POLICE BHAVAN KALABURAGI

POLICE BHAVAN KALABURAGI

30 May 2011

ಗುಲಬರ್ಗಾ ಜಿಲ್ಲೆ ಅಪರಾಧಗಳ ಮಾಹಿತಿ

ಮಾಡಬೂಳ ಪೊಲೀಸ್‌ ಠಾಣೆ

ಹಸನಪ್ಪ ತಂದೆ ದ್ಯಾವಪ್ಪ ದ್ಯಾಗೆ ಬೀರನಳ್ಳಿರವರು ಮುಚಖೇಡ ಗ್ರಾಮದಲ್ಲಿ ಲಗ್ನ ಮುಗಿಸಿಕೊಂಡು ಬರುತ್ತಿರುವಾಗ ಖಬಲಾ ತಂದೆ ಮೌಲಾನ ಪಟೇಲ್ ಸಂಗಡ 10 ಎಲ್ಲರು ಬೀರನಳ್ಳಿಯವರು ಸೇರಿಕೊಂಡು ಹಸನಪ್ಪ ರವರನ್ನು ಹೊಡೆದು ಅವರ ಜೀವಕ್ಕೆ ಜೆದರಿಕೆ ಹಾಕಿ ಜಾತಿನಿಂದನೆ ಮಾಡಿರುತ್ತಾರೆ. ಮಾಡಬೂಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಗುಲಬರ್ಗಾ ಗ್ರಾಮೀಣ ಠಾಣೆ

ಬಿದ್ದಾಪೂರ ಕಾಲನಿಯಲ್ಲಿ ಶ್ರೀ ಸುರೇಶ ತಂದೆ ದಿವಾಕರರಾವ ಕುಲಕರ್ಣಿರವರು ರಾತ್ರಿ ಮನೆಯಲ್ಲಿ ರಾತ್ರಿ ಮಲಗಿಕೊಂಡಾಗ ಯಾರೋ ಕಳ್ಳರು ಬೇಡ್ ರೂಮಿನ ಸೈಡಿನ ಕಿಡಕಿಯ ರಾಡು ಮುರಿದು ಒಳಗೆ ಬಂದು ಬೇಡ್ ರೂಮಿನಲ್ಲಿರುವ 16 ತೊಲೆಯ ಬಂಗಾರು 4 ಕೆ.ಜಿ. 700 ಗ್ರಾಮ್ ಬೆಳ್ಳಿ ಹಾಗೂ ಸೀರೆಗಳು ಮತ್ತು ನಗದು ಹಣ 8000 ಕಳವು ಮಾಡಿಕೊಂಡು ಹೊಗಿರುತ್ತಾರೆ. ಗುಲಬರ್ಗಾ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಹೆಚ್ಚುವರಿ ಸಂಚಾರಿ ಪೊಲೀಸ್‌ ಠಾಣೆ ಗುಲಬರ್ಗಾ

ಶ್ರೀಮತಿ ಶರಣಮ್ಮ ಮತ್ತು ಅವರ ಮಗನಾದ ಮೃತ ಬಸವರಾಜ ವಯಸ್ಸು 16 ಇವರು ಕೂಡಿಕೊಂಡು ಐ-ವಾನ್-ಇ-ಶಾಹಿ ಹತ್ತಿರ ಹೋಗುತ್ತಿರುವಾಗ ಲಾರಿ ನಂ ಕೆಎ 32-9200 ರ ಚಾಲಕ ಫತ್ರುಸಾಬ ತಂದೆ ಮಹ್ಮಮದ ಸಾಬನು ಲಾರಿ ವೇಗವಾಗಿ ತಂದು ಶ್ರೀಮತಿ ಶರಣಮ್ಮ ಮತ್ತು ಅವರ ಮಗನಾದ ಮೃತ ಬಸವರಾಜರವರಿಗೆ ಟಿಕ್ಕಿ ಪಡಿಸಿದ್ದ ಕಾರಣ ಬಸವರಾಜ ಸ್ಥಳದಲ್ಲಿಯೇ ಮೃತಪಟ್ಟಿದ್ದು ಶರಣಮ್ಮರವರಿಗೆ ಗಾಯಗಳಾಗಿರುತ್ತವೆ. ಹೆಚ್ಚುವರಿ ಸಂಚಾರಿ ಪೊಲೀಸ್‌ ಠಾಣೆಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ

ಚಿಂಚೋಳಿ ಪೊಲೀಸ್ ಠಾಣೆ

ಅಬ್ದುಲ್ ರಹೀಮಾನ ತಂದೆ ಅಲ್ಲಾ ಬಕ್ಸ್ ಮತ್ತು ಅಯ್ಯೂಬ ತಂದೆ ಅಬ್ದುಲ್ ನಬಿ ಮುಂಬೈವಾಲೇ ಸಾ|| ಬೈವಾಡ ಚಿಂಚೋಳಿ ಪೆಟ್ರೋಲ ಬಂಕ್ ಹತ್ತಿರ ಕೂಡಿಕೊಂಡು ಅವರ ಮೋಟರ್ ಸೈಕಲ್ ನಂ. ಕೆ.ಎ 32 ಯು. 7245 ನೇದ್ದರ ಮೇಲೆ ಹೊಸಳ್ಳಿ ಗ್ರಾಮದ ಹೋಟಲಗಲಿಗೆ ಹಾಲಿನ ಪಾಕೀಟ ಮಾರಿ ವಾಪಸ್ ಬರುವಾಗ ಚಿಂಚೋಳಿ ಕಡೆಯಿಂದ ಮೋಟರ ಸೈಕಲ್ ನಂ. ಕೆ.ಎ 32 ಎಕ್ಸ್ 4231 ನೇದ್ದರ ಚಾಲಕನು ಅತಿವೇಗದಿಂದ ಹಾಗೂ ನಿಷ್ಕಾಳಜೀತನದಿಂದ ನಡೆಸುತ್ತಾ ತಂದು ಡಿಕ್ಕಿ ಪಡಿಸಿದ ಕಾರಣ ಅಬ್ದುಲ್ ರಹೀಮಾನ ತಂದೆ ಅಲ್ಲಾಬಕ್ಸ್ ಇವರಿಗೆ ತೆಲೆಗೆ ಬಾರಿ ರಕ್ತ ಗಾಯವಾಗಿ ಉಪಚಾರ ಪಡೆಯುತ್ತಾ ಮೃತಪಟ್ಟಿರುತ್ತಾರೆ. ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ

ನಿಂಬರ್ಗಾ ಪೊಲೀಸ್‌ ಠಾಣೆ

ರಯಾಬಾಯಿ ಗಂಡ ಪ್ರಭುರಾಯ ಕವಲಗಿರವರ ಮೃತ ಪ್ರಭುರಾಯನು ಕರ್ತವ್ಯ ನಿರ್ವಹಿಸುತ್ತಿರುವ ಶಾಲೆಯಲ್ಲಿ ಬಿಸಿ ಊಟದ ಅಡಿಗೆ ಮಾಡುವವಳಾದ ಮಂಗಲ ಇವಳೊಂದಿಗೆ ಮೃತನು ಅನೈಕಿಕ ಸಂಬಂದ ಹೊಂದಿದ್ದನೆಂದು ಸಿದ್ದಪ್ಪ ಉಡಗಿ ಶಿವಕುಮಾರ ಯಳಸಂಗಿ, ಸಂತೋಷ, ಗಣಪತಿ ಚವ್ಹಾಣ ಹಾಗು ಇತರೆ 3 ಜನರು ಕೂಡಿಕೊಂಡು ಮೃತನ ಮೇಲೆ ಸಂಶಯಪಟ್ಟು ಕೆಲವು ದಿನಗಳಹಿಂದೆ ಪ್ರಾಣ ಬೆದರಿಕೆ ಹಾಕಿರುತ್ತಾರೆ. ಮೃತನು ಜೀವನದಲ್ಲಿ ಭಯಗೊಂಡು ಮಾಡಿಯಾಳ ಸಿಮಾಂತರದಲ್ಲಿ ಬೇವಿನ ಗಿಡಕ್ಕೆ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ. ನಿಂಬರ್ಗಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.