ್ನ ಮಗಳಿಗೆ ಆಕೆಯ ಗಂಡ ಸಂಜಯ ತಂದೆ ಕನ್ನಿರಾಮ ಪವಾರ, ಆಕೆಯ ಮಾವ ಕನ್ನಿರಾಮ ತಂದೆ ಹರಿಶ್ಚಂದ್ರ ಪವಾರ ಹಾಗು ಆಕೆಯ ಅತ್ತೆ ಶಾಂತಾಬಾಯಿ ಗಂಡ ಖನಿರಾಮ್‌ ಪವಾರ ಇವರು ಅವಳಿಗೆ ಹೊಲ ಮನೆ ಕೆಲಸ ಬರುವುದಿಲ್ಲ ನೀನು ನಮ್ಮ ಮನಗೆ ಹೊಂದಿಕೆಯಾಗುವದಿಲ್ಲ ಎಂದು ಬೈದು ಹೊಡೆ-ಬಡೆ ಮಾಡಿ ದೈಹಿಕ ಮಾನಸಿಕ ಕಿರುಕುಳ ನೀಡಿದ್ದರಿಂದ ಅವಳು ಮಾನಸಿಕವಾಗಿ ಮನನೊಂದುಕೊಂಡು ಬಾವಿಯಲ್ಲಿ ಬಿದ್ದು ಮೃತಪಟ್ಟಿದ್ದು. ನನ್ನ ಮಗಳ ಸಾವಿಗೆ ಕಾರಣರಾದವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಜೂಜು ಪ್ರಕರಣ:

ಅಫಜಲಪೂರ ಪೊಲೀಸ್ ಠಾಣೆ: ದಿನಾಂಕ 24-09-2016 ರಂದು ಪಿಎಸ್ಐ ಆಪಜಲಪೂರ ಠಾಣೆ ರವರು ಠಾಣೆಯಲಿದ್ದಾಗ ಅಫಜಲಪೂರ ಪಟ್ಟಣದ ಅಂಬಾಬಾಯಿ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಇಸ್ಪೇಟ ಜೂಜಾಟ ಆಡುತ್ತಿರುವ ಬಗ್ಗೆ ಬಾತ್ಮಿ ಬಂದ ಮೇರೆಗೆ ಇಬ್ಬರು ಪಂಚರಾದ 1) ಚಂದಪ್ಪ ತಂದೆ ರಮೇಶ ಕೋಳಿಗೇರಿ ಸಾ|| ಅಫಜಲಪೂರ 2) ಸೊಂದಪ್ಪ ತಂದೆ ಪರಮೇಶ್ವರ ಹೊಸ್ಮನಿ ಸಾ|| ಅಫಜಲಪೂರ ಇವರನ್ನು ಠಾಣೆಗೆ ಬರಮಾಡಿಕೊಂಡು. ದಾ ಠಾಣೆಯ ಸಿಬ್ಬಂದಿ ಜನರಾದ 1) ಚಂದ್ರಕಾಂತ ಸಿಹೆಸಿ-449, 2) ಹಜರತ್‍ಅಲಿ ಹೆಚ್.ಸಿ-160 3) ಶರಣು ಪಿಸಿ-881 ರವರನ್ನು ಸಂಗಡ ಕರೆದುಕೊಂಡು ಒಂದು ಖಾಸಗಿ ಟಾಟಾಸುಮೊ ವಾಹನದಲ್ಲಿ ಪಂಚರು ಹಾಗೂ ನಮ್ಮ ಠಾಣೆಯ ಸಿಬ್ಬಂದಿ ಜನರೊಂದಿಗೆ ಹೋಗಿ ನೋಡಲಾಗಿ ಪಟ್ಟಣದ ಅಂಬಾಬಾಯಿ ಗುಡಿ ಮುಂದಿನ ಖುಲ್ಲಾ ಜಾಗದಲ್ಲಿ ಕೆಲವು ಜನರು ದುಂಡಾಗಿ ಕುಳಿತುಕೊಂಡು ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿದ್ದು ಪಂಚರ ಸಮಕ್ಷಮ ನಾನು ಸಿಬ್ಬಂದಿಯವರೊಂದಿಗೆ ದಾಳಿ ಜೂಜಾಡುತ್ತಿದ್ದ ಎಲ್ಲಾ 05 ಜನರನ್ನು ಹಿಡಿದು ಅವರ ಹೆಸರು ವಿಳಾಸ ವಿಚಾರಿಸಲಾಗಿ 1) ಆನಂದ ತಂದೆ ನಾರಾಯಣಸಿಂಗ ಸಾ|| ಅಫಜಲಪೂರ 2) ಸುನೀಲ ತಂದೆ ಗುರುದೇವ ಸಾ|| ಅಫಜಲಪೂರ 3) ಸಿದ್ದಾರಾಮ ತಂದೆ ಮಲಕಪ್ಪ ಸಾ|| ಅಫಜಲಪೂರ 4) ಶ್ರೀಶೈಲ ತಂದೆ ಅರ್ಜುನ ಸಾ|| ಅಫಜಲಪೂರ 5) ಅರ್ಜುನ ತಂದೆ ಗುರುದೇವಪ್ಪ ಮ್ಯಾಳೇಸಿ ಸಾ||ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವರ ಅಂಗ ಶೋದನೆ ಮಾಡಲಾಗಿ ಇಸ್ಪೇಟ ಜೂಜಾಟಕ್ಕೆ ಸಂಭಂದಪಟ್ಟಂತೆ  52 ಇಸ್ಪೆಟ ಎಲೆಗಳು ಮತ್ತು ನಗದು ರೂ 2620/- ಹಣ  ಪಂಚರ ಸಮಕ್ಷಮ ವಶಕ್ಕೆ ತೆಗೆದುಕೊಂಡು ಆಪಾದಿತರ ವಿರುದ್ದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ