POLICE BHAVAN KALABURAGI

POLICE BHAVAN KALABURAGI

02 September 2012

GULBARGA DISTRICT REPORTED CRIMES


ಅಪಘಾತ ಪ್ರಕರಣ:
ಎಂ.ಬಿ.ನಗರ ಪೊಲೀಸ್ ಠಾಣೆ:ಶ್ರೀ ನಜಮೋದ್ದಿನ ತಂದೆ ತಕಿಯೋದ್ದಿನ ಸಾಃ ಅಹ್ಮದ ರಜಾ ಕಾಲೋನಿ ಆಜಾದಪೂರ ರೋಡ್ ಗುಲಬರ್ಗಾ ರವರು ನನ್ನ ಗೆಳೆಯನಾದ ಅಮೀರ ಅಲಿ ಇವರು ಪೂನಾ ಕ್ಕೆ ಹೋಗುವವರಿದ್ದು, ಅವರನ್ನು ಕಳುಹಿಸುವದಕ್ಕೆ ನಾನು ದಿನಾಂಕ 02.09.2012 ರಂದು 00.15 ಎ.ಎಮ ಕ್ಕೆ ನನ್ನ ಗೆಳೆಯರಾದ ಖಾಸಿಂ ಅಲಿ, ಅಕ್ತರ ಅಲಿ, ಎಲ್ಲರೂ ಕೂಡಿಕೊಂಡು, ಗೆಳೆಯನಾದ ನಸೀರೊದ್ದಿನ ಇವರ ಟಾಟಾ ಇಂಡಿಕಾ ಕಾರ ನಂ ಕೆಎ-32 ಎಮ್-2361 ನೆದ್ದರಲ್ಲಿ 04 ಜನರು ಕುಳಿತು ರೈಲ್ವೆ ಸ್ಟೇಷನಕ್ಕೆ ಹೋಗುವ ಕುರಿತು ಹೋರಟಿದ್ದು ಮಧ್ಯರಾತ್ರಿ 00.30 ಗಂಟೆಗೆ ಸೇಡಂ ರಿಂಗ್ ರೋಡಿಗೆ ಬಂದು ಕಾರ ಬಸವೇಶ್ವರ ಆಸ್ಪತ್ರೆ ಕಡೆಗೆ ಟರ್ನ ಮಾಡುವಾಗ ಶಹಬಾದ ರಿಂಗ ರೋಡ ಕಡೆಯಿಂದ ಲಾರಿ ನಂ ಕೆಎ-28 ಬಿ-3331 ನೇದ್ದರ  ಚಾಲಕ ತನ್ನ ಲಾರಿಯನ್ನು ಅತೀ ವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನಮ್ಮ  ಕಾರಿಗೆ ಡಿಕ್ಕಿ ಹೊಡೆದನು. ನನಗೆ  ರಕ್ತಗಾಯ & ಭಾರಿ ಗುಪ್ತ ಗಾಯಾವಾಗಿದ್ದು , ಹಾಗೂ ಖಾಸಿಂ ಅಲಿ ಇವರಿಗೆ ಎಡಗಾಲಿನ ರೊಂಡಿಗೆ ಭಾರಿ ಗುಪ್ತಗಾಯವಾಗಿತ್ತು. ಅಕ್ತರ ಜಾವೀದ ಇವರಿಗೆ ನೋಡಲು ತೆಲೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೆ ಮೃತಪಟ್ಟಿದರು.ಹಾಗೂ ಅಮೀರ ಅಲಿ ಇವರಿಗೆ ನೋಡಲಾಗಿ ಅವರಿಗೆ ಹೊಟ್ಟೆಯಲ್ಲಿ, ಎದೆಯಲ್ಲಿ ಭಾರಿ ಗುಪ್ತಗಾಯವಾಗಿದ್ದು ಯಾರೋ 108 ವಾಹನಕ್ಕೆ ಕರೆ ಮಾಡಿ ನನಗೆ ಮತ್ತು ಖಾಸಿಂ ಅಲಿ ಹಾಗು ಅಮೀರ ಅಲಿ ಇವರಿಗೆ ಬಸವೇಶ್ವರ ಆಸ್ಪತ್ರೆಗೆ ತಂದು ಉಪಚಾರ ಕುರಿತು ಸೇರಿಕೆ ಮಾಡಿದರು. ಅಮೀರ ಅಲಿ ಇತನು ಉಪಚಾರ ಹೊಂದುತ್ತಾ ಬಸವೇಶ್ವರ ಆಸ್ಪತ್ರೆಯಲ್ಲಿ ಮೃತ ಪಟ್ಟಿರುವುದಾಗಿ ತಿಳಿದು ಬಂತು. ಲಾರಿಯಲ್ಲಿ ಚಾಲಕ ಮತ್ತು ಅವರ ಸಂಗಡ ಇದ್ದವರಿಗೆ ಅಲ್ಲಲ್ಲಿ ರಕ್ತಗಾಯಗಳಾಗಿದ್ದು ಅವರಿಗೆ ಉಪಚಾರ ಕುರಿತು ಬೇರೆ ಆಸ್ಪತ್ರೆಗೆ ತೆಗೆದುಕೊಂಡು ಹೋದ ಬಗ್ಗೆ ಗೊತ್ತಾಯಿತು. ಮತ್ತು ಲಾರಿಯಲ್ಲಿದ್ದ ಎಮ್ಮೆಗಳಿಗೂ ಕೂಡ ಪೆಟ್ಟಾಗಿರುತ್ತವೆ. ಸದರಿ ಲಾರಿ ಚಾಲಕನ ಹೇಸರು ಲಾಲಸಾಬ ಅಂತಾ ಗೊತ್ತಾಗಿರುತ್ತದೆ  ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ. 94/2012 ಕಲಂ. 279, 337, 338, 429, 304(ಎ) ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಕೆ ಕೈಕೊಂಡಿರುತ್ತಾರೆ.
ವರದಕ್ಷಿಣೆ ಕಿರಕುಳದಿಂದ ಒಂದು ಸಾವು:
ಮಹಿಳಾ ಪೋಲಿಸ ಠಾಣೆ. ಶ್ರೀ, ಚಂದ್ರಕಾಂತ ತಂದೆ ಮೋಹನಲಾಲ ಲೋಮ್ಡೆ ವ: 50 ವರ್ಷ ಸಾ: ನಾರಾಯಣ ಪೇಟ್ ಜಿ|| ಮಹಿಬೂಬ ನಗರ ರಾಜ್ಯ|| ಆಂಧ್ರಪ್ರದೇಶ ವರು ನನ್ನ ಹಿರಿಯ ಮಗಳಾದ ಅಮೃತ ಇವಳಿಗೆ ದಿನಾಂಕ:12.02.2012 ರಂದು ಗುಲಬರ್ಗಾ ನಗರದ ಶಹಾಬಜಾರ ದತ್ತ ನಗರ ನಿವಾಸಿಯಾದ ರೀತೆಶ ತಂದೆ ಅಶೋಕ ಇತನೊಂದಿಗೆ ಅಂಬಾ ಭವನಿ ಮಂದಿರ ಗುಲಬರ್ಗಾದಲ್ಲಿ ಸಾಮೂಹಿಕ ವಿವಾಹದಲ್ಲಿ ಮದುವೆ ಮಾಡಿದ್ದು, ಮದುವೆ  ನಿಶ್ಚಯ  ಕಾಲಕ್ಕೆ  ವರದಕ್ಷಣೆ ರೂಪದಲ್ಲಿ ಬಂಗಾರ ಮತ್ತು ನಗದು ಹಣ ಕೊಟ್ಟಿರುತ್ತೆವೆ, ಮದುವೆಯಾದ ಎರಡು ತಿಂಗಳ ನಂತರ ನನ್ನ ಮಗಳಿಗೆ  ಇನ್ನೂ ಬಂಗಾರ ತೆಗೆದುಕೊಂಡು ಬಾ ಅಂತಾ ಆಕೆಯ ಗಂಡ, ಮಾವ, ಮೈದುನ ಎಲ್ಲಾರೂ ನನ್ನ ಮಗಳಿಗೆ ಹೋಡೆ ಬಡೆ ಮಾಡಿ ಮಾನಸಿಕ ಹಾಗೂ ದೈಹಿಕ ಹಿಂಸೆ ಕೊಟ್ಟಿದ್ದರಿಂದ ಈ ವಿಷಯ ನನ್ನ ಮಗಳು ನನಗೆ ತಿಳಿಸಿದ್ದರಿಂದ  ನನ್ನ ಮಗಳಿಗೆ ತವರು ಮನೆಗೆ ಕರೆಯಿಸಿ 1 ತೊಲೆ ಬಂಗಾರ ಕೊಟ್ಟಿರುತ್ತೇವೆ.ಒಂದು ತಿಂಗಳಿಂದ ನನ್ನ ಅಳಿಯನಾದ ರೀತೆಶ ಇತನು ನಾನು ರೇಡಿಮೇಡ ಬಟ್ಟೆ ಅಂಗಡಿ ವ್ಯಾಪಾರ ಮಾಡಬೇಕೆಂದು ಅಂದುಕೊಂಡಿದ್ದೆನೆ. ಅದಕ್ಕೆ ನಿಮ್ಮ ತಂದೆಯಿಂದ 1 ಲಕ್ಷ ರೂಪಾಯಿ ತೆಗೆದುಕೊಂಡು ಬಾ ಅಂತಾ ಹಿಂಸೆ ಕೊಡುತ್ತಿದ್ದನು. ಈ ವಿಷಯ ನನ್ನ ಮಗಳು ಫೋನ ಮುಖಾಂತರ ನನಗೆ ತಿಳಿಸಿದ್ದಳು. ನನಗೆ ಈಗ ಅಷ್ಟು ಹಣ ಕೊಡುವುದಾಗುವುದಿಲ್ಲಾ ದಿನಾಂಕ: 05.09.2012 ರಂದು ಗುಲಬರ್ಗಾಕ್ಕೆ ಬರುತ್ತೇನೆ ಅಲ್ಲಿಯೇ ಮಾತನಾಡೋಣ ಅಂತಾ ಪೋನದಲ್ಲಿ ಹೇಳಿದ್ದೆ. ಇದೇ ಕಾರಣಕ್ಕಾಗಿ ನನ್ನ ಮಗಳಿಗೆ ಆಕೆ ಗಂಡ ರೀತೆಶ, ಮಾವ ಅಶೋಕ , ಮೈದುನ ನರೇಶ ಇವರೆಲ್ಲರೂ ಸೇರಿ ಚಿತ್ರಹಿಂಸೆ ಕೊಟ್ಟು ವರದಕ್ಷಣೆ ಹಣಕ್ಕಾಗಿ ಹೋಡೆ ಬಡೆ ಮಾಡಿದರಿಂದ ನನ್ನ ಮಗಳು ಅವ ಹಿಂಸೆ ತಾಳಲಾದೇ ದಿನಾಂ:01.09.2012 ರಂದು ಮಧ್ಯಾಹ್ನ 2-00 ಗಂಟೆಗೆ ಆಕೆಯ ಗಂಡನ ಮನೆಯಲ್ಲಿ ನೇಣು ಹಾಕಿಕೊಂಡು ಮೃತ್ತ ಪಟ್ಟಿರುತ್ತಾಳೆ ಗುಲಬರ್ಗಾದ ಸಂತೋಷ ಕುಮಾರ ಇತನು ನನಗೆ ಮಧ್ಯಾಹ್ನ 3.00 ಗಂಟೆಗೆ ಫೋನ ಮುಖಾಂತರ ವಿಷಯ ತಿಳಿಸಿರುತ್ತಾನೆ.  ಅಂತಾ ದೂರು ಸಲ್ಲಿಸಿದ ಸಾರಾಂಶ ಮೇಲಿಂದ ಠಾಣಾ ಗುನ್ನೆ ನಂ 63/2012 ಕಲಂ 498(ಎ), 306. 304(ಬಿ) ಸಂಗಡ 34 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.  

GULBARGA DISTIRCT REPORTED CRIME

ಹಲ್ಲೆ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ: ಶ್ರೀ ಅಶೋಕ ತಂದೆ ದ್ಯಾವಪ್ಪಾ ಚಿಂಚೋಳಿ ಸಾ:ಮಾಲಗತ್ತಿ ರವರು ನಾನು ದಿನಾಂಕ:01/09/2012 ರಂದು ಸಾಯಂಕಾಲ 5.30 ಗಂಟೆಗೆ ನಮ್ಮೂರ ವಿನೋದರವರ ಕಿರಾಣಿ ಅಂಗಡಿ ಎದುರುಗಡೆ ನನ್ನ ತಮ್ಮನಾದ ಅರ್ಜುನ ಇತನು ಹೋಗುತ್ತಿರುವಾಗ ನಮ್ಮೂರ ಸಂಜುಕುಮಾರ ಮತ್ತು ಶರಣಪ್ಪಾ ರವರು ಬಂದು ನನ್ನ ತಮ್ಮನಿಗೆ ಜಗಳ ತೆಗೆದು ಕೈಯಿಂದ ಕಪಾಳಕ್ಕೆ ಹೊಡೆದು ನಮ್ಮ ಸಂಗಡ ಜಗಳ ತೆಗೆಯುತ್ತಿಯಾ ಅಂತಾ ಅವಾಚ್ಯವಾಗಿ ಬೈದು ಕೈ ಮುಷ್ಠಿಮಾಡಿ ಜೋರಾಗಿ ಹೊಟ್ಟೆಗೆ ಹೊಡೆದಾಗ ನನ್ನ ತಮ್ಮನು ಕೆಳಗೆ ಬಿದ್ದಾಗ ಶರಣಪ್ಪಾ ಇತನು ಬಲಗಾಲದಿಂದ ತರಡಿಗೆ ಒದ್ದಿದಾಗ ನನ್ನ ತಮ್ಮ ಪ್ರಜ್ಞೆ ತಪ್ಪಿ ಬಿದ್ದಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 114/2012 ಕಲಂ:341,323,324,504 ಸಂ:34 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.