POLICE BHAVAN KALABURAGI

POLICE BHAVAN KALABURAGI

30 November 2015

Kalaburagi District Reported Crimes

ಕೊಲೆ ಪ್ರಕರಣ :
ನೆಲೋಗಿ ಠಾಣೆ : ಶ್ರೀಮತಿ. ಬಾಗಮ್ಮ ಗಂಡ ಬಾಗಪ್ಪ ನಾಯ್ಕಡಿ ಸಾ : ಹಂಚನಾಳ ರವರಿಗೆಇಬ್ಬರೂ ಗಂಡು ಮಕ್ಕಳು ಒಬ್ಬಳು ಹೆಣ್ಣು ಮಗಳು ಇರುತ್ತಾರೆ. ಹಿರಿಯ ಮಗ ಪ್ರಕಾಶ ಎರಡನೆಯ ಮಗ ಸೋಮಶೇಖರ ಮಗಳು ಮಾಣಿಕಮ್ಮ ಅಂತ ಇರುತ್ತಾಳೆ ಮುಂಜಾನೆ 10 ಗಂಟೆಗೆ ನಾನು ಸೋಮಶೇಖರ ನಮ್ಮ ಹೊಲಕ್ಕೆ ಹೊಗಿದೆವು ಮದ್ಯಾಹ್ನ 1:00 ಗಂಟೆಗೆ ನನ್ನ ಮಗ ಪ್ರಕಾಶ ಈತನು ತನ್ನ ಸೈಕಲ ಮೋಟರ ನಂ: KA32-EG-6212 ನೇದ್ದರ ಮೇಲೆ ನಮ್ಮ ಹತ್ತಿರ ಹೊಲಕ್ಕೆ ಬಂದು KEBಯಲ್ಲಿ ಆದ ನೌಕರಿ ಬಗ್ಗೆ ಇಂಟರನೇಟದಲ್ಲಿ ಜೇರಟಗಿಗೆ ಹೋಗಿ ನೋಡಿ ಬರುತ್ತೇನೆ ಅಂತ ಹೇಳಿ ಹೋದನು ನಾನು ಸೋಮಶೇಖರ ಹೊಲದಲ್ಲಿ ನೀರು ಬಿಡುತ್ತಿದ್ದೇವು ಸಾಯಂಕಾಲ 6;00 ಪಿ.ಎಂ ಸುಮಾರಿಗೆ ನಾವು ಮನೆಗೆ ಬಂದೇವು ಆ ನಂತರ 7:00 ಪಿ.ಎಂ ಸುಮಾರಿಗೆ ಯಾರೋ ಫೊನ ಮಾಡಿ ಹೇಳಿದರು ನಿನ್ನ ಮಗ ಪ್ರಕಾಶನು ಬಳ್ಳೊಂಡಗಿ ದಾಟಿ ಬಾಸಂಗಿ ಸಾಹುಕಾರ ಹೊಲದ ಹತ್ತಿರ ರೋಡಿನ ಮೇಲೆ ಸತ್ತು ಬಿದ್ದಿದ್ದಾನೆ ಎಕ್ಸಿಡೆಂಟ ಆಗಿದೆ ಅಥವಾ ಯಾರೋ ಕೊಲೆ ಮಾಡಿರುತ್ತಾರೆ ಗೋತ್ತಿಲ್ಲಾ ಅಂತ ಹೇಳಿದಾಗ ನಾನು ನನ್ನ ಮಗ ಸೋಮಶೇಖರ ಮಗಳು ಮಾಣಿಕಮ್ಮ ಹಾಗೂ ಊರಿನ ಜನರು ಕೂಡಿ ಅಲ್ಲಿಗೆ ಬಂದು ನೋಡಲಾಗಿ ಬಾಂಸಗಿ ಸಾಹುಕಾರ ಹೋಲದ ಹತ್ತಿರ ರೋಡಿನ ಮೇಲೆ ನನ್ನ ಮಗ ಸತ್ತು ಬಿದ್ದಿದ್ದ. ಅವನ ಎಡಗಡೆ ಎದಿಯ ಮೇಲೆ ಚಾಕುವಿನಿಂದ ಚುಚ್ಚಿದಂತೆ ಬಾರಿಗಾಯ ವಾಗಿದ್ದು ಸೈಕಲ ಮೋಟಾರ ಸ್ವಲ್ಪು ದೂರದಲ್ಲಿ ಬಿದ್ದಿದ್ದು ಸೈಕಲ ಮೋಟರ ಎಕ್ಸಿಡೆಂಟ ಆದಂತೆ ಸಾಕ್ಷಿ ನಾಷ ಮಾಡಲು ಯಾರೋ ನನ್ನ ಮಗನನ್ನು 6-30 ಪಿ.ಎಂ ದಿಂದ 6-45 ಪಿ.ಎಂದ ಅವಧಿಯಲ್ಲಿ ನನ್ನ ಮಗನನ್ನು ಕೊಲೆ ಮಾಡಿ ರೋಡಿನ ಮೇಲೆ ಹೆಣವನ್ನು ಹಾಕಿ ಸೈಕಲ ಮೋಟಾರ ಸ್ವಲ್ಪ ದೂರದಲ್ಲಿ ಕೆಡವಿ ಹೋಗಿದ್ದು ನನ್ನ ಮಗನನ್ನು ಯಾರೋ ದುಸ್ಕರ್ಮಿಗಳು ಕೊಲೆ ಮಾಡಿ ಹಾದಿಯಲ್ಲಿ ಹೆಣವನ್ನು ಹಾಕಿ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ಜೇವರ್ಗಿ ಠಾಣೆ : ಶ್ರೀಮತಿ ಜರೀನಾ ಗಂಡ   ಸ್ಮಾಯಿಲ್ ಸಾಬ ಖಾದ್ರಿ  ಸಾ: ಹರನೂರ ತಾ:ಜೆವರ್ಗಿ ಜಿ: ಕಲಬುರಗಿ ಹಾ:ವ: ಖಾಜಾ ಕಾಲೋನಿ ಜೇವರ್ಗಿ  ಇವರನ್ನು 6 ವರ್ಷಗಳ ಹಿಂದೆ ಹರನೂರ ಗ್ರಾಮದ ಇಸ್ಮಾಯಿಲ್ ಸಾಬ ತಂದೆ ಅಲ್ಲಾವುದ್ದಿನ್ ಸಾಬ ಖಾದ್ರಿ ಇವರ ಜೊತೆ ಸಂಪ್ರದಾಯದಂತೆ ಮದುವೆ ಮಾಡಿಕೊಟ್ಟಿದ್ದು ಇರುತ್ತದೆ. ಮದುವೆ ಕಾಲಕ್ಕೆ ನನ್ನ ಗಂಡನಿಗೆ ವರದಕ್ಷಿಣೆ ರೂಪದಲ್ಲಿ 25 ಸಾವಿರ ರೂಪಾಯಿ ನಗದು ಹಣ 3 ತೊಲೆ ಬಂಗಾರ ಮತ್ತು ಗೃಹ ಬಳಕೆಯ ಸಾಮಾನುಗಳು ಕೊಟ್ಟಿದ್ದು ಇರುತ್ತದೆ. ನನಗೆ ಒಂದು ಹೆಣ್ಣು ಒಂದು ಗಂಡು ಮಕ್ಕಳು ಇರುತ್ತಾರೆ. ಮದುವೆ ಆದಾಗಿನಿಂದ ನನ್ನ ಗಂಡ ಇಸ್ಮಾಯಿಲ್ ಸಾಬ ಇತನು ನನಗೆ ನಿನ್ನ ತವರು ಮನೆಯಿಂದ 2 ಲಕ್ಷ ರೂಪಾಯಿ ಮತ್ತು 2 ತೊಲೆ ಬಂಗಾರ ತರುವಂತೆ ಮಾನಸಿಕ ಮತ್ತು ದೈಹಿಕವಾಗಿ ಹಿಂಸೆ ಕೊಡುತ್ತಾ ಬಂದಿರುತ್ತಾನೆ. ಮತ್ತು ನನ್ನ ನಾದಿನಿ ಫರೀದಾಬೇಗಂ ಗಂಡ ಖಾಜಾ ಹುಸೇನ ಅತ್ತೆಯಾದ ಸೋಫನಬಿ ಗಂಡ ಅಲ್ಲಾವುದ್ದೀನ ಮಾವ ಅಲ್ಲಾವುದ್ದೀನ ನೆಗೆಣಿ ನಸೀಮಾ ಇವರು ಕೂಡ ಇಸ್ಮಾಯಿಲ್ ಹೇಳಿದ ಹಾಗೆ 2 ಲಕ್ಷ ರೂಪಾಯಿ  2 ತೊಲೆ ಬಂಗಾರ ತೆಗೆದುಕೊಂಡು ಬಂದರೆ ಮಾತ್ರ ನಮ್ಮ ಮನೆಯಲ್ಲಿ ನಿಗೆ ಜಾಗವಿದೆ ಇಲ್ಲವಾದರೆ ನಿನಗೆ ರಂಡಿ ಜೀವ ಸಹಿತ ಉಳಿಸುವದಿಲ್ಲ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ. ನನ್ನ ಗಂಡ ನನಗೆ ಗೊತ್ತಿಲ್ಲದ ಹಾಗೆ ಮತ್ತೊಂದು ಮದುವೆ ಕೂಡ ಮಾಡಿಕೊಂಡಿರುತ್ತಾನೆ.  ದಿನಾಂಕ 26-07-2015 ರಂದು 11 ಗಂಟೆಯ ಸುಮಾರಿಗೆ ನಾನು ನನ್ನ ಎರಡು ಮಕ್ಕಳು ಹಾಗೂ ನನ್ನ ತಂದೆಯಾದ ಸಿಕಂದರ ಕೂಡಿ ನನ್ನ ಗಂಡನ ಮನೆಯಾದ ಹರನೂರ ಗ್ರಾಮಕ್ಕೆ ಹೋದಾಗ ಆಗ ಮೇಲೆ ನಮೂದಿಸಿದವರರೆಲ್ಲರೂ ಕೂಡಿ ರಂಡಿ ನೀನು ನಮ್ಮ ಮನೆಗೆ ಏಕೆ ಬಂದಿದ್ದಿ ನಮ್ಮ ವಿರುದ್ದ ಪೊಲೀಸ ಠಾಣೆಯಲ್ಲಿ ದೂರು ಸಲ್ಲಿಸಿರುತ್ತಿ ಒಂದು ವೇಳೆ ನೀನು ನಮ್ಮ ಮನೆಯಲ್ಲಿ ಇರಬೇಕಾದರೆ 2 ಲಕ್ಷ ರೂಪಾಯಿ 2 ತೊಲೆ ಬಂಗಾರ ತಂದರೆ ನಿನಗೆ ನಮ್ಮ ಇಟ್ಟುಕೊಳ್ಳುತ್ತೇವೆ. ಇಲ್ಲವಾದರೆ ನಿನಗೆ ಖಲಾಸ ಮಾಡುತ್ತೇವೆ ಅಂತಾ ಬೈದು ಮನೆಯಿಂದ ಹೊರಗೆ ಹಾಕಿರುತ್ತಾರೆ. ನಾನು ಗಂಡನ ಜೊತೆಗೆ ಜೀವನ ಮಾಡಬೇಕು ಅಂತಾ ಅವರು ಕೊಟ್ಟ ಹಿಂಸೆಯನ್ನು ಸಹಿಸಿಕೊಂಡು ಬಂದಿರುತ್ತೇನೆ ಇಷ್ಟು ದಿವಸ ಕಳೆದರು ಕೂಡ ಅವರು ನನ್ನೊಂದಿಗೆ ಜೀವನ ಮಾಡಲು ಸಿದ್ದವಿಲ್ಲ ಆದ್ದರಿಂದ ನನಗೆ ಮದುವೆ ಆದಾಗಿನಿಂದ ತವರು ಮನೆಯಿಂದ  ವರದಕ್ಷಿಣೆ ಹಣ ಬಂಗಾರ ತೆಗೆದುಕೊಂಡು ಬಾ ಅಂತಾ ಮಾನಸಿಕ ಹಾಗೂ ದೈಹಿಕ ಹಿಂಸೆ ಕೊಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ  ಟಿಪ್ಪರ ವಶ :
ಅಫಜಲಪೂರ ಠಾಣೆ : ದಿನಾಂಕ 29-11-2015 ರಂದು ಗುಡ್ಡೆವಾಡಿ ಗ್ರಾಮದ ಭೀಮಾನದಿಯಿಂದ ಅಕ್ರಮವಾಗಿ ಕಳ್ಳತನದಿಂದ ಟಿಪ್ಪರದಲ್ಲಿ ಮರಳು ತುಂಬಿಕೊಂಡು ಅಫಜಲಪೂರ ಕಡೆಗೆ ಬರುತಿದ್ದಾನೆ. ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಕೋಳ್ಳೂರ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಹೋಗುತ್ತಿದ್ದಾಗ ಎದುರುಗಡೆಯಿಂದ ಒಂದು ಟಿಪ್ಪರ ಬರುತ್ತಿದ್ದು ನೋಡಿ ಸದರಿ ಟಿಪ್ಪರನ್ನು ನಿಲ್ಲಿಸಲು ಕೈ ಸೂಚನೆ ಕೊಟ್ಟಾಗ, ಸದರಿ ಟಿಪ್ಪರ ಚಾಲಕ ನಮ್ಮನ್ನು ನೋಡಿ ಟಿಪ್ಪರ ನಿಲ್ಲಿಸಿ ಕತ್ತಲಲ್ಲಿ ಓಡಿ ಹೊದನು. ನಂತರ ಸದರಿ ಟಿಪ್ಪರನ್ನು  ಪಂಚರ ಸಮಕ್ಷಮ ಚಕ್ಕ ಮಾಡಲು, ಟಾಟಾ ಕಂಪನಿಯ  ಟಿಪ್ಪರ ಇದ್ದು ಅದರ ನಂ ಕೆಎ-32 ಸಿ-2770 ಅಂತ ಇದ್ದು, ಸದರಿ ಟಿಪ್ಪರದಲ್ಲಿ ಮರಳು ತುಂಬಿದ್ದು ಇದ್ದಿತ್ತು. ಸದರಿ ಮರಳಿನ ಅಂದಾಜು ಕಿಮ್ಮತ್ತು 5,000/- ರೂ ಆಗಬಹುದು. ಸದರಿ ಅಕ್ರಮವಾಗಿ ಕಳ್ಳತನದಿಂದ ಮರಳು ತುಂಬಿದ ಟಿಪ್ಪರನ್ನು ಪಂಚರ ಸಮಕ್ಷಮ ವಶಕ್ಕೆ ತೆಗೆದುಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.

27 November 2015

Kalaburagi District Reported Crimes

ವರದಕ್ಷಣೆ ಕಿರುಕಳ ಪ್ರಕರಣ :
ಮುಧೋಳ ಠಾಣೆ : ಶ್ರೀಮತಿ ಕವೀತಾ ಗಂಡ ತುಳಜ್ಯಾ ನಾಯಕ ಸಾ: ಬೊಂದೆಂಪಲ್ಲಿ ಇಂದಿರಾನಗರ ಕಾರಬಾರಿ ರವರನ್ನು  ಈಗ ಸುಮಾರು 5 ವರ್ಷಗಳ ಹಿಂದೆ ತುಳಚಿರಾಮ ಎಂಬುವವನೊಂದಿಗೆ ವಿವಹಾವಾಗಿದೆ ಮದುವೆಯ ಸಮಯದಲ್ಲಿ ನಮ್ಮ ತಂದೆತಾಯಿಯವರು 1 ಲಕ್ಷ ರೂಪಾಯಿ ಮತ್ತು 5 ತೊಲೆ ಬಂಗಾರ ವರದಕ್ಷಣೆಯಾಗಿ ಕೊಟ್ಟಿದ್ದಾರೆ. ನನಗೆ ಒಬ್ಬಳು ಹೆಣ್ಣುಮಗಳು ಜನಿಸಿರುತ್ತಾಳೆ. ಮದುವೆಯ ನಂತರ 4 ವರ್ಷಗಳ ಕಾಲ ಚನ್ನಾಗಿ ಜೀವನ ನಡೆಯಿಸಿದೇವೆ. ಈಗ ಒಂದು ವರ್ಷದ ನಂತರ ನನಗೆ ನಿಮ್ಮ ತಂದೆ ತಾಯಿಯವರ ಕಡೆಯಿಂದ ಹಣ ತೆಗೆದುಕೊಂಡು ಬಾ ಎಂದು ಕಿರುಕುಳ ನೀಡುತ್ತಿದ್ದಾನೆ. ಇದಕ್ಕಿಂತ ಮುಂಚೆ 4 ತಿಂಗಳ ಹಿಂದೆ 40 ಸಾವಿರ ರೂಪಾಯಿ ಕೊಟ್ಟಿದ್ದಾರೆ. ಈಗ ಮತ್ತೆ ಇನ್ನು 60 ಸಾವಿರ ರೂಪಾಯಿ ತೆಗೆದುಕೊಂಡು ಬಾ ಅಂತಾ ಕಿರುಕುಳ ನೀಡುತ್ತಿದ್ದಾನ, ಇದನ್ನು ನಮ್ಮ ನೆರೆಯ ಮನೆಯವರಾದ ದಾಸ್ಯಾ ನಾಯಕ ತಂದೆ ದೇವಜ್ಯಾ ನಾಯಕ, ಕಮ್ಮ್ಯಾ ನಾಯಕ ತಂದೆ ಸುಬ್ಯಾ ನಾಯಕ ಹಾಗು ಬಾಲ್ಯಾ ನಾಯಕ ತಂದೆ ಮೇಗ್ಯಾ ನಾಯಕ ಇವರು ನೋಡಿ ನನ್ನ ಗಂಡನಿಗೆ ಬುದ್ದಿವಾದ ಹೇಳಿರುತ್ತಾರೆ. 4 ವರ್ಷಗಳ ನಂತರ ನನಗೆ ಅನಾವಶ್ಯಕವಾಗಿ ಹೊಡೆ ಬಡೆ ಮಾಡುತ್ತಿದ್ದು ಅವಾಚ್ಚ ಶಬ್ದಗಳಿಂದ ಬೈಯುತ್ತಿದ್ದಾನೆ. ನಾನು 2 ನೇ ಮದುವೆ ಮಾಡಿಕೊಳ್ಳುತ್ತೇನೆ ಅದಕ್ಕೆ ನೀನು ಒಪ್ಪಿಕೊಳ್ಳಬೇಕು ಅಂತಾ ಜೀವದ ಭಯ ಹಾಕುತ್ತಿದ್ದಾನೆ. ಹೀಗಾಗಿ 2 ತಿಂಗಳಹಿಂದೆ ಪಾರ್ವತಿ ಎಂಬಾಕೆಯೊಂದಿಗೆ 2ನೇ ಮದುವೆ ಮಾಡಿಕೊಂಡಿರುತ್ತಾನೆ ಅಂತಾ ತಿಳಿದು ಬಂದಿರುತ್ತದೆ. ಮತ್ತೆ ನನ್ನ ಗಂಡ ದಿನಾಂಕ: 05.11.2011 ರಂದು ಸಾಯಂಕಾಲ 06:45 ಗಂಟೆ ವೇಳೆಗೆ ತವರು ಮನೆಯಿಂದ 60 ಸಾವಿರ ರೂಪಾಯಿ ತರದೆ ಇದ್ದರೆ, ಕೊಲೆ ಮಾಡುತ್ತೇನೆ ಅಂತ ಆಜೀವದ ಬೇದರಿಕೆ ಹಾಕಿರುತ್ತಾನೆ. ಅಂತಾ ಸಲ್ಲಇಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ  :
ಗ್ರಾಮೀಣ ಠಾಣೆ : ಶ್ರೀ ಶಶಿಕಾಂತ ತಂದೆ ಶಿವಶರಣಪ್ಪಾ ಸೋರಡೆ ಸಾ;ಕಿರಾಣಾ ಬಜಾರ ಕಲಬುರಗಿ ಬೇಲೂರ (ಜೆ) ಕ್ರಾಸ ಹತ್ತಿರ ಸುಮೀತ ಇಂಡಸ್ಟ್ರೀಜ ಅಂತಾ  ದಾಲಮಿಲ್ ಇಟ್ಟು ಉಪಜೀವನ ಸಾಗಿಸುತ್ತಿದ್ದು ದಿನಾಂಕ. 18-10-2015 ರಂದು ಶ್ರೀ ಗುರುದೇವ ದತ್ತ ಇಂಡಸ್ಟ್ರೀಜ ಬೇಲೂರ ಕ್ರಾಸ ರವರ ಕಡೆಯಿಂದ 30 ಕೆ.ಜಿ.ವುಳ್ಳ ಹೆಸರು ಬೆಳೆಯನ್ನು 333 ಬ್ಯಾಗಗಳನ್ನು ಖರೀದಿಸಿ ನಮ್ಮ ಮಿಲ್ಲದಲ್ಲಿ ಇಟ್ಟುಕೊಂಡಿರುತ್ತೇನೆ ಮರುದಿವಸ ಅಂದರೆ ದಿನಾಂಕ. 20-10-2015 ರಂದು ಚಿತ್ರದುರ್ಗ ಒಬ್ಬ ಗಿರಾಕಿಗೆ 50 ಬ್ಯಾಗಗಳನ್ನು ಮಾರಾಟ ಮಾಡಿದ್ದು ಉಳಿದ 283 ಬ್ಯಾಗಗಳು ದಾಲಮಿಲ್ ದಲ್ಲಿದ್ದವು. ದೀಪಾವಳಿ ಹಬ್ಬಕ್ಕೆ ನಮ್ಮ ದಾಲಮಿಲ ಬಿಲ್ಡಿಂಗ ಲೀಜ ಮುಕ್ತಾಯವಾಗಿದ್ದರಿಂದ  ದಿನಾಂಕ 18-11-2015 ರಂದು ಸ್ವಂತ ಬಿಲ್ಡಿಂಗ ಇಂಡಸ್ಟ್ರೀಯಲ್ ಏರಿಯಾದ 1 ನೆ ಹಂತ ಪ್ಲಾಟ ನಂ. 71 ನೆದ್ದರಲ್ಲಿ ಸ್ಥಳಾಂತಿಸುವಾಗ  ಮಿಲ್ಲದ್ದಲಿಟ್ಟಿದ್ದು ಒಟ್ಟು 283 ಹೆಸರ ಬೆಳೆ ಬ್ಯಾಗಗಳಲ್ಲಿ ಕೇವಲ 233 ಬ್ಯಾಗಗಳು ಮಾತ್ರ ಇದ್ದವು ಉಳಿದ 50 ಬ್ಯಾಗಗಳು ಕೊರತೆ ಕಂಡು ಬಂದಿದ್ದು ಆಗ ಮಿಲ್ಲದಲ್ಲಿ ಕೆಲಸ ಮಾಡುವ ವರೆಲ್ಲರೂ ವಿಚಾರ ಮಾಡಿದರೂ ಗೊತ್ತಿರುವದಿಲ್ಲಾ ಅಂತಾ ತಿಳಿಸಿದ್ದರು ಪ್ರತಿಒಂದು ಬ್ಯಾಗ 30 ಕೆ.ಜಿ ವುಳ್ಳದಾಗಿದ್ದು ಪ್ರತಿಯೊಂದು ಬ್ಯಾಗಿಗೆ 3480/- ರೂ ಇದ್ದು  50 ಬ್ಯಾಗಿಗೆ ಒಟ್ಟು ಅಕಿ. 1,74,000/- ರೂ ಬೆಲೆಬಾಳುವದು   ಯಾರೋ ಕಳ್ಳರು ಕಳ್ಳತನ ಮಾಡಿರುತ್ತಾರೆ ದಿನಾಂಕ.20-10-2015 ರಿಂದ ದಿನಾಂಕ 18-11-2015 ರ ಮದ್ಯದ ಅವಧಿಯಲ್ಲಿ ನಮ್ಮ ಸಮೀತ ದಾಲಮಿಲ್ಲದಲ್ಲಿಟ್ಟ  ಒಟ್ಟು 50 ಬ್ಯಾಗ  ಒಟ್ಟು ಅಕಿ. 1,74,000/- ರೂ ಬೆಲೆಬಾಳುವದು  ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

25 November 2015

Kalaburagi District Press Note

:: ಪತ್ರಿಕಾ ಪ್ರಕಟಣೆ ::
ಎ.ಪಿ.ಸಿ ಹುದ್ದೆಗಳ ನೇಮಕಾತಿ ಕುರಿತು ಸಿಇಟಿ ಪರೀಕ್ಷೆಯನ್ನು ದಿನಾಂಕ: 29-11-2015 ರಂದು ಬೆಳಿಗ್ಗೆ 11-00 ಗಂಟೆಯಿಂದ 12-30 ಗಂಟೆಯವರೆಗೆ ಕಲಬುರಗಿ ನಗರದ ಈ ಕೆಳಗಿನ (05) ಪರೀಕ್ಷಾ ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ ನಡೆಯಲಿರುತ್ತದೆ.

1.  ವಿಜಯ ವಿದ್ಯಾಲಯ ಸಂಯುಕ್ತ ಪಿ.ಯು. ಕಾಲೇಜ, ಐ-ವಾನ್-ಶಾಹಿ ರಸ್ತೆ, ಕಲಬುರಗಿ.
2. ಪ್ರಜ್ಞಾ ಇಂಗ್ಲೀಷ ಮೀಡಿಯಮ್ ಹೈಯರ ಪ್ರೈಮರಿ ಸ್ಕೂಲ್,ಎಸ್.ಟಿ.ಬಿ.ಟಿ. ದರ್ಗಾ ರಸ್ತೆ, ಕಲಬುರಗಿ.
3. ಮಿಲಿಂದ ಪಿ.ಯು. ಕಾಲೇಜ, ಎಸ್.ಟಿ.ಬಿ.ಟಿ. ಹತ್ತಿರ, ದರ್ಗಾ ರಸ್ತೆ, ಕಲಬುರಗಿ.
4. ಸರಕಾರಿ ಮಹಿಳಾ ಪಿ.ಯು. ಕಾಲೇಜ, ಹಳೆ ಎಸ್.ಪಿ ಆಫಿಸ್ ಹತ್ತಿರ, ಕಲಬುರಗಿ.
5. ಪೊಲೀಸ್ ತರಬೇತಿ ಕಾಲೇಜು, ನಾಗನಹಳ್ಳಿ, ಕಲಬುರಗಿ.

      ಎಪಿಸಿ ಹುದ್ದೆಯ ನೇಮಕಾತಿಗೆ ಸಂಬಂಧಿಸಿದಂತೆ, ಇಟಿ/ಪಿಎಸ್ಟಿ ಪರೀಕ್ಷೆಯಲ್ಲಿ ಅರ್ಹ ಹೊಂದಿದ ಕಲಬುರಗಿ ಜಿಲ್ಲೆಯಲ್ಲಿ 2200 ಅರ್ಹ ಅಭ್ಯರ್ಥಿಗಳ ಲಿಖಿತ ಪರೀಕ್ಷೆಯನ್ನು ಮೇಲಿನ ಪರೀಕ್ಷಾ ಕೇಂದ್ರಗಳಲ್ಲಿ ಕೈಕೊಳ್ಳಲಾಗುತ್ತಿದ್ದು, ಅಭ್ಯರ್ಥಿಗಳು ಪರೀಕ್ಷೆಯ ಮುನ್ನ ಗುರುತಿನ ಚೀಟಿ, ಹಾಗೂ ಇಂಟರನೆಟ್ ಸೆಂಟರ್ಗಳಿಂದ ಕರೆ ಪತ್ರವನ್ನು ತೆಗೆದುಕೊಂಡು ಪರೀಕ್ಷೆಗೆ ಹಾಜರಾಗುವುದು.  ಪರೀಕ್ಷೆಗೆ ಕರೆ ಪತ್ರ, ಗುರುತಿನ ಚೀಟಿ, ಮತ್ತು ಪೆನ್ ಇವುಗಳನ್ನು ಹೊರತುಪಡಿಸಿ ಇನ್ನಾವುದೇ ಪೇಪರ್, ಮೊಬೈಲ್, ಲ್ಯಾಪಟಾಪ್, ಕ್ಯಾಲಕುಲೇಟರ್ ಇವುಗಳನ್ನು ಪರೀಕ್ಷಾ ಕೇಂದ್ರದಲ್ಲಿ ನಿರ್ಬಂಧಿಸಲಾಗಿದೆ.
                                                                                               ಪೊಲೀಸ್ ಅಧೀಕ್ಷಕರು,
                                 ಕಲಬುರಗಿ.

Kalaburagi District Press Note

                            ಪತ್ರಿಕಾ ಪ್ರಕಟಣೆ                         ದಿನಾಂಕ : 25/11/2015

          ಹೈದ್ರಾಬಾದ ಕರ್ನಾಟಕ ಪ್ರದೇಶದ ಕಲಬುರಗಿ ಮತ್ತು ಯಾದಗೀರಿ ಜಿಲ್ಲೆಗಳಲ್ಲಿ ನಡೆಯುತ್ತಿರುವ ದಲಿತರ ಸಮಸ್ಯಗಳ ಬಗ್ಗೆ ಚರ್ಚಿಸುವ ಸಲುವಾಗಿ ಈಶಾನ್ಯ ವಲಯದ ಐಜಿಪಿ ಯವರಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕರಾದ ಡಾಃ ಮಲ್ಲೇಶಿ ಸಜ್ಜನ ಹಾಗು ಸಂಘಟನಾ ಸಂಚಾಲಕರಾದ ಶ್ರೀ ಅರ್ಜುನ ಭದ್ರೆ ಇವರು ಭೇಟಿ ಮಾಡಲು ಬಂದಾಗ ಸಂಪರ್ಕ ಕೊರತೆಯಿಂದಾಗಿ ಮತ್ತು ಕೆಲಸದ ಒತ್ತಡದಿಂದಾಗಿ ಭೇಟಿಯಾಗಲು ಸಾದ್ಯವಾಗಿರದ ಕಾರಣ ಸದರಿಯವರನ್ನು, ಸಮಸ್ಯಗಳ ಬಗ್ಗೆ ಚರ್ಚಿಸಲು ದಿನಾಂಕ 27-11-2015 ರಂದು ಬೆಳಿಗ್ಗೆ 11-00 ಗಂಟೆಗೆ ಐಜಿಪಿ ಈಶಾನ್ಯ ವಲಯ ಕಛೇರಿಯಲ್ಲಿ ಸಮಯ ನಿಗಧಿ ಪಡಿಸಿದ್ದರಿಂದ ಈ ಬಗ್ಗೆ ದಿನಾಂಕ 27-11-2015 ರಂದು ನಡೆಸಲು ಉದ್ದೇಶಿಸಿದ ಪ್ರತಿಭಟನೆಯನ್ನು ಹಿಂಪಡೆಯಲು ಕೋರಿಕೊಂಡ ಮೇರೆಗೆ ಪ್ರತಿಭಟನೆಯನ್ನು ಹಿಂಪಡೆದುಕೊಂಡಿರುತ್ತಾರೆಂದು ತಿಳಿದುಬಂದಿರುತ್ತದೆ.

                                                               ಪೊಲೀಸ ಮಹಾನಿರೀಕ್ಷಕರು,
                                                                   (ಈ.ವ.) ಕಲಬುರಗಿ.

Kalaburagi District Reported Crimes


ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಅಫಜಲಪೋರ ಠಾಣೆ : ದಿನಾಂಕ 24-11-2015 ರಂದು  ಅಫಜಲಪೂರ ಪಟ್ಟಣದ  ಡಿಗ್ರಿ ಕಾಲೇಜ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ, ಜನರನ್ನು ವಂಚಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಟ್ಟು, ಮೋಸದಿಂದ ಮಟಕಾ ಬರೆದುಕೊಳ್ಳುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ, ಶ್ರೀಮಂತ ಇಲ್ಲಾಳ ಪಿ.ಎಸ್.ಐ ಡಿ.ಸಿ.ಬಿ ಘಟಕ ಹಾಗೂ ಸಿಬ್ಬಂದಿ ಜನರಾದ 1) ಪ್ರದೀಪ ಕುಲಕರ್ಣಿ ಹೆಚ್ ಸಿ 420 2) ನಾಗೇಂದ್ರ ಸಿಪಿಸಿ 386 ಮತ್ತು ಪಂಚರೊಂದಿಗೆ  ಮತ್ತು ಅಫಜಲಪೂರ ಠಾಣೆಯ ಶ್ರೀ ಸುರೇಶ ಸಿಪಿಸಿ-801  ಕೂಡಿಕೊಂಡು ಸ್ಥಳಕ್ಕೆ ಹೋಗಿ, ಅಫಜಲಪೂರ ಪಟ್ಟಣದ ಡಿಗ್ರಿ ಕಾಲೇಜಿನಿಂದ  ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ಡಿಗ್ರಿ ಕಾಲೇಜಿನ ಹತ್ತಿರ ಇರುವ ಒಂದು ಹೋಟೆಲಿನ ಮುಂದಿನ  ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ವ್ಯಕ್ತಿಗಳು ನಿಂತುಕೊಂಡು ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಕೊಡುತ್ತೆನೆ ಅಂತಾ ಕರೆದು, ಜನರಿಗೆ ವಂಚಿಸಿ ಅವರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯ ಬರೆದುಕೊಟ್ಟು, ಮೋಸದಿಂದ ಮಟಕಾ ಬರೆದುಕೊಳ್ಳುತ್ತಿದ್ದುದನ್ನು ಖಚಿತಪಡಿಸಿಕೊಂಡು ದಾಳಿ ಮಾಡಿದಾಗ ಒಬ್ಬ ಸಿಕ್ಕಿದ್ದು  ಕತ್ತಲಲ್ಲಿ ಮೂರು ಜನರು ಓಡಿ ಹೋದರು ಸಿಕ್ಕವನ  ಹೆಸರು ವಿಳಾಸ ವಿಚಾರಿಸಲಾಗಿ  ಚಂದ್ರಕಾಂತ ತಂದೆ ಸಿದರಾಯ ಅಳ್ಳಗಿ ಸಾ : ಅಳ್ಳಗಿ ಹಾ:: ಅಫಜಲಪೂರ  ಅಂತಾ ತಿಳಿಸಿದನು. ಸದರಿಯವನನ್ನು ಮಟಕಾ ಬರೆದುಕೊಂಡು ಎಲ್ಲಿ ಕೊಡುತ್ತಿರಿ, ಯಾರಿಗೆ ಕೊಡುತ್ತಿ ಎಂಬುದರ ಬಗ್ಗೆ ವಿಚಾರಿಸಿದ್ದು, ಸದರಿಯವನು ಇಲ್ಲಿ ಜನರಿಂದ ಹಣ ಪಡೆದು ಮಟಕಾ ಬರೆದುಕೊಂಡು ಮಹಾರಾಷ್ಟ್ರದ ದುದನಿಗೆ ಹೋಗಿ ಬಸ್ಸ ನಿಲ್ದಾಣದಲ್ಲಿ ತಿರುಗಾಡಿ ಮಟಕಾ ಬುಕ್ಕಿಗಳಿಗೆ ಕೋಡುತ್ತೇನೆ ಅವರ ಹೇಸರು ನಮಗೆ ಗೊತ್ತಿರುವುದಿಲ್ಲ ಅಂತಾ ತಿಳಿಸಿದನು. ನಂತರ ಓಡಿ ಹೋದ ಮೂರು ಜನರ ಹೆಸರು ವಿಳಾಸ ವಿಚಾರಿಸಲಾಗಿ 1) ಚಂದ್ರು ತಂದೆ ಅಪ್ಪಾಸಾಬ ಅವರಾದಿ ಸಾ : ಮಡ್ಡಿ ಏರಿಯಾ ಅಫಜಲಪೂರ ಇತನು ಕೂಡ ಮಟಕಾ ಬರೆದುಕೊಳ್ಳುತ್ತಾನೆ ನಾನು ಇವನ ಸಹಾಯಕನಾಗಿ ಕೆಲಸ ಮಾಡುತ್ತೇನೆ ಅಂತ ತಿಳಿಸಿದ್ದು ಇನ್ನೂ ಇಬ್ಬರ ಹೆಸರು  2) ರಮೇಶ  ಸಾ:ಅಫಜಲಪೂರ 2) ಸೂರ್ಯಕಾಂತ ಕೋಳಿಗೇರಿ ಸಾ :ಅಫಜಲಪೂರ ಅಂತ ತಿಳಿಸಿದ್ದು ಇವರು ಮಟಕಾ ಬರೆಸುತಿದ್ದರು ಅಂತ ತಿಳಿಸಿದನು   ನಂತರ ಸದರಿಯವನ ಅಂಗ ಶೋದನೆ ಮಾಡಲಾಗಿ ಮಟಕಾ ಜೂಜಾಟಕ್ಕೆ ಸಂಬಂದ ಪಟ್ಟ 1120/- ರೂ ನಗದು ಹಣ, ಎರಡು ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳು, ಒಂದು ಪೇನ್ನ ಕಾರ್ಬನ ಕಂಪನಿಯ ಹಳೆಯ ಸಾದಾ ಮೋಬೈಲ ಪೋನ ಅಕಿ-500/- ರೂ ಇವುಗಳನ್ನು ವಶಪಡಿಸಿಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ
ಕಮಲಾಪೋರ ಠಾಣೆ : ಶ್ರೀ ದೇವಿದಾಸ ತಂದೆ ಭದ್ದು ಜಾಧವ ಇವರು ದಿನಾಂಕ 23.11.2015 ರಂದು ಸಾಯಂಕಾಲ 4 ಗಂಟೆಯ ಸುಮಾರಿಗೆ ನಮ್ಮ ಗ್ರಾಮಕ್ಕೆ ಟ್ಯಾಕ್ಟರ ನಂ ಕೆಎ 28 ಟಿಬಿ 7805 ನೇದ್ದನು ಚಾಲಕನಾದ ಮಂಜು ಇತನೊಂದಿಗೆ ನಮ್ಮೂರಿಗೆ ಕಳುಹಿಸಿರುತ್ತಾನೆ. ನಿನ್ನೆ ದಿನಾಂಕ:23/11/2015 ಸಾಯಂಕಾಲ 6:00 ಗಂಟೆಯ ಸುಮಾರಿಗೆ ನಾನು ನನ್ನ ಹೆಂಡತಿ 1) ಲಕ್ಷ್ಮಿಬಾಯಿ ಗಂಡ ದೇವಿದಾಸ ಜಾದವ ಮತ್ತು ನಮ್ಮೂರಿನ 2) ಲಲೀತಾಬಾಯಿ ತಂದೆ ದೇವಿದಾಸ ಜಾದವ 3) ವಸಂತ ತಂದೆ ಉಮಾಶಿಂಗ್ ಜಾದವ 4) ಸೇವುಬಾಯಿ ಗಂಡ ವಸಂತ ಜಾದವ 5) ಕ್ರೀಷ್ಣಾ ತಂದೆ ವಸಂತ ಜಾದವ 6) ಜೈಸಿಂಗ್ ತಂದೆ ಶಿತ್ಯಾನಾಯಕ ರಾಠೋಡ 7) ಕೃಷ್ಣಾ ತಂದೆ ರಾಮದಾಸ 8) ಕಲಾವತಿ ಗಂಡ ಮೊಗಲಪ್ಪ ನಡುವಿನದೊಡ್ಡಿ, 9) ಮೊಗಲಪ್ಪ ನಡುವಿನದೊಡ್ಡಿ, 10) ಸವೀತಾಬಾಯಿ ಗಂಡ ಬಜರಂಗ ಜಾದವ 11) ಮೀರಾಬಾಯಿ ಗಂಡ ರಾಮದಾಸ 12) ಜಗುಬಾಯಿ ಗಂ ಜೈಸಿಂಗ್ ರಾಠೋಡ 13) ರವಿ ತಂದೆ ಜೈಸಿಂಗ್ ರಾಠೋಡ ಹಾಗೂ ಇತರರು ಕೂಡಿಕೊಂಡು ನಮ್ಮೂರಿನಿಂದ ಘತ್ತರಗಿಯ ಸಕ್ಕರೆ ಪ್ಯಾಕ್ಟರಿಯ ವ್ಯಾಪ್ತಿಯಲ್ಲಿ ಕಬ್ಬು ಕಡಿಯುವದಕ್ಕಾಗಿ ಕೂಲಿ ಕೇಲಸಕ್ಕೆ ಹೋಗುತ್ತಿದ್ದಾಗ ದಿನಾಂಕ 24.11.2015 ರಂದು ಬೆಳ್ಳಿಗ್ಗಿನ ಜಾವ 5 ಗಂಟೆಯ ಸುಮಾರಿಗೆ ಹುಮನಾಬಾದ ಕಲಬುರಗಿ ರೋಡಿನಲ್ಲಿರುವ ರೋಡ ಕಿಣ್ಣಿ ಬ್ರೀಜ್ಡ್ ಮೇಲೆ ನಮ್ಮ ಟ್ಯಾಕ್ಟರ ಚಾಲಕುನು ಟ್ರ್ಯಾಕ್ಟರ ಚಲಾಯಿಸಿಕೊಂಡು ಬ್ರೀಜ್ಡ್ ಹೆಚ್ಚಿನ ಭಾಗ ದಾಟಿ ಕಲಬುರಗಿ ಕೆಡೆಗೆ ಇನ್ನೂ 4-5 ಫೀಟ್ ಬ್ರಿಜ್ಡ್ ಇರುವಾಗ ಎದರುಗಡೆಯಿಂದ ಅಂದರೆ ಕಲಬುರಗಿ ಕೆಡೆಯಿಂದ ಒಂದು ಲಾರಿ ಚಾಲಕ ತನ್ನ ಲಾರಿಯನ್ನು ಅತೀವೇಗದಿಂದ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಟ್ರ್ಯಾಕ್ಟರ ಬ್ರಿಜ್ಡ್ ದಾಟುವರೆಗೆ ನಿಲ್ಲದೆ ಬ್ರಿಜ್ಡ್ ಒಳಗಡೆ ಬಂದು ನಮ್ಮ ಟ್ರಾಕ್ಟರ ಡಿಕ್ಕಿ ಹೊಡೆದು ಅಪಘಾತ ಪಡಿಸಿರುತ್ತಾನೆ ಸದರಿ ಅಪಘಾತದಿಂದಾಗಿ ನಾವೇಲ್ಲರು ಚೆಲ್ಲಾ ಪಿಲ್ಲಿಯಾಗಿ ರೋಡಿ ಮೇಲೆ ಬಿದ್ದಿರುತ್ತೆವೆ.ನಂತರ ಸಾವರಿಸಿಕೊಂಡು ನಾನು ಎದ್ದು ನೋಡಲಾಗಿ 1) ಸೇವುಬಾಯಿ ಗಂಡ ವಸಂತ ಜಾದವ ಸಾ: ಇರಕಪಲ್ಲಿ 2) ಕೃಷ್ಣಾ ತಂದೆ ವಸಂತ ಜಾದವ 3) ಜೈಸಿಂಗ್ ತಂದೆ ಸಿತ್ಯಾನಾಯಕ ರಾಠೋಡ ಸಾ: ಡವೂರ 4) ಕೃಷ್ಣಾ ತಂದೆ ರಾಮದಾಸ ಸಾ: ಇರಕಪಲ್ಲಿ ಇವರುಗಳು ಅಪಘಾತದಿಂದಾದ ಗಾಯಗಳಿಂದಾಗಿ ಸ್ಥಳಲ್ಲಿ ಮೃತ ಪಟ್ಟಿದ್ದು ಇರುತ್ತದೆ.1.ಕಲಾವತಿ ಗಂಡ ಮೊಗಲಪ್ಪ ನಡಿವಿನದೊಡ್ಡಿ 2. ಸವೀತಾಬಾಯಿ ಗಂಡ ಬಜರಂಗ ಜಾದವ 3. ಮೀರಾಬಾಯಿ ಗಂಡ ರಾಮದಾಸ ರಾಠೋಡ ಸಾ:ಖರಜಗುತ್ತಿ 4. ಲಲಿತಾಬಾಯಿ ತಂದೆ ದೇವಿದಾಸ 5.ಜಗುಬಾಯಿ ಗಂ ಜೈಸಿಂಗ್ ರಾಠೋಡ 6 ರವಿ ತಂದೆ ಜೈಸಿಂಗ್ ರಾಠೋಡ ಇವರುಗಳಿಗೆ ಸಾದಾ ಮತ್ತು ಭಾರಿಗಾಯಗಳಾಗಿದ್ದು ನನಗೆ ಯಾವುದೆ ಗಾಯಗಳಾಗಿರುವದಿಲ್ಲ. ನಂತರ ನಮಗೆ ಅಪಘಾತ ಪಡಿಸಿದ ಚಾಲಕ ಜನರು ಜಮಾಯಿಸಿದ್ದರಿಂದ ತನ್ನ ಲಾರಿ ಅಲ್ಲೆ ಬಿಟ್ಟು ಓಡಿ ಹೋಗಿರುತ್ತಾನೆ. ಸದರಿ ಲಾರಿ ನಂಬರ ನೋಡಲಾಗಿ ಕೆಎ 28 ಬಿ 4599 ಇರುತ್ತದೆ. ನಂತರ ಯಾರೊ 108 ಅಂಬುಲೇನ್ಸಕ್ಕೆ ಪೋನ ಮಾಡಿದ್ದು ಅಂಬುಲೇನ್ಸ ಬಂದ ನಂತರ ಗಾಯಾಳುಗಳನ್ನು ಅಂಬುಲೇನ್ಸದಲ್ಲಿ ಹಾಕಿಕೊಂಡು ಉಪಚಾರ ಕುರಿತು ತೆಗೆದುಕೊಂಡು ಹೋಗಿರುತ್ತಾರೆ. ಗಾಯಾಳು ಸವೀತಾಬಾಯಿ ಗಂಡ ಬಜರಂಗ ಜಾಧವ ಇವಳು ಉಪಚಾರ ಪಡೆಯುತ್ತಾ ಉಪಚಾರ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾಳೆ ಅಂತ ಗೋತ್ತಾಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

24 November 2015

Kalaburagi District Reported Crimes

ಹಲ್ಲೆ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ 22-11-15 ರಂದು ರಾತ್ರಿ ಶ್ರೀ ಶ್ರೀಶೈಲ ತಂದೆ ಶಿವಣ್ಣಾ ಬೈರಾಮಡವಿ ಸಾ : ಹೀರಾಪೂರ  ರವರು ಮತ್ತು ಅವನ ಗೆಳೆಯ ಗುರು ಮುರಬ ಇಬ್ಬರು ಮಾತಾಡುತ್ತಾ ನಿಂತಾಗ ಅದೇ ಸಮಯಕ್ಕೆ ಸಿದ್ರಾಮ ಮತ್ತು ರಾಜು ಇಬ್ಬರು ಒಂದು ಮೋಟಾರ ಸೈಕಲ ಮೇಲೆ  ಸಿದ್ರಾಮನ ಗೆಳೆಯರು ಒಂದು ಮೋಟಾರ ಸೈಕಲ ಮೇಲೆ ಕುಳಿತುಕೊಂಡು ನನ್ನ ಹತ್ತಿರ ಬಂದು ಸಿದ್ರಾಮ ಇತನು ಶ್ರೀಶೈಲನಿಗೆ ಭೋಸಡಿ ಮಗನಿಗೆ ಓಣಿಯಲ್ಲಿ ನಮ್ಮ ಅಣ್ಣನ ಮಗಳಾದ ಮಾಹಾನಂದ ಮಾನ ಕಳೆದಿದ್ದಾನೆ ಎಂಬ ದ್ವೇಷದಿಂದ  ಇವತ್ತು ಶ್ರೀಶೈಲನಿಗೆ  ಖಲಾಷ ಮಾಡಿಯೇ ಬಿಡೋಣಾ ಅಂತಾ ಅಂದಾಗ ರಾಜು ಮತ್ತು ಅವನ ಇನ್ನಿಬ್ಬರು ಗೆಳೆಯರು ಮೂರು ಜನರು ಶ್ರೀಶೈಲನಿಗೆ  ಒತ್ತಿಯಾಗಿ ಹಿಡಿದು ಕೈಯಿಂದ ಶ್ರೀಶೈಲನ ಮೈಮೇಲೆ ಹೊಡೆ ಬಡಿ ಮಾಡ ಹತ್ತಿದರು. ಸಿದ್ರಾಮ ಇತನು ತನ್ನ ಹತ್ತಿರವಿದ್ದ ಚಾಕು ತೆಗೆದು ಶ್ರೀಶೈಲನಿಗೆ ಕೊಲೆ ಮಾಡುವ ಉದ್ದೇಶದಿಂದ ಹೊಟ್ಟೆಗೆ ಚಾಕುದಿಂದ ಹೊಡೆಯಲು ಅವನು ಹೊಡೆಯುವ ಎಟುನ್ನು ತಪ್ಪಿಸಿಕೊಳ್ಳುವಗೋಸ್ಕರ ಶ್ರೀಶೈಲನು ತನ್ನ  ಎಡಗೈ ಅಡ್ಡ  ತಂದಾಗ ಚಾಕುವಿನ ಎಟು ಶ್ರೀಶೈಲನ   ಎಡಗೈ ಮೊಣಕೈ ಮೇಲೆ ಬಡಿದು ರಕ್ತಗಾಯವಾಯಿತು. ಅದೇ ಚಾಕುವಿನಿಂದ ಮತ್ತೆ ನನಗೆ ಕೊಲೆ ಮಾಡುವ ಉದ್ದೇಶದಿಂದ ಶ್ರೀಶೈಲನ ಬಲ ಟೊಂಕಕ್ಕೆ  ಚುಚ್ಚಿ,  ಮರಣಾಂತಿಕ ಹಲ್ಲೆ ಮಾಡಿ ಭಾರಿ ರಕ್ತಗಾಯಗೊಳಿಸಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ ಸ್ವಾಭಾವಿಕ ಸಾವು ಪ್ರಕರಣ :
ಚೌಕ ಠಾಣೆ : ಶ್ರೀ ಗುರುಶಾಂತಪ್ಪ ತಂದೆ ಚಂದ್ರಶೇಖರ ಸಾ: ಸುಲ್ತಾನಪೂರ ಕಲಬುರಗಿ ರವರು ದಿನಾಂಕಃ 23.11.2015 ರಂದು ಬೆಳಿಗ್ಗೆ ಯಾಥ ಪ್ರಕಾರ ನಾನು ನನ್ನ ಅಂಗಡಿಗೆ ವ್ಯಾಪಾರ ಮಾಡುವ ಕುರಿತು ಅಂಗಡಿ ಹತ್ತಿರ ಬರುವಷ್ಟರಲ್ಲೆ ನಮ್ಮ ಅಂಗಡಿಯ ಎದುರಗಡೆ ಕೆಲವು ಜನರು ಜಮಾಯಿಸಿಕೊಂಡು ನಿಂತಿರುವದನ್ನು ಕಂಡು ಏನಾಗಿದೆ ಅಂತ ಹೋಗಿ ನೋಡಲಾಗಿ ನಾನು ರಾತ್ರಿ  ಮನೆಗೆ ಹೋಗುವ ಕಾಲಕ್ಕೆ ನೋಡಿದ ಅಪರಿಚಿತ ಅಂದಾಜು 40-45 ವರ್ಷದ ವಯಸಿನ ಗಂಡು ಮನುಷ್ಯನು ಮೃತಪಟ್ಟಿದ್ದು ಇರುತ್ತದೆ. ಅವನ ಹೆಸರು ವಿಳಾಸ ಏನು ಗೊತ್ತಾಗಿರುವದಿಲ್ಲ ಅವನ ಮೈ ಮೇಲೆ ಯಾವುದೇ ಗಾಯಗಳು ವೈಗೆರೆ ಇರುವದಿಲ್ಲ. ಅವನ ಹತ್ತಿರ ಯಾವುದೋ ರೋಗದ ಗುಳೆಗಳು ಪ್ಯಾಕೆಟ್ಟಗಳು ಇದ್ದು   ಇತನು ಯಾವುದೋ ರೋಗದಿಂದ  ಸತ್ತಿರಬಹುದು ಇತನ ಮೈಮೇಲೆ ಕೆಂಪು ಬಣ್ಣದ ಟೀ ಶರ್ಟ ಒಂದು ಬಿಳಿಯ ಬಣ್ಣದ ಟ್ಯಾವಲ್‌ ಬಿಳಿಯ ಬಣ್ಣದ ಅಂಡರವೇರ ನೀಲಿ ಬಣ್ಣದ ಜೀನ್ಸ್‌ ಪ್ಯಾಂಟ ಧರಿಸಿಕೊಂಡಿರುತ್ತಾನೆ ಅಂದಾಜು ಎತ್ತರ 5-6 ಅಂಡಿ ಇರಬಹುದ್ದು  ತೆಲೆಯಲ್ಲಿ ಸ್ವಲ್ಪ ಕರಿಯ ಬೀಳಿಯ ಮಿಶ್ರತ ಕೂದಲು ಸ್ವಲ್ಪ ದಾಡಿ ಬಿಟ್ಟಿರುತ್ತಾನೆ ಇತನು ಬೆಳಿಗೆ 9.00 ಎಎಮ್‌ದ ವರೆಗೆ ಜೀವಂತ ಇರುವ ಬಗ್ಗೆ ಕೆಲವು ಹಮಾಲರು ನೋಡಿರುತ್ತಾರೆ ಅಂದಾಜು 10.30 ಗಂಟೆಯಿಂ 1045 ಗಂಟೆಯ ಮದ್ಯದ ಅವದಿಯಲ್ಲಿ ಅವನು ಮೃತಪಟ್ಟಿರುತ್ತಾನೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಈ ಮೂಲಕ ವರದಿಯನ್ನು ಗಣಕಿಕರಿಸಿ ಕೊಡುವುದೇನೆಂದರೆ, ಇಂದು ದಿನಾಂಕ: 23-11-2015 ರಂದು 3:30 ಎಎಮ್  ಸುಮಾರಿಗೆ ಸಂಗಡ ಸಿಪಿಸಿ-801 ಶ್ರೀ ಸುರೇಶ, ಸಿಪಿಸಿ-657 ಶ್ರೀ ಸಂತೋಷ, ಸುರೇಶ ಸಿಪಿಸಿ-905 ರವರನ್ನು ಕರೆದುಕೊಂಡು ಅಫಜಲಪೂರ ಪಟ್ಟಣದಲ್ಲಿ ಬಸವೇಶ್ವರ ಸರ್ಕಲ ಹತ್ತಿರ ಪೆಟ್ರೊಲಿಂಗ್ ಕರ್ತವ್ಯದಲ್ಲಿದ್ದಾಗ  ಬಾತ್ಮಿದಾರರಿಂದ ತಿಳಿದು ಬಂದಿದ್ದೇನೆಂದರೆ,
ಆಕ್ರಮವಾಗಿ ಮರಳು ತುಂಬುತ್ತಿದ್ದ ಹಿಟ್ಯಾಚ ಹಾಗು ಟಿಪ್ಪರಗಳ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ: 23-11-2015 ರಂದು ಮಣೂರ ಗ್ರಾಮದ ಭೀಮಾನದಿಯಲ್ಲಿ ಸೊನ್ನ ಗ್ರಾಮದ ಶಿವಾನಂದ ತಂದೆ ಮಾಣಿಕಪ್ಪ ಮಸ್ತಾರ ಇವರು ಹಿಟಚಿ ಸಹಾಯದಿಂದ ಟಿಪ್ಪರಗಳಲ್ಲಿ ಅಕ್ರಮವಾಗಿ ಕಳ್ಳತನದಿಂದ ಮರಳು ತುಂಬಿಸಿ ಸಾಗಣಿಕೆ ಮಾಡಿಸುತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಸಿದ್ದರಾಯ ಭೋಸಗೆ ಪಿ.ಎಸ್.ಐ  ಅಫಜಲಪೂರ ಪೊಲೀಸ್ ಠಾಣೆ  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಣೂರ ಗ್ರಾಮದ ಭೀಮಾ ನದಿಯ ಹತ್ತಿರ ಹೋಗಿ ಸ್ವಲ್ಪ ದೂರು ಜೀಪ ನಿಲ್ಲಿಸಿ ನಿಂತು ನೋಡಲು ಭಿಮಾನದಿಯಲ್ಲಿ ಬೃಹತ ಮರಳು ಎತ್ತುವ ಯಂತ್ರದಿಂದ ಮರಳು ತಗೆದು ಟಿಪ್ಪರನಲ್ಲಿ ತುಂಬುತ್ತಿದ್ದರು ಆಗ ನಾವು ಸದರಿಯವರು ಅಕ್ರಮವಾಗಿ ಕಳ್ಳತನದಿಂದ ಮರಳು ತುಂಬುತ್ತಿರುವುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ಸದರಿ ಯಂತ್ರ ಮತ್ತು ಟಿಪ್ಪರಗಳ ಮೇಲೆ ದಾಳಿ ಮಾಡಲು ಟಿಪ್ಪರ ಚಾಲಕರು ಮತ್ತು ಮರಳು ತುಂಬುತ್ತಿದ್ದ ಯಂತ್ರದ ಆಪರೇಟರ್ ಮುಂದೆ ನಿಂತು ಮರಳು ತುಂಬಿಸುತಿದ್ದ ಶಿವಾನಂದ ತಂದೆ ಮಾಣಿಕಪ್ಪ ಮಸ್ತಾರ ಸಾ||ಸೊನ್ನ ಎಲ್ಲರು  ಕತ್ತಲಲ್ಲಿ ಓಡಿ ಹೊದರು, ಸದರಿ ಶಿನಾನಂದನು ಓಡಿ ಹೋಗುವಾಗ ನಮ್ಮ ಸಿಬಂದ್ದಿ ಜನರು ಹಾಗೂ ಪಂಚರು ಗುರುತಿಸಿರುತ್ತಾರೆ. ನಂತರ ಪಂಚರ ಸಮಕ್ಷಮ ಸದರಿ ಟಿಪ್ಪರಗಳನ್ನು ಚೆಕ್ ಮಾಡಲು ಟಿಪ್ಪರ ನಂ ಕೆಎ-32 ಸಿ-1542, ಕೆಎ-28 ಸಿ-0073  ಅಂತ ಇದ್ದು ಸದರಿ ಟಿಪ್ಪರದಲ್ಲಿ ಮರಳು ತುಂಬಿದ್ದು ಇದ್ದಿತ್ತು. ಮರಳು ತುಂಬುವ ಯಂತ್ರವನ್ನು(ಹಿಟಚಿ) ಪರಿಶೀಲಿಸಿ ನೊಡಲು Sany ಕಂಪನಿಯ ಚೈನ ಬೆಲ್ಟ ಇರುವ  ಭೃಹತ ಮರಳು ಎತ್ತುವ ಯಂತ್ರವಿದ್ದು ಅದರ ಮಾಡಲ್ ನಂಬರ SY2050 ಇಂಜಿನ ನಂ 13SVY020600508  ಅಂತಾ ಇದ್ದಿತ್ತು. ಸದರಿಯವರು ಅನದಿಕೃತವಾಗಿ ಕಳ್ಳತನದಿಂದ ಮಣುರ ಭಿಮಾನದಿಯಿಂದ ಭೃಹತ ಯಂತ್ರದಿಂದ(ಹಿಟಚಿ) ಮರಳು ತಗೆದು ಟಿಪ್ಪರದಲ್ಲಿ ತುಂಬುತ್ತಿದ್ದರಿಂದ ಸದರಿ ಯಂತ್ರವನ್ನು ಹಾಗೂ ಮರಳು ತುಂಬಿದ ಟಿಪ್ಪರಗಳನ್ನು ಪಂಚರ ಸಮಕ್ಷಮ ವಶಕ್ಕೆ ತೆಗೆದುಕೊಂಡೆನು.ಸದರಿ ಟಿಪ್ಪರಗಳಲ್ಲಿನ ಮರಳಿನ ಅಂದಾಜ ಕಿಮ್ಮತ್ತು 10,000/- ರೂ ಇರಬಹುದು ಹಾಗೂ ಭೃಹತ ಮರಳು ಎತ್ತುವ ಯಂತ್ರ (ಹಿಟಚಿ) ಅ.ಕಿ 5,00,000/- ರೂ ಇರಬಹುದು ನಂತರ ಸದರಿ ಟಿಪ್ಪರ  ಹಾಗೂ ಭೃಹತ ಮರಳು ಎತ್ತುವ ಯಂತ್ರವನ್ನು ನಮ್ಮ ಸಿಬ್ಬಂದಿಯವರ ಸಾಹಯದಿಂದ ಮಾಶಾಳ ಉಕ್ಕಡ ಠಾಣೆಯಲ್ಲಿ ನಿಲ್ಲಿಸಿ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.

23 November 2015

KALABURAGI DISTRICT REPORTED CRIMES

ಹಲ್ಲೆ ಪ್ರಕರಣ:
ನಿಂಬರ್ಗಾ ಪೊಲೀಸ್ ಠಾಣೆ: ದಿನಾಂಕ 19/11/2015 ರಂದು ಮನೆ ಗೋಡೆ ವಿಷಯದಲ್ಲಿ 1) ಸಿದ್ದರಾಮಪ್ಪ, 2) ಸುಂದರಾಬಾಯಿ, 3) ವೀರಪ್ಪಾ , 4) ಭಾಗೀರತಿ ಇವರೆಲ್ಲರೂ ಶ್ರೀ ಸಿದ್ರಾಮಯ್ಯ ತಂದೆ ರೇವಣಯ್ಯ ಮಠಪತಿ  ಸಾ: ನಿಂಬರ್ಗಾ ಮತ್ತು ಆತನ ಹೆಂಡತಿಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೇ ಮಾಡಿ ಜೀವ ಭಯ ಪಡೆಸಿದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಕ್ರಮ ಮರಳು ಸಾಗಿಸುತ್ತಿದ್ದ ಲಾರಿಗಳ ಜಪ್ತಿ:
ಫರಹತಾಬಾದ ಪೊಲೀಸ್ ಠಾಣೆ: ದಿನಾಂಕ:22/11/2015 ರಂದು ಸಿ.ಪಿ.ಐ ಎಮ್.ಬಿ.ನಗರ ರವರು ಪೆಟ್ರೋಲಿಂಗ ಕರ್ತವ್ಯದಲ್ಲಿದ್ದಾಗ ರಾಷ್ಟ್ರೀಯ ಹೆದ್ದಾರಿ 218 ರಸ್ತೆಯ ಮೇಲೆ ಜೇವರ್ಗಿ ಕಡೆಯಿಂದ ಅನದೀಕೃತವಾಗಿ ಕಳ್ಳತನದಿಂದ ಮರಳು ತುಂಬಿದ ಲಾರಿಗಳು ಬರುತ್ತಿವೆ ಅಂತಾ ಭಾತ್ಮಿ ಬಂದಿದ್ದರಿಂದ ಪಂಚರಾದ 1) ಶ್ರೀ ಖಾಜಾಸಾಬ ತಂದೆ ಖಾಸಿಂಸಾಬ ಸಾ: ಫರಹತಾಬಾದ ತಾ:ಜಿ:ಕಲಬುರಗಿ 2) ಶ್ರೀ ಅಕ್ಬರ  ತಂದೆ ಹೈದರಸಾಬ ನಧಾಫ ಸಾಃ ಫರಹತಾಬಾದ ಮತ್ತು ಫರಹತಾಬಾದ ಠಾಣೆಯ ನಾಗಬೂಷಣ ಎಎಸ್, ಪ್ರಭು ಸಿಪಿಸಿ 366, ಮತ್ತು ಜೀಪ ಚಾಲಕ ಅರ್ಜುನ ಸಿಹೆಚ್ ಸಿ 61 ರವರೊಂದಿಗೆ ಶಹಾಬಾದ ಕ್ರಾಸ ಹತ್ತಿರ ಹೋಗಿ ದಾಳಿ ಮಾಡಿ ಅನಧಿಕೃತವಾಗಿ ಮರಳು ಸಾಗಿಸುತ್ತಿದ್ದ ಲಾರಿ 1) ಕೆಎ-32 ಸಿ-4434 ಮತ್ತು 2) ಕೆಎ-33 -4738 ಜಪ್ತಿ ಮಾಡಿ ಲಾರಿ ಚಾಲಕರಾದ 1)ಸೈಯಾದ ತಂದೆ ಗುಡುಸಾಬ್ ಸೇಡಂ ಸಾ:ಗಂವ್ಹಾರ ತಾ:ಜೇವರ್ಗಿ  2) ಜಾವೀದ ಪಾಶಾ ತಂದೆ ಮಸ್ತಾನಸಾಬ ಸಾ: ಜಿಲಾನಾಬಾದ ಕಲಬುರಗಿ ಇವರುಗಳ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಜೂಜುಕೋರರ ಬಂಧನ:
ಚೌಕ ಪೊಲೀಸ್ ಠಾಣೆ: ದಿನಾಂಕ 22/11/2015  ರಂದು ಪಿಎಸ್ ಚೌಕ ಪೊಲೀಸ್ ಠಾಣೆ  ರವರು ಸಿಟಿ ಬಸ್ಸ್ ನಿಲ್ದಾಣ ಎದುರಗಡೆ ಇರುವ ಪಾಲ್ ಕಾಂಪ್ಲೇಕ್ಸ್ ಎದುರುಗಡೆ ಇರುವ ಸಾರ್ವಜನಿಕ ರಸ್ತೆಯ ದೀಪದ ಬೆಳಕಿನ ಖುಲ್ಲಾ ಸ್ಥಳದಲ್ಲಿ ಜೂಜಾಟ ಆಡುತ್ತಿದ್ದ 15 ಜನರನ್ನು ಠಾಣೆಯ ಸಿಬ್ಬಂದಿ ಜನರೊಂದಿಗೆ ದಾಳಿ ಮಾಡಿ ಅವರನ್ನು ದಸ್ತಗೀರ ಮಾಡಿ ಜೂಜಾಟದಲ್ಲಿ ಪಣಕ್ಕಿಟ್ಟಿದ್ದ ನಗರದು ರೂ 14,570 ಮತ್ತು 52 ಇಸ್ಪೇಟ ಎಲೆಗಳು ಜಪ್ತಿ ಮಾಡಿ ಜೂಜಾಟದಲ್ಲಿ ತೊಡಗಿದ್ದವರ ವಿರುದ್ದ ಚೌಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಜೂಜುಕೋರರ ಬಂಧನ:
ಶಹಾಬಾದ ನಗರ ಠಾಣೆ: ದಿಃ 22.11.2015 ರಂದು  ಪಿಐ ಶಹಾಬಾದ ರವರು ಶಹಾಬಾದ ನಗರದ ಬಸವೆಶ್ವರ ನಗರದ ರಂಗನಾಥ  ಪಾಲೀಶ  ಮಶೀನ ಎದುರು ಸಾರ್ವಜನಿಕ ಸ್ಥಳದಲ್ಲಿ ಇಸ್ಪೆಟ ಜೂಜಾಟದಲ್ಲಿ ತೊಡಗಿದ್ದ  ಜೂಜುಕೋರರ ಮೇಲೆ ಠಾಣೆಯ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಜೂಜಾಟದಲ್ಲಿ ತೊಡಗಿದ್ದ  14 ಜನರನ್ನು ದಸ್ತಗೀರ ಮಾಡಿ ಜೂಜಾಟದಲ್ಲಿ ತೊಡಗಿಸಿದ್ದ ನಗದು ರೂ 15,110/-  ಹಾಗೂ  52 ಇಸ್ಪೆಟ ಎಲೆಗಳು ಜಪ್ತಿ ಪಡಿಸಿಕೊಂಡು ಆರೋಪಿತರ ವಿರುದ್ದ ಶಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೇ ಕೈಕೊಂಡಿರುತ್ತಾರೆ.