POLICE BHAVAN KALABURAGI

POLICE BHAVAN KALABURAGI

12 June 2016

Kalaburagi District Reported Crimes

ಹಲ್ಲೆ ಪ್ರಕರಣಗಳು :
ಯಡ್ರಾಮಿ ಠಾಣೆ : ಶ್ರೀ ದಸ್ತಗಿರ ತಂದೆ ಮಹೆಬೂಬಸಾಬ ಖಾಜಿ ಸಾ:ಅರಳಗುಂಡಗಿ ಗ್ರಾಮ ತಾ:ಜೆವರಗಿ ರವರ ತಂದೆಯವರಿಗೆ ಇಬ್ಬರೂ ಹೆಂಡಂತಿರು ಇದ್ದು, ಮೊದಲನೆ ತಾಯಿ ಹೊಟ್ಟೆಯಿಂದ ಇಬ್ಬರು ಗಂಡು ಮಕ್ಕಳು, ಎರಡನೆ ತಾಯಿ ಹೊಟ್ಟೆಯಿಂದ ಆರು ಜನ ಗಂಡ ಮಕ್ಕಳು ಇರುತ್ತೇವೆ. ನಮ್ಮ ತಂದೆಯವರು ಇರುವಾಗ ಸರಕಾರದಿಂದ 4 ಎಕರೆ ಜಮೀನು ಕೊಟ್ಟಿರುತ್ತದೆ. ನಮ್ಮ ತಂದೆಯವರು ಮನೆಗೆ ಹಿರಿಯ ಮಗನಾದ ಖಾಜಾಪಟೇಲ ತಂದೆ ಮಹೆಬೂಬಸಾಬ ಖಾಜಿ ಇವರ ಹೆಸರಿನಿಂದ ಆ ಜಮೀನು ಈಗ ಸುಮಾರು 30 ವರ್ಷಗಳ ಹಿಂದೆ ಮಾಡಿರುತ್ತಾರೆ. ಆಗ ನಾವೆಲ್ಲರೂ ಸಣ್ಣವರಿದ್ದೇವು. ನಮ್ಮ ತಂದೆ ತಾಯಿಯವರು ಮೃತ ಹೊಂದಿದ್ದು, ಹಿರಿಯ ಮಗನಾದ 1] ಖಾಜಾಪಟೇಲ 2] ಉಸಮಾನಸಾಬ ಇವರಿಬ್ಬರು ಬೇರೆಯಾಗಿದ್ದು, ಉಳಿದ ಆರು ಜನರು ಕೂಡಿಯೇ ಇದ್ದು, ನಾವು ಜಮೀನು ಬಿತ್ತಿ ಬೆಳೆಯುತ್ತಿದ್ದೇವೆ. ಜಮೀನು ನಮ್ಮ ಕಬ್ಜದಲ್ಲಿರುತ್ತದೆ. ಸರಕಾರ ಕೊಟ್ಟಂತ ಹೊಲವು ನಾವೆ ಸಾಗುವಳಿ ಮಡುತ್ತಾ ಬಂದಿರುತ್ತೇವೆ. ಖಾಜಾಪಟೇಲ ಇತನ ಹೆಸರಿನಿಂದ ಇದ್ದ ಜಮೀನಿನ ಮೇಲೆ ಸಿಂಡಿಕೇಟ ಬ್ಯಾಂಕಿನಲ್ಲಿ 17 ಲಕ್ಷ ಟ್ರ್ಯಾಕ್ಟರ ಸಾಲ ಮಾಡಿದ್ದಾನೆ. ಅಲ್ಲದೆ ಅರಳಗುಂಡಗಿ ಹೊಲ ಸರ್ವೆ ನಂ: 171 ಹೊಲವು ನಮ್ಮ ಪಾಲಿಗೆ ಬಂದಿದ್ದು, ಆ ಹೊಲವು ಖಾಜಾಪಟೇಲ ಇತನ ಹೆಸರಿನಲ್ಲಿದ್ದು, ಇಂದಿಲ್ಲ ನಾಳೆ ಮಾಡಿಕೊಡುತ್ತಾನೆ ಅಂತಾ ಸುಮ್ಮನಿದ್ದೇವು. ದಿನಾಂಕ: 09-06-16 ರಂದು ಮುಂಜಾನೆ 11:00 ಗಂಟೆಗೆ ಜಮಿನಿನಲ್ಲಿ ನಾನು ಬಿತ್ತುವಾಗ 1] ಖಾಜಾಪಟೇಲ ತಂದೆ ಮಹೆಬೂಬಸಾಬ ಖಾಜಿ 2] ಕಮಲಪಟೇಲ ತಂದೆ ಖಾಜಾಪಟೇಲ ಖಾಜಿ ,  3] ದವಲಬಿ ಗಂಡ ಖಾಜಾಪಟೇಲ ಖಾಜಿ 4] ಕಾಶೀಮ ತಂದೆ ಇಮಾಮಸಾಬ ಬುಕ್ಕದ 5] ರಾಜಬಿ ಗಂಡ ಕಾಶಿಮ ಬುಕ್ಕದ 6] ಅಮೀರಖಾನ ತಂದೆ ಕಾಶೀಮ ಬುಕ್ಕದ 7] ಸಾಹೇಬಪಟೇಲ ತಂದೆ ಮಹೇಬೂಬ ಸೋಮಜಾಳ 8] ದವಲಸಾಬ ತಂದೆ ಮಹೆಬೂಬಸಾಬ ಸೋಮಜಾಳ 9] ಮಕ್ಕಾಬಿ ಗಂಡ ಮಹೇಬೂಬ ಸೋಮಜಾಳ ಸಾ:ಎಲ್ಲರೂ ಅರಳಗುಂಡಗಿ  10] ಇಮಾಮಾಬಿ ಗಂಡ ಉಸಮಾನ ನಾಡಗೌಡ ಸಾ:ಗೊಬರಡಗಿ 11] ಉಸಮಾನ ತಂದೆ ಖಾಜಾಪಟೇಲ ನಾಡಗೌಡ ಸಾ:ಗೊಬರಡಗಿ 13] ಬುಡ್ಡಾ ತಂದೆ ಅಬ್ಬಾಸಲಿ ಕುರಿ ಸಾ:ಖೈನೂರ 14] ಬಸಿರಾ ಗಂಡ ಬುಡ್ಡಾ ಕುರಿ ಸಾ:ಖೈನೂರ 15] ಶಬಾನಾ ಗಂಡ ಲಾಲಅಹಮದ ಸಿರಶಾಡ ಸಾ: ಮದರಿ 16] ಲಾಲಅಹ್ಮದ ತಂದೆ ಹಸನ ಸಿರಶಾಡ 17] ಮಾಬಣಿ ಗಂಡ ಬುಡ್ಡಾ ಶೀತನೂರ ಸಾ:ಬ್ರಹ್ಮದೇವನಮಡು 18] ಖಾದರಪಟೇಲ ತಂದೆ ನಬಿಸಾಬ ಶಿತನೂರ ಸಾ:ಬ್ರಹ್ಮದೇವನಮಡು 19] ಹಸನಪಟೇಲ ತಂದೆ ನಬಿಸಾಬ ಶೀತನೂರ ಸಾ:ಬ್ರಹ್ಮದೇವನಮಡು  ಹೀಗೆಲ್ಲರೂ ಹೊಲದಲ್ಲಿ ಬಂದು ನನಗೆ ಅವರಲ್ಲಿ ಖಾಜಾಪಟೇಲ ಇತನು ಹೊಲದ ವಿಷಯದಲ್ಲಿ ಕೊಲೆ ಮಾಡುವ ಉದ್ದೇಶದಿಂದ ನನಗೆ  ಏ ಬೋಸಡಿ ಮಗನೆ ನಮ್ಮ ಹೆಸರಿನಲ್ಲಿದ್ದ ಹೊಲ ನಿನೇಕೆ ಬಿತ್ತುತ್ತಿದ್ದಿ ಅಂತಾ ಬೈದು ಕಮಲಪಟೇಲ ಇತನು ಕಟ್ಟಿಗೆಯಿಂದ ನನ್ನ ತಲೆಗೆ ಹೊಡೆದು ಮರಣಾಂತಿಕ ಹಲ್ಲೆ ಮಾಡಿ ಭಾರಿ  ರಕ್ತಗಾಯ ಮಾಡಿದನು. ಅಲ್ಲದೆ ಖಾಜಾಪಟೇಲ, ಕಾಶೀಮ, ಸಾಹೇಬಪಟೇಲ, ದವಲಸಾಬ, ಮಹೆಬೂಬ, ಅಮೀರಖಾನ, ಉಸಮಾನ, ಬುಡ್ಡಾ, ಲಾಲಅಹ್ಮದ , ಖಾದರಪಟೇಲ, ಹಸನಪಟೇಲ ಹೀಗೆಲ್ಲರೂ ನನಗೆ ಒತ್ತಿ ಹಿಡಿದುಕೊಂಡು ಕೈಯಿಂದ ಮೈ,ಕೈಗೆ, ಬೆನ್ನಿಗೆ ಹೊಟ್ಟೆಗೆ ಹೊಡೆದು ಗುಪ್ತ ಪೆಟ್ಟು ಮಾಡಿರುತ್ತಾರೆ. ಜಗಳವನ್ನು ನನ್ನ ಅತ್ತಿಗೆಯಾದ  ಹಜರತಬಿ ಇವಳು ಬಿಡಿಸಲು ಬಂದಾಗ ದವಲಬಿ, ರಾಜಬಿ, ಮಕ್ಕಾಬಿ, ಇಮಾಮಬಿ, ಬಸಿರಾ, ಶಬಾನಾ, ಮಾಬಣ್ಣಿ, ಹೀಗೆಲ್ಲರೂ ಕೂಡಿಕೊಂಡು ನನ್ನ ಅತ್ತಿಗೆಗೆ ಕೈಯಿಂದ ಮೈ ಕೈಗೆ ಹೊಟ್ಟೆಗೆ , ಬೆನ್ನಿಗೆ  ಹೊಡೆ ಬಡೆ ಮಾಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಯಡ್ರಾಮಿ ಠಾಣೆ : ಶ್ರೀ ಖಾಜಾಪಟೇಲ ತಂದೆ ಮಹಿಬೂಬ ಖಾಜಿ :ಅರಳಗುಂಡಗಿ ಗ್ರಾಮ ತಾ:ಜೆವರಗಿ  ರವರ ತಂದೆಯಾದ ಮಹೆಬೂಬ ಖಾಜಿ ಇತನಿಗೆ ಇಬ್ಬರೂ ರಾಜಾಬಿ ಮತ್ತು ಸಾಹೇಬಿ ಅಂತಾ ಹೆಂಡರಿದ್ದರು ಮಹೆಬೂಬಸಾಬನ ಮೊದಲನೆ ಹೆಂಡತಿ ಅಂದರೆ ರಾಜಾಬಿ ನನ್ನ ತಾಯಿಗೆ ನಾನು ಮತ್ತು ಉಸಮಾನಪಟೇಲ ಅಂತಾ ಇಬ್ಬರೂ ಮಕ್ಕಳಿದ್ದು, ಎರಡನೆ ಹೆಂಡತಿ ಅಂದರೆ ಸಾಹೇಬಿ ಇವಳಿಗೆ ಒಟ್ಟು 11 ಮಕ್ಕಳಿದ್ದು, ಅವರಲ್ಲಿ 6 ಜನ ಗಂಡು ಮಕ್ಕಳು ಮತ್ತು 5 ಜನ ಹೆಣ್ಣು ಮಕ್ಕಳಿರುತ್ತಾರೆ.  ಸದರಿ ನನ್ನ ತಂದೆಗೆ ಒಟ್ಟು 64 ಎಕರೆ ಜಮೀನು ಇದ್ದು, ಆ ಒಂದು ಜಮೀನು ನಮ್ಮೆಲರ ಪಾಲಿಗೆ ವಾಟ್ನಿಯಾಗಬೇಕಾಗಿತ್ತು. ಆದರೆ 1] ಸಾಹೇಬಪಟೇಲ ತಂದೆ ಮಹೆಬೂಬ ಖಾಜಿ 2] ಮಕ್ಬೂಲ ತಂದೆ ಮಹೇಬೂಬ ಖಾಜಿ 3] ಹಾಜಿಕರಿಮ ತಂದೆ ಮಹೇಬೂಬ ಖಾಜಿ 4] ಇಂಬ್ರಾಹಿಮ ತಂದೆ ಮಹೆಬೂಬ ಖಾಜಿ 5] ಅಬ್ದುಲಗನಿ ತಂದೆ ಮಹೆಬೂಬ ಖಾಜಿ 6] ದಸ್ತಗಿರ ತಂದೆ ಮಹೇಬೂಬ ಖಾಜಿ ಇವರೆಲ್ಲೆರು ಮಗನೆ ಇನ್ನೊಮ್ಮೆ ಹೊಲದಲ್ಲಿ ವಾಟ್ನಿ ಕೇಳಿದೆ ಅಂದರೆ ನಿನಗೆ ಇಡಂಗಿಲ್ಲ. ಅಂದಾಗ ನಾನು ನನ್ನ ಜೀವಕ್ಕ ಹೆದರಿ ನಾನು ಸುಮ್ಮನಾದೆ . ಸದರೆ ಎಲ್ಲಾ 64 ಎಕರೆ ಜಮೀನು ನಮ್ಮ ಅಣ್ಣ ತಮ್ಮಂದಿರರೆ ವಹಿವಾಟು ಮಾಡುತ್ತಿದ್ದಾರೆ. ನಾನು ಒಬ್ಬ ಬಡ ರೈತ ಎಂದು ಪರಿಗಣಿಸಿ ಕರ್ನಾಟಕ ಸರಕಾರದವರು ಜೇವರಗಿ ತಾಲೂಕಿನ ಅರಳಗುಂಡಗಿ ಗ್ರಾಮದಲ್ಲಿರುವ ಸರ್ವೆ ನಂ 171 ರಲ್ಲಿ ನನಗೆ 4 ಎಕರೆ ಜಮೀನು ಮಂಜೂರು ಮಾಡಿರುತ್ತದೆ. ಸದರಿ ಜಮೀನು ಮಂಜೂರಾದಾಗಿನೀಂದ ಮೇಲಿನ 6 ಜನರು ನನಗೆ ಸರಕಾರದಿಂದ ಬಂದ 4 ಎಕರೆ ಜಮೀನು ನಮ್ಮ ಹೆಸರಲ್ಲೆ ಬಿಟ್ಟುಕೊಡು ಬಾಂಡ ಪೆಪರ ಮೇಲೆ ಸಹಿ ಮಾಡು, ಇಲ್ಲಾ ಅಂದರೆ ಇದ್ದೊಬ್ಬ ಮಗನ ಮತ್ತು ನಿನಗೆ ಖಲಾಸ ಮಾಡಿ ಬಿಟ್ರ 4 ಎಕರೆ ಜಮೀನು ನಮಗೆ ಬರತಾದ ಅಂತಾ ಜೀವದ ಬೆದರಿಕೆ ಹಾಕುತ್ತಿದ್ದರು. ಹೀಗಿರುವಾಗ ನಿನ್ನೆ ದಿವಸ ಮತ್ತು ದಿನಾಂಕ; 09-06-2016 ಗುರುವಾರ ಬೆಳಗ್ಗೆ 11 ಗಂಟೆಗೆ ನಾನು ಮತ್ತು ನನ್ನ ಹೆಂಡತಿ ದಾವಲಬಿ ನನ್ನ ಮಗ ಕಮಾಲಪಟೇಲ ಎಲ್ಲರೂ ಕೂಡಿಕೊಂಡು ನಮ್ಮ ಹೊಲಕ್ಕೆ ಹೋದಾಗ ಅಲ್ಲಿ 1] ಸಾಹೇಬಪಟೇಲ 2]ಮಕ್ಬೂಲ 3] ಹಾಜಿಕರಿಮ 4] ಇಬ್ರಾಹಿಮ 5] ಅಬ್ದುಲಗನಿ 6] ದಸ್ತಗಿರ 7] ನಗುಮಾ ಗಂ ಮಕ್ಬುಲ ಖಾಜಿ 8] ಸದ್ದಾಮ ತಂದೆ ಮಕ್ಬುಲ ಖಾಜಿ 9] ಜಿಲಾನಿ ತಂದೆ ಮಕ್ಬುಲ ಖಾಜಿ 10] ಮಮತಾಜಬಿ ಗಂ ಸಾಹೇಬಪಟೇಲ ಖಾಜಿ 11] ಜಾವೀಧ ತಂದೆ ಸಾಹೇಬಪಟೇಲ್ 12] ವಾಹಿದಪಟೇಲ ತಂದೆ ಸಾಹೇಬಪಟೇಲ 13] ಹಜುಮಾ ಗಂ ಹಾಜಿಕರಿಮ ಖಾಜಿ 14] ಚಾಂದ ತಂದೆ ಹಾಜಿಕರಿಮ 15] ಸೂರಾಜ ತಂದೆ ಹಾಜಿಕರಿಮ 16] ಕೈರುನಾಬಿ ಗಂಡ ಇಬ್ರಾಹಿಮ ಖಾಜಿ 17] ಇಸೂಫ್ ತಂದೆ ಇಬ್ರಾಹಿಮ ಇವರೆಲ್ಲರೂ ಕೂಡಿಕೊಂಡು ನಮ್ಮ ಹೊಲದಲ್ಲಿ ಇದ್ದರು. ಮತ್ತು ನಮ್ಮ 4 ಎಕರೆ ಜಮೀನು ಬಿತ್ತುತ್ತಿದ್ದರು. ಆಗ ನಾವು ಮೇಲಿನವರನ್ನು ಯಾಕೆ ನಮ್ಮ ಹೊಲ ಬಿತ್ತುತ್ತಿದ್ದಿರಿ ಈಗಾಗಲೆ ನಿಮ್ಮ ಸಹವಾಸ ಬೇಡ ಅಂತಾ 64 ಎಕರೆ ಜಮೀನು ನಿಮಗೆ ಬಿಟ್ಟು ಕೊಟ್ಟಿದಿನಿ ಅಂತಾ ಅಂದಾಗ ಅಬ್ದುಲಗನಿ ತಂದೆ ಮಹೇಬೂಬ ಖಾಜಿ ಇತನು ಏ ರಂಡಿ ಮಗನಾ ನಿನಗ ಎಷ್ಟು ಸಲ ಹೇಳೀದ್ದೇನೊ ಮಗನಾ ಹೊಲಕ್ಕ ಬರಬ್ಯಾಡ ಅಂತಾ ಅಂದವನೆ ಕೊಡಲಿಯಿಂದ ನನ್ನನ್ನು ಹೊಡೆಯುವಾಗ ನಾನು ಅಂಜಿ ನನ್ನ ಎಡಗೈ ಮೇಲೆ ಎತ್ತಿದ್ದಾಗ ಕೊಡಲಿಯ ಎಟನ್ನು ಹೆಬ್ಬಟ್ಟು ಮತ್ತು ತೋರು ಬೆರಳಿನ ಮಧ್ಯ ಬಿತ್ತು ಆಗ ನಮ್ಮ ಅಪ್ಪನಿಗೆ ಯಾಕ ಹೊಡಿತೀರಿ ಅಂತಾ ಅಂದಾಗ ನನ್ನ ಮಗನಿಗೂ ಕೂಡಾ ಕೊಡಲಿಯಿಂದ ಕೊಲೆ ಮಾಡುವ ಉದ್ದೇಶದಿಂದ ಹೆಡಕಿನ ಮೇಲೆ ಹೊಡೆಯುವಾಗ ಸ್ವಲ್ಪ ತಲೆ ಹೋಳು ಮಾಡಿದ್ದರಿಂದ ನನ್ನ ಮಗನ ಮೂಗಿನ ಬಲಸೊಳ್ಳೆಗೆ ಭಾರಿ ಗಾಯವಾಗಿರುತ್ತದೆ. ಆವಾಗ ನನ್ನ ಹೆಂಡತಿ ಬಿಡಿಸಲು ಬಂದಾಗ ನೀ ಬಂದಿದಿ ರಂಡಿ ಅಂತಾ ಹೇಳಿ ಮಕ್ಬೂಲ ಇತನು ಬಡಿಗೆಯಿಂದ ನನ್ನ ಹೆಂಡತಿಯ ಎಡಗೈ ಮೇಲೆ ಹೊಡೆದನು. ಮತ್ತು ಹಾಜಿಕರಿಮ , ಇಬ್ರಾಹಿ, ದಸ್ತಗಿರ, ಸದ್ದಾಮ ,ಜಿಲಾನಿ, ಜಾವಿಧ, ವಾಹಿದ, ಚಾಂದ, ಸುರಾಜ, ಈಸೂಫ ಇವರೆಲ್ಲರು ಕೂಡಿ ಹೊಲದಲ್ಲಿರುವ ಹಿಡಿಗೈ ಅಳತೆಯ ಗುಂಡುಗಲ್ಲಿನಿಂದ ನನ್ನ ಬೆನ್ನಿನ ಮೇಲೆ ಚೆಪ್ಪೆಯ ಮೇಲೆ , ತೋಡೆಯ ಮೇಲೆ ಹೊಡೆದು ಜೀವದ ಭಯ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.