POLICE BHAVAN KALABURAGI

POLICE BHAVAN KALABURAGI

07 May 2016

Kalaburagi District Reported Crimes

ಕಿರುಕಳ ನೀಡಿ ಹಲ್ಲೆ ಮಾಡಿದ ಪ್ರಕರಣ :
ಆಳಂದ ಠಾಣೆ : ಶ್ರೀಮತಿ  ಮಹಾನಂದ ಗಂಡ ದಿ:ಭೀಮಾಶಂಕರ ಹೂಳ್ಳಿ  ಸಾ :  ಮೈಂದರ್ಗಿ ತಾ : ಅಕ್ಕಲಕೋಟ ಜಿ : ಸೋಲಾಪೂರ ಈ ಅರ್ಜಿಯ ಮೂಲಕ ದೂರು ಸಲ್ಲಿಸುವದೆನೆಂದರೆ ನನಗೆ ಮೂವರು ಜನ ಮಕ್ಕಳಿದ್ದು ಇವರ ಮಗಳಾದ ರೂಪಾಳಿಗೆ ಒಂದು ವರ್ಷದ ಹಿಂದೆ ಕಲಬುರ್ಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಶರಣನಗರ ನಿವಾಸಿಯಾದ ನರಸಪ್ಪ ತಂದೆ ಅಣ್ಣಪ್ಪ ಹಳ್ಳದ ಇತನಿಗೆ ಕೊಟ್ಟು ಧಾರ್ಮಿಕ ಪದ್ದತಿಯಂತೆ ಮಹಾಗಣದೇಶ್ವರ ಗುಡಿಯಲ್ಲಿ ಮದುವೆ ಮಾಡಿಕೊಟ್ಟಿದ್ದು ಇದೆ.  ಮದುವೆ ಕಾಲದಲ್ಲಿ ನಮಗೆ ಹಾಗೂ ಅವರಿಗೆ ಒಪ್ಪಿಗೆ ಇದ್ದ ಬಟ್ಟೆ ಬರೆ ಮಾಡಿಕೊಟ್ಟಿದ್ದು  ನಮ್ಮ ಮಗಳಿಗೆ ಅಡಿಗೆ ಕೆಲಸ ಬರುತ್ತಿದ್ದು ಹೊಲದ ಕೆಲಸ ಬರುವದಿಲ್ಲಾ ಅಂತಾ ಅತ್ತೆ, ಮಾವ, ಗಂಡನಿಗೆ ತಿಳಿಸಿದಾಗ ಅವರು ನಾವು ಆಕೆಗೆ ತಿಳಿಹೇಳಿ ಕೆಲಸ ಮಾಡಿಸುತ್ತೇವೆ ಅಂತಾ ತಿಳಿಸಿರುತ್ತಾರೆ. ನನ್ನ ಮಗಳೊಂದಿಗೆ ಕೇಲವು ದಿವಸ ಅವರೆಲ್ಲರೂ ಚೆನ್ನಾಗಿ ನೋಡಿಕೊಂಡು ಬರುಬರುತ್ತಾ ಹೊಲದ ಕೆಲಸ ನಿನಗೆ ಬರುವದಿಲ್ಲಾ ಎಂದು ಕಲಿಯಬೇಕು ರಂಡೀ ಎಂದು ಬೈಯುವದು ಹೊಡೆ-ಬಡೆ ಮಾಡುವ ವಿಷಯ ನನ್ನ ಮಗಳು ತವರು ಮನೆಗೆ ಬಂದಾಗ ನನಗೆ ತಿಳಿಸಿರುತ್ತಾಳೆ. ಕೊಟ್ಟ ಹೆಣ್ಣು ಗಂಡನ ಮನೆಯಲ್ಲಿಯೇ ಇದ್ದು ತಾಳಿಕೊಂಡು ಹೋಗು ಅಂತಾ ಬುದ್ದಿ ಹೇಳಿ ಕಳುಹಿಸಿದ್ದು. ಆದರೂ ಕೂಡಾ ಮೇಲೆ ಮೂರು ಜನರು ಹೊಡೆ-ಬಡೆ ಬೈಯುವದು ಮಾಡುತ್ತಿದ್ದ ವಿಷಯ ತಿಳಿದು ನಾನು ನನ್ನ ಮೈದುನ ಮಗ ಬಸವರಾಜ ಹುಳ್ಳಿ, ಪಂಡಿತ ಮಾಳಿ ಕೂಡಿ ಪಂಚಾಯತಿ ಮಾಡಿದಾಗ ಮೇಲಿನವರಾದ ಗಂಡ.ಅತ್ತೆ,ಮಾವ ಇವರುಗಳು ಹೊಲದ ಕೆಲಸ ಮಾಡಬೇಕು ಎಂದು ಕಿರುಕುಳ ಕೊಡುತ್ತಿದ್ದರು ಎಂದು ಹೇಳಿರುತ್ತಾಳೆ. ಕೇಸರ ಜವಳಗಾದಲ್ಲಿ ನನ್ನ ತಮ್ಮ ಸುಚಲಪ್ಪ ಇವರು ಜಾತ್ರೆ ಇದೆ ಎಂದು ರೂಪಾಳಿಗೆ ಆಕೆಯ ಅತ್ತೆ, ಗಂಡ, ಮಾವನಿಗೆ ತಿಳಿಸಿ ಕರೆದುಕೊಂಡು ಹೋಗಿ ಒಂದು ವಾರದ ನಂತರ ಜಾತ್ರೆ ಮುಗಿದ ಮೇಲೆ ಆಕೆಯ ಗಂಡನ ಮನೆ ಆಳಂದಕ್ಕೆ ತಂದು ಬಿಟ್ಟು ಹೋದಾಗ ಆಕೆಯ ಗಂಡ, ಅತ್ತೆ, ಮಾವ ನಿನಗೆ ಹೊಲದ ಕೆಲಸ ಬರುವದಿಲ್ಲಾ ಯಾರಿಗೆ ಕೇಳಿ ಕೇಸರ ಜವಳಗಾಕ್ಕೆ ಹೋಗಿದೆ ರಂಡಿ ಎಂದು ಬೈದು ಹೊಡೆ-ಬಡೆ ಮಾಡಿದಕ್ಕೆ ನನ್ನ ಮಗಳು ಮಾನಸೀಕ ಹಾಗೂ ದೈಹಿಕವಾಗಿ ಮನ:ನೊಂದು ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ದಿನಾಂಕ:30/04/2016 ರಂದು ಬೆಳಿಗ್ಗೆ 10 ಗಂಟೆಗೆ ತಮ್ಮ ಮನೆಯಲ್ಲಿ ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಊರಿ ಹಚ್ಚಿಕೊಂಡಿದ್ದು ವಿಷಯ ಪಂಡಿತ ಮಾಳಿ ಸಾಕೀನ:ಆಳಂದಇವರು ಆ ದಿವಸ 10:30 ಎ.ಎಂ.ಕ್ಕೆ ತಿಳಿಸಿದ್ದು ರೂಪಾಳ ಮೈ ಮತ್ತು ಶರೀರ ಹೆಚ್ಚಿನ ಪ್ರಮಾಣದಲ್ಲಿ ಸುಟ್ಟಿದ್ದು ಆಕೆಯ ಉಪಚಾರಕೆಂದು ಕಲಬುರಗಿ ಸರ್ಕಾರಿ ದವಾಖಾನೆಗೆ  ತಂದು ಸೇರಿಕೆ ಮಾಡಿದ್ದು ಕೊಡಲೇ ಕಲಬುರ್ಗಿಗೆ ಬರಬೇಕೆಂದು ತಿಳಿಸಿದ ಮೇರೆಗೆ ನಾನು ನಮ್ಮ ಮೈದುನ ಮಗ ಬಸವರಾಜ, ಮೈದುನರಾದ ನಾಗೇಶ ಹಾಗೂ ಭಾವನಾದ ಮಲ್ಕಣ್ಣಾ ಬಂದು ನೋಡಲಾಗಿ ನನ್ನ ಮಗಳ ಮುಖ, ಕೈ, ಎದೆ, ತೊಡೆ, ಬೆನ್ನು, ಎರಡು ಕಾಲು ಹೆಚ್ಚಿನ ಪ್ರಮಾಣದಲ್ಲಿ ಸುಟ್ಟಿದ್ದು ಆಕೆಗೆ ವಿಚಾರಿಸಲಾಗಿ ಕೇಸರ ಜವಳಗಾಕ್ಕೆ ಜಾತ್ರೆಗೆ ಸುಚಲಪ್ಪ ಮಾಮ ಅವರಿಗೆ ತಿಳಿಸಿ ಕರೆದುಕೊಂಡು ಹೋಗಿ ಒಂದು ವಾರ ಉಳಿದು ಮರಳಿ ಆಳಂದಕ್ಕೆ ಬಂದಾಗ ಗಂಡ, ಅತ್ತೆ, ಮಾವ ಇವರುಗಳು ನಿನು ಯಾರಿಗೆ ಹೇಳಿ ಹೋಗಿದಿ ರಂಡೀ ಎಂದು ಬೈದು ಹೊಡೆ-ಬಡೆ ಮಾಡಿದಕ್ಕೆ ಮನ:ನೊಂದು ಅವರ ಕಿರುಕುಳ ತಾಳದೆ ಸೀಮೆಎಣ್ಣೆ ಮೈ ಮೇಲೆ ಸುರಿದುಕೊಂಡು ಉರಿ ಹಚ್ಚಿಕೊಂಡಿರುತ್ತೆನೆ ಅಂತಾ ತಿಳಿಸಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅತ್ಯಾಚಾರ ಮಾಡಿದ ಪ್ರಕರಣ :
ಮಹಿಳಾ ಠಾಣೆ : ಫಿರ್ಯಾದಿದಾರರ ಮಗಳಾದ ಕುಮಾರಿ 17 ವರ್ಷ  ಇವಳು ದಿಶಾ ಕಾಲೇಜಿನಲ್ಲಿ ಪಿ.ಯು.ಸಿ ಪ್ರಥಮ ವರ್ಷದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ದಿನಾಂಕ 15-03-2016 ರಂದು ಬೆಳಿಗ್ಗೆ 8-30 ಗಂಟೆಯ ಸುಮಾರಿಗೆ ಮನೆಯಿಂದ ಕಾಲೇಜಿಗೆ ಹೋಗುತ್ತೇನೆಂದು ಹೇಳಿ ಹೋದವಳು ಪುನಃ ಮನೆಗೆ ಬರದೇ ಇದ್ದಾಗ ನಾವು ಸಾಯಂಕಾಲ ಅವಳ ಕಾಲೇಜಿಗೆ ಹೋಗಿ ಅವಳ ಸ್ನೇಹಿತರಿಗೆ ಹಾಗೂ ನಮ್ಮ ಸಂಬಂಧಿಕರಲ್ಲಿ ಹುಡುಕಾಡಿದೆವು. ನಂತರ ಇಂದು ದಿನಾಂಕ 16-03-2016 ಬೆಳಿಗ್ಗೆ 7-42 ಗಂಟೆಗೆ ಅನೀಲ @ ಅನ್ಯಾ ತಂದೆ ಶಂಕರ ಚಿಗನೂರ ಇತನು ನನ್ನ ಮೊಬಾಯಿಲ್ ನಂ:9663416159 ಕ್ಕೆ ಆತನ ಮೊಬಾಯಿಲ್ ನಂ:7719989124 ನೇದ್ದರಿಂದ ಕರೆ ಮಾಡಿ ನಿನ್ನ ಮಗಳನ್ನು ನಾನು ಕಿಡ್ನಾಪ ಮಾಡಿಕೊಂಡು ಬಂದಿದ್ದು, ಬೆಂಗಳೂರಿನಲ್ಲಿದ್ದೇವೆ ಏನು ಮಾಡಿಕೋತಿ ಮಾಡಿಕೋ ಎಂದು ಫೋನ ಸ್ವೀಚ್ಛ ಆಫ್ ಮಾಡಿರುತ್ತಾನೆ. ಇದರಿಂದ ನಮಗೆ ತುಂಬಾ ಭಯವಾಗಿದ್ದು, ನನ್ನ ಮಗಳಾದ ಕುಮಾರಿ ಇವಳಿಗೆ ಅಪಹರಿಸಿಕೊಂಡು ಹೋದ ಅನೀಲ @ ಅನ್ಯಾ ಇತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ  ಸಾರಾಂಶದ ಮೇಲಿಂದ  ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು  ದಿನಾಂಕ 7-5-2016 ರಂದು  ಅಪಹರಣವಾದ ಕುಮಾರಿ  ಹಾಗೂ ಆರೋಪಿ ಅನಿಲ ಇತನ ಪತ್ತೆಗಾಗಿ ಹೋದ ಹೆಚಸಿ 437 ಮತ್ತು ಮಪಿಸಿ 731 ರವರು ಇವರಿಬ್ಬರಿಗೆ ಕರೆದುಕೊಂಡು ಠಾಣೆಗೆ ತಂದು ಹಾಜರ ಪಡಿಸಿದ್ದು  ಕುಮಾರಿ ಇವಳ ಹೇಳಿಕೆ ಪಡೆಯಲಾಗಿ ಹೇಳಿದ್ದೆನೆಂದರೆ  ದಿನಾಂಕ 15.03.2016 ರಂದು ಬೆಳಗ್ಗೆ 8-30 ಗಂಟೆಯ ಸುಮಾರಿಗೆ ನಾನು ಕಾಲೇಜಿಗೆ ಹೋಗಬೇಕೆಂದು ನಮ್ಮ ಮನೆಯಿಂದ ಕಾಲೇಜಿಗೆ ಹೋಗುತ್ತಿರುವಾಗ ಅನಿಲ @ ಅನ್ಯಾ ಇತನು ನನ್ನ ಹಿಂದೆ ಬಂದು ನನಗೆ ಹೆದರಿಸಿ ಬಸ್ಸ ಸ್ಟ್ಯಾಂಡಗೆ ಕರೆದುಕೊಂಡು ಹೋಗಿ ಅಲ್ಲಿಂದ ಬಸ್ಸ ಮೂಲಕ ನನಗೆ ಗೋವಾಕ್ಕೆ ಕರೆದುಕೊಂಡು ಹೋದನು.ಗೋವಾದ ಕಂಕೋಳಿಯಲ್ಲಿ ಅನಿಲ @ ಅನ್ಯಾ ಇತನು ತಮ್ಮ ಪರಿಚಯದ ನಾನಾ ಪವಾರ ಇವರ ಮನೆಯಲ್ಲಿ ನನಗೆ ಇಟ್ಟಿದ್ದು, ಅಲ್ಲಿ ಅನಿಲ ಇತನು ನನಗೆ ಹೆದರಿಸಿ ನಾನು ಬೇಡವೆಂದರೂ ಕೂಡ ನನ್ನ ಜೊತೆ ದೈಹಿಕ ಸಂಬೋಗ ಮಾಡಿರುತ್ತಾನೆ. ನಾನಾ ಪವಾರ ಇವರು ಅನಿಲ ಇತನಿಗೆ  ನಮ್ಮ ಮನೆಯಲ್ಲಿ ಇರಬೇಡ ಅಂತಾ ಹೇಳಿದ್ದರಿಂದ ಅನಿಲ ನನಗೆ ದಿನಾಂಕ 04.05.2016 ರಂದು ಗೋವಾದಿಂದ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದು,.ಬೆಂಗಳೂರಿನ ರೈಲ್ವೆ ಸ್ಟೇಷನದಲ್ಲಿ ಕುಳಿತುಕೊಂಡಾಗ ಚೈಲ್ಡಲೈನ ದವರು ಮತ್ತು ಅನಿಲ ತಮ್ಮ ಸಂಸ್ಥೆಗೆ ಕರೆದುಕೊಂಡು ಹೋಗಿದ್ದು ದಿನಾಂಕ 5-5-2016 ರಂದು ಕಲಬುರಗಿ ಮಹಿಳಾ ಪೊಲೀಸ ಠಾಣೆಯ ಪೊಲೀಸರು ಠಾಣೆಗೆ ಕರೆದುಕೊಂಡು ಬಂದಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಅಫಜಲಪೂರ ಠಾಣೆ : ಶ್ರೀ ಶರಣಯ್ಯ ತಂದೆ ಮಲ್ಲಯ್ಯ ಮಠಪತಿ ಸಾ|| ಕೌವಲಗಿ ಇತನು ಮಾಹಾದೇವಪ್ಪ ತಂದೆ ಬಾಬಾಶಾ ದೇಶಮುಖ ಸಾ|| ಕೌವಲಗಿ ಇತನನ್ನು ಮೋ.ಸೈ. ನಂ. ಕೆ.ಎ. 32 ಇ.ಜಿ 5140ನೇದ್ದರ ಮೇಲೆ ಕುಡಿಸಿಕೊಂಡು ಅಫಜಲಪೂರ ದಿಂದ ಕಲಬುರಗಿ ರೋಡಿಗೆ ಇರುವ ನಿರಾವರಿ ಆಫೀಸ್ ಹತ್ತಿರ ಹೋಗುತ್ತಿದ್ದಾಗ ಏದುರು ಗಡೆಯಿಂದ ಮೋ.ಸೈ. ನಂ. ಕೆ.ಎ, 32 ಇ.ಎಚ್.7497 ನೇದ್ದರ ಚಾಲಕನಾದ ನಾಗೇಂದ್ರ ತಂದೆ ಬಸಣ್ಣ ಮಲಿ ಸಾ|| ಕಲಬುರಗಿ ಇತನು ಮೋ.ಸೈ. ಅನ್ನು ಅತಿವೇಗವಾಗಿ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫೀರ್ಯಾಧಿದಾರನ ಮೋ.ಸೈ.ಗೆ ಡಿಕ್ಕಿ ಪಡಿಸಿ ಫೀರ್ಯಾಧಿದಾರನಿಗೂ ಮಾಹಾದೇವಪ್ಪನಿಗೂ ಹಾಗೂ ಅವನ ಮೋ.ಸೈ. ಮೇಲೆ ಕುಳುತಿದ್ದ ಮಲ್ಲೇಶಪ್ಪನಿಗೂ ಭಾರಿ ಮತ್ತು ಸಾದಾ ರಕ್ತಗಾಯ ಮತ್ತು ಗುಪ್ತಗಾಯ ಪಡಿಸಿರುತ್ತಾನೆ ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಡ್ರಾಮಿ ಠಾಣೆ : ದಿನಾಂಕ: 09-04-2016 ರಂದು ಮುಂಜಾನೆ ನನ್ನ ಗಂಡ ತನ್ನ ಸಂಬಂದಿಕರ ಊರಾದ ಒಂದಾಲದ ಹತ್ತಿರ ಇರುವ ಯಲಗೋಡ ಗ್ರಾಮಕ್ಕೆ ಹೋಗಿ ಬರುವದಾಗಿ ಹೇಳಿ ಹೋಗಿದ್ದನು. ನಂತರ ಅಂದು ರಾತ್ರಿ 8 ಗಂಟೆ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನಮ್ಮ ಸಂಬಂದಿಕರಾಧ ಆಕಾಶ ಇವರು ನನಗೆ ಪೋನ ಮಾಡಿ ಹೇಳಿದ್ದೇನೆಂದರೆ ನಿಮ್ಮ ಗಂಡನಾದ ಅಂಬಲಪ್ಪ ಇವರು ತನ್ನ ಮೊಟಾರ ಸೈಕಲ ನಂ ಕೆ.-32 .ಡಿ-1214 ನೇದ್ದರ ಮೇಲೆ ಯಲಗೋಡದಿಂದ ಬರುವಾಗ ಯಡ್ರಾಮಿ ನಾಗರಳ್ಳಿ ಮಧ್ಯ ಇರುವ ಕಡಕೋಳ ಮಠದ ಹತ್ತಿರ ಬರುತ್ತಿದ್ದಾಗ ಹಿಂದಿನಿಂದ ಯಾವುದೋ ಕ್ರೋಜರ್ ನಮೂನೆಯ ವಾಹನ ಚಾಲಕನು ಜೀಪ ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿ ಮೋಟರ ಸೈಕಲಗೆ ಹಿಂದಿನಿಂದ ಡಿಕ್ಕಿ ಹೊಡೆದಾಗ ಮೋಟರ ಸೈಕಲ ಅಲ್ಲಿಂದ ನಡೆದುಕೊಂಡು ಹೋಗುತ್ತಿದ್ದ ಒಬ್ಬ ಹೆಣ್ಣು ಮಗಳಿಗೆ ಡಿಕ್ಕಿ ಹೊಡೆದಿದ್ದು ನಿಮ್ಮ ಗಂಡ ಮೋಟರ ಸೈಕಲ ಸಮೇತ ರೋಡಿನ ಮೇಲೆ ಬಿದ್ದಿದ್ದು, ಅವನಿಗು ಮತ್ತು ಆ ಹೆಣ್ಣು ಮಗಳಿಗೆ ಗಾಯಗಳಾಗಿರುತ್ತವೆ. ನಿನ್ನ ಗಂಡನಿಗೆ ಉಪಚಾರ ಕುರಿತು ಕಲಬುರಗಿ ಬಸವೇಶ್ವರ ಅಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದೇವೆ ಅಂತಾ ಹೇಳಿದ್ದು ಕೂಡಲೆ ನಾನು ಮತ್ತು ನನ್ನ ಮೈದುನ ಮಾನಪ್ಪ ಕೂಡಿ ಕಲುಬರಗಿ ಬಸವೇಶ್ವರ ಆಸ್ಪತ್ರೆಗೆ ಹೋದೆವು. ಅಲ್ಲಿ ನನ್ನ ಗಂಡನಿಗೆ ನೊಡಲಾಗಿ ತಲೆಗೆ ಎಡಭಾಗ ಭಾರಿ ರಕ್ತಗಾಯವಾಗಿತ್ತು. ನನ್ನ ಗಂಡನಿಗೆ ವಿಚಾರಿಸಲಾಗಿ ಅವನು ನನ್ನ ಮುಂದೆ ಹೇಳಿದ್ದೇನಂದರೆ, ನಾನು ಯಲಗೋಡದಿಂದ ವಾಪಾಸ ಬರುವಾಗ ಸಾಯಂಕಾಲ 7-00 ಗಂಟೆ ಸುಮಾರಿಗೆ ಕಡಕೋಳ ಮಠದ ಹತ್ತಿರ ಹಿಂದಿನಿಂದ ಒಂದು ಕ್ರೂಜರ ವಾಹನ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನನ್ನ ಮೋಟರ ಸೈಕಲಿಗೆ ಹಿಂದಿನಿಂದ ಜೋರಾಗಿ ಡಿಕ್ಕಿ ಹೊಡೆದು ವಾಹನ ನಿಲ್ಲಿಸದೆ ಓಡಿಸಿಕೊಂಡು ಹೋಗಿರುತ್ತಾನೆ. ನನ್ನ ಮೋಟರ ಸೈಕಲಿಗೆ ಕ್ರೂಜರ ಜೀಪ ಡಿಕ್ಕಿ ಹೊಡೆದಾಗ ನನಗೆ ಆಯ ತಪ್ಪಿ ನನ್ನ ಮೋಟರ ಸೈಕಲ ರೋಡಿನ ಬಾಜು ನಡೆದುಕೊಂಡು ಹೋಗುತ್ತಿದ್ದ ಒಬ್ಬ ಹೆಣ್ಣು ಮಗಳಿಗೆ ಡಿಕ್ಕಿಯಾಗಿರುತ್ತದೆ. ಇದರಿಂದ ನನಗೆ ಮತ್ತು ಆ ಹೆಣ್ಣು ಮಗಳಿಗೆ ಗಾಯಗಳಾಗಿರುತ್ತವೆ ಅಂತಾ ಹೇಳಿದರು. ನಂತರ ಉಪಚಾರ ಕಾಲಕ್ಕೆ  ವೈಧ್ಯಾಧಿಕಾರಿಗಳು ನನ್ನ ಗಂಡನಿಗೆ ಹೆಚ್ಚಿನ ಉಪಚಾರ ಕುರಿತು ಸೋಲಾಪುರಕ್ಕೆ ತೆಗೆದುಕೊಂಡು ಹೋಗಲು ಹೇಳಿದ್ದರಿಂದ ನಾವು ಅದೆ ದಿವಸ ರಾತ್ರಿ 11 ಗಂಟೆ ಸುಮಾರಿಗೆ ನನ್ನ ಗಂಡನಿಗೆ ಕಲಬುರಗಿಯಿಂದ ಸೋಲಾಪೂರಕ್ಕೆ ತೆಗೆದುಕೊಂಡು ಹೋಗಿ ಗಂಗಾಮಯ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದೇವು. ಅಲ್ಲಿ ಉಪಚಾರ ಪಡೆಯುತ್ತಾ ಉಪಚಾರ ಫಲಕಾರಿಯಾಗದೆ ನನ್ನ ಗಂಡನು ದಿನಾಂಕ: 18-04-2016 ರಂದು ಬೆಳಗ್ಗೆ 5-35 ಗಂಟೆಗೆ ಆಸ್ಪತ್ರೆಯಲ್ಲಿಯೇ ಮೃತ ಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೊಸ ಮಾಡಿದ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಬಸವರಾಜ ತಂದೆ ಸಿದ್ರಾಮಪ್ಪ ಬಿರಾದಾರ ಮು|| ಅಫಜಲಪೂರ ಇವರಿಗೆ ಸಂಭಂದಿಸಿದ ವಾರ್ಡ ನಂಬರ 01 ರಲ್ಲಿ ಬರುವ ನಿವೇಶನ ಸಂಖ್ಯೆ: 5-1-84 ನೇದ್ದನ್ನು ಶ್ರೀ ಅಣವೀರಪ್ಪ ತಂದೆ ಶಿವಶರಣಪ್ಪ ಮಲ್ಯಾಡ ಎಂಬುವವರಿಗೆ ಪುರಸಭೆ ಕಾರ್ಯಾಲಯ ಪತ್ರ ನಂಬರ- ಪಪ/ಎಂಯುಟಿ/06-15-16. ದಿನಾಂಕ 06-02-2016 ರ ಮತ್ತು ಖರೀದಿ ಪತ್ರ ಸಂಖ್ಯೆ 4525 ನೇದ್ದಕ್ಕೆ ಪ್ರಕಾರ ನಿವೇಶನವನ್ನು ಅವರ ಹೆಸರಿಗೆ ವರ್ಗಾವಣೆ ಮಾಡಲಾಗಿರುತ್ತದೆ. ಈ ವರ್ಗಾವಣೆಗೆ ಸಂಭಂದಿಸಿದ ಶುಲ್ಕದ ಹಣ 58,000/- ರೂಪಾಯಿಗಳು ರಸೀದಿ ಸಂಖ್ಯೆ: 0060186 ದಿನಾಂಕ 09-02-2016 ರ ಪ್ರಕಾರ ಶ್ರೀ ಅಣವೀರಪ್ಪ ಮಲ್ಯಾಡ ರವರಿಂದ ಹಣ ಪಡೆದುಕೊಂಡು ಆ ಹಣವನ್ನು ಪುರಸಭೆ ಕಾರ್ಯಾಲಯದ ಲೇಕ್ಕಶಾಖೆಯ ಚಿತ್ತಾ ನೊಂದಣಿ ಪುಸ್ತಕದಲ್ಲಿ ನಮೂದಿಸಿದೆ, ಆ ಹಣವನ್ನು ತನ್ನ ಸ್ವಂತಕ್ಕೆ ಉಪಯೋಗಿಸಿಕೊಂಡು ಸರ್ಕಾರಕ್ಕೆ ನಂಬಿಕೆ ದ್ರೋಹ ಮತ್ತು ಮೋಸ ಮಾಡಿರುತ್ತಾರೆ. ಸದರಿ ಶರಣಯ್ಯ ಹಿರೆಮಠ ಎಂಬಾತನು 2013 ನೇ ಸಾಲಿನಲ್ಲಿಯೆ ಅಡೀಟ ಆಗಿ ಮುಕ್ತಾಯವಾದ ಹಾಗೂ ಪುರಸಭೆ ಕಾರ್ಯಾಲಯದಲ್ಲಿರಬೇಕಾದ ರಸೀದಿ ಪುಸ್ತಕವನ್ನು ತಗೆದುಕೊಂಡು ಹೋಗಿ, ಸದರಿ ಪುಸ್ತಕದಲ್ಲಿನ ರಸೀದಿಯನ್ನು ಕೊಟ್ಟು, ಸದರಿ ಹಣವನ್ನು ತನ್ನ ಸ್ವಂತಕ್ಕೆ ಉಯೋಗಿಸಿಕೊಂಡಿರುತ್ತಾನೆ. ಈ ವಿಷಯದ ಬಗ್ಗೆ ನಾನು ಅಫಜಲಪೂರ ಪುರಸಭೆಯ ಮುಖ್ಯಾಧಿಕಾರಿಗಳ ಗಮನಕ್ಕೆ ತಂದಿರುತ್ತೇನೆ. ಆದರೆ ಇಲ್ಲಿಯವರೆಗೆ ನಂಬಿಕೆ ದ್ರೋಹ ಮತ್ತು ವಂಚನೆ ಮಾಡಿದ ಶರಣಯ್ಯ ಹಿರೆಮಠ ಈತನ ಮೇಲೆ ಯಾವುದೆ ಕ್ರಮ ಕೈಗೊಂಡಿರುದಿಲ್ಲ. ಈ ಒಂದು ವಿಷಯ ನನ್ನ ಗಮನಕ್ಕೆ ಬಂದಿರುತ್ತದೆ. ಇದರಂತೆ ಇನ್ನು ಎಷ್ಟೊ ಹಣ ತನ್ನ ಸ್ವಂತಕ್ಕೆ ಉಪಯೋಗಿಸಿಕೊಂಡಂತೆ ಕಂಡು ಬಂದಿರುತ್ತದೆ. ಕಾರಣ ಸರ್ಕಾರದ ಹಣ ತನ್ನ ಸ್ವಂತಕ್ಕೆ ಉಪಯೋಗಿಸಿಕೊಂಡು ನಂಬಿಕೆ ದ್ರೋಹ ಮತ್ತು ಮೋಸ ಮಾಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 04-05-2016 ರಂದು ಶ್ರೀ ಕಲ್ಲಪ್ಪ ತಂದೆ ಶಂಕ್ರ್ಎಪ್ಪ ಅಂಜುಟಗಿ ಸಾ ಶಿರವಾಳ ಮತ್ತು ಅವನ ಅಣ್ಣನಾದ ಕಾಶಿರಾಯ ಇಬ್ಬರು ಶಿರವಾಳ ಗ್ರಾಮದ ಮಠದ ಹತ್ತಿರ ನಡೆದುಕೊಂಡು ಹೋಗುತ್ತಿದ್ದಾಗ ಸುರೇಶ ತಂದೆ ಹಣಮಂತ ಅಂಜಿಡಗಿ ಸಾ : ಶಿರವಾಳ ಇವನು ನಮ್ಮನ್ನು ನೋಡಿ  ಅವಾಚ್ಯ ಶಬ್ದ ಗಳಿಂದ ಬೈಯುವದು ನಿಂದಿಸುವದು ಮಾಡುತ್ತಿದ್ದನು ಆಗ ಫಿರ್ಯಾಧಿ ಮತ್ತು ಅವನ ಅಣ್ಣ ಸದರಿಯವನಿಗೆ ಯಾಕೆ ಬೈಯುತ್ತಿ ಅಂತ ಕೆಳಿದ್ದಕ್ಕೆ ಇಬ್ಬರಿಗು ಅವಾಚ್ಯ ಶಬ್ದಗಳಿಂದ ಬೈದು ತಳ್ಳಾಡಿ ಫಿರ್ಯಾಧಿ ದಾರನಿಗೆ ಕಲ್ಲಿನಿಂದ ಹೋಡೆದು ಗುಪ್ತ ಗಾಯ ಪಡಿಸಿ ಬೈದು ಜೀವ ಬೇದರಿಕೆ ಹಾಕಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯಾರ್ಥಿ ಕಾಣೆಯಾದ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಅಬ್ದುಲ ಹಕ್ ತಂದೆ ಅಬ್ದುಲ ಖಯ್ಯೂಂ ಅನ್ಸಾರಿ ಸಾ;ಮನೆ ನಂ. 1699 ತೈಯಾಬ ಮಜೀದ ಹತ್ತಿರ ತ್ಯಯಾಬ ನಗರ ಶಾಂತಿನಗರ ಭೀವಂಡಿ  ಜಿ;ಠಾಣಾ ಮಹಾರಾಷ್ಟ್ರ. ಇವರು ದಿನಾಂಕ. 26-4-2016ರಂದು ಸಂಜೆ 7-00 ಪಿ.ಎಂ.ಕ್ಕೆ. ಅಬ್ದುಲ ವಾಹಬ ತಂದೆ ಅಬ್ದುಲ ಖಯ್ಯೂಂ ಅನ್ಸಾರಿ ವಯ;21 ವರ್ಷ   ಇತನು  ಕಲಬುರಗಿ ಕೆ.ಸಿ.ಟಿ.ಕಾಲೇಜ ಹಾಸ್ಟೇಲ್ ರೂಮ ನಂ.20 ದಿಂದ ಅಬ್ಯಾಸ ಮಾಡಲು ತನ್ನ ಗೆಳೆಯರ  ಕಡೆಗೆ ಹೋಗಿಬರುತ್ತೇನೆ ಅಂತಾ ಹೋದವನು ಇಲ್ಲಿಯವರೆಗೆ ಮರಳಿ ಬಂದಿರುವದಿಲ್ಲಾ ಕಾಣೆಯಾಗಿರುತ್ತೇನೆ .ಕಾರಣ ಕಾಣೆಯಾದ ನನ್ನ ತಮ್ಮನ ಬಗ್ಗೆ  ಹುಡುಕಾಡಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.