POLICE BHAVAN KALABURAGI

POLICE BHAVAN KALABURAGI

13 November 2013

Gulbarga District Reported Crimes

ಅಪಘಾತ ಪ್ರಕರಣಗಳು :
ಸಂಚಾರಿ ಠಾಣೆ : ಶ್ರೀ ನರಸಿಂಗರಾವ, ತಂದೆ ಸಾತೋಜಿ, ಸಾಃ ಮಕ್ತಂಪೂರ ಹೋಳಿಕಟ್ಟಾ ಗುಲಬರ್ಗಾ ರವರು ದಿನಾಂಕ 12-11-2013 ರಂದು  ಡಂಕಾ ಕ್ರಾಸ್ ರೋಡಿಗೆ ಇರುವ ಸಾತ ಗುಂಬಜ ಹತ್ತಿರ ನಡೆದುಕೊಂಡು ಹೋಗುತ್ತಿದ್ದಾಗ ಯಾವುದೊ ಒಂದು ಮೋಟಾರ ಸೈಕಲ ಚಾಲಕನು ತನ್ನ ಮೋಟಾರ ಸೈಕಲನ್ನು ಎಸ್.ಟಿ.ಬಿ.ಟಿ ಕ್ರಾಸ್ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ನರಸಿಂಗರಾವ ಇವರಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ ರಕ್ತಗಾಯವಾಗಿಪಡಿಸಿ ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫರತಾಬಾದ ಠಾಣೆ : ದಿನಾಂಕ 12-11-2013 ರಂದು ಮದ್ಯಾಹ್ನ 1230 ಗಂಟೆಗೆ ರಾಷ್ಟ್ರೀಯ ಹೆದ್ದಾರಿ ನಂ: 218 ರ ರಸ್ತೆಯ ಮೇಲೆ ಪೆಟ್ರೊಲಿಂಗ ಕರ್ತವ್ಯದ ಮೇಲೆ ಇದ್ದಾಗ  ಗುಲಬರ್ಗಾ ಕಡೆಯಿಂದ ಒಬ್ಬ ಟಿಪ್ಪರ ಚಾಲಕನು ತನ್ನ ವಾಹನವನ್ನು ರಾಷ್ಟ್ರೀಯ ಹೆದ್ದಾರಿಯ 218 ರ ರಸ್ತೆಯ ಮೇಲೆ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ರೋಡಿನ ಮೇಲೆ ಅತೀವೇಗದಿಂದನಿರ್ಲಕ್ಷ್ಯತನದಿಂದ ನಡೆಯಿಸಿಕೊಂಡು ಬರುತ್ತಿದ್ದನ್ನು ನೋಡಿ ಸದರಿ ಟಿಪ್ಪರ ನಿಲ್ಲಿಸಲು ಸೂಚಿಸಿದ್ದರೂ ಸದರಿ ಟಿಪ್ಪರ ಚಾಲಕನು ಅತಿವೇಗದಲ್ಲಿ ನಿರ್ಲಕ್ಷ್ಯತನದಿಂದ ಚಲಾಯಿಸುತ್ತಿದ್ದರಿಂದ ಕೈ ಮಾಡಿದ ಜಾಗದಲ್ಲಿ ನಿಲ್ಲಿಸದೆ ಮುಂದೆ ಹೋಗಿ ನಿಲ್ಲಿಸಿದ್ದುಸದರಿ ಟಿಪ್ಪರ ನಂಬರ ನೊಡಲಾಗಿ ಟಿಪ್ಪರ ನಂ: ಕೆಎ-28/ಬಿ-0397  ನೇದ್ದು ಇದ್ದು ಸದರಿ ಚಾಲಕನಿಗೆ ವಿಚಾರಿಸಲಾಗಿ ಅವನು ತನ್ನ ಹೆಸರು ಖಂಡಪ್ಪಾ ತಂದೆ ಶಿವನಾಥ ಮೂಲಗೆ ಉ: ಚಾಲಕ ಸಾ:ಚಿಂಚೋಳಿ(ಬಿ) ತಾ:ಆಳಂದ ಜಿ:ಗುಲಬರ್ಗಾ ಅಂತಾ ತಿಳಿಸಿದನು. ಸದರಿಯವನು ತನ್ನ ಟಿಪ್ಪರ ನಂ: ಕೆಎ-28/ಬಿ-0397 ನೇದ್ದನ್ನು ರಾಷ್ಟ್ರೀಯ ಹೆದ್ದಾರಿ 218 ರ ರಸ್ತೆಯ ಮೇಲೆ ಅತಿವೇಗದಿಂದ ಮತ್ತು ನಿರ್ಲಕ್ಷ್ಯತನದಿಂದ ಮಾವನ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ರಸ್ತೆಯ ಮೇಲೆ ಚಲಾಯಿಸಿದ್ದರಿಂದ ಸದರಿಯವನ ಮೇಲೆ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.