POLICE BHAVAN KALABURAGI

POLICE BHAVAN KALABURAGI

02 September 2016

Kalaburagi District Reported Crimes

ಅಪಘಾತ ಪ್ರಕರಣಗಳು :
ಸಂಚಾರಿ ಠಾಣೆ : ದಿನಾಂಕ; 01-09-2016 ರಂದು ಮಯಾವತಿ ಇವಳು ತನ್ನ ಮೋಟಾರ ಸೈಕಲ ನಂ ಕೆಎ 32 ಇಜಿ 5672 ನೇದ್ದರ ಮೇಲೆ ಕುಮಾರಿ ಸಾಕ್ಷಿ ಇವಳಿಗೆ ಹಿಂದೆ ಕೂಡಿಸಿಕೊಂಡು ಲಾಲಗಿರಿ ಕ್ರಾಸದಿಂದ ಸಿಟಿ ಬಸ್ ನಿಲ್ದಾಣ ರೋಡ ಕಡೆಗೆ ಮಯಾವತಿ ಮೋಟಾರ ಸೈಕಲ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಗಣೇಶ ವಿಸರ್ಜನೆ ಪಾಯಿಂಟ ಎದುರಿನ ರೋಡ ಮೇಲೆ ಹಿಂದಿನಿಂದ ಎನ್ ಈ ಕೆ ಎಸ್ ಆರ್ ಟಿ ಸಿ ಬಸ್ ನಂ ಕೆಎ 32 ಎಫ 1891 ನೇದ್ದರ ಚಾಲಕ ಸಿಕ್ಕಂದರ ಈತನು ತನ್ನ ಬಸನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಮ್ಮಮೋಟಾರ ಸೈಕಲಕ್ಕೆ ಹಿಂದಿನಿಂದ ಡಿಕ್ಕಿ ಪಡಿಸಿ ಅಪಘಾತ ಮಾಡಿ ನನಗೆ ರಕ್ತಗಾಯ ಮತ್ತು ಗುಪ್ತಗಾಯ ಗೊಳಿಸಿ ಮಾಯವತಿ ಇವಳ ತಲೆಯ ಮೇಲಿಂದ ಬಸ್ಸಿನ ಬಲಗಡೆ ಮುಂದಿನ ಗಾಲಿ ಹಾಯ್ದು ಹೋಗಿ ತಲೆಗೆ ಭಾರಿ ರಕ್ತಗಾಯವಾಗಿ ಮಯಾವತಿ ಇವಳು ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಇರುತ್ತದೆ. ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ಶ್ರೀ  ರಾಮಣ್ಣಾ ತಂದೆ ಹಣಮಯ್ಯ ಕೂರಡೆಕರ್‌ ಸಾ: ಯಲಗೋಡ ತಾ: ಜೇವರ್ಗಿ ಜಿ: ಕಲಬುರಗಿ ರವರ ಹಿರಿಯ ಮಗ ಹಣಮಂತ ಈತನು ಡಿಪ್ಲಮೋ  ಮುಗಿಸಿ ಖಾಸಗಿ ಕೆಲಸ ಮಾಡುತ್ತಾ ಬಂದಿರುತ್ತಾನೆ. ನನ್ನ ಹೆಂಡತಿ ನಿರ್ಮಲಾ ಇವಳ ತವರು ಮನೆ ಶಹಾಬಾದ ಇದ್ದು. ಈ 2-3 ದಿವಸದ ಹಿಂದೆ ಹಣಮಂತನು ತನ್ನ ಅಜ್ಜ ಅಜ್ಜಯ ಮನೆ ಶಹಾಬಾದಕ್ಕೆ ಹೋಗಿದ್ದು ದಿನಾಂಕ. 01/09/2016 ರಂದು ಬೆಳ್ಳಿಗ್ಗೆ  ಅಮವಾಸ್ಯೆ  ಇದ್ದ  ಪ್ರಯುಕ್ತ  ಮಗ ನಮ್ಮೂರಿಗೆ  ಬರುವವನಿದ್ದನು ಬೆಳ್ಳಿಗ್ಗೆ ಅಂದಾಜು 9:45 ಗಂಟೆ ಸುಮಾರಿಗೆ  ನನಗೆ ಪರಿಚಯದವರು ಯಾರೋ ನನಗೆ ಪೋನ ಮಾಡಿ ತಿಳಿಸಿದೆನೆಂದರೆ ಶಹಾಬಾದದಿಂದ ಹಣಮಂತ ನಿಮ್ಮ ಮಗ & ಇತರರು ಕೂಡಿ ಒಂದು ಟಂಟಂ ವಾಹದನಲ್ಲಿ ಕುಳಿತು ಜೇವರ್ಗಿ ಕಡೆಗೆ ಬರುವಾಗ  ಶಹಾಬಾದ ಕ್ರಾಸ (ಮುಖ್ಯ ರೋಡ ಕಲಬುರಗಿ- ಜೇವರ್ಗಿ) ಇನ್ನೂ ½ ಕಿಮಿ ದೂರು ಇರುವಾಗ ಸದರಿ ಟಂಟಂ ವಾಹನದ ಚಾಲಕ ಅತೀವೇಗದಿಂದ  ಹಾಗೂ ಅಲಕ್ಷತನದಿಂದ  ಓಡಿಸಿ ತಗ್ಗಿನಲ್ಲಿ ಒಮ್ಮೇಲೆ ಕಟ್‌‌ ಹೊಡೆದಿದ್ದಕ್ಕೆ ಟಂ ಟಂ ವಾಹನ ಪಲ್ಟಿಯಾಗಿ ಅದರ ಕೆಳಗೆ  ಹಣ ಮಂತನು ಸಿಕ್ಕಿ ರೋಡಿನ ಮೇಲೆ ಬಿದ್ದು ಆತನ ತಲೆಗೆ  ಭಾರಿ ಪೆಟ್ಟಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಅಂತಾ ತಿಸದ ಮೇರೆಗೆ    ನಾನು ಹಾಗೂ ನಮ್ಮೂರಿನ ಇತರರು ಕೂಡಿ ಆಸ್ಪತ್ರೆಗೆ ಬಂದು ನನ್ನ ಮಗನ ಶವ ನೋಡಲಾಗಿ ಆತನ ಎಡ ತಲೆಗೆ  ಬಾರಿ ಕರ್ತಗಾಯವಾಗಿದ್ದು ಅಲ್ಲದೇ ಎಡ ಭುಜ ಮುಂಗೈಗೆ ಭಾರಿ ಪೆಟ್ಟಾಗಿದ್ದು ಸದರಿ ಘಟನೆ ಬೆಳ್ಳಿಗ್ಗೆ  9:30 ಗಂಟೆಗೆಯಾಗಿದ್ದು ಅಫಘಾತ ಪಡಿಸಿದ ಟಂ ಟಂ ವಾಹನ ನಂ ಕೆಎ 32 ಸಿ- 6043 ಇರುತ್ತದೆ. ಅದರ ಚಾಲಕನ ಹೆಸರು ತಿಳಿದು ಬಂದಿಲ್ಲಾ  ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ಜೇವರಗಿ ಠಾಣೆ : ದಿನಾಂಕ 01.09.2016 ರಂದು ಸಾಯಾಂಕಾಲ ಜೇವರಗಿ ಪಟ್ಟಣದ  ಅಖಂಡೇಶ್ವರ ಚೌಕ ಹತ್ತಿರ ಒಬ್ಬ ಮನುಷ್ಯನು ಹೋಗಿ ಬರುವ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಮಾನ್ಯ ಸಿಪಿಐ ಸಾಹೇಬ ಜೇವರಗಿ ರವರ ನೇತೃತ್ವದಲ್ಲಿ ಶ್ರೀ. ಶ್ರೀಮಂತ ಇಲ್ಲಾಳ ಪಿ.ಎಸ್.ಐ ಜೇವರಗಿ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ಅಂಗಡಿಗಳ ಗೊಡೆಯ ಮರೆಯಾಗಿ ನಿಂತು ನೋಡಲು ಜೇವರಗಿ ಪಟ್ಟಣದ  ಅಖಂಡೇಶ್ವರ ಚೌಕ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ಮನುಷ್ಯನು ಸಾರ್ವಜನಿಕರಿಗೆ 1-00 ರೂಪಾಯಿಗೆ 80-00 ರೂಪಾಯಿ ಕೊಡುವದಾಗಿ ಹೇಳಿ ಹೋಗಿ ಬರುವ ಸಾರ್ವಜನಕರಿಂದ ಹಣ ಪಡೆದುಕೊಂಡು ಮಟಕಾ ಅಂಕಿ ಸಂಖ್ಯೆ ಚೀಟಿ ಬರೆದು ಕೊಳ್ಳುತ್ತಿರುವದನ್ನು ನೋಡಿ ಖಚಿತ ಪಡಿಸಿಕೊಂಡು ದಾಳಿ ಮಾಡಿ ಅವನಿಗೆ ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ  ಅರ್ಜುನ ತಂದೆ ತಿಪ್ಪಣ್ಣ ಪವಾರ ಸಾ:  ಶಾಸ್ತ್ರಿಚೌಕ ಜೇವರಗಿ ಅಂತ ಹೇಳಿದನು. ಅವನ ಅಂಗ ಶೋಧ ಮಾಡಲಾಗಿ ಅವನ ಹತ್ತಿರ ನಗದು ಹಣ 1295/-ರೂ ಒಂದು ಮಟಕಾ ಚೀಟಿ ಅ.ಕಿ 00-00 ಒಂದು ಬಾಲ ಪೆನ್ನು ಅ.ಕಿ 00-00 ನೇದ್ದವುಗಳು ಸಿಕ್ಕವು. ಅವುಗಳು ಜಪ್ತಿಮಾಡಿಕೊಂಡು ಸದರಿಯವನೊಂದಿಗೆ ಜೇವರಿಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಜೇವರಗಿ ಠಾಣೆ : ದಿನಾಂಕ 01-09-2016 ರಂದು ಮದ್ಯಾಹ್ನ ಸಮಯದಲ್ಲಿ ಜೇವರಗಿ ಪಟ್ಟಣದ ಐ.ಬಿ ಗೇಟ ಹತ್ತಿರ ಒಬ್ಬ ಮನುಷ್ಯನು ಹೋಗಿ ಬರುವ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಮಾನ್ಯ ಸಿಪಿಐ ಸಾಹೇಬ ಜೇವರಗಿ ರವರ ನೇತೃತ್ವದಲ್ಲಿ ಶ್ರೀ. ಶ್ರೀಮಂತ ಇಲ್ಲಾಳ ಪಿ.ಎಸ್.ಐ ಜೇವರಗಿ ಠಾಣೆರವರು  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬಾತ್ಮಿ ಇದ್ದ ಸ್ಥಳದ ಸಮೀಪ ಹೋಗಿ ಅಂಗಡಿಗಳ ಗೊಡೆಯ ಮರೆಯಾಗಿ ನಿಂತು ನೋಡಲು ಜೇವರಗಿ ಪಟ್ಟಣದ ಐ.ಬಿ ಗೇಟ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ಮನುಷ್ಯನು ಸಾರ್ವಜನಿಕರಿಗೆ 1-00 ರೂಪಾಯಿಗೆ 80-00 ರೂಪಾಯಿ ಕೊಡುವದಾಗಿ ಹೇಳಿ ಹೋಗಿ ಬರುವ ಸಾರ್ವಜನಕರಿಂದ ಹಣ ಪಡೆದುಕೊಂಡು ಮಟಕಾ ಅಂಕಿ ಸಂಖ್ಯೆ ಚೀಟಿ ಬರೆದು ಕೊಳ್ಳುತ್ತಿರುವದನ್ನು ನೋಡಿ ಖಚಿತ ಪಡಿಸಿಕೊಂಡು ದಾಳಿ ಮಾಡಿ ಅವನಿಗೆ ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ  ಸದ್ದಾಂ ತಂದೆ ಸೋಫಿ ಶೇಖ ಸಾ: ಕನಕದಾಸ ಚೌಕ ಜೇವರಗಿ ಅಂತ ಹೇಳಿದನು.  ಮಟಕಾ ಚೀಟಿ ರೇವಣಸಿದ್ದ ಫಿರೋಜಬಾದ ಇವನಿಗೆ ಕೊಡಿತ್ತೇನೆ ಅಂತ ಹೇಳಿದನು. ಅವನಿಗೆ  ಅಂಗ ಶೋಧ ಮಾಡಲಾಗಿ ಅವನ ಹತ್ತಿರ ನಗದು ಹಣ 2220/-ರೂ ಒಂದು ಮಟಕಾ ಚೀಟಿ ಅ.ಕಿ 00-00 ಒಂದು ಬಾಲ ಪೆನ್ನು ಅ.ಕಿ 00-00 ನೇದ್ದವುಗಳನ್ನು ವಶಪಡಿಸಿಕೊಂಡು ಸದರಿಯವನೊಂದಿಗೆ ಜೇವರಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.