POLICE BHAVAN KALABURAGI

POLICE BHAVAN KALABURAGI

03 September 2012

GULBARGA DISTRICT REPORTED CRIME


ಕಳ್ಳತನ ಪ್ರಕರಣ:
ರಟಕಲ ಪೊಲೀಸ ಠಾಣೆ: ಶ್ರೀ ಜಗಪ್ಪ ತಂದೆ ಕಾಶೆಪ್ಪಾ ಜಮಾದಾರ ಜಾ||ಬೇಡರ ಸಾ||ಕೊಡ್ಲಿ ರವರು ನಾವು ದಿನಾಂಕ:02-09-2012 ರಂದು ರಾತ್ರಿ 10-00 ಗಂಟೆಗೆ ಮನೆಯಲ್ಲಿ ಎಲ್ಲರು ಮಲಗಿಕೊಂಡಿದ್ದು, ಬೆಳಿಗ್ಗೆ ಎದ್ದು ನೋಡಲಾಗಿ ದೇವರ ಮನೆಯಲ್ಲಿದ್ದ ಸೂಟಕೇಸ ಕಾಣಲಿಲ್ಲಾ ಎಲ್ಲಾ ಕಡೆ ಹುಡುಕಾಡಿದರು ಸಿಗಲಿಲ್ಲಾ ನಂತರ ಎದುರು ಮನೆಯ ಪ್ರಮಿಲಾ ಇವರ ಮನೆ ಕೊಟ್ಟಿಗೆಯಲ್ಲಿ ಸೂಟಕೇಸ ಬಿದ್ದಿರುವ ಬಗ್ಗೆ ಗೊತ್ತಾಗಿ ಅಲ್ಲಿಗೆ ಹೋಗಿ ನೋಡಲು, ಅದರಲ್ಲಿಟ್ಟಿದ್ದ ಒಟ್ಟು ಮೂರುವರೆ ತೊಲೆ ಬಂಗಾರ ಮತ್ತು 13 ತೊಲೆ ಬೆಳ್ಳಿಯ ಸಾಮಾನು ಹೀಗೆ ಒಟ್ಟು ಅ.ಕಿ. 1,00,000/- ಮೌಲ್ಯದ ಆಭರಣಗಳು ಯಾರೋ ಕಳ್ಳರು ನಾವು ಮಲಗಿದ್ದಾಗ ದೇವರ ಕೋಣೆಯ ಬಾಗಿಲು ತೆಗೆದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:47/2012 ಕಲಂ 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DISTRICT REPORTED CRIMES


ಅಪಘಾತ ಪ್ರಕರಣ:
ಗ್ರಾಮೀಣ ಪೊಲೀಸ್ ಠಾಣೆ:ಶ್ರೀಮತಿ ಸುಗಲಾಬಾಯಿ ಗಂಡ ಈರಣ್ಣಾ ಜಮಾದಾರ ಸಾ|| ತಾಜ ಸುಲ್ತಾನಪೂರ ಗುಲಬರ್ಗಾ ರವರು ನಾನು ಮತ್ತು ಇಂದ್ರಜೀತ ಕೂಡಿಕೊಂಡು ದಿನಾಂಕ 02-09-12 ರಂದು ರಾತ್ರಿ 9-15 ಗಂಟೆ ಸುಮಾರಿಗೆ ಕೂಲಿ ಕೆಲಸ ಮುಗಿಸಿಕೊಂಡು ಬಂಬೂ ಬಜಾರ ರೋಡ ಕಡೆಯಿಂದ ನಡೆದುಕೊಂಡು ಬಂದು ತಾಜ ಸುಲ್ತಾನಪೂರ ರಿಂಗ ರೋಡ ಕ್ರಾಸ ಹತ್ತಿರ   ಎಡಬದಿ  ರೋಡ ಕಡೆಯಿಂದ  ರೋಡ ಕ್ರಾಸ ಮಾಡುತ್ತಿರುವಾಗ ಹುಮನಾಬಾದ ರಿಂಗ ರೋಡ  ಕಡೆಯಿಂದ ಒಂದು  ಕೆ.ಎಸ.ಅರ್.ಟಿ.ಸಿ ಬಸ್ಸ ನಂ: ಕೆಎ 38 ಎಫ- 719 ನೇದ್ದರ ಚಾಲಕ ತನ್ನ ಬಸ್ಸನ್ನು ಅತೀವೇಗ ಮತ್ತು ಅಲಕ್ಷನದಿಂದ ನಡೆಯಿಸಿಕೊಂಡು ತಂದು ಎಡಗಡೆಯಿಂದ ರೋಡ ಕ್ರಾಸ ಮಾಡುತ್ತಿರುವ ಇಂದ್ರಜೀತ ಇತನಿಗೆ ಡಿಕ್ಕಿ ಪಡಿಸಿದ್ದು, ಡಿಕ್ಕಿ ಪಡಿಸಿದ ರಭಸಕ್ಕೆ ಇಂದ್ರಜೀತ ಇತನಿಗೆ ಬಾಯಿಂದ ಎಡ ಕಿವಿಯಿಂದ ರಕ್ತ ಸೋರುತ್ತಿದ್ದು, ಹಾಗು ಮೂಗಿನಿಂದ ಎಡ ತಲೆಗೆ ಭಾರಿ ರಕ್ತಗಾಯವಾಗಿ ಉಪಚಾರ ಕುರಿತು ಆಸ್ಪತ್ರೆಗೆ ತೆಗೆದುಕೊಂಡು ಹೋಗುತ್ತಿರುವಾಗ ಮಾರ್ಗ ಮಧ್ಯದಲ್ಲಿ ಮೃತಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:278/2012 ಕಲಂ 279, 338, 304 (ಎ) ಐಪಿಸಿ ಸಂಗಡ 187 ಐ.ಎಮ.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಮಳಖೇಡ ಪೊಲೀಸ್ ಠಾಣೆ:ಶ್ರೀ, ಮಹ್ಮದ ಅದನಾನ್ ತಂದೆ ಅಬ್ದುಲ್ ಸುಭಾನ್  ಸಾ|| ಗುಲಬರ್ಗಾರವರು ನಾವು ದಿನಾಂಕ 02.09-2012 ರಂದು  ಸಾಯಂಕಾಲ 7.30 ಗಂಟೆಗೆ ಸೇಡಂದಲ್ಲಿ ತಂಗಿಯ ಮನೆಯಲ್ಲಿ ಕಾರ್ಯಕ್ರಮವಿದ್ದ ಪ್ರಯುಕ್ತ ಕಾರ ನಂ: ಎಪಿ-12. ಇ-3399. ನೇದ್ದರಲ್ಲಿ ಡಾ: ಮಹ್ಮದ ಅಬ್ದುಲ್  ಹಕ್ & ಸಫಿಯಾ ಅಕ್ತರ್, ಅಲೀಮೋದ್ದಿನ್ ಅಕಮ್ಲಜಾಹ . ದಾಯಾನೋದ್ದಿನ್ . ಜೀಭಾ ಅಮರಿನ್ ತಂದೆ ಅಲೀಮೋದ್ದಿನ್. ಧಾನೇಶ ತಂದೆ ಅಲೀಮೋದ್ದಿನ್. ಎಲ್ಲರೂ ಸಾ: ಗುಲಬರ್ಗಾ ರವರು ಹೋರಟಾಗ  ಸೇಡಂ ಗುಲಬರ್ಗಾ ರೋಡಿನಲ್ಲಿ 7.30 ಪಿ.ಎಂಕ್ಕೆ ಕಾರನ್ನು ಅತೀವೇಗದಿಂದ & ಅಲಕ್ಷತನದಿಂದ ನಡೆಸಿ  ಎದುರುಗಡೆ ಕೆಟ್ಟು ನಿಂತ ಲಾರಿ ನಂ, ಎಪಿ-16 ಟಿಡಬ್ಲೂ-7758 ನೇದ್ದಕ್ಕೆ  ಹಿಂದಿನಿಂದ  ಡಿಕ್ಕಿ ಹೊಡೆದಿದ್ದು ಆಗ  ಕಾರ ಚಾಲಕ ಡಾ: ಮಹ್ಮದ ಅಬ್ದುಲ್  ಹಕ್ ಸಂಗಡ 03 ಜನರು ಮೃತಪಟ್ಟಿದ್ದು & ಉಳಿದ ಮೂವರಿಗೆ ಬಾರಿ ಮತ್ತು ಸಾದಾರಣ ಗಾಯಗಳಾಗಿದ್ದು ಇರುತ್ತದೆ, ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 62/2012. ಕಲಂ, 279.337.338. 304 (ಎ)  .ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.