POLICE BHAVAN KALABURAGI

POLICE BHAVAN KALABURAGI

15 September 2013

GULBARGA DIST REPORTED CRIMES

ಕೊಲೆ ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀ ಜಯಾ ತಂದೆ ಪ್ರಭು. ರಾಠೋಡ ಸಾ: ಇಂದಿರಾ ನಗರ ಮಡ್ಡಿ ನಂ: 2 ಶಹಾಬಾದ. ದಿನಾಂಕ 14-08-2013 ರಂದು 8.30 ಪಿಎಮ್ ಸುಮಾರಿಗೆ   ಗಣೇಶ ವಿಸರ್ಜನೆ ಕುರಿತು ಅದೇ ಓಣಿಯ ಹುಡಗರಾದ ಚಿಚರು ಮತ್ತು ಹೊಂಡಾ ಇವರಿಗೆ ಡಾನ್ಸ ಕಲಿಸುವಾಗ ಅದೆ ಓಣಿಯ ಸಂಜಯ ಇತನು ಬಂದು ಪಿರ್ಯಾದಿಗೆ ಏ ಭೋಸಡಿ ಮಗನೇ ಇಲ್ಲಿ ಎಕೆ ರೋಡಿನ ಮೇಲೆ ಡಾನ್ಸ ಕಲಿಸುತ್ತಿರುವೆ ಈ ಜಾಗ ನಿಮ್ಮದು ಏನು” ಅಂತಾ ಅವಾಚ್ಯ ಶಬ್ದಗಳಿಂದ ಬೈಯುತ್ತಿರುವಾಗ ಸಂಜಯ ಇತನಿಗೆ “ ನಾನು ರೋಡಿನ ಮೇಲೆ ಡಾನ್ಸ ಕಲಿಸುತ್ತೇನೆ ಅದರಿಂದ ನಿನಗೇನು ತೊಂದರೆ ಆಗುತ್ತಿದೆ ಅಂದಾಗ ಸದರಿ ಸಂಜಯ ಇತನು ಎದರು ಮಾತನಾಡುತ್ತಿಯಾ ಅಂತಾ ಅಂದವನೇ ಕೈಯಿಂದ ಬೆನ್ನ ಮೇಲೆ ಹೊಡೆಯುತ್ತಿದ್ದಾಗ ಪಿರ್ಯಾದಿಯ ತಾಯಿ ಬಿಡಿಸಲು ಬಂದಾಗ ಸದರಿಯವಳಿಗೆ ಕೈಹಿಡಿದು ಎಳೆದಾಡಿ ಮಾನಭಂಗ ಮಾಡಲು ಪ್ರಯತ್ನ ಪಡುತ್ತಿದ್ದ ಜಗಳದ ಸಪ್ಪಳ ಕೇಳಿ ಪಿರ್ಯಾದಿಯ ಅಣ್ಣ ಕುಮಾರ ಬಿಡಿಸಲು ಬಂದಾಗ ಆರೋಪಿಯ ಅಣ್ಣ ವಸಂತ ಇತನು ಕುಮಾರನಿಗೆ ಕೊಲೆ ಮಾಡುವ ಉದ್ದೇಶದಿಂದ ಕುತ್ತಿಗೆ ಹಿಡಿದು ಜೋರಾಗಿ ಒತ್ತುತ್ತಿದ್ದಾಗ ಸಂಜಯ ಇತನು ಕೈ ಮುಷ್ಟಿ ಮಾಡಿ ಜೋರಾಗಿ ಎದೆಗೆ, ಹೊಟ್ಟೆಗೆ ಹೊಡೆದುದ್ದಲ್ಲದೇ ತನ್ನ ಕಾಲಿನಿಂದ ಸದರಿ ಕುಮಾರನ ತರಡಿಗೆ ಜೋರಾಗಿ ಒದಿದ್ದರಿಂದ ಸದರಿಯವನು ಸ್ಥಳದಲ್ಲಿಯೇ ಬಿದ್ದು ಮೃತ ಪಟ್ಟಿದ್ದು ಸದರಿಯವನಿಗೆ ವಿನಾಕಾರಣ ಜಗಳ ತೆಗೆದು ಕೊಲೆ ಮಾಡಿರುತ್ತಾರೆ ಅಂತಾಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗ್ರ ಠಾಣೆಯಲ್ಲಿ ಪ್ರಕ್ರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ  ಮಲ್ಲಿಕಾರ್ಜುನ ತಂದೆ ಶಿವಪುತ್ರಪ್ಪಾ ಸಾಃ ಎಂ.ಬಿ ನಗರ ಗುಲಬರ್ಗಾರ ರವ ರು ದಿನಾಂಕ 13-09-2013 ರಂದು 08:00 ಪಿ.ಎಂ. ಸುಮಾರಿಗೆ ತಮ್ಮ ಗೆಳೆಯರಾದ ಸೋಮನಾಥ, ಕಿರಣಕುಮಾರ ಇವರು ತಮ್ಮ ತಮ್ಮ ಮೋಟಾರ ಸೈಕಲ ಮೇಲೆ ಗಣೇಶ ವಿಸರ್ಜನೆಯ ಮೆರವಣಿಗೆಯನ್ನು ನೋಡಿಕೊಂಡು ಮರಳಿ 11:00 ಪಿ.ಎಂ. ಸುಮಾರಿಗೆ ಬಸವೇಶ್ವರ ಆಸ್ಪತ್ರೆಯ ಎ.ಟಿ.ಎಂ. ಕ್ರಾಸ್ ಮುಖಾಂತರ ಹೋಗುತ್ತಿರುವಾಗ ವೆಂಕಟೇಶ, ಗೋವಿಂದ ಸಂಗಡ ಇನ್ನೂ 03 ಜನರು ತಡೆದು ನಿಲ್ಲಿಸಿ ಚಾಕುವಿನಿಂದ ಪಿರ್ಯಾದಿಯ ಕುತ್ತಿಗೆಗೆ ಹೊಡೆದು ಭಾರಿ ರಕ್ತಗಾಯ ಪಡಿಸಿ, ಕೈಯಿಂದ ಹೊಡೆ ಬಡೆ ಗುಪ್ತಗಾಯ ಪಡಿಸಿದ್ದು ಹಾಗು ಜೀವ ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಾಲಾಗಿದೆ.

ಜೇವರ್ಗಿ ಠಾಣೆ : ಶ್ರೀ ನಾಗಪ್ಪ ತಂದೆ ಪೀರಪ್ಪ ಮಾಂಗ ಸಾ: ಅವರಾದ . ತಾ: ಜೇವರ್ಗಿ ರವರು  13-09-13 ರಂದು ರಾತ್ರಿ 8-00 ಗಂಟೆಗೆ ತಮ್ಮ ಹೆಂಡತಿ ಶರಣಮ್ಮ ತಂದೆ ಪೀರಪ್ಪ ತಾಯಿ ಶರಣಮ್ಮ ಮನೆಯ ಮುಂದೆ ಮಾತಾನಾಡುತ್ತ ಕುಳಿತುಕೊಂಡಾಗ ಮರೆಪ್ಪ ತಂದೆ ಮಸ್ತಫ್ ಸಂಗಡ 5 ಜನರು ಸಾ: ಎಲ್ಲರು ಅವರಾದ ಗ್ರಾಮದವರು ತಾ: ಜೇವರ್ಗಿ  ಎಲ್ಲರು ಕುಡಿಕೊಂಡು ಹೊಲದ ವಿಷಯದಲ್ಲಿ ಜಗಳ ತೆಗೆದು ಕೈಯಿಂದ ಬಡಿಗೆಯಿಂದ ಹೊಡೆ ಬಡೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬಯ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕ್ರಣ ದಾಖಲಾಗಿದೆ