ಹಲ್ಲೆ ಪ್ರಕರಣ :
ಕಮಲಾಪೂರ ಠಾಣೆ : ಶ್ರೀಮತಿ ಜಗದೇವಿ ಗಂಡ ಮಲ್ಲಿಕಾರ್ಜುನ ಕಪ್ಪರಗಿ ಸಾ; ಡೊಂಗರಗಾಂವ ತಾ;ಜಿ; ಕಲಬುರಗಿ ರವರ ಗಂಡ ಮಲ್ಲಿಕಾರ್ಜುನ ನನ್ನ ಮಗ ಮಹೇಶ ಮತ್ತು ಸೊಸೆ ಪ್ರಿಯಾಂಕ
ಇರುತ್ತೆವೆ ನನ್ನ ಗಂಡನಾದ ಮಲ್ಲಿಕಾರ್ಜುನ ಇತನು ಸ್ವಲ್ಪ ಬುದ್ದಿಮಾಂದ್ಯನಿದ್ದು ಜನರ ಸಂಗಡ ಹೇಗೆ
ವರ್ತನೆ ಮಾಡಬೇಕು ಎನ್ನುವ ಬಗ್ಗೆ ಸರಿಯಾದ ತಿಳುವಳಿಕೆ ಇಲ್ಲದವನಾಗಿರುತ್ತಾನೆ.ನಮ್ಮ ಮನೆಯ ಪಕ್ಕದಲ್ಲಿರುವ
ಬಂಡೆಪ್ಪ ರಾಸೂರ, ಮತ್ತು ಸಂಗಪ್ಪ ರಾಸೂರ ಇವರು ಸುಮಾರು ದಿವಸಗಳಿಂದ ನಮ್ಮ ಸಂಗಡ ವೈರತ್ವ ಬೇಳೆಯಿಸಿಕೊಂಡು
ಬಂದಿದ್ದು. ಇರುತ್ತದೆ. ನನ್ನ ಗಂಡನು ಬುದ್ದಿ ಮಾಂಧ್ಯನಾಗಿದ್ದು ಬಂಡೆಪ್ಪನ ಮಕ್ಕಳಾದ ಸುರೇಶ @ ಸುರ್ಯಕಾಂತ, ಸಂಜು, ಮತ್ತು ಸಂಗಪ್ಪ
ರಸೂರೆ ಇವರ ಮಗ ಸತೀಶ ಇವರು ನನ್ನ ಗಂಡನಿಗೆ ಕರೆದುಕೊಂಡು ಹೋಗಿ ಮಧ್ಯ ಕುಡಿಸಿ ಮಾಡಿಸಿ ಅವನಿಂದ ಕೆಲಸ
ಮಾಡಿಸಿಕೊಳ್ಳುತ್ತಾ ಬಂದಿದ್ದು. ನಾನು, ನನ್ನ ಮಗ ಹಾಗೂ ನಮ್ಮ ಅಣ್ಣತಮ್ಮಕಿಯವರು ಕೂಡಿಕೊಂಡು
ಸದರಿಯವರ ಮನೆಗೆ ಹೋಗಿ ನನ್ನ ಗಂಡನಿಗೆ ಮಧ್ಯ ಕುಡಿಸಿ ಅವನಿಂದ ಕೆಲಸ ಮಾಡಿಸಿಕೊಳ್ಳಬೇಡಿರಿ ಅಂತ ತಿಳಿಹೇಳಿದ್ದು, ಆದರು ಕೂಡಾ
ಸದರಿಯವರು ನನ್ನ ಗಂಡನಿಗೆ ಮಧ್ಯ ಕುಡಿಸಿ ಅವನಿಂದ ಕೆಲಸ ಮಾಡಿಸುತ್ತಾ ಬಂದಿದ್ದು ಇರುತ್ತದೆ. ಮೊನ್ನೆ
ದಿನಾಂಕ 06.09.2016 ರಂದು ರಾತ್ರಿ ಸಮಯದಲ್ಲಿ ಸುರ್ಯಕಾಂತ, ಮತ್ತು ಅವನ
ಗೇಳೆಯ ಅಪ್ಪು ಮಠಪತಿ ಕೂಡಿಕೊಂಡು ನನ್ನ ಗಂಡನಿಗೆ ಮಧ್ಯ ಕುಡಿಸಿದ್ದು, ನನ್ನ ಗಂಡ
ಅವರು ಹೇಳಿದ ಕೇಲಸ ಮಾಡದಕ್ಕೆ ಸದರಿಯವರು ನನ್ನ ಗಂಡನಿಗೆ
ಹೊಡಬಡೆ ಮಾಡಿದ್ದು ಇರುತ್ತದೆ. ನಿನ್ನೆ ದಿನಾಂಕ 07.09.2016 ರಂದು ಬೆಳ್ಳಿಗ್ಗೆ 10 ಗಂಟೆಯ
ಸುಮಾರಿಗೆ ನಾನು, ನನ್ನ ಮಗ ಮಹೇಶ, ನಮ್ಮ ಮೈದುನ ರಾಜಕುಮಾರ ಕೂಡಿಕೊಂಡು ಬಂಡೆಪ್ಪ
ರಾಸೂರ ಇವರ ಮನೆಗೆ ಹೋಗಿ ನನ್ನ ಗಂಡನಿಗೆ ಮಧ್ಯ ಕುಡಿಸಿ ಯಾಕೆ ಹೊಡೆದಿದ್ದಿರಿ ಇನ್ನೂಮ್ಮೆ ನನ್ನ ಗಂಡನಿಗೆ
ಮಧ್ಯ ಕುಡಿಸಬೇಡಿರಿ ಅಂತ ಹೇಳಿದ್ದು ಈಗೆ ಆದರೆ ಪೊಲೀಸ ಠಾಣೆಗೆ ಹೋಗಿ ದೂರು ನೀಡುತ್ತೆವೆ ಅಂತ ಹೇಳಿ
ಬಂದಿದ್ದು ಇರುತ್ತದೆ. ನಂತರ ನನ್ನ ಮಗ ಹೋಲಕ್ಕೆ ಹೋಗಿದ್ದು ನಿನ್ನೆ ರಾತ್ರಿ 8 ಗಂಟೆಯ ಸುಮಾರಿಗೆ
ನಾನು ನನ್ನ ಸೊಸೆ ಪ್ರಿಯಾಂಕ ನಮ್ಮ ಮನೆಯ ಮುಂದೆ ಕುಳಿತ್ತಿದ್ದು ಅದೆ ವೇಳೆಗೆ ಬಂಡೆಪ್ಪ ಇವರ ಮನೆಯ
ಮುಂದಿನಿಂದ ನನ್ನ ಮಗ ಮಹೇಶ ಇತನು ನಮ್ಮ ಮನೆಗೆ ಬರುತ್ತಿದ್ದು. ನನ್ನ ಮಗ ಬರುತ್ತಿರುವದನ್ನು ನೋಡಿ
ಬಂಡೆಪ್ಪ ಮತ್ತು ಮಕ್ಕಳಾದ ಸುರೇಶ @ ಸುರ್ಯಕಾಂತ, ಸಂಜು, ಮತ್ತು ಸಂಗಪ್ಪ
ರಸೂರೆ, ಸತೀಶ ರಾಸೂರೆ ಹಾಗೂ ಅಪ್ಪು ಮಠಪತಿ ಕೂಡಿಕೊಂಡು ನನ್ನ ಮಗನಿಗೆ ತಡೆದು ನಿಲ್ಲಿಸಿ
ರಂಡಿ ಮಗನೆ ನೀನು ನಮ್ಮ ಮನೆಗೆ ಬಂದು ನಿಮ್ಮ ಅಪ್ಪನಿಗೆ ಸೇರಿ ಕುಡಿಸಿ ಕೇಲಸ ಮಾಡಿಸಿಕೊಳ್ಳಬೇಡ ಅಂತ
ಹೇಳುತ್ತಿ ಸೂಳಿ ಮಗನೆ ನಿನ್ನ ಸೊಕ್ಕು ಬಹಳ ಆಗಿದೆ, ನೀನಗೆ ಮೊದಲು ಖಲಾಸ ಮಾಡುತ್ತೆವೆ ಯಾರು
ನಮ್ಮ ಸೆಂಟಾ ಕಿತ್ತುತ್ತಾರೆ ನೋಡುತ್ತೇವೆ ಅಂತ ಎಲ್ಲರು ಕೂಡಿಕೊಂಡು ಬೈಯುತ್ತಾ ಬಂಡೆಪ್ಪ, ಸಂಜು ಮತ್ತು
ಸತೀಶ ಇವರು ನನ್ನ ಮಗನಿಗೆ ಹಿಡಿದುಕೊಂಡಿದ್ದು, ಸಂಗಪ್ಪ ಇತನು ಜನರು ಬರುತ್ತಿದ್ದಾರೆ
ಇಲ್ಲ ಅಂತ ನೋಡುತ್ತಿದ್ದು, ಅದೆ ವೇಳೆಗೆ ಅಪ್ಪು ಮಠಪತಿ ಇತನು ತನ್ನ ಹತ್ತಿದ
ಇದ್ದ ಚಾಕುವನ್ನು ಸುರೇಶ ಇತನ ಕೈಯಲ್ಲಿ ಕೊಟ್ಟಿದ್ದು ಆಗ ಎಲ್ಲರು ಕೂಡಿಕೊಂಡು ಸರೇಶ ಇತನಿಗೆ ಈ ರಂಡಿ
ಮಗನಿಗೆ ಖಲಾಸ ಮಾಡು ಅಂತ ಹೇಳಿದ್ದು. ಆಗ ಸುರೇಶ ಇತನು ನನ್ನ ಮಗನಿಗೆ ಕೊಲೆ ಮಾಡುವ ಉದ್ದೇಶದಿಂದ
ತನ್ನ ಕೈಯಲ್ಲಿದ ಚಾಕುನಿಂದ ನನ್ನ ಮಗನ ಹೊಟ್ಟೆಗೆ ಜೋರಾಗಿ ಹೊಡಿದಿದ್ದು ಆಗ ನನ್ನ ಮಗ ಚೀರಾಡ ನೇಲದ
ಮೇಲೆ ಬಿದಿದ್ದು. ನನ್ನ ಮಗ ಸತ್ತಿದ್ದಾನೆ ಅಂತ ತಿಳಿದು ಸದರಿಯವರು ನನ್ನ ಮಗನಿಗೆ ಅಲ್ಲೆ ಬಿಟ್ಟು
ಹೋಗಿದ್ದು, ನಂತರ ನಾನು, ನನ್ನ ಸೊಸೆ
ಮತ್ತು ನಮ್ಮ ಮೈದುನ ರಾಜಕುಮಾರ ಕೂಡಿಕೊಂಡು ನನ್ನ ಮಗನ ಹತ್ತಿರ ಹೋಗಿ ನೋಡಲು ನನ್ನ ಮಗನ ಹೊಟ್ಟೆಯ
ಕೇಳ ಭಾಗಕ್ಕೆ ಭಾರಿ ರಕ್ತಗಾಯವಾಗಿ ಕರಳು ಹೊರಗೆ ಬಂದಿದ್ದು, ನನ್ನ ಮಗ ಬೇಹುಸ ಆದಂತೆ ಆಗಿದ್ದು, ಅದೆ ವೇಳೆಗೆ
ನಮ್ಮ ನೇಗೆಣಿ ಕಸ್ತೂರಬಾಯಿ, ಮೈದುನ ಹಣಮಂತ ಮತ್ತು ಇತರರು ಅಲ್ಲಿಗೆ ಬಂದಿದ್ದು.
ನನ್ನ ಮೈದು ರಾಜಕುಮಾರ ಇತನು 108 ಅಂಬುಲೇನ್ಸ ವಾಹನಕ್ಕೆ ಕರೆ ಮಾಡಿದ್ದು ಸ್ವಲ್ಪ
ಸಮಯದಲ್ಲಿ ಅಂಬುಲೇನ್ಸ ಸ್ಥಳಕ್ಕೆ ಬಂದಿದ್ದು ನಾನು, ರಾಜಕುಮಾರ ಮತ್ತು ನೇಗೆಣಿ ಕಸ್ತೂರಬಾಯಿ
ಕೂಡಿಕೊಂಡು ನನ್ನ ಮಗನಿಗೆ ಅಂಬುಲೇನ್ಸದಲ್ಲಿ ಹಾಕಿಕೊಂಡು ಉಪಚಾರ ಕುರಿತು ಕಲಬುರಗಿ ಬಸವೇಶ್ವರ ಆಸ್ಪತ್ರೇಗೆ
ಸೇರಿಕೆ ಮಾಡಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
ಕ್ರಿಮಿನಾಶಕ ಸೇವಿಸಿ ಆತ್ಮ ಹತ್ಯೆ ಮಾಡಿಕೊಂಡ ಪ್ರಕರಣ :
ನೆಲೋಗಿ ಠಾಣೆ : ಶ್ರೀಮತಿ
ಸುಸಲಾಬಾಯಿ ಗಂಡ ಗುರುಶಾಂತಪ್ಪಗೌಡ ಮಾಲಿಪಾಟೀಲ ಸಾ|| ಯಾತನೂರ ಕುರನಳ್ಳಿ ತಾ||
ಜೇವರ್ಗಿ ಇವರ ಗಂಡ
ಗುರುಶಾಂತಪ್ಪಗೌಡ ಇವರ ಹೆಸರಿನಿಂದ ನಮ್ಮೂರ ಸೀಮಾಂತರ ಜಮೀನು ಸರ್ವೇ ನಂ. 14 ರಲ್ಲಿ 2 ಎಕರೆ 6
ಗುಂಟೆ ಮತ್ತು ಸರ್ವೇ ನಂ. 3 ರಲ್ಲಿ 2 ಎಕರೆ 14 ಗುಂಟೆ ಜಮೀನು ಇರುತ್ತದೆ. ನನ್ನ ಗಂಡನು
ಕೃಷಿಗಾಗಿ ಹಾಗೂ ಸಂಸಾರದ ಅಡಚಣೆಗಾಗಿ ನಮ್ಮ ಹೊಲಗಳ ಮೇಲೆ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ
ಅರಳಗುಂಡಗಿಯಲ್ಲಿ 2,00,000=00 ರೂಪಾಯಿ ಮತ್ತು ಕಾಸರಬೋಸಗಾ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ
ಸಂಘದಲ್ಲಿ 15,000=00 ರೂಪಾಯಿ ಸಾಲ ಮಾಡದ್ದು, ಅಲ್ಲದೆ ಊರ ಮನೆಯವರ ಹತ್ತಿರ 2,85,000=00 ರೂಪಾಯಿ ಕೈಗಡದ ಹಾಗೆ ತಗೆದುಕೊಂಡಿದ್ದು
ಇರುತ್ತದೆ. ಹೊದ ವರ್ಷ ಮಳೆ ಆಗದೆ ಬೆಳೆ ಬೆಳೆಯದೆ ಇದ್ದುದ್ದರಿಂದ ಮಾಡಿದ ಸಾಲ ಹೇಗೆ ತೀರಿಸಬೇಕು
ಅಂತಾ ನನ್ನ ಗಂಡನು ಯಾವಾಗಲು ಒಬ್ಬನೆ ಚಿಂತೆ
ಮಾಡುತ್ತಾ ಕುಳಿತುಕೊಳ್ಳುತಿದ್ದನು, ನನ್ನ ಗಂಡನಿಗೆ ನಾನು ನನ್ನ ಮಗ
ಸಿದ್ದಲಿಂಗಪ್ಪ ಇಬ್ಬರೂ ಕೂಡಿ ಈ ವರ್ಷ ಸಾಲ ತೀರಿಸಿದರಾಯುತು ಅದಕ್ಕೆ ಯಾಕೆ ಚಿಂತೆ ಮಾಡುತ್ತಿ
ಅಂತಾ ಸಾಂತ್ವನ ಹೇಳಿದ್ದೆವು.ದಿನಾಂಕ: 08/09/2016 ರಂದು ಬೆಳಿಗ್ಗೆ 06-00 ಗಂಟೆಗೆ ನನ್ನ ಗಂಡ
ಗುರುಶಾಂತಪ್ಪಗೌಡ ಹೊಲಕ್ಕೆ ಹೋಗುತ್ತೇನೆ ಅಂತಾ
ಮನೆಯಿಂದ ಹೋಗಿದ್ದನು. ಬೆಳಿಗ್ಗೆ 07-30 ಗಂಟೆಯ ಸುಮಾರಿಗೆ ನಮ್ಮೂರ ಸಿದ್ದಪ್ಪ ಜೋಗೂರ ಈತನು
ನಮ್ಮ ಸಂಭಂದಿ ಶರಣಗೌಡನಿಗೆ ಪೋನ ಮಾಡಿ ತಿಳಿಸಿದ್ದೆನೆಂದರೆ, ನಿಮ್ಮ ದೊಡ್ಡಪ್ಪ ಅವನ ಹೊಲದಲ್ಲಿ ಕ್ರೀಮಿನಾಶಕ ಔಷದಿ
ಸೇವನೆ ಮಾಡಿ ಮೃತಪಟ್ಟಿದ್ದಾನೆ ಅಂತಾ ತಿಳಿಸಿರುತ್ತಾನೆ ಅಂತಾ ನನಗೆ ಹೇಳಿದಾಗ ಗಾಬರಿಯಾಗಿ ನಾನು, ನನ್ನ ಸೊಸೆ ರೇಣುಕಾ, ಶರಣಗೌಡ ಎಲ್ಲರೂ ಕೂಡಿ ನಮ್ಮ ಹೊಲಕ್ಕೆ ಹೋಗಿ
ನೋಡುವಷ್ಟರಲ್ಲಿ ನನ್ನ ಗಂಡ ಮೃತ ಪಟ್ಟಿದ್ದನು, ನನ್ನ ಗಂಡನು ಹೋದ ವರ್ಷ ಮಳೆ ಆಗದೆ ಇದುದ್ದರಿಂದ ಬೆಳೆ
ಬೆಳೆಯದೆ ಇದ್ದುದ್ದರಿಂದ ಕೃಷಿಗಾಗಿ ಹಾಗೂ ಸಂಸಾರದ ಅಡಚಣೆಗಾಗಿ ಮಾಡಿದ ಸಾಲ ತೀರಿಸಲಾಗದೆ ಮಾಡಿದ
ಸಾಲ ಹೇಗೆ ತೀರಿಸಬೇಕು? ಅಂತಾ ಮನಃನೊಂದು ನಮ್ಮ ಹೊಲದಲ್ಲಿ ಕ್ರಿಮಿನಾಶಕ ಔಷದಿ ಸೇವನೆ ಮಾಡಿ ಆತ್ಮ ಹತ್ಯ
ಮಾಡಿಕೊಂಡಿರುತ್ತಾನೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ಜೇವರಗಿ ಠಾಣೆ : ಶ್ರೀ
ಬಸವರಾಜ ತಂದೆ ದೊಡ್ಡಪಗೌಡ ಮಂದರವಾಡ ಸಾ: ಮಂದರವಾಡ ಹಾ.ವ ದುಗ್ಗನಕಟ್ಟಿ ಜೇವರಗಿ ಇವರು ದಿನಾಂಕ: 22.08.2016 ರಂದು ರಾತ್ರಿ ವೇಳೆಯಲ್ಲಿ ತನ್ನ ಮೊಟಾರ ಸೈಕಲ ನಂ
ಕೆಎ-32 ಇಜಿ-2993 ಅದರ ಚಸ್ಸಿ ನಂ MBLHA10AMEHC06454 ಇಂಜಿನ ನಂ HA01EJEHC31678 ನೇದ್ದು ಅ.ಕಿ 25,000/-ರೂ
ಕಿಮ್ಮತಿನದು ಮನೆ ಮುಂದೆ ನಿಲ್ಲಿಸಿ,
ಮನೆಯಲ್ಲಿ
ಮಲಗಿಕೊಂಡಿದ್ದೇನು. ಬೆಳಿಗ್ಗೆ ಅಂದರೆ ದಿನಾಂಕ: 23.08.2016 ರಂದು ಮುಂಜಾನೆ 06.00 ಗಂಟೆಗೆ ಎದ್ದು ಹೊರಗೆ ಬಂದು ನೋಡಲು ಮನೆಯ ಮುಂದೆ ನಿಲ್ಲಿಸಿದ
ನನ್ನ ಮೋಟಾರ ಸೈಕಲ ಕಾಣಲಿಲ್ಲಾ,
ನಾನು ಗಾಬರಿಯಾಗಿ ಮನೆಯೊಳಗೆ
ಹೋಗಿ ನನ್ನ ಹೆಂಡತಿ ಬಸಮ್ಮ ಇವಳಿಗೆ ವಿಷಯ ತಿಳಿಸಿ ನಂತರ ಪಕ್ಕದ ಮನೆಯವರಿಗೆ ವಿಚಾರಿಸಿದ್ದೇವು.
ಆದರು ಮೊಟಾರ ಸೈಕಲ ಸಿಗಲಿಲ್ಲಾ. ಆ ನಂತರ ನಾನು ಮತ್ತು ನಮ್ಮ ಅಳಿಯ ನಾನಾಗೌಡ ತಂದೆ ಪ್ರಭುರಾವ
ಹಳಿಮನಿ, ಮಾವ ನಿಂಗಣ್ಣ ಹಳಿಮನಿ ಮೂವರು ಕೂಡಿ ಜೇವರಗಿ
ಪಟ್ಟಣದಲ್ಲಿ ಹುಡುಕಾಡಿದ್ದೇವು. ಆದರೂ ಮೊಟಾರ ಸೈಕಲ ಸಿಕ್ಕಿರುವದಿಲ್ಲ, ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.