POLICE BHAVAN KALABURAGI

POLICE BHAVAN KALABURAGI

15 September 2014

Gulbarga District Reported Crimes

ಕೊಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ನಾಗಮ್ಮ ಗಂಡ ಸಂತೋಷ ತಳವಾರ ಸಾ : ಬಳುಂಡಗಿ ರವರು ದಿನಾಂಕ 13-09-2014 ರಂದು ಸಾಯಂಕಾಲ 7:00 ಗಂಟೆ ಸಮಯಕ್ಕೆ ನಾನು ಮತ್ತು ನನ್ನ ಗಂಡ ಸಂತೋಷ ಹಾಗೂ ನಮ್ಮ ಅತ್ತೆ ಕಸ್ತೂರಬಾಯಿ, ಮಾವ ಶಂಕರರವರೆಲ್ಲರೂ ನಮ್ಮ ಮನೆಯಲ್ಲಿದ್ದಾಗ, ನನ್ನ ಗಂಡನು ನನಗೆ ನಮ್ಮೂರ  ಲಕ್ಷ್ಮೀಪುತ್ರ ಕಟ್ಟಿಮನಿ ಈತನು ಅಫಜಲಪೂರಕ್ಕೆ ಹೋಗಿ ಬರೊಣ ಬಾ ಅಂತಾ ಕರೆಯುತ್ತಿದ್ದಾನೆ, ನಾನು ಹೋಗಿ ಬರುತ್ತೇನೆ ಅಂತಾ ಹೇಳಿ ನನ್ನ ಗಂಡ ಮನೆಯಿಂದ ಹೋದವನು ಈ ದೀವಸ ಬೆಳಗಾದರು ಮರಳಿ ಮನೆಗೆ ಬಂದಿರುವುದಿಲ್ಲ ನನ್ನ ಗಂಡನ ಮೋಬೈಲ ನಂಬರ 9535607066 ಮತ್ತು 9663321165 ನೇದ್ದವುಗಳಿಗೆ ಪೋನ ಹಚ್ಚಿದರು ಪೋನ ಎತ್ತಲಿಲ್ಲ. ದಿನಾಂಕ 14-09-2014 ರಂದು ಬೆಳಿಗ್ಗೆ 6:30 ಗಂಟೆ ಸುಮಾರಿಗೆ ನಾನು ಮತ್ತು ನಮ್ಮ ಮನೆಯವರೆಲ್ಲರು ನಮ್ಮ ಮನೆಯಲ್ಲಿದ್ದಾಗ ನಮ್ಮೂರಿನ ರಾಜು ಮೀನಗಾರ ಎಂಬಾತನು ನಮ್ಮ ಮನೆಗೆ ಬಂದು ತಿಳಿಸಿದ್ದೆನೆಂದರೆ, ಬಳೂಂಡಗಿ ಅಫಜಲಪೂರ ರೋಡಿಗೆ ಇರುವ ಮೈಭೂಬ ಅಫರಾದ ಇವರ ಹೊಲದ ಹತ್ತಿರ ರೋಡಿನ ಮೇಲೆ ಒಬ್ಬ ಮನುಷ್ಯ ಕೋಲೆಯಾಗಿ ಬಿದ್ದಿದ್ದಾನೆ , ಆತನ ಮೈ ಮೇಲೆ ಕಪ್ಪು ಬಣ್ಣದ ಶರ್ಟ, ಬೂದು ಬಣ್ಣದ ಪ್ಯಾಂಟ ಇದ್ದು. ಮೃತನ ಪಕ್ಕದಲ್ಲಿ ಪಲ್ಸರ ಮೋಟಾರ ಸೈಕಲ ಬಿದ್ದಿರುತ್ತದೆ ಅಂತಾ ತಿಳಿಸಿರುತ್ತಾರೆಂದು ವಿಷಯ ತಿಳಿಸಿದನುಆಗ ನನ್ನ ಭಾವ ಲಕ್ಷ್ಮಣ, ನಮ್ಮ ಅತ್ತೆ ಕಸ್ತೂರಬಾಯಿ ರವರು ಸ್ಥಳಕ್ಕೆ ಹೋಗಿ ನೋಡಿ ಕೊಲೆಯಾದವನು ನನ್ನ ಗಂಡನೆ ಇರುತ್ತಾನೆ ಅಂತಾ ತಿಳಿಸಿದ್ದರಿಂದ ನಾನು ಸ್ಥಳಕ್ಕೆ ಹೋಗಿ ನನ್ನ ಗಂಡನ ಶವವನ್ನು ನೋಡಿರುತ್ತೆನೆ, ನಂತರ ಗೊತ್ತಾಗಿದ್ದೇನೆಂದರೆ ನಿನ್ನೆ ದಿನಾಂಕ 13-09-2014 ರಂದು ರಾತ್ರಿ 8:30 ಗಂಟೆ ಸುಮಾರಿಗೆ ನನ್ನ ಗಂಡ ಮತ್ತು ಯಲ್ಲಪ್ಪ ತಂದೆ ಪುಂಡಲಿಕ ವಾಲಿಕಾರ ಇವರಿಬ್ಬರು, ಲಕ್ಷ್ಮೀಪುತ್ರ ಕಟ್ಟಿಮನಿ ಎಂಬಾತನ ಪಲ್ಸರ ಮೋಟಾರ ಸೈಕಲ ನೇದ್ದರ ಮೇಲೆ ಅಫಜಲಪೂರಕ್ಕೆ ಹೋಗಿದ್ದು ಮರಳಿ ಅವರು ಊರಿಗೆ ಬರುತ್ತಿದ್ದಾಗ ರಾತ್ರಿ 11:00 ಗಂಟೆಯಿಂದ 12:00 ಗಂಟೆಯ ಅವದಿಯಲ್ಲಿ ಮೈಬೂಬ ಅಫರಾದ ಇವರ ಹೊಲದ ಹತ್ತಿರ ಅಫಜಲಪೂರ ಬಳೂಂಡಗಿ ರೋಡಿನ ಮೇಲೆ ನನ್ನ ಗಂಡನ ಕುತ್ತಿಗೆಗೆ, ಎದೆಗೆ, ಹೊಟ್ಟೆಗೆ, ಹಣೆಗೆ, ಕೈಗಳಿಗೆ, ಸಿಸ್ನಕ್ಕೆ ಯಾವುದೋ ಹರೀತವಾದ ಆಯುಧಗಳಿಂದ ಹೊಡೆದು  ಕೊಲೆ ಮಾಡಿರುತ್ತಾರೆ, ನನ್ನ ಗಂಡನೊಂದಿಗೆ ಅಫಜಲಪೂರಕ್ಕೆ ಹೋಗಿದ್ದ ಯಲ್ಲಪ್ಪ ತಳವಾರ ಸದ್ಯಕ್ಕೆ ಎಲ್ಲಿದ್ದಾನೆ ಎಂಬುದರ ಬಗ್ಗೆ ಗೋತ್ತಾಗಿರುವುದಿಲ್ಲ, ಆತನ ಮೋಬೈಲ ಪೋನ ಸಹ ಬಂದ ಇರುತ್ತದೆ. ನನ್ನ ಗಂಡನಿಗೆ ಲಕ್ಷ್ಮೀಪುತ್ರ ಕಟ್ಟಿಮನಿ, ಗಜಾನಂದ @ ಗಜಪ್ಪ, ಸಂಗಪ್ಪ ಕಟ್ಟಿಮನಿ ಮತ್ತು ಇತರರು ಸೇರಿಕೊಂಡು ಯಾವುದೊ ದುರುದ್ದೇಶದಿಂದ ಹೊಡೆದು ಕೊಲೆ ಮಾಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಸೇಡಂ ಠಾಣೆ : ಶ್ರೀ ಬಸವರಾಜ ತಂದೆ ನೀಲಕಂಠಪ್ಪ ಅರೋಣಿ ಸಾ: ಗಾಜರಕೊಟ ಇವರು ದಿನಾಂಕ: 14-09-14 ರಂದು ಸಾಯಾಂಕಾಲ 6 ಗಂಟೆಗೆ ತನ್ನ ಸಡ್ಡಕನಾದ ಸಂತೋಷ ಮದರಿ ಇವನು ಬೆನಕನಳ್ಳಿ ಗ್ರಾಮಕ್ಕೆ ಹೋಗಿ ತನ್ನ ಹೆಂಡತಿ ಮತ್ತು ಮಗುವಿಗೆ ನೋಡಿ ಅಲ್ಲಿಂದ ತನ್ನ ಮಾವ ಪಂಪಾಪತಿ ಇವರ ಮೋಟಾರ ಸೈಕಲ್  ನಂಬರ ಕೆಎ-32-ಇಇ-9821 ನ್ನೇದ್ದರ ಮೇಲೆ ಬೆನಕನಳ್ಳಿ ಗ್ರಾಮದಿಂದ ಗಾಜರಕೊಟ ಗ್ರಾಮಕ್ಕೆ ಮೋಟಾರು ಸೈಕಲ್ ಮೇಲೆ ಹೋಗಲು ಹಿಂದೆ ಶರಣಪ್ಪ ಚಮ್ಮನೂರ  ಇವರನ್ನು ಕೂಡಿಸಿಕೊಂಡು ಇಂದು ದಿನಾಂಕ: 14-09-14 ರಂದು 7-15 ಪಿ ಎಮ್. ಸುಮಾರಿಗೆ  ಹಂದ್ರಕಿಯಿಮದ ಗುರಮಿಟಕಲ್ ಕ್ಕೆ ಹೋಗುವ ರಸ್ತೆಯ ಶರಣಪ್ಪ ಮೇತ್ರೆ ಇವರ ಮನೆಯ ಹತ್ತಿರ ಮುಂದೆ ಬರುತ್ತಿದ್ದ ಎತ್ತಿನ ಬಂಡಿಯ ಮಧ್ಯದ ನಗಕ್ಕೆ ಅತಿವೇಗ ಮತ್ತು ನಿಸ್ಕಾಳಜೀತನದಿಂದ ನಡೆಸಿಕೊಂಡು ಹೋಗಿ ಡಿಕ್ಕಿ ಹೊಡೆದು ಅಪಘಾತ ಪಡಿಸಿ ಸಂತೋಷ ಇವನು ತನಗೆ ಎಡ ಎದೆಗೆ ಭಾರಿ ರಕ್ತ ಗಾಯ ಪಡಿಸಿಕೊಂಡು ಬಲಗಾಲ ಮೊಳಕಾಲಿಗೆ ರಕ್ತ ಗಾಐ ಪಡಿಸಿಕೊಮಡು ಸ್ಥಳದಲ್ಲಿಯೇ ಮೃತಪಟ್ಟಿದ್ದು ಮತ್ತು ಹಿಂದೆ ಇದ್ದ ಶರಣಪ್ಪ ಚಮ್ಮನೂರ  ಇವನಿಗೂ ಸಾಧಾ ಗಾಯ ಪಡಿಸಿದ್ದು ಇರುತ್ತದೆ ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡೆಂ ಠಾಣೆಯಲ್ಲಿ ಪ್ರಕರಣ ದಾಖಲಾಗದೆ.
ಹಲ್ಲೆ ಪ್ರಕರಣ :
ಸ್ಟೇಷನ ಬಜಾರ ಠಾಣೆ :  ಶ್ರೀ ಮತೀನ ಅಹ್ಮದ ತಂದೆ ಶಬ್ಬೀರ ಅಹ್ಮದ ಸಾಃ ಹಮಾಲ ವಾಡಿ ಗುಲಬರ್ಗಾ ಇವರು ದಿನಾಂಕ 14-09-2014 ರಂದು 07:30 ಪಿ.ಎಮ್ ಕ್ಕೆ ತಮ್ಮ ಮುಜೀಬ ಅಹ್ಮದ ಮತ್ತು ಅವನ ಸಂಗಡ ಮೇರಾಜ ಕೂಡಿ ಮೊಟಾರ ಸೈಕಲ ಮೇಲೆ ಬರುವಾಗ ಪಂಚಶೀಲ ನಗರದಲ್ಲಿ ಹನುಮಾನ ಗುಡಿಯ ಹತ್ತಿರ 1) ರವಿ ತಂದೆ ತುಕಾರಾಮ, 2) ಕಾಂತು ತಂದೆ ರಮೇಶ, 3) ಅವತಾರಸಿಂಗ, 4) ಶೇಖ್ಯಾ ಇವರು ಕೂಡಿ ಬಂದು ತಡೆದು ಕಾಂತು ಮತ್ತು ಅವತಾರಸಿಂಗ ಇವರು ಮುಜೀಬ ಅಹ್ಮದನಿಗೆ ಕೈಹಿಡಿದಿದ್ದು ರವಿ ಇವನು ತಲವಾರದಿಂದ ತಲೆಗೆ ಹೊಡೆದಿದ್ದು ಶೇಖ್ಯಾ ಇವನು ಕೈಯಿಂದ ಹೊಡೆದಿರುತ್ತಾನೆ. ಅಷ್ಟೊತ್ತಿಗೆ ಮೊಸಿನ ಮತ್ತು ಸೈಯದ ಅಕ್ರಮ ಇವರು ಬಂದಾಗ ಓಡಿ ಹೋಗಿರುತ್ತಾರೆ.. ಮುಜೀಬ ಅಹ್ಮದನು ಮಾತನಾಡುವ ಸ್ಧಿತಿಯಲ್ಲಿ ಇಲ್ಲಾ ಈ ಮೊದಲು ಎರಡು ಮೂರು ಸಲ ತಡೆದು ಅಂಜಿಸಿ ಹಣ ಕೊಡು ಅಂತಾ ರೌಡಿಜಂ ಮಾಡಿರುತ್ತಾರೆ ಅದೇ ರೀತಿ ಇಂದು ಫಿರ್ಯಾದಿ ತಮ್ಮ ಮುಜೀಬ ಅಹ್ಮದನಿಗೆ ಇವನಿಗೆ ತಡೆದು ನಿಲ್ಲಿಸಿ ತಲವಾರದಿಂದ ಕೈಯಿಂದ ಹೊಡೆದು ಕೊಲೆ ಮಾಡಲು ಪ್ರಯತ್ನಿಸಿದ್ದು ಇದೆ ಅಂತಾ  ಸಲ್ಲಿಸಿದ ದೂರು ಸಾರಾಂಸದ ಮೇಲಿಂದ  ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ಕಮಲಾಪೂರ ಠಾಣೆ :  ಶ್ರೀಮತಿ ಸಿದ್ದಮ್ಮ ಗಂಡ ವಿಜಯಕುಮಾರ ಮಾಳಗೆ ಸಾ; ವರನಾಳ ತಾ;ಜಿ ಗುಲಬರ್ಗಾ  ರವರಿಗೆ ಸುಮಾರು 1.1/2 ವರ್ಷದ ಹಿಂದೆ ವರನಾಳ ಗ್ರಾಮದ ವಿಜಯಕುಮಾರ ತಂದೆ ನಾಮದೇವ ಮಾಳಗೆ ಇವರೊಂದಿಗೆ ಮದುವೆ ಮಾಡಿಕೊಟ್ಟಿದ್ದು, ಮದುವೆಯಾಗಿ ಸ್ವಲ್ಪ ದಿವಸ ಚನ್ನಾಗಿ ನೋಡಿಕೊಂಡು ನಂತರ ತವೆರು ಮನೆಯಿಂದ ವರದಕ್ಷಿಣೆ ರೊಪದಲ್ಲಿ  2 ಲಕ್ಷ ರೂಪಾಯಿ ಹಣ ಮತ್ತು 2 ತೊಲೆ ಬಂಗಾರ ತರುವಂತೆ ಆರೋಪಿತರು ದಿನೇದಿನೇ ಪಿರ್ಯಾದಿಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದು, ಇದನ್ನು ಪಿರ್ಯಾದಿಯ ತನ್ನ ತವರು ಮನೆಯಲ್ಲಿ ತಿಳಿಸಿದಾಗ ಅವರು ಬಂದು ರಾಜಿ ಪಂಚಾಯತ ಮಾಡಿ ಹೋಗಿರುತ್ತಾರೆ, ಈಗ ಸುಮಾರು ಒಂದು ತಿಂಗಳ ಹಿಂದೆ ಪಿರ್ಯಾದಿಯ ಗಂಡ ವಿಜಯಕುಮಾರ ಈತನು ದುಡಿಯಲು ದುಬೈಗೆ ಹೋಗಿರುತ್ತಾನೆ. ದಿನಾಂಕ 13-09-2014 ರಂದು ಬೆಳಗ್ಗೆ 10-30 ಗಂಟೆಗೆ ಅಡುಗೆ ಮಾಡುವ ವಿಷಯದಲ್ಲಿ ಆರೋಪಿತರು ಪಿರ್ಯಾದಿಯೊಂದಿಗೆ ಜಗಳ ತೆಗೆದು ವರದಕ್ಷಿಣೆ ಹಣ ಮತ್ತು ಬಂಗಾರ ತರುವಂತೆ ಕಿರುಕುಳ ನೀಡುತ್ತಾ ಕೈಯಿಂದ ಹೊಡೆದು ಅವಚ್ಯ ಬೈದ್ದು ಜೀಬದ ಬೆದರಿಕೆ ಹಾಕಿ ಪಿರ್ಯಾದಿಯ ಕೈ ಮತ್ತು ಸೀರೆ ಹಿಡಿದು ಎಳೆದಾಡಿ ಮಾನಭಂಗ ಮಾಡಿದ್ದು, ಪಿರ್ಯಾದಿಯು ಗಂಡನಿಗೆ ಪೋನ ಮಾಡಿದಾಗ ಪಿರ್ಯಾದಿಗೆ ಖಲಾಸ್ ಮಾಡಿರಿ ಮುಂದೆ ಬಂದುದನ್ನು ನಾನು ನೋಡಿಕೊಳ್ಳುತ್ತೇನೆ ಅಂತ ಪ್ರಚೋದನೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.