POLICE BHAVAN KALABURAGI

POLICE BHAVAN KALABURAGI

28 September 2013

ಅಪಘಾತ ಪ್ರಕರಣಗಳು :
ಮಳಖೇಡ ಠಾಣೆ : ಶ್ರೀ ಶ್ರೀಮಂತ ತಂದೆ ಭೀಮಣ್ಣ ಕಟ್ಟಿಮನಿ ಸಾ: ನೀಲಹಳ್ಳಿ  ಇವರು  ದಿನಾಂಕ: 27-07-2013 ರಂದು ಸಾಯಂಕಾಲ ನನ್ನ ತಾಯಿಯಾದ ತಿಪ್ಪಮ್ಮ ಗಂಡ ಭೀಮಣ್ಣಾ ಕಟ್ಟಿಮನಿ ಇವಳು ಪಂಚಾಯತ ಹಿಂದೆ ಸಂಡಾಸ ಮಾಡಿ ನೀರಿನ ಹೌಸ ಹತ್ತಿರ ಸೇಡಂ ಗುಲಬರ್ಗಾ ರೋಡಿ ಡಾಟಿ ಮನೆಗೆ ಬರುತ್ತಿರುವಾಗ ಸೇಡಂ ಕಡೆಯಿಂದ ಬೊಲೇರೋ ಜೀಪ ನಂಬರ ಕೆ.ಎ. 32 ನೆ. 814 ನೇದ್ದರ ಚಾಲಕನು ತನ್ನ ಜೀಪನ್ನು ಅತೀ ವೇಗ ಮತ್ತು ಅಲ್ಷಕತನದಿಂದ ಜೀಪ ನಡೆಸಿಕೊಂಡು ಬಂದು ರೋಡ ದಾಟುತ್ತಿದ್ದ  ನನ್ನ ತಾಯಿ ತಿಪ್ಪಮ್ಮ ಇವಳಿಗೆ ಅಪಘಾತ ಪಡಿಸಿದ್ದರಿಂದ ಅವಳ ಎಡಮೆಲಕಿಗೆ ಎಡಗಲ್ಲಕ್ಕೆ ಬಲಗೈ ಮೋಳಕೈಗೆ ಬಾರಿ ಎಡಗೈ ಮಣಿಕಟ್ಟಿನ ಹತ್ತಿರ ಬಲಗಾಲು ಮೂಲಕಾಲುಗಳಿಗೆ ಬಾರಿ ಗಾಯಗಳಾಗಿ ಸ್ಥಳದಲ್ಲೆ ಮೃತಪಟ್ಟಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರಕರಣ  ದಾಖಲಾಗಿದೆ.
ಜೇವರ್ಗಿ ಠಾಣೆ : ಶ್ರೀ ಸಾಬಣ್ಣ ತಂದೆ ಬಂದಪ್ಪ ಬಂಡಾರಿ ಸಾ: ಚಟ್ಟನಾಳ ಹಾ:ವ ಉರಳಿ ಕಾಂಚಿ ತಾ: ಹವೇಲಿ ಮಹಾರಾಷ್ಟ್ರ ರಾಜ್ಯ ಇವರು ಸಾಯಂಕಾಲ 5-00 ಗಂಟೆಯ ಸುಮಾರಿಗೆ ಜೇವರ್ಗಿ ಪಟ್ಟಣದ ಗಡ್ಡಿ ಪೂಲ ಹತ್ತಿರ ರೋಡಿನಲ್ಲಿ ಫಿರ್ಯಾದಿ ಮತ್ತು ಇತರರು ಕೂಡಿ ಇಂಡಿಕಾ ಕಾರ ನಂಬರ ಎಮ್.ಹೆಚ್.06-ಎಬಿ-6922 ನೇದ್ದರಲ್ಲಿ ಕುಳಿತುಕೊಂಡು ಹೋಗುತ್ತಿದ್ದಾಗ ಎದುರುಗಡೆಯಿಂದ ಟವರಸ್ ಲಾರಿ ನಂ.ಕೆ.ಎ.28-ಎ-7266 ನೇದ್ದರ ಚಾಲಕ ರಫೀಕ ತಂದೆ ಮೀರಾ ಸಾಬ ಇತನು ತನ್ನ ಲಾರಿಯನ್ನು ಅತೀ ವೇಗ ಅಲಕ್ಷತನದಿಂದ ನಡೆಸಿ ಕಾರಿಗೆ ಡಿಕ್ಕಿ ಪಡೆಸಿ ಲಾರಿ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.