POLICE BHAVAN KALABURAGI

POLICE BHAVAN KALABURAGI

26 June 2012

GULBARGA DIST REPORTED CRIMES


ಕಳ್ಳತನ ಪ್ರಕರಣ:
ಚೌಕ ಪೊಲೀಸ್ ಪೊಲೀಸ್ ಠಾಣೆ: ಶ್ರೀ ಮಿರಜಾ ರಯಾಜಬೇಗ ತಂದೆ ಮಿರಜಾ ನಜೀರಬೇಗ ಉಃ ಮಹಾನಗರ ಪಾಲಿಕ ಸದಸ್ಯ ಸಾಃ ಛೊಟಾರೋಜಾ  ಹುಸೇನಿ ಆಲಂ ಗುಲಬರ್ಗಾರವರು ನಾನು ದಿನಾಂಕ 26.06.2012 ರಂದು 12:30 ಗಂಟೆಯ ಸಮಯಕ್ಕೆ  ನನ್ನ ಸ್ನೇಹಿತ ಇಸಾಕ ಎಂಬುವರ ಇಂಡಿಯನ ಬ್ಯಾಂಕಿನಿಂದ 2,62,216/- ರೂಪಾಯಿಗಳು ಡ್ರಾ ಮಾಡಿದ್ದು, ಅದರಲ್ಲಿ 2,50,000/- ರೂಪಾಯಿಗಳನ್ನು ನನ್ನ ಹೊಂಡಾ ಎಕ್ಟಿವಾ ಮೋಟಾರ ಸೈಕಲ ಡಿಕ್ಕಿಯೊಳಗಡೆಯಿಟ್ಟು, ಉಳಿದ ಹಣ ನನ್ನ ಹತ್ತಿರ ಇಟ್ಟುಕೊಂಡಿರುತ್ತೆನೆ. ನನ್ನ ಸ್ನೇಹಿತನಾದ ನಾಗೇಂದ್ರ ಪಾಟೀಲ ಇವರ ಸಂಗಡ ಮಾತನಾಡಿ ಡಿಕ್ಕಿಯೊಳಗಡೆ ಇದ್ದ ಹಣವನ್ನು ಮತ್ತೆ ನೋಡಲಾಗಿ ಯಾರೋ ಕಳ್ಳರು ನನ್ನ ಹೊಂಡಾ ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:107/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ರೋಜಾ ಪೊಲೀಸ್ ಠಾಣೆ: ಶ್ರೀ ಸೈಯ್ಯದ ಅಕ್ಬರಿಹುಸೇನಿ ಶಾಲೆ ಗುಲಬರ್ಗಾ ದ ಶ್ರೀ ಬೆಣ್ಣಿ ತಂದೆ ಕುರಿಯ್ಯಾ ಕೇಸ ಪ್ರಾಂಶುಪಾಲರು, ಸಾ:ಆದರ್ಶ ನಗರ ಗುಲಬರ್ಗಾ ರವರು ನಾನು ಶಾಲೆಯ ಪ್ರಾಂಶುಪಾಲನಾಗಿ ಕೆಲಸ ಕರ್ತವ್ಯ ನಿರ್ವಹಿಸುತ್ತಿದ್ದು, ದಿನಾಂಕ:23/06/2012 ರಿಂದ  ದಿನಾಂಕ:25/06/2012 ಮಧ್ಯಾನದ ಅವಧಿಯ ವೇಳೆಯಲ್ಲಿ ನಮ್ಮ ಶಾಲೆಯ ಕಂಪ್ಯೂಟರ ಲ್ಯಾಬರೋಟರಿಯಿಂದ ಯಾರೋ ಕಳ್ಳರು ಕಂಪ್ಯೂಟರ್, ಮಾನೀಟರ್ , ಕೀಬೋರ್ಡ , ಮೌಸ್, ಸಿ.ಪಿ.ಯೂ ಎಲ್ಲವೂಸೇರಿ ಒಟ್ಟು 22,000/-ರೂಪಾಯಿ ಬೆಲೆ ಬಾಳುವ ಕಂಪ್ಯೂಟರ್ ಸಾಮಾನುಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ.  ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:58/2012 ಕಲಂ.454,457,380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ದೇವಲಗಾಣಗಪೂರ ಪೊಲೀಸ್ ಠಾಣೆ: ಶ್ರೀ, ಮಲ್ಲಿಕಾರ್ಜುನ ತಂದೆ ಶಿವಶರಣಪ್ಪ ಕಲಬುರ್ಗಿ  ಸಾ|| ಕಾವೇರಿನಗರ ಗುಲಬರ್ಗಾ ರವರು, ಗೊಬ್ಬೂರ[ಬಿ] ಸರ್ವೆ ನಂ:186/1ಎ ನೇದ್ದರಲ್ಲಿ  ನಿರ್ಮಿಸಿದ ವೋಡಾಪೋನ ಟವರ ಜಿಒಬಿ.001.ಇನ್.1020118ನೇದಕ್ಕೆ ಅಳವಡಿಸಿದ ಆರ್.ಎಫ್. ಕೇಬಲ್ 200 ಮೀಟರ ಅ:ಕಿ|| 12,000/-ರೂಪಾಯಿಗಳದ್ದು, ದಿನಾಂಕ:16-06-2012 ರ ರಾತ್ರಿಯಿಂದ ದಿನಾಂಕ:17-06-2012 ರ ಬೆಳಿಗ್ಗೆ 8-00 ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:72/2012 ಕಲಂ.379 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
 ಕಳ್ಳತನ ಪ್ರಕರಣ:
ದೇವಲಗಾಣಗಪೂರ ಪೊಲೀಸ್ ಠಾಣೆ: ಶ್ರೀ, ಮಲ್ಲಿಕಾರ್ಜುನ ತಂದೆ ಶಿವಶರಣಪ್ಪ ಕಲಬುರ್ಗಿ  ಸಾ|| ಕಾವೇರಿನಗರ ಗುಲಬರ್ಗಾ ರವರು, ಗೊಬ್ಬೂರ[ಬಿ] ಸರ್ವೆ ನಂ:375 ದಲ್ಲಿ ನಿರ್ಮಿಸಿದ ಏರಟೇಲ್ ಟವರ ನೇದಕ್ಕೆ ಅಳವಡಿಸಿದ ಬ್ಯಾಟ್ರಿ ಬ್ಯಾಂಕಿನ 22 ಬ್ಯಾಟ್ರಿಗಳು ಅ:ಕಿ:15,000/- ಕಿಮ್ಮತಿನದು ದಿನಾಂಕ:20-05-2012 ರ ರಾತ್ರಿಯಿಂದ ದಿನಾಂಕ:21-05-2012 ರಂದು ಬೆಳಿಗ್ಗೆ 7-45 ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ಸದರಿ ಬ್ಯಾಟ್ರಿಗಳನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ  ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ:72/2012 ಕಲಂ.379 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
 ಯಾದಗಿರ ಜಿಲ್ಲೆಯ ವಡಗೇರಾ ದಲ್ಲಿ  ಹುಡಗಿಯ ಅಪಹರಣ ಪ್ರಕರಣದಲ್ಲಿ ಆರೋಪ ಕೇಳಿ ಬಂದಿರುವದರಿಂದ ಹಿನ್ನೆಲೆಯಲ್ಲಿ ಇಬ್ಬರು  ಪೊಲೀಸ್ ಪೇದೆಗಳನ್ನು ವರ್ಗಾವಣೆ ಮಾಡುತ್ತಿರುವ ಬಗ್ಗೆ:
     ದಿನಾಂಕ:07-06-2012 ರಂದು ಯಾದಗಿರ ಜಿಲ್ಲೆಯ ವಡಗೇರಾದಿಂದ ರೇಣುಕಾ ಎಂಬ ಹುಡಗಿಯ ಅಪಹರಣಕ್ಕೆ ಸಂಬಂಧಪಟ್ಟಂತೆ, ವಡಗೇರಾ ಪೊಲೀಸ್ ಠಾಣೆಯ ಸುರೇಶ ಮತ್ತು ವಿರೇಶ ಎಂಬ ಇಬ್ಬರು ಪೊಲೀಸ್ ಪೇದೆಗಳ ಮೇಲೆ ಹಲವಾರು ಆರೋಪಗಳು ಕೇಳಿ ಬಂದಿದ್ದರ ಹಿನ್ನಲೇಯಲ್ಲಿ ವಿಚಾರಣೆ ಕೈಕೊಂಡು, ಅವರ ಮೇಲೆ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ಸದರಿ ಇಬ್ಬರು ಪೊಲೀಸ್ ಪೇದೆಗಳನ್ನು ವಡಗೇರಾ ಪೊಲೀಸ್ ಠಾಣೆಯಿಂದ ಗುರಮಿಟಕಲ್ ಮತ್ತು ಸೈದಾಪೂರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. 

GULBARGA DIST REPORTED CRIMES

ಗುಲಬರ್ಗಾ ನಗರದಲ್ಲಿ ಕಳ್ಳತನ ವಾಗಿದ್ದ ಬಂಗಾರದ ಆಭರಣ ಮತ್ತು ಬೆಳ್ಳಿಯ ಸಾಮಾನುಗಳು ಜಪ್ತಿ ಮಾಡಿದ ಬಗ್ಗೆ:
ಮಾನ್ಯ ಪವಾರ ಪ್ರವೀಣ ಮಧುಕರ ಐ.ಪಿ.ಎಸ್ ಎಸ್.ಪಿ ಸಾಹೇಬ ಗುಲಬರ್ಗಾರವರು, ಮಾನ್ಯ ಕಾಶಿನಾಥ ತಳಕೇರಿ ಹೆಚ್ಚುವರಿ ಎಸ್.ಪಿ ಸಾಹೇಬ ಗುಲಬರ್ಗಾರವರು, ಮಾನ್ಯ ಭೂಷಣ ಜಿ ಬೋರಸೆ ಐ.ಪಿ.ಎಸ್ (ಎ) ಉಪ-ವಿಭಾಗ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ಬ್ರಹ್ಮಪೂರ ಪೊಲೀಸ ಠಾಣೆಯ ಶರಣಬಸವೇಶ್ವರ ಭಜಂತ್ರಿ ಪಿ.ಐ, ಡಿ.ಸಂತೋಷಕುಮಾರ ಪಿ.ಎಸ್.ಐ (ಅ.ವಿ), ಮಾರುತಿ ಎ.ಎಸ್.ಐ, ಹಾಗೂ (ಎ) ಉಪ-ವಿಭಾಗದ ಅಪರಾಧ ಪತ್ತೆ ದಳದ ಸಿಬ್ಬಂದಿಯವರಾದ ರಫೀಕ, ಶಿವಪ್ರಕಾಶ, ದೇವಿಂದ್ರ, ರಾಮು ಪವಾರ ರವರು ಒಂದು ತಂಡ ರಚಿಸಿ, ಗುಲಬರ್ಗಾ ನಗರದ ವೆಂಕಟೇಶ ನಿವಾಸ ಸುಂದರ ನಗರದಲ್ಲಿ ಶ್ರೀ.ವಿಜಯಕುಮಾರ ತಂದೆ ರುಕ್ಮಣ್ಣಾ ಗಾಜರೆ ಸಾ|| ಸುಂದರ ನಗರ ಗುಲಬರ್ಗಾ ಇವರ ಮನೆಯಲ್ಲಿ ದಿನಾಂಕ:27/05/2012 ರಂದು ಒಂದು ಸ್ಯಾಮಸಂಗ ಗುರು ಮೊಬೈಲ್, 5 ಗ್ರಾಂ ಬಂಗಾರದ, ಬೆಳ್ಳಿಯ ಉಂಗುರ ಹೀಗೆ ಒಟ್ಟು 15,500/- ರೂಪಾಯಿ ಬೆಲೆಬಾಳುವ ಮಾಲು ಕಳ್ಳತನವಾಗಿದ್ದ ಮಾಲು ಮತ್ತು ಆರೋಪಿ ಪತ್ತೆ ಮಾಡುವ ಕುರಿತು ತಂಡ ರಚಿಸಿದ್ದರು. ಕಳುವು ಮಾಡಿದ ಆರೋಪಿತಳ ಹೆಸರು ರಾಣಿ ತಂದೆ ದೇವದಾಸ ಉಪಾದ್ಯ, ವಯ|| 13 ವರ್ಷ, ಸಾ|| ಸುಂದರ ನಗರ ಗುಲಬರ್ಗಾ ಅಂತಾ ವಿಚಾರಣೆಯಿಂದ ತಿಳಿದು ಬಂದಿರುತ್ತದೆ. ಸದರಿಯವಳು ಕಳವು ಮಾಡಿದ ಬಂಗಾರದ ಮತ್ತು ಬೆಳ್ಳಿಯ ಉಂಗುರಗಳು ಅಬ್ದುಲ ರೌಫ ತಂದೆ ಅಬ್ದುಲ ಹಮೀದ ಪಠಾಣ ವಯ|| 45, || ಅಕ್ಕಸಾಲಿಗ, ಸಾ|| ಹಳ್ಳೀಖೇಡ ತಾ|| ಹುಮನಾಬಾದ ಜಿ|| ಬೀದರ ಇತನಿಗೆ ಮಾರಿರುತ್ತಾರೆ. ಈ ಪ್ರಕರಣ ಅಲ್ಲದೆ ಇನ್ನೂ ಹಲವಾರು ಪ್ರಕರಣಗಳಲ್ಲಿ ಕಳ್ಳತನವಾದ ಮಾಲು ತೆಗೆದುಕೊಂಡಿದ್ದು ತನಿಖೆಯಲ್ಲಿ ಒಪ್ಪಿಕೊಂಡಿರುತ್ತಾನೆ. ಸದರಿಯವನಿಂದ  ಸುಮಾರು 2,00,000/- ರೂಪಾಯಿ ಮೌಲ್ಯದ ಬಂಗಾರ ಹಾಗೂ ಬೆಳ್ಳಿಯ ಆಭರಣಗಳು ಜಪ್ತ ಮಾಡಿಕೊಂಡಿರುತ್ತಾರೆ.