POLICE BHAVAN KALABURAGI

POLICE BHAVAN KALABURAGI

04 December 2017

KALABURAGI DISTRICT PRESS NOTE

ಪತ್ರಿಕಾ ಪ್ರಕಟಣೆ
ಃ ಕಲಬುರಗಿ ಜಿಲ್ಲಾ ಪೊಲೀಸರ ಕಾರ್ಯಚರಣೆ ಃ
09 ಜನರ ಬಂಧನ  20 ನಾಡ ಪಿಸ್ತೂಲ್ ಹಾಗೂ 54 ಜೀವಂತ ಗುಂಡುಗಳ ಜಪ್ತಿ
          ದಿನಾಂಕ 21-10-2017 ರಂದು ಕಲಬುರಗಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಿಂದ ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಆರೋಪಿತರನ್ನು ದಸ್ತಗಿರಿ ಮಾಡಿ ಅವರಿಂದ 10 ನಾಡ ಪಿಸ್ತೂಲ್ ಹಾಗೂ 10 ಜೀವಂತ ಗುಂಡುಗಳನ್ನು ಜಪ್ತಿ ಮಾಡಿಕೊಳ್ಳಲಾಗಿತ್ತು. ಆರೋಪಿತರ ವಿಚಾರಣೆಯ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಇನ್ನು ಹಲವಾರು ಕಡೆ ಅಕ್ರಮ ಶಸ್ತ್ರಾಸ್ತ್ರ  ಹೊಂದಿದ ಮಾಹಿತಿ ತಿಳಿದು ಬಂದ ಮೇರೆಗೆ ಮಾನ್ಯ ಶ್ರೀ ಆಲೋಕ್ ಕುಮಾರ್, ಐಪಿಎಸ್., ಐ.ಜಿ.ಪಿ., (ಈ.ವ) ಕಲಬುರಗಿರವರು ಶ್ರೀ ಎನ್. ಶಶಿಕುಮಾರ್, ಐಪಿಎಸ್., ಎಸ್.ಪಿ ರವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿ ಸದರಿ ತಂಡದಲ್ಲಿ ಶ್ರೀ ಜಯ ಪ್ರಕಾಶ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಶ್ರೀ ಲೋಕೇಶ್, ಬಿ.ಜೆ., ಐಪಿಎಸ್, ಎ.ಎಸ್.ಪಿ  (ಎ) ಉಪ ವಿಭಾಗ, ಶ್ರೀ ಎಸ್.ಎಸ್. ಹುಲ್ಲೂರ್, ಡಿ.ಎಸ್.ಪಿ ಗ್ರಾಮೀಣ ಉಪ ವಿಭಾಗ, ಶ್ರೀ ಕಪಿಲ್ದೇವ, ಪಿ.ಐ ಡಿ.ಸಿ.ಬಿ, ಶ್ರೀ ಸೋಮಲಿಂಗ ಕಿರದಳ್ಳಿ, ಪಿಐ ಡಿಸಿಐಬಿ, ಶ್ರೀ ಹಣಮಂತ ಸಣ್ಣಮನಿ, ಸಿ.ಪಿ.ಐ ಆಳಂದ, ಶ್ರೀ ಜೆ.ಹೆಚ್. ಇನಾಮದಾರ್, ಸಿಪಿಐ ಅಫಜಲಪೂರ, ಶ್ರೀ ಡಿ.ಬಿ ಪಾಟೀಲ್, ಸಿಪಿಐ ಜೇವರಗಿ, ಶ್ರೀ ಮಂಜುನಾಥ ಹೂಗಾರ, ಪಿ.ಎಸ್.ಐ ಜೇವರಗಿ, ಸಂತೋಷ ರಾಠೋಡ್, ಪಿ.ಎಸ್.ಐ ಅಪಜಲಪೂರ, ಪ್ರದೀಪ ಬಿಸೆ ಪಿ.ಎಸ್.ಐ ಮಹಾಗಾಂವ, ಹಾಗೂ ಎ.ಎಸ್.ಐ ಕಮಾಂಡೊ ಶಿವಪ್ಪ, ಹಾಗೂ ನುರಿತ ಸಿಬ್ಬಂದಿಯವರನ್ನು ಹೊಂದಿರುವ ತಂಡವು ಸುಮಾರು ಒಂದುವರೆ ತಿಂಗಳಿಂದ ಜಿಲ್ಲೆಯಾದ್ಯಾಂತ ಮಾಹಿತಿಯನ್ನು ಸಂಗ್ರಹಿಸಿ ದಿನಾಂಕ 03-12-2017 ರಂದು ರಾತ್ರಿ ಜಿಲ್ಲೆಯಾದ್ಯಾಂತ ಎಕ ಕಾಲದಲ್ಲಿ ದಾಳಿಯನ್ನು ಮಾಡಿ ಆರ್.ಜಿ ನಗರ ಪೊಲೀಸ್ ಠಾಣೆಯಲ್ಲಿ ಆರೋಪಿ ನಿಂಗಪ್ಪ ಇತನಿಂದ 02 ನಾಡ್ ಪಿಸ್ತೂಲ್, 06 ಜೀವಂತ ಗುಂಡುಗಳು, ಹಾಗೂ  ಸ್ಟೇಷನ್ ಬಜಾರ ಪೊಲೀಸ್ ಠಾಣೆಯಲ್ಲಿ ಆರೋಪಿ ಇಫರ್ಾನ ಪಟೇಲ್ ಈತನಿಂದ 03 ನಾಡ್ ಪಿಸ್ತೂಲ್ ಹಾಗೂ 07 ಜೀವಂತ ಗುಂಡುಗಳು, ಜೇವರಗಿ ಪೊಲೀಸ್ ಠಾಣೆಯ ಸರಹದ್ದಿನ ರ್ಯಾವನೂರ ಕ್ರಾಸ್ ಹತ್ತಿರ ದರೋಡೆಗೆ ಯತ್ನಿಸಿದ ಆರೋಪಿತರಾದ   ಸಚೀನ @ ಮಲ್ಲಿಕಾಜರ್ುನ, ಇಮಾಮ ಹಾಗೂ ಮಲ್ಕಣ್ಣ ಇವರಿಂದ 03 ನಾಡ ಪಿಸ್ತೂಲ್ಗಳು, 09 ಜೀವಂತ ಗುಂಡುಗಳುನೆಲೋಗಿ ಪೊಲೀಸ್ ಠಾಣೆಯಲ್ಲಿ ಆರೋಪಿ ಶಿವಪ್ಪ ಇತನಿಂದ 03 ನಾಡ ಪಿಸ್ತೂಲ್ಗಳು ಹಾಗೂ 09 ಜೀವಂತ ಗುಂಡುಗಳು, ಅಫಜಲಪೂರ ಪೊಲೀಸ್ ಠಾಣೆಯಲ್ಲಿ ಆರೋಪಿ ಲಾಲಸಾಬ ಇತನಿಂದ 03 ನಾಡ್ ಪಿಸ್ತೂಲ್ಗಳು ಹಾಗೂ 09 ಜೀವಂತ ಗುಂಡುಗಳು, ಇನ್ನೊರ್ವ ಆರೋಪಿ ಮಲ್ಲಿಕಾಜರ್ುನ @ ಮಲ್ಕ್ಯಾ ಇತನಿಂದ 02 ನಾಡ ಪಿಸ್ತೂಲ್ಗಳು ಹಾಗೂ 06 ಜೀವಂತ ಗುಂಡುಗಳುಗಾಣಗಾಪೂರ ಪೊಲೀಸ್ ಠಾಣೆಯಲ್ಲಿ 03 ನಾಡ್ ಪಿಸ್ತೂಲ್ಗಳು ಹಾಗೂ 08 ಜೀವಂತ ಗುಂಡುಗಳು  ಹೀಗೆ ಒಟ್ಟು 20 ನಾಡ್ ಪಿಸ್ತೂಲ್, 55 ಜೀವಂತ ಗುಂಡುಗಳನ್ನು ಜಪ್ತುಪಡಿಸಿಕೊಳ್ಳಲಾಗಿದೆ.
          ಆರ್.ಜಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದ ಆರೋಪಿತನಾದ ನಿಂಗಪ್ಪ ಪೂಜಾರಿ ಇತನಿಂದ 02 ನಾಡ ಪಿಸ್ತೂಲ್ಗಳನ್ನು ಜಪ್ತಿ ಪಡಿಸಿಕೊಂಡಿದ್ದು, ಅವುಗಳನ್ನು ಅಜರ್ುನ ಭೋಸಗಾ, ಮಲ್ಲಿಕಾಜರ್ುನ ದೇವಲಗಾಣಗಾಪೂರ ಇತನಿಂದ ಪಡೆದುಕೊಂಡಿದ್ದು, ಮತ್ತು ಸದರಿ ಆರೋಪಿತರ ಹತ್ತಿರ ಇನ್ನು ಹಲವಾರು ಕಂಟ್ರಿ ಪಿಸ್ತೂಲ್ಗಳು ಹೊಂದಿದ್ದು ಅವುಗಳನ್ನು ದೇವಲಗಾಣಗಾಪೂರ ದತ್ತ ಜಯಂತಿ ಜಾತ್ರೆಯಲ್ಲಿ ಮಾರಾಟ ಮಾಡುವುದಾಗಿ  ಹಾಗೂ ಗೊಬ್ಬುರದ ಹತ್ತಿರ ಆಶ್ರಯ ಪಡೆದುಕೊಂಡಿರುತ್ತಾರೆ ಎಂಬ ಖಚಿತವಾದ ಮಾಹಿತಿ ನೀಡಿದ ಮೇರೆಗೆ ಇಂದು ದಿನಾಂಕ 04-12-2017 ರಂದು ಎ.ಎಸ್.ಪಿ ಲೋಕೇಶ್, ಐಪಿಎಸ್., ಕಲಬುರಗಿ (ಎ) ಉಪ ವಿಭಾಗ ರವರ ನೇತೃತ್ವದಲ್ಲಿ ಶ್ರೀ ಕಪಿಲ್ದೇವ, ಪಿ.ಐ ಡಿ.ಸಿ.ಬಿ ಘಟಕ, ಪಿ.ಎಸ್.ಐ ಮಹಾಗಾಂವ, ಜೇವರಗಿ, ಎ.ಎಸ್.ಐ ಶಿವಪ್ಪ ಹಾಗೂ ಸಿಬ್ಬಂದಿಯವರನೊಳಗೊಂಡ ತಂಡವು ಬೆಳಿಗಿನ ಜಾವ 08:00 ಗಂಟೆಗೆ ಅವರ ಮೇಲೆ ದಾಳಿ ಮಾಡಿ ಹಿಡಿಯಲು ಪ್ರಯತ್ನಿಸಿದಾಗ ಆರೋಪಿತನಾದ ಅಜರ್ುನ ಇತನು ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯವರ ಮೇಲೆ ಕಲ್ಲಿನಿಂದ ಹೊಡೆದು ಗಾಯಗೊಳಿಸಿ ಓಡಿ ಹೋಗುತ್ತಿರುವಾಗ ನಿಲ್ಲಲು ಹಲವಾರು ಸಲ ಎಚ್ಚರಿಕೆಯನ್ನು ನೀಡಿದರೂ ಸಹ ನಿಲ್ಲದೆ, ಚಾಕುವಿನಿಂದ ಸಿಬ್ಬಂದಿಯವರ ಮೇಲೆ ಪ್ರತಿದಾಳಿ ಮಾಡಿ ಕೊಲೆಗೆ ಪ್ರಯತ್ನಿಸಿದಾಗ ಸಿಬ್ಬಂದಿಗಳ ಜೀವ ರಕ್ಷಣೆ ಹಾಗೂ ಆತ್ಮ ರಕ್ಷಣೆಗಾಗಿ ಹಲ್ಲೆ ಮಾಡಿದ ಆರೋಪಿತನ ಮೇಲೆ ಅನಿವಾರ್ಯವಾಗಿ ಕನಿಷ್ಠ ಬಲ ಪ್ರಯೋಗ ಮಾಡಿ ಗುಂಡಿನ ದಾಳಿಯನ್ನು ಮಾಡಿದಾಗ ಸದರಿ ಗುಂಡು ಆರೋಪಿತನ ಬಲಗಾಲಿನ ಮೊಳಕಾಲಿಗೆ ತಗಲಿರುತ್ತದೆ. ಆರೋಪಿತನನ್ನು ದಸ್ತಗಿರಿ ಮಾಡಿ ಉಪಚಾರ ಕುರಿತು ಜಿಲ್ಲಾ ಸಕರ್ಾರಿ ಆಸ್ಪತ್ರೆಗೆ ದಾಖಲು ಮಾಡಿದ್ದು ಇರುತ್ತದೆ.
          ದಿನಾಂಕ 21-10-2017 ರಂದು 10 ನಾಡ್ ಪಿಸ್ತೂಲ್ಗಳು ಹಾಗೂ 24 ಜೀವಂತ ಗುಂಡುಗಳು, ಇಂದು ದಿನಾಂಕ 04-12-2017 ರಂದು ಒಟ್ಟು 20 ನಾಡ್ ಪಿಸ್ತೂಲ್ಗಳು ಹಾಗೂ 54 ಜೀವಂತ ಗುಂಡುಗಳು ಹೀಗೆ ಇಲ್ಲಿಯವರೆಗೂ ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 30 ನಾಡ್ ಪಿಸ್ತೂಲ್ಗಳು ಹಾಗೂ 78 ಜೀವಂತ ಗುಂಡುಗಳನ್ನು ಜಪ್ತು ಪಡಿಸಿಕೊಳ್ಳಲಾಗಿದೆ. ಇನ್ನು ಜಿಲ್ಲೆಯಾದ್ಯಾಂತ ಹಲವಾರು ಕಡೆ ಅಕ್ರಮ ಶಸ್ತ್ರಾಸ್ತ್ರಗಳನ್ನು ಹೊಂದಿದ ಹಾಗೂ ಪೂರೈಕೆದಾರರ ಮಾಹಿತಿ ಇದ್ದು ಸದರ ಕಾರ್ಯಾಚರಣೆಯನ್ನು ಮುಂದು ವರೆಸಲಾಗುವುದು.
          ಶ್ರೀ ಆಲೋಕ್ ಕುಮಾರ್, ಐಪಿಎಸ್., ಮಾನ್ಯ ಐಜಿಪಿ, ಈಶಾನ್ಯ ವಲಯ, ಕಲಬುರಗಿರವರು ತಂಡದ ಕಾರ್ಯಚರಣೆಯನ್ನು ಶ್ಲಾಘಿಸಿ ಬಹುಮಾನವನ್ನು ಘೋಶಿಸಿರುತ್ತಾರೆ. 

KALABURAGI DISTRICT REPORTED CRIMES

ವರದಕ್ಷಣೆ ಕಿರುಕಳ ನೀಡಿ ಕೊಲೆ ಮಾಡಿರುವ ಪ್ರಕರಣ  :
ಕಮಲಾಪೂರ ಠಾಣೆ : ಶ್ರೀಮತಿ ನಾಗಮ್ಮ ಗಂಡ ನಾಗೇಶ ಮೋತಕಪಳ್ಳಿ ಸಾ:ತೆಗಲತಿಪ್ಪಿ ತಾ:ಚಿಂಚೋಳಿ ಜಿ:ಕಲಬುರಗಿ ಇವರು  3 ವರ್ಷಗಳ ಹಿಂದೆ ನನ್ನ ಮಗಳಾದ ಶ್ರೀಮತಿ ಶರಣಮ್ಮ @ ಸಂಗೀತಾ ಇವಳನ್ನು ಶ್ರೀ ಶಿವಕುಮಾರ ತಂದೆ ಬಸವರಾಜ ಮಳಸಾನೋರ ಸಾ:ಸೊಂತ ತಾ:ಜಿ:ಕಲಬುರಗಿ ಯವರಿಗೆ ಮದುವೆ ಮಾಢಿ ಕೋಟ್ಟಿರುತ್ತೇನೆ. ಆದರೆ ಗಂಡನ ಮನೆಯಲ್ಲಿ ನನ್ನ ಮಗಳಿಗೆ ನಿನ್ನ ತವರು ಮನೆಯಿಂದ 5 ಲಕ್ಷ ರೂಪಾಯಿಗಳು ತಗೊಂಡು ಬಾ ಎಂದು ಕಿರುಕುಳ ಕೋಡುತ್ತಿದ್ದರು. ಆಗ ನಮ್ಮೂರಿನ ಹಿರಿಯರ ಸಮಕ್ಷಮದಲ್ಲಿ ನನ್ನ ಅಳೀಯನಿಗೆ ಈ ಹಿಂದೆ 2 ಲಕ್ಷ ರೂಪಾಯಿಗಳು ನನ್ನ ಮಗಳು ಸುಖವಾಗಿಟ್ಟುಕೋಳ್ಳುತ್ತಾರೆ ಎಂಬ ಭರವಸೆಯ ಮೇಲೆ ಕೋಟ್ಟಿರುತ್ತೇನೆ. ಆದರೆ ಅತ್ತೆ ಸರಸ್ವತಿ ಮಾವ ಬಸವರಾಜ ಗಂಡ ಶಿವಕುಮಾರ ಮೈದುನ ಸಂಜಪ್ಪ ಇಷ್ಟು ಹಣ ಪಡೆದು ತೃಪ್ತರಾಗದೆ ಮತ್ತೆ ಕಿರುಕುಳ ನಿಡಿರುತ್ತಾರೆ. ದಿನಾಂಕ:03.12.2017 ರಂದು ಬೆಳಿಗ್ಗೆ 06 ಗಂಟೆಗೆ ನನಗೆ ನಮ್ಮ ಅಳಿಯನಾದ ಶ್ರೀ ಶಿವಕುಮಾರ ದೂರವಾಣಿ ಮೂಲಕ ಕರೆಮಾಡಿ ನಿಮ್ಮ ಮಗಳು ಕಾಣುತ್ತಿಲ್ಲ ಎಲ್ಲಿಗೆ ಹೋಗಿರುತ್ತಾಳೊ ಗೋತ್ತಿಲ್ಲ ಎಂದು ಕರೆ ಮಾಡಿರುತ್ತಾನೆ. ಆಗ ನಾನು ಮತ್ತು ನಮ್ಮ ಮನೆಯವರೆಲ್ಲರೂ ಸೇರಿ ಸೊಂತ ಗ್ರಾಮಕ್ಕೆ ಬೆಳಿಗ್ಗೆ 08 ಗಂಟೆಗೆ ಹೋಗಿರುತ್ತೇವೆ. ಆಗ ಅಳಿಯನಾದ ಶ್ರೀ ಶಿವಕುಮಾರ ಕಮಲಾಪೂರ ಪೋಲಿಸ ಠಾಣೆಯಲ್ಲಿ ಹೋಗಿ ಕುಳಿತಿರುತ್ತಾನೆ. ಮತ್ತು ಅತ್ತೆ ಮಾವ ಮೈದುನರು ಮನೆಗೆ ಕಿಲಿ ಹಾಕಿ ಬೇರೋಬ್ಬರ ಮನೆಯಲ್ಲಿ ಹೋಗಿ ಕುಳಿತಿರುತ್ತಾರೆ. ಆಗ ನಾವು ಮಗಳನ್ನು ಹುಡುಕಾಡಿದಾಗ ಸ್ವಲ್ಪ ದೂರದಲ್ಲಿ ಇರುವ ಬಾವಿ ಬಳಿ ನನ್ನ ಮಗಳು ಚಪ್ಪಲಿಗಳು ಬಿದ್ದಿರುವುದು ಕಂಡುಬಂದಿರುತ್ತದೆ. ಆದ ಕಾರಣ ಇದು ಪೂರ್ವ ನಿಯೋಜಿತ ಕೋಲೆ ಆಗಿರುತ್ತದೆ. ಎಂದು ಸ್ಟಷ್ಟವಾಗಿ ಕಂಡು ಬಂದಿರುತ್ತದೆ. ಈ ಕೋಲೆಯು ನನ್ನ ಮಗಳ ಅತ್ತೆಯಾದ ಶ್ರೀಮತಿ ಸರಸ್ವತಿ ಗಂಡ ಬಸವರಾಜ ಮಳಸಾನೋರ ಮಾವನಾದ ಶ್ರೀ ಬಸವರಾಜ ತಂದೆ ಗುಂಡಪ್ಪ ಮಳಸಾನೋರ ಗಂಡನಾದ ಶ್ರೀ ಶಿವಕುಮಾರ ತಂದೆ ಬಸವರಾಜ ಮಳಸಾನೋರ ಹಾಗೂ ಮೈದುನಾದ ಸಂಜಪ್ಪ ತಂದೆ ಬಸವರಾಜ ಮಳಸಾನೋರ ಇವರೆಲ್ಲರೂ ಈ ಕೋಲೆಯಲ್ಲಿ ಭಾಗಿಯಾಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಮಾಡಿ ಅತ್ಯಾಚಾರ ಮಾಡಿದ ಪ್ರಕರಣ :
ಫರತಾಬಾದ ಠಾಣೆ : ಶ್ರೀ ಇವರ ಮಗಳಾದ ಕುಮಾರಿ ಇವಳಿಗೆ ನನ್ನ ಅಳಿಯ ಮಿಥನ್ ತಂದೆ ದಾಮಲು ಜಾದವ ಸಾಃ ಮಿಣಜಗಿ ತಾಂಡಾ ಈತನು ದಿನಾಂಕ 30/11/2017 ರಂದು ಸಮಯ ಮದ್ಯಾಹ್ನ 1.30ಕ್ಕೆ ನನ್ನ ಮಗಳು ಓದುತ್ತಿರುವ ಸರ್ಕಾರಿ ಪ್ರೌಡ ಶಾಲೆ ಖಣದಾಳ (10ನೇ ತರಗತಿ) ಇಲ್ಲಿಂದ ಪುಸಲಾಯಿಸಿ ಜಬರಿಯಿಂದ ಮನೆಯಲ್ಲಿ ಜಗಳವಾಗಿದೆ ಎಂದು ಸುಳ್ಳು ಹೇಳಿ ಅಪಹರಿಸಿಕೊಂಡು ಹೊಗಿರುತ್ತಾನೆ. ಅಪಹರಿಸಿಕೊಂಡು ಹೋದ ವ್ಯಕ್ತಿಯು ನನ್ನ ಮೊದಲನೆ ಮಗಳ ಗಂಡನಾಗಿದ್ದು, ಅದರ ಲಾಭ ಪಡೆದು ಸುಳ್ಳು ಹೇಳಿ ನನ್ನ ಮಗಳನ್ನು ಅಪಹರಿಸಿಕೊಂಡು ಹೊಗಿದ್ದು, ನನ್ನ ಮಗಳು ಅಪ್ರಾಪ್ತಳಾಗಿದ್ದು ಅವಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಸಂಶಯ ಇದ್ದು, ನಮ್ಮ ಮಗಳನ್ನು ವೈದ್ಯಕೀಯ ಚಿಕಿತ್ಸೆ ಕೊಡಿಸಿ ಆರೋಪಿತನ ವಿರುದ್ದ ಕಾನೂನಿನ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.