POLICE BHAVAN KALABURAGI

POLICE BHAVAN KALABURAGI

02 February 2016

Kalaburagi Disrict Reported Crimes


ಹಲ್ಲೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀಮತಿ ಕಮಲಾಬಾಯಿ ಗಂಡ ಜಗದೇವಪ್ಪಾ ದುರ್ಗದ ಸಾ:ಜೆ.ಆರ್‌‌ ನಗರ ಕಲಬುರಗಿ ಕಲಬುರಗಿ ನಗರದ ಆಳಂದ ರಸ್ತೆ ಪಕ್ಕದಲ್ಲಿರುವ ದೇವಿನಗರ ಬಡಾವಣೆಯಲ್ಲಿ ನನ್ನ ಹೆಸರಿನಲ್ಲಿ ಪ್ಲಾಟ್‌‌ ನಂ.32 ವಿಸ್ತೀರ್ಣ 30x40 ಉದ್ದ ಅಗಲ ಅಳತೆಯ ಖುಲ್ಲಾ ಪ್ಲಾಟ್ಇರುತ್ತದೆ. ನನ್ನ ಪ್ಲಾಟ ಎದರುಗಡೆ ಬಾಬುರಾವ ತಂದೆ ಹೀರಾಚಂದ ಪಾಟೀಲ ಇವರ ಮನೆ ಇರುತ್ತದೆ. ಕಳೆದ 3 ವರ್ಷಗಳ ಹಿಂದೆ ಬಾಬುರಾವ ಇತನು ಸದ್ಯ ಇರುವ ತನ್ನ ಜಾಗದಲ್ಲಿ ಮನೆ ಕಟ್ಟುತ್ತಿರುವಾಗ ಮನೆ ಕಟ್ಟುವ ಗೋಸ್ಕರ ನಿಮ್ಮ ಪ್ಲಾಟನಲ್ಲಿ ನಾನು ರೇತಿ ಕಂಕರೇಟ ಇನ್ನಿತರ ಸಾಮಾನುಗಳು ಹಾಕಿಕೊಳ್ಳುತ್ತೇನೆ ಅಂತಾ ಹೇಳಿದಾಗ ಆಯಿತು ಅಂತಾ ನಾನು ಹೇಳಿರುತ್ತೇನೆ. ಈಗ ಕೆಲವು ದಿವಸಗಳಿಂದ ಬಾಬುರಾವ ಇತನು ಪ್ಲಾಟ ನನ್ನ ಪ್ಲಾಟ ಇರುತ್ತದೆ ಅಂತಾ ವಿನಾಕಾರಣ ನನ್ನ ಜೊತೆಯಲ್ಲಿ ತಂಟೆ ತಕರಾರು ಮಾಡುತ್ತಾ ಬರುತ್ತಿದ್ದಾನೆ ಇಂದು ದಿನಾಂಕ:01/02/2016 ರಂದು ಸಾಯಂಕಾಲ 5.00 ಗಂಟೆ ಸುಮಾರಿಗೆ ನಾನು ನನ್ನ ಪ್ಲಾಟ ನೋಡಿಕೊಂಡು ಬರಲು ಹೋಗಿದ್ದು ಬಾಬುರಾವ ಪಾಟೀಲ ಈತನು ಮತ್ತು ಆತನ ಮಗನಾದ ಶೀತಲ್ಕುಮಾರ ಇವರು ಬಂದವರೆ ಬಾಬುರಾವ ಈತನು ರಂಡಿ ಭೋಸಡಿ ಪ್ಲಾಟ್ನಮ್ಮ ಪ್ಲಾಟ್ಇರುತ್ತದೆ ನೀನು ಪ್ಲಾಟ್ನೋಡಲು ಇಲ್ಲಿಗೆ ಏಕೆ ಬರುತ್ತಿ ಅಂತಾ ನನಗೆ ಹೇಳಿದಾಗ ನಾನು ಆತನಿಗೆ ಪ್ಲಾಟ್ನನ್ನ ಪ್ಲಾಟ್ಇರುತ್ತದೆ ನೀನು ಮನೆ ಕಟ್ಟುತ್ತಿರುವಾಗ ನನ್ನ ಪ್ಲಾಟ್ಮೇಲೆ ರೇತಿ ಕಂಕರೇಟ ಹಾಕಿಕೊಳ್ಳುತ್ತೇನೆ ಅಂತಾ ಹೇಳಿ ಈಗ ನೀನು ನನ್ನ ಪ್ಲಾಟಗೆ ನಿನ್ನ ಪ್ಲಾಟ ಇದೆ ಅಂತಾ ಜಬರದಸ್ತಿಯಿಂದ ನನಗೆ ಭಯ ಹಾಕಿತ್ತಿದ್ದಿ ಏನು ಅಂತಾ ನಾನು ಹೇಳಿದಾಗ ಅವನು ಭೋಸಡಿ ನಿನಗೆ ಖಲಾಸ ಮಾಡುತ್ತೇನೆ ಅಂತಾ ಬೈಯುತ್ತಾ ಒಂದು ಬಡಿಗೆಯಿಂದ ನನ್ನ ಬೆನ್ನಿನ ಮೇಲೆ ಹೊಡೆದಿರುತ್ತಾನೆ   ಶೀತಲ ಕುಮಾರ ಇತನು ರಂಡಿ ಭೋಸಡಿ ಪ್ಲಾಟ ನಮ್ಮ ಪ್ಲಾಟ ಇರುತ್ತದೆ ಪ್ಲಾಟಿನ ಮೇಲೆ ಯಾರದೆ ಹಕ್ಕು ಇರುವದಿಲ್ಲಾ ನೀನು ಇನ್ನೊಂದು ಸಲ ಬಂದರೆ ನಿನಗೆ ಜೀವ ಸಹಿತ ಬಿಡುವದಿಲ್ಲಾ ಅಂತಾ ಜೀವದ ಭಯ ಹಾಕಿ ಒಂದು ಕಲ್ಲಿನಿಂದ ನನ್ನ ಟೊಂಕದ ಮೇಲೆ ಹೊಡೆದು ಗುಪ್ತಗಾಯ ಮಾಡಿರುತ್ತಾನೆ. ಮತ್ತೆ ಬಾಬುರಾವ ಪಾಟೀಲ ಇತನು ರಂಡಿಗೆ ಬಿಡಬಾರದು ಖಲಾಸ ಮಾಡಬೇಕು ಅಂತಾ ಕೊಲೆ ಮಾಡುವ ಉದ್ದೇಶದಿಂದ ತನ್ನ ಕೈಯಲ್ಲಿದ್ದ ಒಂದು ಟಾವೇಲ ನನ್ನ ಕುತ್ತಿಗೆಗೆ ಹಾಕಿ ದರದರನೆ ಏಳೆಯುತ್ತಿರುವಾಗ ಅಲ್ಲೇ ರಸ್ತೆಗೆ ಹೋಗುತ್ತಿರುವ ಅನೀಲ ಕುಮಾರ ಪಾಟೀಲ ಮತ್ತು ಶ್ರೀಶೈಲ ಹವುಶಟ್ಟಿ ಹಾಗೂ ಬಾಬುವಾಲಿ ಇವರು ಬಂದು ಬಿಡಿಸಿರುತ್ತಾರೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ವರದಕ್ಷಣೆ ಕಿರುಕಳ ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀಮತಿ ವಿಜಯಲಕ್ಷ್ಮಿ ಗಂಡ ರಾಜು ತಳ್ಳಕರಿ ಸಾ|| ಕುಡಕಿ, ಹಾ|||| ಮನೆ ನ. 18 ವಿನಾಯಕ ನಗರಿ ಸೊಸೈಟಿ ತಾಡಿವಾಲಾ ರೋಡ ಪುಣೆ ರವರನ್ನು 1998 ಸಾಲಿನಲ್ಲಿ ಕುಡಕಿ ಗ್ರಾಮದ ಸಿದ್ರಾಮಪ್ಪ ತಂದೆ ಮರೆಪ್ಪಾ ತಳ್ಳಕೇರಿ ಇವರ ಮಗನಾದ ರಾಜು ತಂದೆ ಸಿದ್ರಾಮಪ್ಪ ತಳ್ಳಕೇರಿ ಇವನೊಂದಿಗೆ ಮದುವೆಯಾಗಿದ್ದು ಮದುವೆಯಾದಾಗನಿಂದಲು ನಾನು, ನನ್ನ ಗಂಡ ರಾಜು, ಅತ್ತೇಯಾದ ರೇಣುಕಾ ಗಂಡ ಸಿದ್ರಮಪ್ಪ ತಳ್ಳಿಕೇರಿ ಎಲ್ಲರೂ ಪುಣೆಯಲ್ಲಿ ಕೂಲಿಕೆಲಸ ಮಾಡಿಕೊಂಡು ಈ ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇವೆ. ನನಗೆ ಒಟ್ಟು ಎರಡು ಜನ ಗಂಡು ಮಕ್ಕಳು ಇರುತ್ತಾರೆ. ಮದುವೆಯಾದ ಒಂದು ವರ್ಷದವರೆಗೆ ನನ್ನ ಗಂಡ ನನ್ನೊಂದಿಗೆ ಸರಿಯಾಗಿದ್ದು ಆ ನಂತರ ನನ್ನ ಗಂಡ ದಿನಾಲೂ ಸರಾಯಿ ಕುಡಿದು ಮನೆಗೆ ಬಂದು ನನಗೆ ನಿಮ್ಮ ಮನೆತನ ನಮ್ಮ ಮನೆತನಕ್ಕೆ ಸರಿ ಹೊಂದುವಂತದ್ದಿಲ್ಲ, ನಿನ್ನ ತಂದೆ ಭೀಕಾರಿ ಇದ್ದು ನೀನು ನನಗೆ ಯಾಕೆ ಗಂಟು ಬಿದ್ದಿ ದಿನಾಲೂ ಎಷ್ಟೊ ಜನ ಸಾಯಿತಾರೆ ಅಂತ ಟಿವಿಯಲ್ಲಿ, ಪೇಪರದಲ್ಲಿ ಬರತ್ತಾದ ಆ ಸಾವು ನಿನಗ್ಯಾಕೆ ಬರಬಾರದು ಅಂತ ಬೈದು ಹೊಡೆ ಬಡೆ ಮಾಡುತ್ತಾ ದೈಹಿಕ ಮತ್ತು ಮಾನಸಿಕ ಕಿರುಕುಳ ಕೊಡುತ್ತಾ ಬಂದಿರುತ್ತಾನೆ. ನನ್ನ ಅತ್ತೆಯಾದ ರೇಣುಕಾಬಾಯಿ ಇವಳು ಸಹ ನನಗೆ ದಿನಾಲೂ ಕೆಲಸ ಮಾಡುವಾಗ ನಿನಗೆ ಸರಿಯಾಗಿ ಕೆಲಸ ಮಾಡಲು ಬರುವದಿಲ್ಲ, ಅಡುಗೆ ಮಾಡಲು ಬರುವದಿಲ್ಲ, ನನ್ನ ಮಗನಿಗೆ ಎಂಥ ಹೆಂಡತಿ ಸಿಕ್ಕಿ ನೀನು ಅಂತಾ ತ್ರಾಸ ಕೊಡುತ್ತಾ ಬಂದಿರುತ್ತಾಳೆ, ನನ್ನ ನಾದಿಯಿಯಾದ ಕಮಲಾಬಾಯಿ ಗಂಡ ರಾಮಚಂದ್ರನ ನಾಡರ ಸಾ|| ಮನೆ ನಂ. 303 ಯುನಿಟಿ ಪಾರ್ಕ ಕೊಂಡವಾ ಪುಣೆ ಇವಳು ಆಗಾಗ ನಮ್ಮ ಮನೆಗೆ ಬಂದು ನನ್ನ ಗಂಡ  ಮತ್ತು ಅತ್ತೆಯೊಂದಿಗೆ ಸೇರಿ ಅವಳು ನನಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ಕೊಟ್ಟಿರುತ್ತಾಳೆ. ಇತ್ತಿಚೇಗೆ ಅಂದರೆ 2009 ನೇ ಸಾಲಿನಿಂದ ನನಗೆ ಆಗಾಗ ಆರಾಮ ತಪ್ಪುತ್ತಿದ್ದು ದವಾಖಾನೆ ಉಪಚಾರ ಕೂಡ ಅಷ್ಟಕಷ್ಟೆ ಮಾಡಿಸಿ ದಿನಾಲೂ ಮನೆಯಲ್ಲಿ ಈ ಮೂರು ಜನರು ನಿನಗೆ ಟಿ.ಬಿ ರೋಗ ಇದೆ ನಿನ್ನ ದವಾಖಾನೆ ಖರ್ಚು ಎರಡು ಲಕ್ಷ ರೂಪಾಯಿ ಬಂದಿದೆ ನೀನು ನಿನ್ನ ತವರು ಮನೆಯಿಂದ ಹಣ ತಂದರೆ ಸರಿ ಇಲ್ಲ ಅಂದರೆ ನಿನಗೆ ಜೀವ ಸಹಿತ ಬಿಡಂಗಿಲ್ಲ ಅಂತ ಭಯಪಡಿಸಿ 3 ತಿಂಗಳ ಹಿಂದೆ ಮನೆಯಿಂದ ಹೊರ ಹಾಕಿರುತ್ತಾರೆ. ನಾನು ನಿಂಬರ್ಗಾ ಗ್ರಾಮಕ್ಕೆ ಬಂದು ನನ್ನ ತಂದೆ ತಾಯಿಯೊಂದಿಗೆ ವಾಸಿಸುತ್ತಿದ್ದಾಗ ದಿನಾಂಕ 30/01/2016 ರಂದು ನನ್ನ ಗಂಡ ರಾಜು, ಅತ್ತೇಯಾದ ರೇಣುಕಾ ಗಂಡ ಸಿದ್ರಮಪ್ಪ ತಳ್ಳಿಕೇರಿ, ನಾದಿಯಿಯಾದ ಕಮಲಾಬಾಯಿ ಗಂಡ ರಾಮಚಂದ್ರನ ನಾಡರ ಎಲ್ಲರೂ ನಮ್ಮ ಮನೆಗೆ ಬಂದು ನ್ಯಾಯ ಪಂಚಾಯತಿ ಸೇರಿಸಿದ್ದು ನಮ್ಮ ಮನೆಯಲ್ಲಿ ನನ್ನ ತಂದೆ ಸೈದಪ್ಪ ತಂದೆ ಶಂಕರ ಕುಲಾಲಿ, ತಾಯಿ ಮಮತಾಬಾಯಿ ಗಂಡ ಸೈದಪ್ಪ ಕುಲಾಲಿ, ಪಂಚರಾದ ಶಿವಪ್ಪ ತಂದೆ ಸಿದ್ರಾಮಪ್ಪ ಯಳಸಂಗಿ, ವಿಠ್ಠಲ ತಂದೆ ಚಂದಪ್ಪ ಕೊಣೆಕರ, ಹಣಮಂತ ತಂದೆ ಸಂಗಪ್ಪ ಅಷ್ಟಗಿ ಇವರೆಲ್ಲನ್ನು ನನ್ನ ತಂದೆ ತಾಯಿಯವರು ಮಾತನಾಡಲು ಕರೆಯಿಸಿದ್ದು ಎಲ್ಲರೂ ಸೇರಿ ಪಂಚಾಯತಿ ಮಾಡುತ್ತಿದ್ದಾಗ ಅಂದಾಜ ಬೆಳಿಗ್ಗೆ 1130 ಗಂಟೆಗೆ ನನ್ನ ಗಂಡ ರಾಜು ಇತನು ನನ್ನ ತಂದೆ ಏ ರಂಡಿ ಮಗನೆ ನಿನ್ನ ಮಗಳ ದವಾಖಾನೆ ಖರ್ಚ ಎರಡು ಲಕ್ಷ ರೂಪಾಯಿ ಬಂದಾದ ಅದನ್ನು ಯಾರು ಕೊಡೊದು ಅಂತ ಬೈದು ಕೈಯಿಂದ ಬೆನ್ನ ಮೇಲೆ ಹೊಡೆದನು, ಅದಕ್ಕೆ ಪಂಚರ ಹಾಗೆಲ್ಲ ಮಾಡಬಾರದು ಅಂತ ಎಷ್ಟೆ ಬೇಡಿಕೊಂಡರು ನನ್ನ ಗಂಡ ನನಗೆ ಕಪಾಳ ಮೇಲೆ ಹೊಡೆದು ಇನ್ನು ಮುಂದ ರಂಡಿ ನನ್ನ ಜೋಡ ಹೆಂಗ ಸಂಸಾರ ಮಾಡತ್ತೀ ನೊಡತ್ತೀನಿ ನನ್ನ ಹತ್ತಿರ ಬಾ ನಿನಗೆ ಉರಿ ಹಚ್ಚಿ ಸುಡತ್ತೀನಿ ಅಂತ ಜೀವ ಭಯಪಡಿಸಿದನು, ಆಗ ನನ್ನ ಅತ್ತೆ ಮತ್ತು ನಾದಿನಿ ಇಬ್ಬರೂ ಸೇರಿ ನನ್ನ ಗಂಡನಿಗೆ ಈ ರಂಡಿಗೆ ಬಿಡೊದು ಬೇಡ ಕರೆದುಕೊಂಡು ನಡೆ ಖಲಾಸ ಮಾಡೋನಿ ಇಲ್ಲಂದ್ರ ಎರಡು ಲಕ್ಷ ರೂಪಾಯಿ ತಂದು ಕೊಡಬೇಕು ಅಂತ ಬೈದು ನನ್ನ ಅತ್ತೆ ನನಗೆ ಕೈಯಿಂದ ಬೆನ್ನಮೇಲೆ ನಾದಿನಿ ಕೈಯಿಂದ ಕಪಾಳ ಮೇಲೆ ಹೊಡೆದು ಜೀವದ ಭಯ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಸಂಚಾರಿ ಠಾಣೆ : ದಿನಾಂಕ 31-01-2016 ರಂದು ಸಾಯಂಕಾಲ 6-00 ಗಂಟೆ ಸುಮಾರಿಗೆ ಮೃತ  ಜಗನ್ನಾಥ @ ಜಗಪ್ಪ ಇವರು ಮೋಟಾರ ಸೈಕಲ ನಂ ಕೆಎ-32-ಇಜೆ-8013 ನೇದ್ದರ ಹಿಂದುಗಡೆ ಮೃತ ಮಹಾದೇವಪ್ಪಾ ಇವರನ್ನು ಕೂಡಿಸಿಕೊಂಡು ಫಿಲ್ಟರ ಬೇಡ್ ಕಡೆಯಿಂದ ಅವರ ಮನೆಯ ಕಡೆಗೆ ಹೋಗುವ ಕುರಿತು ಮೋಟಾರ ಸೈಕಲ ಚಲಾಯಿಸಿಕೊಂಡು ಹೋಗುವಾಗ ದಾರಿ ಮದ್ಯ ಆರ್, ಸ್ವಾಮಿ ಕಾಂಪ್ಲೇಕ್ಸ ಎದುರಿನ ರೋಡ ಮೆಲೆ ಎದುರಿನಿಂದ ಲಾರಿ ನಂ ಕೆಎ-28-ಬಿ-1464 ನೇದ್ದರ ಚಾಲಕನು ತನ್ನ ಲಾರಿಯನ್ನು ಸುಲ್ತಾನಪೂರ ರಿಂಗ ರೋಡ ಕಡೆಯಿಂದ ಫಿಲ್ಟರ ಬೇಡ ಕಡೆಗೆ ಹೋಗುವ ಕುರಿತು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮೃತರ ಮೋಟಾರ ಸೈಕಲಕ್ಕೆ ಎದುರಿನಿಂದ ಡಿಕ್ಕಿಪಡಿಸಿ ಅಫಘಾತ ಮಾಡಿ ಲಾರಿ ಅವರ ಮೇಲೆ ಹಾಯಿಸಿದ್ದರಿಂದ ಮೃತ ಜಗನ್ನಾಥ @ ಜಗಪ್ಪಾ ಇವರ ತೆಲೆಗೆ ಭಾರಿ ಗುಪ್ತ ಪೆಟ್ಟು ಹೊಟ್ಟೆಯ ಮೇಲೆ ಗಾಲಿ ಹೋಗಿದ್ದು ಮತ್ತು ಎರಡು ತೊಡೆಗಳಿಗೆ ಭಾರಿ ಪೆಟ್ಟು ಬಿದ್ದು ಸ್ಥಳದಲ್ಲಿ ಮೃತಪಟ್ಟಿದ್ದು ಮೃತ ಮಹಾದೇವಪ್ಪಾ ಇವರಿಗೆ ಎಡಗಾಲಿಗೆ ಭಾರಿ ರಕ್ತಗಾಯ ಮೂಗಿಗೆ ತರಚಿದಗಾಯ ಬಲಗಾಲಿನ ಮೊಳಕಾಲಿಗೆ ರಕ್ತಗಾಯ ಹಾಗೂ ಎರಡು ತೊರಡುಗಳಿಗೆ ರಕ್ತಗಾಯ ಹಾಗೂ ಮೈಯಲ್ಲಾ ಒಳಪೆಟ್ಟು ಬಿದ್ದು ಸರ್ಕಾರಿ ಆಸ್ಪತ್ರೆಗೆ ಉಪಚಾರ ಕುರಿತು ಕರೆದುಕೊಂಡು ಹೋದಾಗ ಉಪಚಾರ ಫಲಕಾರಿಯಗದೆ ಆಸ್ಪತ್ರೆಯಲ್ಲಿ ಸಾಯಂಕಾಲ 7-30 ಗಂಟೆ ಸುಮಾರಿಗೆ ಮೃತಪಟ್ಟಿದ್ದು ಇರುತ್ತದೆ. ಅಂತಾ  ಶ್ರೀಮತಿ ವಿಜಯಲಕ್ಷ್ಮಿ ಗಂಡ ಜಗನ್ನಾಥ ಸಾ : ಹಮಾಲ ಸಂಘ ಕಮಲ ನಗರ ತಾಜಸುಲ್ತಾನಪೂರ ರೋಡ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.