POLICE BHAVAN KALABURAGI

POLICE BHAVAN KALABURAGI

30 March 2019

KALABURAGI DISTRICT REPORTED CRIMES

ಕಳವು ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಚಂದ್ರಶೇಖರ ತಂದೆ ಮಲ್ಲಿನಾಥ ಪಾಟೀಲ್ ಸಾ|| ಮನೆ ನಂ 1-12/6, ಬಲಗಟ್ ಕಂಪೌಂಡ್, ಖೂಬಾ ಪ್ಲಾಟ್ ಕಲಬುರಗಿ ರವರದು  ಇಂಡಸ್ಟ್ರೀಯಲ್ ಏರಿಯಾದ 2ನೇ ಪೇಸ್ ನಲ್ಲಿ ಬೇಲೂರ ಕ್ರಾಸ್ ಎದುರಿಗೆ ಪ್ಲಾಟ್ ನಂ 200 ಮತ್ತು 203 ನೆದ್ದರಲ್ಲಿ ರಾಜೇಶ್ವರಿ ದಾಲ್ ಮಿಲ್ ಇರುತ್ತದೆ.  ದಿನಾಂಕ 28-03-2019 ರಂದು  ನಾನು ಸಂಜೆ 08-00 ಪಿ.ಎಮ್ ಸುಮಾರಿಗೆ ಮನೆಗೆ ಹೋಗುವಾಗ ನನ್ನ ಹತ್ತಿರ ಇದ್ದ ಹಣವನ್ನು ನಮ್ಮ ದಾಲ್ ಮಿಲ್ ಕಾರ್ಯಾಲಯದಲ್ಲಿರುವ ಟ್ರಜರಿಯಲ್ಲಿ  ರೂ 4,15,000/- ಇಟ್ಟು ಲಾಕ್ ಮಾಡಿ ನಂತರ ಬಾಗಿಲು ಲಾಕ್ ಮಾಡಿಕೊಂಡು ಮತ್ತು ವಿಶ್ರಾಂತಿ ಕೋಣೆ ಕೂಡಾ ಲಾಕ್ ಮಾಡಿಕೊಂಡು ಮನೆಗೆ ಹೋಗಿದ್ದು ಇರುತ್ತದೆ. ಇಂದು ದಿನಾಂಕ 29-03-2019 ರಂದು ಬೆಳಿಗ್ಗೆ 06-00 ಎ.ಎಮ್ ಸುಮಾರಿಗೆ ನಮ್ಮ ದಾಲ್ ಮಿಲ್ ದಲ್ಲಿರುವ ಇಸ್ಮಾಯಿಲ್ ಇತನು ಪೋನ್ ಮಾಡಿ ನಮ್ಮ ಕಾರ್ಯಾಲಯ ಮತ್ತು ವಿಶ್ರಾಂತಿ ಕೋಣೆ ಬಾಗಿಲ ಕೀಲಿ ಮತ್ತು ಕೊಂಡಿ ಮುರಿದು ಬಿದ್ದರುತ್ತವೆ, ಕಳ್ಳತನವಾದಂತೆ ಕಂಡು ಬರುತ್ತಿದೆ ಅಂತಾ ತಿಳಿಸಿದ ಮೇರೆಗೆ  ನಾನು ಮತ್ತು ನಮ್ಮ ತಂದೆ 06-30 ಎ.ಎಮ್ ಕ್ಕೆ  ಹೋಗಿ ನೋಡಲು ನಮ್ಮ ದಾಲ್ ಮಿಲ್ಲಿನ ಎಲ್ಲಾ ಕೆಲಸಗಾರರು ನೆರೆದಿದ್ದು, ನೋಡಲಾಗಿ ನಮ್ಮ ಕಾರ್ಯಾಲಯದ ಬಾಗಿಲ ಕೀಲಿ ಮುರಿದು ಬಿದ್ದಿದ್ದು ಒಳಗಡೆ ಹೋಗಿ ನೋಡಲು ಟ್ರಜರಿ ಬಾಗಿಲ ಮುರಿದು ಒಳಗಡೆಯ ಲಾಕರ್ ಮುರಿದು ಅದರಲ್ಲಿದ್ದ 415000/- ನಗದು ಹಣ ಕಳತನವಾಗಿರುತ್ತದೆ. ನಂತರ ಪಕ್ಕದಲ್ಲಿರುವ ವಿಶ್ರಾಂತಿ ಕೊಣೆಗೆ ಹೋಗಿ ನೋಡಲು ಅದರ ಬಾಗಿಲ ಮುರಿದು ಬೆಡ್ ರೂಮಿನಲ್ಲಿದ್ದ ಟ್ರಜರಿ ಬಾಗಿಲ ಮುರಿದು ಅದರಲ್ಲಿದ್ದ 2000/- ನಗದು ಹಣ ಮತ್ತು 5 ತೊಲೆ ಬೆಳ್ಳಿ ಗಣೇಶನ ಮೀರ್ತಿ ಕಳ್ಳತನವಾಗಿರುತ್ತವೆ. ದಿನಾಂಕ 28-03-2019 ರಂದು 08-00 ಪಿ.ಎಮ್ ದಿಂದ ದಿನಾಂಕ 29-03-2019 ರಂದು 06-00 ಎ.ಎಮ್ ಮದ್ಯದ ಅವಧಿಯಲ್ಲಿ ಯಾರೋ ಕಳ್ಳರು ನಮ್ಮ ರಾಜೇಶ್ವರಿ ದಾಲ್ ಮಿಲನಲ್ಲಿನ ಕಾರ್ಯಾಲಯದ ಮತ್ತು ವಿಶ್ರಾಂತಿ ಕೊಣೆಯ ಬಾಗಿಲ ಕೀಲಿ ಮತ್ತು ಕೊಂಡಿ ಮುರಿದು ಒಳಗಡೆ ಇದ್ದ ಟ್ರಜರಿಗಳ ಬಾಗಿಲನ್ನು ಮುರಿದು ಅದರಲ್ಲಿದ್ದ 1) ನಗದು ಹಣ 4,17,000=00 ಮತ್ತು 2) 5 ತೊಲೆ ಬೆಳ್ಳಿಯ ಗಣೇಶನ ಮೂರ್ತಿ ಅ.ಕಿ. 1000/- ರೂ ಹೀಗೆ ಒಟ್ಟು 4,18,000/- ರೂಗಳ ಕಿಮ್ಮತ್ತಿನದು ಕಳ್ಳತನಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಫರತಾಬಾದ ಠಾಣೆ : ನಾಂಕ 29/03/2019 ರಂದು 8.30 ಪಿ.ಎಮಕ್ಕೆ ದಿನಾಂಕ 28/03/2019 ರಂದು 1.15 ಪಿ.ಎಮಕ್ಕೆ ಕೇಂದ್ರ ಕಾರಾಗೃಹದಲ್ಲಿ ವಿಚಾರಣೆ ಕೈದಿಗಳಾದ 1) ವಿಕ್ರಮ ಪ್ರಸಾದ ತಂದೆ ಬಸವರಾಜ ಯು.ಟಿ.ಪಿ ನಂ 1059 2) ಶ್ರೀಶೈಲ ತಂದೆ ಸಾಗರ @ ಮಲ್ಲಿಕಾರ್ಜುನ ಯು.ಟಿ.ಪಿ ನಂ 7370 3) ಉಮೇಶ ತಂದೆ ಯಲ್ಲಪ್ಪ ಯು.ಟಿ.ಪಿ ನಂ 10861 4) ಬಾಬು @ ಬಾಬ್ಯಾ ತಂದೆ ಮೇಘು ರಾಠೋಡ ಯು.ಟಿ.ಪಿ ನಂ 10862 ಇವರುಲು ವಿಚಾರಣೆ ಕೈದಿಯಾದ ಗುರುರಾಜ ತಂದೆ ಶೇಷಪ್ಪ ಯು.ಟಿ.ಪಿ ನಂ 7587 ಇತನು ಇರುವ ಕೋಠಾಡಿ ನಂ 03 ಕ್ಕೆ ದುರುದ್ದೇಶದಿಂದ ಹೊಗಿ ಮನೊರಂಜನೆಗಾಗಿ ಕೊಟ್ಟ ಕ್ಯಾರಾಮ ಬೊರ್ಡನ್ನು ಮುರಿದು ಅದರ ಚೌಕಟ್ಟಿನಿಂದ ತಲೆಗೆ ಹೊಡೆದು ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ ಅಂತಾ ಶ್ರೀ ಕೃಷ್ಣಕುಮಾರ ಮುಖ್ಯ  ಅಧೀಕ್ಷಕರು ಕೇಂದ್ರ ಕಾರಾಗೃಹ ಕಲಬುರಗಿ ರವರು  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

29 March 2019

KALABURAGI DISTRICT REPORTED CRIMES

ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 28-03-2019 ರಂದು ಸೋನ್ನ ಗ್ರಾಮದ ಭೀಮಾನದಿಯಿಂದ ಟ್ರ್ಯಾಕ್ಟರನಲ್ಲಿ ಮರಳು ತುಂಬಿಕೊಂಡು ಬಳೂಂಡಗಿ  ಮಾರ್ಗವಾಗಿ ಕ್ಯಾನಾಲ ರೋಡಿಗೆ ಹಾದುಕೊಂಡು ಬಳೂರ್ಗಿ ರೋಡಿಗೆ ಹೊಗುತ್ತದೆ ಅಂತಾ ಮಾಹಿತಿ ಬಂದ ಮೇರೆಗೆ, ಸಿ.ಪಿ. ಅಫಜಲಪೂರ ವೃತ್ತ  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಅಫಜಲಪೂರ - ಬಳೂರ್ಗಿ ರೋಡಿಗೆ ಹಳ್ಯಾಳ ಕ್ರಾಸ ಹತ್ತಿರ ಹೋಗುತ್ತಿದ್ದಾಗ ನಮ್ಮ ಮುಂದಿನಿಂದ ಒಂದು ಮರಳು ತುಂಬಿದ ಟ್ರ್ಯಾಕ್ಟರ ಹೋಗುತಿತ್ತು , ಆಗ ನಾವು ಟ್ಯಾಕ್ಟರ ಹಿಂದೆ ಹಾಕಿ ಸದರಿ ಟ್ರ್ಯಾಕ್ಟರನ್ನು ನಿಲ್ಲಿಸುವಂತೆ ಟ್ರ್ಯಾಕ್ಟರ ಚಾಲಕನಿಗೆ ಕೈ ಸೂಚನೆ ಕೊಟ್ಟಾಗ, ಟ್ರ್ಯಾಕ್ಟರ ಚಾಲಕ ನಮ್ಮ ಪೊಲೀಸ್ ಜೀಪನ್ನು ನೋಡಿ ಟ್ರ್ಯಾಕ್ಟರನ್ನು ಸ್ಥಳದಲ್ಲೆ ಬಿಟ್ಟು ಓಡಿ ಹೋದನು. ಆಗ ನಾವು ಪಂಚರ ಸಮಕ್ಷಮ ಸದರಿ ಟ್ರ್ಯಾಕ್ಟರನ್ನು ಚೆಕ್ಕ ಮಾಡಲು Mahindra Arjun ಕಂಪನಿಯ ಟ್ರ್ಯಾಕ್ಟರ ಇದ್ದು  ಅದರಲ್ಲಿ ಮರಳು ತುಂಬಿದ್ದು ಇತ್ತು ಮತ್ತು ಅದರ  ನಂ ಕೆಎ-32 ಟಿಎ-8397 , ಇಂಜೆನ ನಂ NSCA01085 ಅಂತಾ ಇದ್ದು. ಸದರಿ ಟ್ಯಾಕ್ಟರ ಟ್ರೈಲಿ ನಂ ಕೆಎ-32 ಟಿ-7865 ಇದ್ದು, ಸದರಿ ಟ್ರೈಲಿಯಲ್ಲಿ ಮರಳು ತುಂಬಿದ್ದು ಇತ್ತು. ಸದರಿ ಟ್ರ್ಯಾಕ್ಟರ .ಕಿ 5,00,000/-ರೂ  ಇರಬಹುದು. ಸದರಿ ಟ್ರ್ಯಾಕ್ಟರ ಟ್ರೈಲಿಯಲಿದ್ದ  ಮರಳಿನ .ಕಿ 3000/- ರೂ ಇರಬಹುದು. ನಂತರ ಸದರಿ ಅಕ್ರಮವಾಗಿ ಮರಳು ತುಂಬಿದ ಟ್ರ್ಯಾಕ್ಟರನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಹಲ್ಲೆ ಪ್ರಕರಣ :
ನರೋಣಾ ಠಾಣೆ : ಶ್ರೀ.ಶ್ರೀಪಾದ ತಂದೆ ಅಂಬಾರಾವ ಕುಲಕರ್ಣಿ ರವರು  ಕೆಲವು ದಿವಸಗಳ ಹಿಂದೆ ನಮ್ಮೂರಿನ ಪುತಳಬಾಯಿ ಗಂಡ ವಿಠಲ್ ಮಾದಗೊಂಡ ಇವರ ಖುಲ್ಲಾ ಪ್ಲಾಟನ್ನು 5,11,000/- ರೂಪಾಯಿಗಳಿಗೆ ಖರಿದಿಸಿ ಹಣ ಕೊಟ್ಟಿರುತ್ತೇನೆ. ಇದಕ್ಕೆ ಸಂಬಂಧಿಸಿದ ಶೇಲ್ಡೀಡ್ ಹಾಗೂ ರಜಿಸ್ಟ್ಟೇಷನ ಪತ್ರಗಳನ್ನು ನಮ್ಮೂರಿನ ಗ್ರಾಮ ಪಂಚಾಯಿತಿ ಕಾರ್ಯಲಯಕ್ಕೆ ಮೊಟೆಷನ ಸಲುವಾಗಿ ಸುಮಾರು ಒಂದುವರಿ ತಿಂಗಳ ಹಿಂದೆ ಸಲ್ಲಿಸಿರುತ್ತೇನೆ. ಸದರಿ ಪುತಳಬಾಯಿ ಇವರಿಂದ ನಾನು ಖರಿದಿಸದ ಪ್ಲಾಟಿನ ಪಕ್ಕದಲ್ಲಿ ಪುತಳಬಾಯಿ ಇವರ ಸಂಬಂಧಿಕರಾದ ಶಾಂತಪ್ಪಾ ತಂದೆ ಶ್ರೀಮಂತ ಇವರು ಪ್ಲಾಟ್ ಇರುತ್ತದೆ. ದಿನಾಂಕ:31/03/2019 ರಂದು ನನ್ನ ಅಣ್ಣನಾದ ಹಣಮಂತರಾವ ಇವರ ಮಗನ ಮದುವೆ ಇದ್ದ ಪ್ರಯುಕ್ತ ನಾನು ಖದಿರಿದಿಸಿದ ಪ್ಲಾಟಿನಲ್ಲಿ ರಿಶಫಶನ ಕಾರ್ಯಕ್ರಮ ಇಟ್ಟಿಕೊಳ್ಳುವ ಸಂಬಂಧ ನಾನು ಸದರಿ ಪ್ಲಾಟಿನಲ್ಲಿ ಕಟ್ಟಿಗೆ ಕುಳ್ಳ ಹಾಕಿರುವ ಶಾಂತಪ್ಪಾ ಇವರಿಗೆ ದಿನಾಂಕ:27/03/2019 ರಂದು ಸಾಯಂಕಾಲ 4-45 ಅವರ ಮನೆಗೆ ಹೋಗಿ ತಗೆದುಕೊಳ್ಳಲು ಹೇಳಿದ್ದಕ್ಕೆ ಶಾಂತಪ್ಪಾ ಇವನು ನಿಮ್ಮೌನ್ ಬೋಳಮಗನೆ ನೀಯಾರು ನಮಗ ಹೇಳವ ಅಂತಾ ಬೈದು ನನಗೆ ಎದೆಯ ಮೇಲಿನ ಅಂಗಿಹಿಡಿದು ಎಳೆದಾಡಿ ಕೈಯಿಂದ ಹೊಟ್ಟೆ ಮುಖಕ್ಕೆ ಹೊಡೆದು ನಂತರ ಒಂದು ಕಟ್ಟಿಗೆಯಿಂದ ನನ್ನ ನಡುತೆಲೆಗೆ ಹೊಡೆದನು ಕರಬಸಪ್ಪಾ ಈತನು ಒಂದು ಕಲ್ಲಿನಿಂದ ಜೋರಾಗಿ ನನ್ನ ತಲೆಗೆ ಹೊಡೆದನು ಘಟನೆಯನ್ನು ನೋಡಿ ಬಿಡಿಸಲು ಬಂದ ನನ್ನ ಅಣ್ಣ ಹಣಮಂತರಾವ ಈತನಿಗೆ ಕರಬಸಪ್ಪಾ ಈತನು ತನ್ನ ಮನೆಯಿಂದ ಒಂದು ಕಬ್ಬಿಣದ ರಾಡತಂದು ನಿನಗೆ ಜೀವ ಸಹೀತ ಬಿಡಂಗಿಲ್ಲಾ ಅಂತಾ ಹೇಳಿ ಕೊಲೆಮಾಡುವ ಉದ್ದೇಶದಿಂದ ತಲೆಗೆ ಹೊಡೆದು ರಕ್ತಗಾಯ ಪಡಿಸಿದನು ಆಗ ನಾನು ಬಿಡಿಸಲು ಹೋದಾಗ ಜೋತಿ ಗಂಡ ಕರಬಸಪ್ಪಾ ಮಹಾನಂದ ಗಂಡ ಶಾಂತಪ್ಪಾ ಇವರು ನನಗೆ ಮುಂದೆ ಹೊಗದಂತೆ ತಡೆದು ಘಟ್ಟಿಯಾಗಿ ಹಿಡಿದರು ಇವರಿಗೆ ಬಿಡಬೇಡಿ ಖಲಾಸ ಮಾಡ್ರೀ ಅಂತಾ ಹೇಳುತ್ತಾ ಬಿಡಿಸಲು ಬಂದ ನನ್ನ ಅಣ್ಣನ ಹೆಂಡತಿ ಚಂದಮ್ಮಾ ಇವಳಿಗೆ ಶಾಂತಪ್ಪನು ಕಟ್ಟಿಗೆಯಿಂದ ಕುತ್ತಿಗೆ ಮೇಲೆ ಹೊಡೆದನು. ಮಾರಣಾಂತಿಕ ಹಲ್ಲೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ,