ವರದಕ್ಷಣೆ ಕಿರುಕಳ ಪ್ರಕರಣ :
ಮುಧೋಳ ಠಾಣೆ : ಶ್ರೀಮತಿ ಕವೀತಾ ಗಂಡ ತುಳಜ್ಯಾ
ನಾಯಕ ಸಾ: ಬೊಂದೆಂಪಲ್ಲಿ ಇಂದಿರಾನಗರ ಕಾರಬಾರಿ ರವರನ್ನು ಈಗ ಸುಮಾರು 5 ವರ್ಷಗಳ ಹಿಂದೆ ತುಳಚಿರಾಮ
ಎಂಬುವವನೊಂದಿಗೆ ವಿವಹಾವಾಗಿದೆ ಮದುವೆಯ ಸಮಯದಲ್ಲಿ ನಮ್ಮ ತಂದೆತಾಯಿಯವರು 1 ಲಕ್ಷ ರೂಪಾಯಿ ಮತ್ತು
5 ತೊಲೆ ಬಂಗಾರ ವರದಕ್ಷಣೆಯಾಗಿ ಕೊಟ್ಟಿದ್ದಾರೆ. ನನಗೆ ಒಬ್ಬಳು ಹೆಣ್ಣುಮಗಳು ಜನಿಸಿರುತ್ತಾಳೆ.
ಮದುವೆಯ ನಂತರ 4 ವರ್ಷಗಳ ಕಾಲ ಚನ್ನಾಗಿ ಜೀವನ ನಡೆಯಿಸಿದೇವೆ. ಈಗ ಒಂದು ವರ್ಷದ ನಂತರ ನನಗೆ
ನಿಮ್ಮ ತಂದೆ ತಾಯಿಯವರ ಕಡೆಯಿಂದ ಹಣ ತೆಗೆದುಕೊಂಡು ಬಾ ಎಂದು ಕಿರುಕುಳ ನೀಡುತ್ತಿದ್ದಾನೆ.
ಇದಕ್ಕಿಂತ ಮುಂಚೆ 4 ತಿಂಗಳ ಹಿಂದೆ 40 ಸಾವಿರ ರೂಪಾಯಿ ಕೊಟ್ಟಿದ್ದಾರೆ. ಈಗ ಮತ್ತೆ ಇನ್ನು 60
ಸಾವಿರ ರೂಪಾಯಿ ತೆಗೆದುಕೊಂಡು ಬಾ ಅಂತಾ ಕಿರುಕುಳ ನೀಡುತ್ತಿದ್ದಾನ, ಇದನ್ನು ನಮ್ಮ ನೆರೆಯ
ಮನೆಯವರಾದ ದಾಸ್ಯಾ ನಾಯಕ ತಂದೆ ದೇವಜ್ಯಾ ನಾಯಕ, ಕಮ್ಮ್ಯಾ ನಾಯಕ ತಂದೆ ಸುಬ್ಯಾ ನಾಯಕ ಹಾಗು
ಬಾಲ್ಯಾ ನಾಯಕ ತಂದೆ ಮೇಗ್ಯಾ ನಾಯಕ ಇವರು ನೋಡಿ ನನ್ನ ಗಂಡನಿಗೆ ಬುದ್ದಿವಾದ ಹೇಳಿರುತ್ತಾರೆ. 4
ವರ್ಷಗಳ ನಂತರ ನನಗೆ ಅನಾವಶ್ಯಕವಾಗಿ ಹೊಡೆ ಬಡೆ ಮಾಡುತ್ತಿದ್ದು ಅವಾಚ್ಚ ಶಬ್ದಗಳಿಂದ
ಬೈಯುತ್ತಿದ್ದಾನೆ. ನಾನು 2 ನೇ ಮದುವೆ ಮಾಡಿಕೊಳ್ಳುತ್ತೇನೆ ಅದಕ್ಕೆ ನೀನು ಒಪ್ಪಿಕೊಳ್ಳಬೇಕು
ಅಂತಾ ಜೀವದ ಭಯ ಹಾಕುತ್ತಿದ್ದಾನೆ. ಹೀಗಾಗಿ 2 ತಿಂಗಳಹಿಂದೆ ಪಾರ್ವತಿ ಎಂಬಾಕೆಯೊಂದಿಗೆ 2ನೇ
ಮದುವೆ ಮಾಡಿಕೊಂಡಿರುತ್ತಾನೆ ಅಂತಾ ತಿಳಿದು ಬಂದಿರುತ್ತದೆ. ಮತ್ತೆ ನನ್ನ ಗಂಡ ದಿನಾಂಕ:
05.11.2011 ರಂದು ಸಾಯಂಕಾಲ 06:45 ಗಂಟೆ ವೇಳೆಗೆ ತವರು ಮನೆಯಿಂದ 60 ಸಾವಿರ ರೂಪಾಯಿ ತರದೆ
ಇದ್ದರೆ, ಕೊಲೆ ಮಾಡುತ್ತೇನೆ ಅಂತ ಆಜೀವದ ಬೇದರಿಕೆ ಹಾಕಿರುತ್ತಾನೆ. ಅಂತಾ ಸಲ್ಲಇಸಿದ ದೂರು
ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಗ್ರಾಮೀಣ ಠಾಣೆ :
ಶ್ರೀ ಶಶಿಕಾಂತ ತಂದೆ ಶಿವಶರಣಪ್ಪಾ ಸೋರಡೆ ಸಾ;ಕಿರಾಣಾ ಬಜಾರ ಕಲಬುರಗಿ ಬೇಲೂರ (ಜೆ) ಕ್ರಾಸ
ಹತ್ತಿರ ಸುಮೀತ ಇಂಡಸ್ಟ್ರೀಜ ಅಂತಾ ದಾಲಮಿಲ್
ಇಟ್ಟು ಉಪಜೀವನ ಸಾಗಿಸುತ್ತಿದ್ದು ದಿನಾಂಕ. 18-10-2015 ರಂದು ಶ್ರೀ ಗುರುದೇವ ದತ್ತ
ಇಂಡಸ್ಟ್ರೀಜ ಬೇಲೂರ ಕ್ರಾಸ ರವರ ಕಡೆಯಿಂದ 30 ಕೆ.ಜಿ.ವುಳ್ಳ ಹೆಸರು ಬೆಳೆಯನ್ನು 333
ಬ್ಯಾಗಗಳನ್ನು ಖರೀದಿಸಿ ನಮ್ಮ ಮಿಲ್ಲದಲ್ಲಿ ಇಟ್ಟುಕೊಂಡಿರುತ್ತೇನೆ ಮರುದಿವಸ ಅಂದರೆ ದಿನಾಂಕ.
20-10-2015 ರಂದು ಚಿತ್ರದುರ್ಗ ಒಬ್ಬ ಗಿರಾಕಿಗೆ 50 ಬ್ಯಾಗಗಳನ್ನು ಮಾರಾಟ ಮಾಡಿದ್ದು ಉಳಿದ 283
ಬ್ಯಾಗಗಳು ದಾಲಮಿಲ್ ದಲ್ಲಿದ್ದವು. ದೀಪಾವಳಿ ಹಬ್ಬಕ್ಕೆ ನಮ್ಮ ದಾಲಮಿಲ ಬಿಲ್ಡಿಂಗ ಲೀಜ
ಮುಕ್ತಾಯವಾಗಿದ್ದರಿಂದ ದಿನಾಂಕ 18-11-2015
ರಂದು ಸ್ವಂತ ಬಿಲ್ಡಿಂಗ ಇಂಡಸ್ಟ್ರೀಯಲ್ ಏರಿಯಾದ 1 ನೆ ಹಂತ ಪ್ಲಾಟ ನಂ. 71 ನೆದ್ದರಲ್ಲಿ
ಸ್ಥಳಾಂತಿಸುವಾಗ ಮಿಲ್ಲದ್ದಲಿಟ್ಟಿದ್ದು ಒಟ್ಟು
283 ಹೆಸರ ಬೆಳೆ ಬ್ಯಾಗಗಳಲ್ಲಿ ಕೇವಲ 233 ಬ್ಯಾಗಗಳು ಮಾತ್ರ ಇದ್ದವು ಉಳಿದ 50 ಬ್ಯಾಗಗಳು ಕೊರತೆ
ಕಂಡು ಬಂದಿದ್ದು ಆಗ ಮಿಲ್ಲದಲ್ಲಿ ಕೆಲಸ ಮಾಡುವ ವರೆಲ್ಲರೂ ವಿಚಾರ ಮಾಡಿದರೂ ಗೊತ್ತಿರುವದಿಲ್ಲಾ
ಅಂತಾ ತಿಳಿಸಿದ್ದರು ಪ್ರತಿಒಂದು ಬ್ಯಾಗ 30 ಕೆ.ಜಿ ವುಳ್ಳದಾಗಿದ್ದು ಪ್ರತಿಯೊಂದು ಬ್ಯಾಗಿಗೆ
3480/- ರೂ ಇದ್ದು 50 ಬ್ಯಾಗಿಗೆ ಒಟ್ಟು ಅಕಿ.
1,74,000/- ರೂ ಬೆಲೆಬಾಳುವದು ಯಾರೋ ಕಳ್ಳರು
ಕಳ್ಳತನ ಮಾಡಿರುತ್ತಾರೆ ದಿನಾಂಕ.20-10-2015 ರಿಂದ ದಿನಾಂಕ 18-11-2015 ರ ಮದ್ಯದ ಅವಧಿಯಲ್ಲಿ
ನಮ್ಮ ಸಮೀತ ದಾಲಮಿಲ್ಲದಲ್ಲಿಟ್ಟ ಒಟ್ಟು 50
ಬ್ಯಾಗ ಒಟ್ಟು ಅಕಿ. 1,74,000/- ರೂ
ಬೆಲೆಬಾಳುವದು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು
ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment