POLICE BHAVAN KALABURAGI

POLICE BHAVAN KALABURAGI

30 November 2014

Kalaburagi District Reported Crimes

ಅಪಘಾತ ಪ್ರಕರಣಗಳು :
ಜೇವರ್ಗಿ ಠಾಣೆ : ಶ್ರೀ ಬಸ್ಸುಗೌಡ ತಂದೆ ಅಮೃತಗೌಡ ಬಿರದಾರ ಸಾ: ಗಂವ್ಹಾರ ದಿನಾಂಕ 10/09/2014 ರಂದು ನಾನು ಮತ್ತು ನನ್ನ ಕಾಕನ ಮಗ ಕರಬಸಣ್ಣ ಬಿರಾದಾರ ಇತನೊಂದಿಗೆ  ಆತನ ವೇತನ ಪಡೆಯಲು ನನ್ನ ಮೋಟಾರ ಸೈಕಲ್ ಮೇಲೆ ಜೇವರ್ಗಿಗೆ ಬರುತ್ತಿದ್ದಾಗ ಮದ್ಯಾಹ್ನ 4-00 ಗಂಟೆಗೆ ಜೇವರ್ಗಿ ಶಾಹಾಪುರ ರಸ್ತೆ ಗಂವ್ಹಾರ ಕ್ರಾಸ್ ಹತ್ತಿರ ಕರಬಸಣ್ಣ ಇತನಿಗೆ ಲಘು ಶಂಕೆ ಮಾಡುವುದಕ್ಕಾಗಿ ಮೋಟಾರ ಸೈಕಲ್ ನಿಲ್ಲಿಸಿದೆನು ಕರಬಸಣ್ಣ ಇತನು ರಸ್ತೆ ದಾಟುವಾಗ ಜೇವರ್ಗಿ ಕಡೆಯಿಂದ ಮೋಟಾರ ಸೈಕಲ್ ನಂ ಕೆಎ-32-ಕೆ-6221 ನೇದ್ದರ ಚಾಲಕನು ತನ್ನ ಮೋಟಾರ ಸೈಕಲ್‌ನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಕರಬಸಣ್ಣನಿಗೆ ಡಿಕ್ಕಿ ಪಡಿಸಿ ಭಾರಿ ಗಾಯಪಡಿಸಿ ಓಡಿ ಹೋಗಿರುತ್ತಾನೆ ನಂತರ ನಾನು ಖಾಸಗಿ ಅಂಬುಲೇನ್ಸದಲ್ಲಿ ಕರಬಸಣ್ಣನಿಗೆ ಹಾಕಿಕೊಂಡು ಗುಲಬರ್ಗಾದ ಕಾಮರೆಡ್ಡಿ ಆಸ್ಪತ್ರೆಗೆ ಒಯ್ದು ಸೇರಿಕೆ ಮಾಡಿದಾಗ ಅಲ್ಲಿನ ವೈಧ್ಯರು ಹೆಚ್ಚಿನ ಉಪಚಾರಕ್ಕಾಗಿ ಸೊಲಾಪುರದ ಗಂಗಾಮಯಿ ಆಸ್ಪತ್ರೆಗೆ ಹೋಗಲು ಹೇಳಿದ್ದರಿಂದ ರಾತ್ರಿಯೇ ಅಂಬುಲೆನ್ಸ ವಾಹನದಲ್ಲಿ ಹಾಕಿಕೊಂಡು ಸದರ ಸೋಲ್ಲಾಪುರ ಗಂಗಾಮಯಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದೇನು ನಂತರ ನನ್ನ ಕಾಕನ ಮಗ ಕರಬಸಪ್ಪ ಇತನಿಗೆ ಉಪಚಾರ ಫಲಕಾರಿಯಾಗದೆ ದಿನಾಂಕ 15/09/2014 ರಂದು ಮದ್ಯಾಹ್ನ 3-00 ಗಂಟೆಗೆ ಮೃತಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ: 28/11/2014 ರಂದು ಸಾಯಂಕಾಲ 05-15 ಗಂಟೆ ಸುಮಾರಿಗೆ ನನ್ನ ಗಂಡನಾದ ವಿಜಯಕುಮಾರ ಇತನು ತನ್ನ ಮೋ/ಸೈಕಲ್ ನಂ: ಕೆಎ 32 ಇಇ 3864 ನೆದ್ದನ್ನು ರಾಮ ಮಂದಿರ ರಿಂಗ ರೋಡ ದಿಂದ ಆರ್.ಪಿ.ಸರ್ಕಲ್ ರೋಡಿನಲ್ಲಿ ಬರುವ ವೆಂಕಟಗಿರಿ ಹೊಟೇಲ ಎದುರಿನ ರೋಡ ಮೇಲೆ ವಿಜಯಕುಮಾರ ಇತನು ತನ್ನ ಮೋ/ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ರೋಡ ಎಡ ಬಲ ಕಟ್ ಹೊಡೆದು ಒಮ್ಮೇಲೆ ಬ್ರೇಕ್ ಹಾಕಿ ಮೋ/ಸೈಕಲ್ ಸ್ಕಿಡ ಮಾಡಿ ತನ್ನಿಂದ ತಾನೆ ಬಿದ್ದು ಎಡಗಡೆ ಹುಬ್ಬಿಗೆ, ಎಡ ಮೆಲಕಿನ ಮೇಲೆ ರಕ್ತಗಾಯವಾಗಿದ್ದು ಇರುತ್ತದೆ  ಅಂತಾ ಶ್ರೀಮತಿ ಶಿವಲಿಲಾ ಗಂಡ ವಿಜಯಕಯಮಾರ ಸಾ: ಪಿರೋಜಾಬಾದ ತಾ:  ಕಲಬುರಗಿ ಹಾ;ವ: ಗಾಂಧಿ ನಗರ ಗಂಜ ರೋಡ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಳವು ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ ವಾದಿರಾಜ ತಂದೆ ಶ್ಯಾಮರಾವ ಬೇಟಗೇರಿ ಸಾ: ಜಮಖಂಡಿ ಹಾ.ವ: ಎನ್.ಜಿ.ಓ ಕಾಲೋನಿ ಬೇಂದ್ರೆ ನಗರ ಕಲಬುರಗಿ ರವರು ದಿನಾಂಕ 23/11/14 ರಂದು ತನ್ನ ಹೆಂಡತಿ ವಿಜಯಶ್ರೀ ಅರವರು ಹುಬ್ಬಳಿಯಲ್ಲಿ ಕಾರ್ಯಕ್ರಮದ  ನಿಮಿತ್ಯ ಹೋಗಿದ್ದು ನಾನು ದಿನಾಂಕ 27/11/2014 ರಂದು ನನ್ನ ಮನೆಗೆ ಕೀಲಿ ಹಾಕಿ ರಾತ್ರಿ 7 ಗಂಟೆಗೆ ಕಲಬುರಗಿದಿಂದ ಹುಬ್ಬಳಿಗೆ ಹೋಗಿ ನಾನು ಸಹ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕಾರ್ಯಕ್ರಮ ಮುಗಿಸಿಕೊಂಡು ಇಂದು ದಿನಾಂಕ 29/11/14 ರಂದು ಸಾಯಂಕಾಲ 6-30 ಪಿ.ಎಂ.ಕ್ಕೆ ನಾನು ನನ್ನ ಹೆಂಡತಿ ಕಲಬುರಗಿಗೆ ಬಂದು ನೋಡಲಾಗಿ ನಮ್ಮ ಮನೆಗೆ ಹಾಕಿದ ಮುಖ್ಯ ಬಾಗಿಲದ ಕೀಲಿ ಮುರಿದು ಬಿದ್ದಿದ್ದು ಬಾಗಿಲು ಸ್ವಲ್ಪ ತೆರೆದಿದ್ದು ಗಾಬರಿಗೊಂಡು ಒಳಗೆ ಹೋಗಿ ನೋಡಲಾಗಿ ಬೆಡ್ ರೂಮ್ ಕೊಣೆಯಲ್ಲಿ ಅಲಮಾರಿ ಕೊಂಡಿ ಹಾರಿಸಿ ತೆರೆದು ಲಾಕರದಲ್ಲಿ ಇಟ್ಟ ಬಂಗಾರದ ಆಭರಣಗಳು,  ಬೆಳ್ಳಿಯ ಆಭರಣಗಳು ಹೀಗೆ ಒಟ್ಟು 1,77,000/- ರೂ ಬೇಲೆ ಬಾಳುವ  ಆಭರಣಗಳನ್ನು ಯಾರೋ ಕಳ್ಳರು ದಿನಾಂಕ 28/29-11-2014 ರಂದು ಮದ್ಯರಾತ್ರಿ ನಮ್ಮ ಮನೆಯ ಬಾಗಿಲು ಕೀಲಿ ಮುರಿದು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀಮತಿ ಗಂಗುಬಾಯಿ ಗಂಡ ಸುರೇಶ ತಳವಾರ ಸಾ|| ನಿಂಬರ್ಗಾ ಹಾ|||| ಎಸ್,ಎಮ್ ಕೃಷ್ಣಾ ಕಾಲೋನಿ ಕಲಬುರಗಿ ಇವರ ಮಗನಾದ ಪ್ರದೀಪ 12 ವರ್ಷ ಈತನು ದಿನಾಂಕ: 24/11/2014 ರಂದು ಸಾಯಂಕಾಲ 6 ಗಂಟೆಯ ಸುಮಾರಿಗೆ ತನ್ನ ಮನೆಯಿಂದ ಸಂಡಾಸಕ್ಕೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವನು ಮರಳಿ ಮನೆಗೆ ಬಂದಿರುವುದಿಲ್ಲ, ಕಾಣೆಯಾಗಿದ್ದಾನೋ ಅಥವಾ  ಅಪಹರಣಕ್ಕೀಡಾಗಿದ್ದಾನೋ ಗೋತ್ತಿರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

28 November 2014

Kalaburagi District Reported Crimes

ಅಪಹರಣ ಪ್ರಕರಣ :
ಮಳಖೇಡ ಠಾಣೆ : ಶ್ರೀ ಅಶೋಕ ತಂದೆ ಪಾಂಡುರಂಗ ತಳವಾರ ಸಾ: ಕಾಚೂರ ತಾ: ಸೇಡಂ ಇವರು ದಿನಾಂಕ: 09-11-2014 ರಂದು ರವಿವಾರ ಇದ್ದುದ್ದರಿಂದ ನನ್ನ ಮಗನಾದ ಜಗನ್ನಾಥ ಇತನು ಮುಂಜಾನೆ ಮನೆಯಿಂದ ಊಟ ಮಾಡಿಕೊಂಡು ಊರಲ್ಲಿ ಆಟವಾಡಲು ಹೋದನು. ಮುಂಜಾನೆ 10:00 ಗಂಟೆಯವರೆಗೆ ಆಟವಾಡುತ್ತಿದ್ದು ನಂತರ, ಸಾಯಂಕಾಲ 15:00 ಗಂಟೆಯವರೆಗೆ ಊರಲ್ಲಿ ಕ್ರಿಕೇಟ ಆಟವಾಡುತ್ತಿದ್ದನು. ಆಗ ನಾನು ಕೆಲಸದ ನಿಮಿತ್ಯಾ ಹೊಲಕ್ಕೆ ಹೊದೇನು. ನಂತರ ರಾತ್ರಿ ನನ್ನ ಮಗ ಜಗನ್ನಾಥ ಇತನು ಮನೆಗೆ ಬರಲಿಲ್ಲಾ. ನಾನು ಮತ್ತು ನನ್ನ ಹೆಂಡತಿ ಊರಲ್ಲಿ ವಿಚಾರಿಸಲು ನನ್ನ ಮಗನ ಬಗ್ಗೆ ಪತ್ತೆಯಾಗಲಿಲ್ಲಾ. ನನ್ನ ಅಪ್ರಾಪ್ತ ವಯಸ್ಸಿನ ಮಗನಿಗೆ ನಾನು ಇಲ್ಲಿಯವರೆಗೆ ಎಲ್ಲಾ ಬೀಗರು ನೆಂಟ್ಟರಲ್ಲಿ ವಿಚಾರಣೆ ಮಾಡಲು ನನ್ನ ಮಗನ ಬಗ್ಗೆ ಯಾವುದೆ ಮಾಹಿತಿ ಸಿಗಲಿಲ್ಲಾ. ನನ್ನ ಅಪ್ರಾಪ್ತ ವಯಸ್ಸಿನ ಮಗನಾದ ಜಗನ್ನಾಥ ಇತನು ಕಾಣೆಯಾಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಅಶೋಕ ತಂದೆ ರೇವಪ್ಪ ಶೆಟ್ಟಿ ಸಾ : ಅಫಜಲಪೂರ ರವರು ದಿನಾಂಕ 08-11-2014 ರಂದು ರಾತ್ರಿ 11:30 ಗಂಟೆ ಸುಮಾರಿಗೆ ನಾನು ಅಂಗಡಿಯಿಂದ ನನ್ನ ಮೋ/ಸೈ ನಂಬರ ಕೆಎ-32 ಕೆ-4567 ಅಂತಾ ಇದ್ದು, ಚೆಸ್ಸಿ ನಂಬರ:- 8B536160H  ಇಂಜೆನ ನಂಬರ:- 8B536160H  MOdel No- 1998, ಅಂತಾ ಇದ್ದು, ಕಪ್ಪು ಬಣ್ಣದ್ದು ಇರುತ್ತದೆ. ಅದರ ಅಂದಾಜು 30,000/- ರೂ ಕಿಮ್ಮತ್ತಿನದರ ಮೇಲೆ ನಮ್ಮ ಮನೆಗೆ ಬಂದು ನಮ್ಮ ಅಣ್ಣನ ಮನೆಯ ಮುಂದೆ ಮೋ/ಸೈ ನಿಲ್ಲಿಸಿ ಮನೆಗೆ ಹೊಗಿರುತ್ತೆನೆ, ಸದರಿ ಮೋ/ಸೈ ನಿಲ್ಲಿಸಿದ್ದು ನಮ್ಮ ಮನೆಯ ಮುಂದಿನಿಂದ ಹಾಗೂ ಕಿಡಕಿಯಿಂದ ನೊಡಿದರೆ ಕಾಣುತ್ತದೆ, ಅಂದಾಜು ರಾತ್ರಿ 12:30 ಗಂಟೆ ಸುಮಾರಿಗೆ ನಾನು ಮೂತ್ರ ಮಾಡಲು ಎದ್ದಾಗ ನನ್ನ ಮೋ/ಸೈ ನಾನು ನಿಲ್ಲಿಸಿದ ಸ್ಥಳದಲ್ಲೆ ಇದ್ದು ನಂತರ ಬೆಳಗಿನ ಜಾವ ಸುಮಾರು 05:00 ಗಂಟೆ ಎದ್ದು ಮನೆಯಿಂದ ಹೊರಗೆ ಬಂದು ನೋಡಲಾಗಿ ನನ್ನ ಮೋ/ಸೈ ಇರಲಿಲ್ಲ, ಸದರಿ ನನ್ನ ಮೋ/ಸೈ ನ್ನು ಯಾರೊ ಕಳ್ಳರು ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

27 November 2014

Kalaburgi District Press Note

ಪತ್ರಿಕಾ ಪ್ರಕಟಣೆ

ಪೊಲೀಸ ಪೇದೆ ಸಿ.ಇ.ಟಿ ಪರೀಕ್ಷೆ ಪ್ರಶ್ನೆ ಪತ್ರಿಕೆ ಬಹಿರಂಗ ಪಡಿಸಿದ ಪ್ರಮುಖ ಆರೋಪಿತರ ಪೈಕಿ ಸಿದ್ದಣ್ಣ ದೇವದುರ್ಗ ಬಂಧನ, 73,03,500 ರೂ ಜಪ್ತಿ.
ದಿನಾಂಕ 16/11/2014 ರಂದು ನಡೆದ ಪೊಲೀಸ್ ಪೇದೆಗಳ ನೇಮಕಾತಿ ಸಿ.ಇ.ಟಿ ಪರೀಕ್ಷೆಯಲ್ಲಿಯ ಉತ್ತರಗಳು ಬಹಿರಂಗಗೊಂಡಿದ್ದು, ಈ ಸಂಬಂಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆ ಗುನ್ನೆ ನಂ. 290/2014 ಕಲಂ. 420, 120(ಬಿ) ಐ.ಪಿ.ಸಿ ಗುನ್ನೆ ವರದಿಯಾಗಿದ್ದು ಇರುತ್ತದೆ. ಪ್ರಕರಣದಲ್ಲಿ ಮಾನ್ಯ ಐಜಿಪಿ ಈವ ಕಲಬುರಗಿ, ಮಾನ್ಯ ಎಸ್.ಪಿ ಕಲಬುರಗಿ ರವರ ಮಾರ್ಗದರ್ಶನದಲ್ಲಿ ತನಿಖೆ ಚುರುಕುಗೊಳಿಸಿ ಪ್ರಕರಣದಲ್ಲಿ ಈಗಾಗಲೇ 13 ಜನ ಆರೋಪಿತರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದು ಇರುತ್ತದೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ಕಾಲಕ್ಕೆ ಪ್ರಕರಣದ ಆರೋಪಿತನಾದ ಸಿದ್ದಣ್ಣ ತಂದೆ ಹಣಮಂತರಾಯ ದೇವದುರ್ಗ ವ: 27 ವರ್ಷ ಜಾ: ಉಪ್ಪಾರ ಉ: ಎಸ್.ಡಿ.ಎ ಗ್ರಾಮೀಣ ಅಭಿವ್ರದ್ದಿ, ಪಂಚಾಯತ್ ರಾಜ್ ಇಲಾಖೆಯ ಗ್ರಾಮ ಪಂಚಾಯತಿ ಕಚೇರಿ ಮಾದಗೊಂಡನಹಳ್ಳಿ ತಾ: ಮಾಗಡಿ ಜಿ: ರಾಮನಗರ ಹಾ.ವ: ಹಂಚನಾಳ (ಎಸ್.ವೈ) ತಾ: ಜೇವರ್ಗಿ ಜಿ: ಕಲಬುರಗಿ ಈತನನ್ನು ನಿನ್ನೆ ದಿನಾಂಕ 26/11/2014 ರಂದು ರಾತ್ರಿ 9:00 ಗಂಟೆಗೆ ಹಿಡಿದುಕೊಂಡು ವಿಚಾರಣೆಗೆ ಒಳಪಡಿಸಿದಾಗ ಸದರಿಯವನು ದಿನಾಂಕ 16/11/2014 ರಂದು ನಡೆದ ಪೊಲೀಸ್ ಪೇದೆ ನೇಮಕಾತಿ ಸಿ.ಇ.ಟಿ ಪರೀಕ್ಷೆ ಪ್ರಶ್ನೆ ಪತ್ರಿಕೆ ಹಾಗೂ ಉತ್ತರಗಳನ್ನು ಬೆಂಗಳೂರು ಮೂಲದ 2 ಜನರು ತನಗೆ ನೀಡಿದ್ದು ಅದನ್ನು ತಾನು ಅಶೋಕ ಒಡೆಯರ ಹಾಗು ಇತರರ ಮೂಲಕ ಪೊಲೀಸ ಪೇದೆ ಹುದ್ದೆ ನೇಮಕಾತಿಗಾಗಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮಾರಾಟ ಮಾಡಿ ಅವರಿಂದ ಹಣ ಪಡೆದುಕೊಂಡಿರುವ ಬಗ್ಗೆ ವಿಚಾರಣೆ ಕಾಲಕ್ಕೆ ತಿಳಿಸಿದ್ದು ಸದರಿ ಆರೋಪಿತನಿಂದ ಪ್ರಶ್ನೆ ಪತ್ರಿಕೆ ಮಾರಾಟ ಮಾಡಿ ಸಂಗ್ರಹಿಸಿದ ಒಟ್ಟು 73,03,500=00 ರೂಪಾಯಿಗಳನ್ನು ತನಿಖೆ ಕಾಲಕ್ಕೆ ಹಾಜರ ಪಡಿಸಿದ್ದು ಜಪ್ತು ಪಡಿಸಿಕೊಂಡಿದ್ದು ಇರುತ್ತದೆ. ಸದರಿ ಆರೋಪಿತನ ವಿಚಾರಣೆ ನಂತರ ನ್ಯಾಯಾಂಗ ಬಂಧನಕ್ಕೆ ಕಳುಹಿಸಿಕೊಡಲಾಗಿದೆ. ಪ್ರಶ್ನೆ ಪತ್ರಿಕೆ ಬಹಿರಂಗ ಪಡಿಸಿದ ಇನ್ನೂ ಕೆಲವು ಪ್ರಮುಖ ಆರೋಪಿತರ ಪತ್ತೆಗಾಗಿ ಜಾಲ ಬೀಸಲಾಗಿದೆ.

Kalaburagi Police Press Note

ಪತ್ರಿಕಾ ಪ್ರಕಟಣೆ ಎಸ್.ಪಿ. ಕಲಬುರಗಿರವರಿಂದ
ಸನ್ಮಾನ್ಯ ಶ್ರೀ ಸಿದ್ಧರಾಮಯ್ಯ ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕ  ರಾಜ್ಯ, ಬೆಂಗಳೂರುರವರು ದಿನಾಂಕ: 27-11-2014 ರಂದು ಬೆಂಗಳೂರುನಿಂದ ವಿಶೇಷ ವಿಮಾನದ ಮೂಲಕ ಬೀದರದಿಂದ ಕಲಬುರಗಿ ನಗರಕ್ಕೆ ಆಗಮಿಸಿ ಐವಾನ-ಎ-ಶಾಹಿ ಅತಿಥಿ ಗೃಹದಲ್ಲಿ ವಾಸ್ತವ್ಯ ಮಾಡಿ ದಿನಾಂಕ 28-11-2014 ರಂದು ಬೆಳಿಗ್ಗೆ 11:00 ಗಂಟೆಗೆ ಪ್ರಾದೇಶಿಕ ಆಯುಕ್ತರ ಕಾರ್ಯಾಲಯ ಸಭಾಂಗಣ ಮಿನಿ ವಿಧಾನ ಸೌಧ ಕಲಬುರಗಿಯಲ್ಲಿ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಭಾಗವಹಿಸಿ ನಂತರ ಕೆ.ಸಿ.ಟಿ. ಕಾಲೇಜ ಆವರಣದಲ್ಲಿ ಜರುಗುವ ಸಭೆಯಲ್ಲಿ ಭಾಗವಹಿಸಿ ತದನಂತರ ವಿಶ್ವೇಶ್ವರಯ್ಯಾ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ ಇದರ ಪ್ರಾದೇಶಿಕ ಕೇಂದ್ರ ಕ್ಯಾಂಪಸ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಕಲಬುರಗಿಯಿಂದ ರಸ್ತೆಯ ಮೂಲಕ ಸಾಯಂಕಾಲ 06-00 ಗಂಟೆಗೆ ನಿರ್ಗಮಿಸಿ ಬೀದರ ಎರಬೇಸಗೆ ತೆರಳಲಿರುವರು.
ಹೈದ್ರಾಬಾದ ಕರ್ನಾಟಕ  ಪ್ರದೇಶದಲ್ಲಿ ಇರುವ ಬೀದರ, ಯಾದಿಗಿರ, ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಯ ಶಾಸಕರು, ಸಂಸದರು ಮತ್ತು ವಿಧಾನ ಪರಿಷತ್ ಸದಸ್ಯರು ಮಾನ್ಯ ಮುಖ್ಯಮಂತ್ರಿಯವರಿಗೆ ಭೇಟಿಯಾಗುವ ಕುರಿತು ಕಲಬುರಗಿಗೆ ಬರುವವರಿದ್ದರೆ ಅವರಿಗೆ ವಾಹನ ಪಾಸುಗಳನ್ನು ಜಿಲ್ಲಾ ವಿಶೇಷ ಶಾಖೆ ಪೊಲೀಸ್ ಭವನ ಕಲಬುರಗಿಯಲ್ಲಿ ಪಡೆದುಕೊಳ್ಳಲು ಈ ಮೂಲಕ ತಿಳಿಯಪಡಿಸಲಾಗಿದೆ. ಸಂಪರ್ಕಿಸಬಹುದಾದ ದೂರವಾಣಿ ಸಂ. 08472-263610. 

26 November 2014

Kalaburagi District Reported Crimes

ದ್ವೀಚಕ್ರ ವಾಹನ ಕಳವು ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ ಸೋಮಶೇಖರ ತಂದೆ ವಿರುಪಾಕ್ಷಪ್ಪ ಪಡಶೇಟ್ಟಿ ಸಾ: ಮಾನಕರ ಲೇಔಟ ಕರುಣೇಶ್ವರ ನಗರ ಕಲಬುರಗಿ ರವರು ದಿನಾಂಕ  09/11/2014 ರಂದು ನಾನು ನನ್ನ ಕೆಲಸ ಮುಗಿಸಿಕೊಂಡು ಮೋಟಾರ ಸೈಕಲ್ ತೆಗೆದುಕೊಂಡು ಮನೆಗೆ ಬಂದು ರಾತ್ರಿ ಮನೆಯ ಮುಂದೆ ನಿಲ್ಲಿಸಿ ಕೀಲಿ ಹಾಕಿಕೊಂಡು ಮನೆ ಒಳಗೆ ಹೋಗಿದ್ದು ಮರುದಿವಸ ಮುಂಜಾನೆ 10/11/2014 ರಂದು ಎದ್ದು ನೋಡಲು ನನ್ನ ಮೋಟಾರ ಸೈಕಲ್ ಇಟ್ಟ ಸ್ಥಳದಲ್ಲಿ ಇರಲಿಲ್ಲಾ. ಈ ಬಗ್ಗೆ ನಾನು ಬಡಾವಣೆ ಮತ್ತು ಇತರೆ ಸ್ಥಳ ಎಲ್ಲಾ ಕಡೆ ಹುಡುಕಾಡಿದ್ದು ನನ್ನ ಮೋಟಾರ ಸೈಕಲ್ ಪತ್ತೆಯಾಗಿರುವುದಿಲ್ಲಾ ನನ್ನ ಮೋಟಾರ ಸೈಕಲ್ ನಂ. ಕೆ.ಎ-32 ಕ್ಯೂ- 3330  ಇಂಜನ್ ನಂ. 04C08M16637 ಚೆಸ್ಸಿ ನಂ. 04CO9C16457 ರ ಮಾಡಲ್ ನಂ. 2004 ,ಸೀಲ್ವರ  ಬಣ್ಣದ್ದು  ಅ.ಕಿ. 25,000/- ರೂ ಬೇಲೆ ಬಾಳುವುದು ಯಾರೋ ಕಳ್ಳರು ಮನೆಯ ಮುಂದೆ ಇಟ್ಟಿದ್ದು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಅಫಜಲಪೂರ ಠಾಣೆ : ದಿನಾಂಕ  25-11-2014 ರಂದು ಅಫಜಲಪೂರ ಪಟ್ಟಣದ ವೆಂಕಟರಮಣ ಗುಡಿಯ ಮುಂದೆ ಸಾರ್ವಜನೀಕ ಸ್ಥಳದಲ್ಲಿ ಕೆಲವು ಜನರು ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್. ಅಫಜಲಪೂರ ಪೊಲೀಸ್ ಠಾಣೆ ಹಾಗು ಸಿಬ್ಬಂದಿಯವರಾದ ರಮೇಶ ಪಿಸಿ-596, ಆನಂದ ಪಿಸಿ 1258, ಚಂದ್ರಶಾ ಪಿಸಿ-903, ಚಿದಾನಂದ ಪಿಸಿ-1225 ರವರನ್ನು ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಜೂಜಾಡುತ್ತಿದ್ದ 03 ಜನರನ್ನು ಹಿಡಿದು ಹೆಸರು ವಿಳಾಸ ವಿಚಾರಿಸಿ  ಅಂಗ ಶೋಧನೆ ಮಾಡಲಾಗಿ 1. ಕಿರಣ ತಂದೆ ಭೀಮಶಾ ಜಮಾದಾರ ಸಾ|| ಅಂಬಿಗರ ಚೌಡಯ್ಯ ನಗರ ಅಫಜಲಪೂರ 2. ಜಂಗಪ್ಪ ತಂದೆ ಸಿದ್ದಪ್ಪ ಗೊಲ್ಲರ ಸಾ|| ಅಫಜಲಪೂರ 3. ಬಸವರಾಜ ತಂದೆ ಈರಣ್ಣ ಅಳ್ಳಗಿ ಸಾ|| ರೇವಣಸಿದ್ದೇಶ್ವರ ಕಾಲೋನಿ ಅಫಜಲಪೂರ ಅಂತಾ ತಿಳಿಸಿದ್ದು ಸದರಿಯವರ ವಶದಿಂದ ನಗದು ಹಣ 740/- ರೂ ಮತ್ತು 52 ಇಸ್ಪೆಟ ಎಲೆಗಳನ್ನು ಜಪ್ತಿಮಾಡಿಕೊಂಡು ಮರಳಿ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.

25 November 2014

Kalaburagi District Reported Crimes

ಅಪಘಾತ ಪ್ರಕರಣಗಳು :
ಅಫಜಲಪೂರ ಠಾಣೆ : ಶ್ರೀ ಬಾಳಾಸಾಬ ತಂದೆ ಶಂಕರ ಗುಡಗುಡೆ ಸಾ|| ಹೊಸೂರ ಗ್ರಾಮ ಇವರು ದಿನಾಂಕ 24-11-2014 ರಂದು ಮದ್ಯಾಹ್ನ 1:00 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿ ಗಂಗಾಬಾಯಿ ಹಾಗೂ ನಮ್ಮ ಚಿಕ್ಕಪ್ಪ ಅಣ್ಣಾರಾಯ ಮೂರು ಜನರು ಸಂತೆ ಮಾಡಿಕೊಂಡು ಹೊಗಲು ಮಣೂರ ಗ್ರಾಮಕ್ಕೆ ಬಂದಿದ್ದು ನಾವು ಸಂತೆ ಮುಗಿಸಿಕೊಂಡು ಮರಳಿ ನಮ್ಮ ಊರಿಗೆ ಹೋಗಲು ನಮ್ಮೂರಿನ ಬಸವರಾಜ ತಂದೆ ಕಾಶಿನಾಥ ಇಂಗಳಗಿ ಎಂಬಾತನು ಟಂ ಟಂ ತಗೆದುಕೊಂಡು ಹೋಗುವುದಾಗಿ ತಿಳಿಸಿದ ಮೇರೆಗೆ ನಾವು ಬಸವರಾಜ ಹೇಳಿದ ಟಂ ಟಂ ನಂ ಕೆಎ-48  2404 ನೇದ್ದರಲ್ಲಿ ನಾವು ಮೂರು ಜನ ಹಾಗೂ ನಮ್ಮಂತೆ ಸಂತೆಗೆ ಬಂದ ಬೇರೆ ಬೇರೆ ಊರಿನ ಇನ್ನು 2-3 ಜನ ಎಲ್ಲರೂ ಟಂ ಟಂ ದಲ್ಲಿ ಕುಳಿತುಕೊಂಡೆವು. ಸದರಿ ಟಂ ಟಂ ಮಣುರ ಗ್ರಾಮದಿಂದ ಹೊಸೂರ ಗ್ರಾಮಕ್ಕೆ ಹೊರಟಿರುತ್ತದೆ. ಬಸವರಾಜ ಇಂಗಳಗಿ ಈತನು ಟಂ ಟಂ ನಡೆಸುತ್ತಿದ್ದನು, ಮುಂದೆ ಸಾಯಂಕಾಲ ಟಂ ಟಂ ಮಣೂರ ಗ್ರಾಮದಿಂದ ಹೊಸೂರ ಗ್ರಾಮಕ್ಕೆ ಹೋಗುತ್ತಿದ್ದಾಗ ಕೆರನಿಂಗಪ್ಪ ದೇವಸ್ಥಾನ ದಾಟಿ ಸ್ವಲ್ಪ ಮುಂದೆ ಹೊದಾಗ ಸದರಿ ಟಂ ಟಂ ಚಾಲಕ ಬಸವರಾಜನು ತಾನು ನಡೆಸುತ್ತಿದ್ದ  ಟಂ ಟಂ ನ್ನು ಅತಿವೇಗವಾಗಿ ಮತ್ತು ನಿಸ್ಕಾಳಜಿಯಿಂದ ನಡೆಸುತ್ತಿದ್ದನು, ಆಗ ಟಂಟಂ ದಲ್ಲಿದ್ದ ನಾವು ಸದರಿಯವರಿಗೆ ನಿಧಾನವಾಗಿ ನಡೆಸು ಅಂತಾ ಹೇಳಿದರೂ ಕೇಳದೆ ವೇಗವಾಗಿ ನಡೆಸಿದ್ದರಿಂದ ಟಂ ಟಂ ರೋಡಿನ ಬಲ ಭಾಗದ ತಗ್ಗಿನಲ್ಲಿ ಪಲ್ಟಿ ಆಯಿತು, ಆಗ ಬಲಭಾಗದಲ್ಲಿ ಕುಳಿತಿದ್ದ ನನ್ನ ಚಿಕ್ಕಪ್ಪ ಅಣ್ಣಾರಾಯ ಈತನು ಕೆಳಗೆ ಬಿದ್ದಿದ್ದು ಆತನ ಮೇಲೆ ಟಂ ಟಂ ಹಾಗೂ ಟಂ ಟಂ ದಲ್ಲಿ ನಾನು ಮತ್ತು ನನ್ನ ಹೆಂಡತಿ ಬಿದ್ದೆವು, ನಂತರ ನಾವು  ಎದ್ದು ಟಂ ಟಂ ಎತ್ತಿ ನನ್ನ ಚಿಕ್ಕಪ್ಪನಿಗೆ ನೋಡಲು ಆತನ ಮುಖಕ್ಕೆ, ಹಾಗೂ ತಲೆಗೆ ರಕ್ತಗಾಯವಾಗಿ ಮೂಗಿನಿಂದ ರಕ್ತ ಸೋರುತ್ತಿತ್ತು, ಮತ್ತು ಎದೆಗೆ ಭಾರಿ ಗುಪ್ತಗಾಯ ಆಗಿ  ಪ್ರಜ್ಞಾ ಹೀನ ಸ್ಥೀತಿಯಲ್ಲಿ ಇದ್ದನು. ಘಟನೆ ನಂತರ ಟಂ ಟಂ ಚಾಲಕ ಬಸವರಾಜನು ಓಡಿ ಹೋಗಿರುತ್ತಾನೆ, ನಂತರ ನಾವು ನಮ್ಮೂರಿನಿಂದ ಬೇರೊಂದು ವಾಹನ ತರೆಸಿಕೊಂಡು ನನ್ನ ಚಿಕ್ಕಪ್ಪನಿಗೆ ಮಣೂರ ಆಸ್ಪತ್ರೆಗೆ ಕರೆದುಕೊಂಡು ಹೋದೆವು, ನನ್ನ ಚಿಕ್ಕಪ್ಪ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಾ ಮೃತ ಪಟ್ಟಿರುತ್ತಾನೆ, ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಸಂಚಾರಿ ಠಾಣೆ : ದಿನಾಂಕ 24-11-2014 ರಂದು ಬೆಳಿಗ್ಗೆ ಶ್ರೀ ರವೀಂದ್ರನಾಥ ತಂದೆ ಮಲ್ಲಪ್ಪ ವಗ್ಗೆ ಸಾಃಖಾದ್ರಿಚೌಕ ಸಂತೋಷ ಕಾಲೋನಿ ಕಲಬುರಗಿ  ರವರು ತನ್ನ ಮೋಟರ ಸೈಕಿಲ್ ನಂ ಕೆ.ಎ.32ಆರ್ 4873 ರ ಮೇಲೆ ಕುಳಿತು ತನ್ನ ಮನೆಯಿಂದ ರೈಲು ನಿಲ್ದಾಣಕ್ಕೆ ಹೋಗುತ್ತಿರುವಾಗ ಆರೋಪಿಯು ತನ್ನ ಮೋಟರ ಸೈಕಲ ನಂ  ಕೆ.ಎ 32 ಈ ಜಿ 8913 ನೇದ್ದನ್ನು ಲಾಲಗೇರಿ ಕ್ರಾಸ್ ಕಡೆಯಿಂದ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯು ನಡೆಸಿಕೊಂಡು ಹೋಗುತ್ತಿರುವ ಮೋಟರ ಸೈಕಿಲಕ್ಕೆ ಅಗ್ನಿಶ್ಯಾಮಕ ಠಾಣೆಯ ಎದುರುಗಡೆ ರಸ್ತೆಯ ಮೇಲೆ ಡಿಕ್ಕಿಪಡೆಯಿಸಿದ್ದರಿಂದ ಫಿರ್ಯಾದಿ ಗಾಯಗೊಂಡಿದ್ದು ಹಾಗೂ ಆರೋಪಿಯೂ ಸಹ ತನ್ನ ವಾಹನದ ಮೇಲಿಂದ ಬಿದ್ದು ಗಾಯಗೊಂಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ಲಕ್ಷ್ಮೀ ಗಂಡ ಬಸವರಾಜ ಕೆಂಗೆರಿ ಸಾ|| ಹೋಸೂರ ಗ್ರಾಮ ಇವರು ದಿನಾಂಕ 23-11-2014 ರಂದು ಮ್ಮ ಮನೆಯ ಮುಂದೆ ಇದ್ದಾಗ ನನ್ನ ಗಂಡ ಬಸವರಾಜ ಮತ್ತು ನಮ್ಮ ಬಾಜು ಮನೆಯ ಸುನಿತಾ ಇಬ್ಬರು ಮಾತಾಡುತ್ತಾ ನಮ್ಮ ಮನೆಯ ಪಕ್ಕದಲ್ಲಿ ನಿಂತುಕೊಂಡಿದ್ದರು, ಆಗ ನಾನು ಸದರಿಯವರ ಹತ್ತಿರ ಹೋಗಿ ಸುನಿತಾ ಇವಳಿಗೆ ನನ್ನ ಗಂಡನ ಜೋತೆ ಯಾಕ ಮಾತಾಡುತ್ತಿ ನಿನಗೆ ಮಾತಾಡಬೇಡ ಅಂತಾ ಹೇಳಿದರೆ ಗೊತ್ತಾಗುವುದಿಲ್ಲ ಅಂತಾ ಸುನಿತಾ ಇವಳಿಗೆ ಹೇಳುತ್ತಿದ್ದಾಗ, ನನ್ನ ಗಂಡ ನನಗೆ ಏನೆ ರಂಡಿ ಅವಳಿಗೆ ಏನು ಕೇಳುತ್ತಿ ಎಂದು ಕೈಯಿಂದ ನನ್ನ ಕಪಾಳ ಮೇಲೆ ಹೊಡೆದನು, ಆಗ ಸುನಿತಾ ಇವಳು ರಂಡಿಗೆ ಏಷ್ಟು ಹೇಳಿದರು ಕೇಳುವುದಿಲ್ಲ ಎಂದು  ನನ್ನ ಮೈ ಕೈಗೆ ಹೊಡೆಯುತ್ತಿದ್ದಳು, ಸದರಿಯವರು ನನಗೆ ಹೊಡೆಯುತ್ತಿದ್ದಾಗ ಮನೆಯಲ್ಲಿದ್ದ ಸುನೀತಾಳ ತಾಯಿ ಹೌಸಾಬಾಯಿ ಹಾಗೂ ಅವಳ ತಂಗಿ ಐಶ್ವರ್ಯ ಇವರು ಬಂದಿದ್ದು ಎಲ್ಲರೂ ಕೂಡಿ ನನಗೆ ಕೈಯಿಂದ ಹೊಡೆದಿರುತ್ತಾರೆಸುನಿತಾ ಇವಳು ನನಗೆ ರಂಡಿಯ ಸೊಕ್ಕು ಜಾಸ್ತಿ ಆಗಿದೆ ಅಂತಾ ಬೈಯುತ್ತಾ ಅಲ್ಲಿಯೆ ಬಿದ್ದಿದ್ದ ಒಂದು ಹರೀತವಾದ ಕಬ್ಬಿಣದ ಪಟ್ಟಿಯಿಂದ ನನ್ನ ಕೈಯ ಮೇಲೆ ಮುಖದ ಮೇಲೆ, ಸೊಂಟದ ಮೇಲೆ ಹೊಡೆದು ಗಾಯಗೋಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.