POLICE BHAVAN KALABURAGI

POLICE BHAVAN KALABURAGI

27 November 2014

Kalaburgi District Press Note

ಪತ್ರಿಕಾ ಪ್ರಕಟಣೆ

ಪೊಲೀಸ ಪೇದೆ ಸಿ.ಇ.ಟಿ ಪರೀಕ್ಷೆ ಪ್ರಶ್ನೆ ಪತ್ರಿಕೆ ಬಹಿರಂಗ ಪಡಿಸಿದ ಪ್ರಮುಖ ಆರೋಪಿತರ ಪೈಕಿ ಸಿದ್ದಣ್ಣ ದೇವದುರ್ಗ ಬಂಧನ, 73,03,500 ರೂ ಜಪ್ತಿ.
ದಿನಾಂಕ 16/11/2014 ರಂದು ನಡೆದ ಪೊಲೀಸ್ ಪೇದೆಗಳ ನೇಮಕಾತಿ ಸಿ.ಇ.ಟಿ ಪರೀಕ್ಷೆಯಲ್ಲಿಯ ಉತ್ತರಗಳು ಬಹಿರಂಗಗೊಂಡಿದ್ದು, ಈ ಸಂಬಂಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆ ಗುನ್ನೆ ನಂ. 290/2014 ಕಲಂ. 420, 120(ಬಿ) ಐ.ಪಿ.ಸಿ ಗುನ್ನೆ ವರದಿಯಾಗಿದ್ದು ಇರುತ್ತದೆ. ಪ್ರಕರಣದಲ್ಲಿ ಮಾನ್ಯ ಐಜಿಪಿ ಈವ ಕಲಬುರಗಿ, ಮಾನ್ಯ ಎಸ್.ಪಿ ಕಲಬುರಗಿ ರವರ ಮಾರ್ಗದರ್ಶನದಲ್ಲಿ ತನಿಖೆ ಚುರುಕುಗೊಳಿಸಿ ಪ್ರಕರಣದಲ್ಲಿ ಈಗಾಗಲೇ 13 ಜನ ಆರೋಪಿತರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದು ಇರುತ್ತದೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ಕಾಲಕ್ಕೆ ಪ್ರಕರಣದ ಆರೋಪಿತನಾದ ಸಿದ್ದಣ್ಣ ತಂದೆ ಹಣಮಂತರಾಯ ದೇವದುರ್ಗ ವ: 27 ವರ್ಷ ಜಾ: ಉಪ್ಪಾರ ಉ: ಎಸ್.ಡಿ.ಎ ಗ್ರಾಮೀಣ ಅಭಿವ್ರದ್ದಿ, ಪಂಚಾಯತ್ ರಾಜ್ ಇಲಾಖೆಯ ಗ್ರಾಮ ಪಂಚಾಯತಿ ಕಚೇರಿ ಮಾದಗೊಂಡನಹಳ್ಳಿ ತಾ: ಮಾಗಡಿ ಜಿ: ರಾಮನಗರ ಹಾ.ವ: ಹಂಚನಾಳ (ಎಸ್.ವೈ) ತಾ: ಜೇವರ್ಗಿ ಜಿ: ಕಲಬುರಗಿ ಈತನನ್ನು ನಿನ್ನೆ ದಿನಾಂಕ 26/11/2014 ರಂದು ರಾತ್ರಿ 9:00 ಗಂಟೆಗೆ ಹಿಡಿದುಕೊಂಡು ವಿಚಾರಣೆಗೆ ಒಳಪಡಿಸಿದಾಗ ಸದರಿಯವನು ದಿನಾಂಕ 16/11/2014 ರಂದು ನಡೆದ ಪೊಲೀಸ್ ಪೇದೆ ನೇಮಕಾತಿ ಸಿ.ಇ.ಟಿ ಪರೀಕ್ಷೆ ಪ್ರಶ್ನೆ ಪತ್ರಿಕೆ ಹಾಗೂ ಉತ್ತರಗಳನ್ನು ಬೆಂಗಳೂರು ಮೂಲದ 2 ಜನರು ತನಗೆ ನೀಡಿದ್ದು ಅದನ್ನು ತಾನು ಅಶೋಕ ಒಡೆಯರ ಹಾಗು ಇತರರ ಮೂಲಕ ಪೊಲೀಸ ಪೇದೆ ಹುದ್ದೆ ನೇಮಕಾತಿಗಾಗಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮಾರಾಟ ಮಾಡಿ ಅವರಿಂದ ಹಣ ಪಡೆದುಕೊಂಡಿರುವ ಬಗ್ಗೆ ವಿಚಾರಣೆ ಕಾಲಕ್ಕೆ ತಿಳಿಸಿದ್ದು ಸದರಿ ಆರೋಪಿತನಿಂದ ಪ್ರಶ್ನೆ ಪತ್ರಿಕೆ ಮಾರಾಟ ಮಾಡಿ ಸಂಗ್ರಹಿಸಿದ ಒಟ್ಟು 73,03,500=00 ರೂಪಾಯಿಗಳನ್ನು ತನಿಖೆ ಕಾಲಕ್ಕೆ ಹಾಜರ ಪಡಿಸಿದ್ದು ಜಪ್ತು ಪಡಿಸಿಕೊಂಡಿದ್ದು ಇರುತ್ತದೆ. ಸದರಿ ಆರೋಪಿತನ ವಿಚಾರಣೆ ನಂತರ ನ್ಯಾಯಾಂಗ ಬಂಧನಕ್ಕೆ ಕಳುಹಿಸಿಕೊಡಲಾಗಿದೆ. ಪ್ರಶ್ನೆ ಪತ್ರಿಕೆ ಬಹಿರಂಗ ಪಡಿಸಿದ ಇನ್ನೂ ಕೆಲವು ಪ್ರಮುಖ ಆರೋಪಿತರ ಪತ್ತೆಗಾಗಿ ಜಾಲ ಬೀಸಲಾಗಿದೆ.

No comments: