POLICE BHAVAN KALABURAGI

POLICE BHAVAN KALABURAGI

24 October 2013

Gulbarga District Reported Crimes

ಪ್ರಕರಣ ದಾಖಲಾದ 12 ಗಂಟೆಗಳಲ್ಲಿಯೇ ಕಳ್ಳನೋರ್ವನ ಬಂಧನ.  ಸುಮಾರು 3 ಲಕ್ಷ ರುಪಾಯಿ ಬೆಲೆಬಾಳುವ ಬಂಗಾರದ ಆಭರಣಗಳ ವಶ.
ಸ್ಟೇಷನ ಬಜಾರ ಠಾಣೆ : ದಿನಾಂಕ; 23-10-2013 ರಂದು ಸಂಜೆ ಕುಮಾರಿ ಶಾಂತಾಬಾಯಿ ತಂದೆ ಬಸವರಾಜ ಗಣಜಲಖೇಡ ಸಾ|| ಮನೆ ನಂ; 1-9/2/ಸಿ ಖೂಬಾ ಪ್ಲಾಟ ನಾಗಠಾಣ ಆಸ್ಪಾತ್ರೆ ಎದುರುಗಡೆ ಗುಲಬರ್ಗಾ. ಇವರ  ಮನೆಯಲ್ಲಿ ಕಳ್ಳತನವಾದ ಬಗ್ಗೆ ಸ್ಟೇಷನ ಬಜಾರ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ. 236/2013 ಕಲಂ. 380 ಐ.ಪಿ.ಸಿ ಪ್ರಕಾರ ದೂರು ದಾಖಲಾಗಿತ್ತು.  ಮಾನ್ಯ ಎಸ್ ಪಿ ಸಾಹೇಬರು, ಹೆಚ್ಚುವರಿ ಎಸ್ ಪಿ ಸಾಹೇಬರು ಹಾಗು ಡಿಎಸ್ ಪಿ ಉಪ ವಿಭಾಗ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ಸ್ಟೇಷನ ಬಜಾರ ಪೊಲೀಸ ಠಾಣೆಯ ಪೊಲೀಸ ಇನ್ಸಪೆಕ್ಟರ ಬಿ ಬಿ ಭಜಂತ್ರಿ, ಪೊಲೀಸ ಸಬ್ ಇನ್ಸಪೇಕ್ಟರ ಗಳಾದ ಮಲ್ಲಕಾರ್ಜುನ ಬಂಡೆ ಅಪರಧ ವಿಭಾಗ, ಮುರುಳಿ ಎಮ್ ಎನ್ (ಕಾ&ಸು) ಅಖಂಡಪ್ಪಾ ಎ.ಎಸ್.ಐ, ಸಿಬ್ಬಂದಿ ಜನರಾದ ಬಸವರಾಜ ಆಲೂರ, ಶಿವರಾಜ, ಅಶೋಕ, ಹಾಜಿಮಲಂಗ್, ಶಿವಾಜಿ ಇವರೂಗಳು ಕೂಡಿಕೊಂಡು ಆರೋಪಿತನಾದ ಶ್ಯಾಮ ತಂದೆ ಪಿರಪ್ಪಾ ದಿಗ್ಗಾಂವಿ ಸಾ|| ಬಿ.ಶ್ಯಾಮಸುಂದರ ನಗರ ಗುಲಬರ್ಗಾ  ಇವನನ್ನು ಬೆಳಗಿನ ಜಾವ ಬಂದಿಸಿ, ಬಂದಿತನಿಂದ  ಸುಮಾರು   3,00,000/- ರೂ ಬೆಲೆ ಬಾಳುವ ಬಂಗಾರದ ಉಂಗುರಗಳನ್ನು ಜಪ್ತಿ ಮಾಡಿಕೊಂಡು ಪ್ರಕರಣ ಬೇದಿಸಲು ಯಶಸ್ವಿಯಾಗಿರುತ್ತಾರೆ.
ಹಲ್ಲೆ ಪ್ರಕರಣ :
ಮಾಡಬೂಳ ಠಾಣೆ : ಶ್ರೀಮತಿ ಶಾರದಾಬಾಯಿ ಗಂಡ ಜಗನ್ನಾಥ ರಾಠೋಡ ಸಾ: ಕೋರವಾರ ತಾಂಡಾ ತಾ: ಚಿತ್ತಾಪೂರ ರವರು  ಜೈನಾಬಾಯಿ ಇವಳೆಗೆ 1 ತಿಂಗಳು ಹಿಂದೆ ಒಂದು ಚೀಲ ಡಿ.ಎ.ಪಿ.ಗೊಬ್ಬರ ಹಾಗೂ 2000/- ರೂಪಾಯಿ ಕೈಗಡ ರೂಪದಲ್ಲಿ ಕೊಟ್ಟಿದ್ದು ಇಂದು ದಿನಾಂಕ-24/10/2013 ರಂದು 9-30 ಎ.ಎಮ್ ಕ್ಕೆ ಜಾಂಗುಬಾಯಿ ಇವಳ ಮನೆಗೆ ಫಿರ್ಯಾಧಿ ಹೋಗಿದ್ದು ಅದೆ ಸಮಯಕ್ಕೆ ಜೈನಾಬಾಯಿ ಇವಳು ಸಹ ಬಂದಾಗ ಫಿರ್ಯಾಧಿ ಒಂದು ಚೀಲ ಡಿ.ಎ.ಪಿ.ಗೊಬ್ಬರ ಹಾಗೂ 2000/- ರೂಪಾಯಿ  ಕೂಡು ಅಂತಾ ಕೇಳಿದಕ್ಕೆ ವಸಂತ ಚವ್ಹಾನ ಸಂಗಡ 5 ಜನರು ಕುಡಿಕೊಂಡು ಯಾವ ನಿನ್ನ ರೊಕ್ಕ ಕೊಡುವುದಿದೆ ಅಂತಾ ಅವಾಚ್ಯವಾಗಿ ಬೈದು ಆರೋಪಿತರೆಲ್ಲರೂ ಕೂಡಿ ಫಿರ್ಯಾಧಿಗೆ ಹಾಗೂ ಆತನ ಮಗನಿಗೆ ಕೈಯಿಂದ ಹೊಡೆಬಡೆ ಮಾಡಿ ಗುಪ್ತಗಾಯ ಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Gulbarga District Reported Crimes

ಅಪಘಾತ ಪ್ರಕರಣಗಳು :
ಕಮಲಾಪೂರ ಠಾಣೆ : ಶ್ರೀ ಬಸವರಾಜ ತಂದೆ ಶಿವಪಾದಪ್ಪ ಮಜ್ಜಿ ಸಾ; ಉದನೂರು ತಾ:ಜಿ: ಗುಲಬರ್ಗಾ ರವರು  ಗುಲಬರ್ಗಾದ ರಿಲಾಯನ್ಸ್ ಮೊಬೈಲ್ ಕಂಪನಿಯಲ್ಲಿ ಕಾರ ಚಾಲಕ ಅಂತಾ ಕೆಲಸ ಮಾಡುತ್ತಿದ್ದು, ಇದೇ ಕಂಪನಿಯಲ್ಲಿ ಟಾವರ ಸುಪರವೈಜರ್ ಅಂತಾ ಕೆಲಸ ಮಾಡುತ್ತಿರುವ ಸುಧೀರ ತಂದೆ ರಾಘವೇಂದ್ರ ಕುಲಕರ್ಣಿ ಇವರೊಂದಿಗೆ ರಿಲಾಯನ್ಸ್ ಟಾವರ ಸುಪರವೈಸಿಂಗ್ ಮಾಡುವ ಕುರಿತು ಇಂದು ಗುಲಬರ್ಗಾದಿಂದ ಬೆಳೆಗ್ಗೆ 10-30 ಗಂಟೆಗೆ ಕಂಪನಿಯ ಕಾರ ನಂ: ಕೆಎ-37-ಎಂ-6549 ನೇದ್ದರಲ್ಲಿ ಕುಳಿತುಕೊಂಡು ಹುಮನಾಬಾದ, ಬಸವಕಲ್ಯಾಣ ಟಾವರ ಭೇಟಿ ಕುರಿತು ಗುಲಬರ್ಗಾ- ಹುಮನಾಬಾದ ಎನ್.ಹೆಚ್. 218 ನೇದ್ದರ ಕಮಲಾಪೂರ ಮಾರ್ಗವಾಗಿ ಹುಮನಾಬಾದ ಕಡೆಗೆ ಹೋಗುತ್ತಿದ್ದಾಗ ಮುಂದೆ ಮರಗುತ್ತಿ ಕ್ರಾಸ್ ದಾಟಿ ಕೆ.ಇ.ಬಿ ಆಫೀಸ್ ಹತ್ತಿರ ಹೋಗುತ್ತಿದ್ದಾಗ ಎದುರುಗಡೆಯಿಂದ  ಒಬ್ಬ ಲಾರಿ ಚಾಲಕನು ತನ್ನ ಲಾರಿಯನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಕಾರಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದು, ಈ ಅಪಘಾತದಲ್ಲಿ ಎರಡೂ ವಾಹನಗಳು ರಸ್ತೆಯಿಂದ ಕೆಳಗೆ ಎಳೆದುಕೊಂಡು ಹೋಗಿರುತ್ತವೆ. ನಂತರ ಅಲ್ಲಿದ್ದ ಸಾರ್ವಜನಿಕರು ನಮ್ಮನ್ನು ಕಾರಿನಿಂದ ಹೊರಗೆ ತೆಗೆದು ನೋಡಲಾಗಿ ನನಗೆ ಎಡಕಿವಿಯ ಹತ್ತಿರ, ಎಡ ಕಪಾಳಕ್ಕೆ ಭಾರಿ ರಕ್ತಗಾಯವಾಗಿ ಬಾಯಿಯಲ್ಲಿನ ಎರಡು ಹಲ್ಲುಗಳು ಮುರಿದು ಭಾರಿ ರಕ್ತಗಾಯವಾಗಿದ್ದು ಅಲ್ಲದೇ ಎಡಗೈ ಮೊಳಕೈಗೆ ರಕ್ತಗಾಯವಾಗಿದ್ದವು., ಸುಧೀರ ಕುಲಕರ್ಣಿ ಇವರಿಗೆ ನೋಡಲಾಗಿ ಅವರ ತೆಲೆಗೆ, ಎಡಗಣ್ಣಿನ ಹುಬ್ಬಿನ ಮೇಲೆ ಭಾರಿ ರಕ್ತಗಾಯವಾಗಿದ್ದು ಅಲ್ಲದೇ ಬಲಗೈ ಭುಜದ ಹತ್ತಿರ ಮುರಿದಂತಾಗಿ ಭಾರಿ ಗುಪ್ತಗಾಯವಾಗಿತ್ತು ಮತ್ತು ಎದೆಗೆ, ಹೊಟ್ಟೆಗೆ ಎಡಗಾಲಿನ ಮೊಳಕಾಲಿನ ಹತ್ತಿರ ತರಚಿದ ರಕ್ತಗಾಯಗಳಾಗಿದ್ದವು. ನಂತರ ಅಪಘಾತ ಪಡಿಸಿದ ಲಾರಿ ನಂಬರ್ ನೋಡಲಾಗಿ  ಲಾರಿ ನಂ: ಕೆಎ-39-2499 ನೇದ್ದು ಇದ್ದು ಅದರ ಚಾಲಕನ ಹೆಸರು ಪಾಶಾ ಮಿಯಾ ತಂದೆ ಛೋಟಾ ಮಿಯಾ ಸಾ; ಮುಲ್ಲಾತ್ತಾನಿ ಕಾಲೂನಿ ಬೀದರ ಅಂತಾ ತಿಳಿಯಿತು. ನಾವು ಚಿರಾಡುವ ಸಪ್ಪಳ ಕೇಳಿ ಮತ್ತು ಜನರು ಓಡಿ ಬರುತ್ತಿರುವುದನ್ನು ನೋಡಿ ಲಾರಿ ಚಾಲಕನು ತನ್ನ ಲಾರಿಯನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ.  ನಂತರ ಯಾರೋ 108 ಅಂಬುಲೇನ್ಸಗೆ ಕರೆ ಮಾಡಿ ನಮ್ಮನ್ನು ಉಪಚಾರ ಕುರಿತು ಗುಲಬರ್ಗಾದ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು ಆಸ್ಪತ್ರೆಗೆ ಬರುವಾಗ ಸುಧೀರ ಕುಲಕರ್ಣಿ ಇವರು ಮಧ್ಯಾಹ್ನ 12-30 ಗಂಟೆ ಸುಮಾರಿಗೆ ಮಾರ್ಗಮಧ್ಯದಲ್ಲಿಯೇ ಮೃತಪಟ್ಟಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಗಿದೆ.  
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಮರೇಪ್ಪ ತಂದೆ ಸಾಯಿಬಣ್ಣ ರವರು  ದಿನಾಂಕ: 22-10-2013 ರಂದು ರಾತ್ರಿ 9=30 ಗಂಟೆಗೆ ನಾನು ಜೇವರ್ಗಿ ಪೊಲೀಸ ಠಾಣೆಗೆ ಹೊಗುವ ಸಲುವಾಗಿ ಚೌಕ ಪೊಲೀಸ್ ಠಾಣೆ ಎದುರುಗಡೆ ಅಟೋರೀಕ್ಷಾ ಸಲುವಾಗಿ ನಿಂತಿರುವಾಗ ಸುಪರ ಮಾರ್ಕೇಟ ಕಡೆಯಿಂದ ಯಾವುದೋ ಒಂದು ಮೋ/ಸೈಕಲ್ ಸವಾರನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿ ಭಾರಿ ಗಾಯಗೊಳಿಸಿ ಮೋ/ಸೈಕಲ್ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ: 23-10-2013 ರಂದು ರಾತ್ರಿ 9=00 ಗಂಟೆಗೆ ಲಾಹೋಟಿ ಪೆಟ್ರೋಲ್ ಪಂಪ್ ಕ್ರಾಸ್ ಸಂಚಾರಿ  ಪಾಯಿಂಟ ಸಿಬ್ಬಂದಿಯವರಾದ ಶ್ರೀ ಭೀಮಣ್ಣಾ ಸಿ.ಹೆಚ್.ಸಿ 191 ರವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕ ಯಂತ್ರದಲ್ಲಿ ಬರೆಯಿಸಿದ ದೂರು ವರದಿಯನ್ನು ಹಾಜರ ಪಡಿಸಿದ ಸಾರಾಂಶವೆನೆಂದರೆ ದಿನಾಂಕ: 23-10-2013 ರಂದು  ಸಾಯಂಕಾಲ 7=40 ಗಂಟೆಗೆ ನಾನು ಲಾಹೋಟಿ ಪೆಟ್ರೋಲ್ ಪಂಪ್ ಕ್ರಾಸ್ ಸಂಚಾರಿ ಪಾಯಿಂಟ ಕರ್ತವ್ಯದಲ್ಲಿರುವಾಗ ಎಸ್.ವಿ.ಪಿ.ಸರ್ಕಲ್ ಕಡೆಯಿಂದ ಮಸೂದ ಅಲಿ ಅಟೋರೀಕ್ಷಾ ನಂ:ಕೆಎ 32 -9003 ನೆದ್ದು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ರೋಡ ಡಿವೈಡರಕ್ಕೆ ಡಿಕ್ಕಿ ಪಡಿಸಿ ಅಪಘಾತಮಾಡಿ ಅಟೋರೀಕ್ಷಾ ಪಲ್ಟಿಮಾಡಿ ಆತನೇ ಗಾಯಹೊಂದಿರುತ್ತಾನೆ ಅಂತಾ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣಗಳು :
ಸ್ಟೇಷನ ಬಜಾರ ಠಾಣೆ : ಕುಮಾರಿ ಶಾಂತಾಬಾಯಿ ತಂದೆ ಬಸವರಾಜ ಗಣಜಲಖೇಡ ಸಾ|| ಮನೆ ನಂ; 1-9/2/ಸಿ ಖೂಬಾ ಪ್ಲಾಟ ನಾಗಠಾಣ ಆಸ್ಪಾತ್ರೆ ಎದುರುಗಡೆ ಗುಲಬರ್ಗಾ ರವರು.  ಬ್ಯೂಟಿ ಪಾರ್ಲದಿಂದ ಬಂದ ಹಣ ಕೂಡಿಟ್ಟು  10 ಗ್ರಾಂ ನ 4 ಸುತ್ತುಂಗರಗಳು. 05 ಗ್ರಾಂ ನ 10 ಸುತ್ತುಂಗರಗಳು ಹೀಗೆ ಸುಮಾರು 90 ಗ್ರಾಂ ಬಂಗಾರದ 14 ಸುತ್ತುಂಗುರಗಳನ್ನು ಒಂದು ಪ್ಲಾಸ್ಟಿಕ್ ಸಣ್ಣ ಚೀಲದಲ್ಲಿ ಹಾಕಿ ಕರಿ ಬ್ಯಾಗನಲ್ಲಿಟ್ಟು  ನಮ್ಮ ಮನೆಯಲ್ಲಿಯ ಬಾತರೂಮಿನ ಚಾವಣಿಯ ಮೇಲೆ ಯಾರಿಗೂ ಸಂಶಯ ಬಾರದಂತೆ ಇಟ್ಟಿದ್ದು ದಿನಾಂಕ; 23-10-2013 ರಂದು ಬೆಳಗ್ಗೆಯಿಂದ ದಿಪಾವಳಿ ಹಬ್ಬದ ನಿಮಿತ್ಯ ನಮ್ಮ ಮನೆಯ ಸುಣ್ಣ ಬಣ್ಣಮಾಡುವ ಸಲುವಾಗಿ 3 ಜನ ಕೂಲಿಯವರನ್ನು ಹಚ್ಚಿದ್ದು ಅದೆ. ಬಣ್ಣ ಹಚ್ಚುವವರು ಮದ್ಯಾನ್ಹ 02;30 ಗಂಟೆಯ ಸುಮಾರಿಗೆ ಕೆಲಸ ಮುಗಿಸಿ ಹೋದರು ನಂತರ  ನಾನು ಬಾತ ರೂಮಿನ ಛಾವಣಿಯ ಮೇಲೆ ಇಟ್ಟಿರುವ ನನ್ನ ಬ್ಯಾಗ ನೋಡಲಾಗಿ ಬ್ಯಾಗ ಇದ್ದು  ಅದರಲ್ಲಿದ್ದ ಬಂಗಾರದ ಉಂಗುರುಗಳು ಇರಲಿಲ್ಲ ನಾನು ಗಾಬರಿಯಾಗಿ ಹುಡುಕಾಡಿದರೂ ಸಿಕ್ಕಿರುವದಿಲ್ಲ ಬಣ್ಣ ಹಚ್ಚಲು ಬಂದ ಮೂರು ಜನರ ಪೈಕಿ ಕಪ್ಪು ಮೈ ಬಣ್ಣ. ಉಂಗುರಕೂದಲು. ಗಿಡ್ಡಗಿದ್ದವನ ಮೇಲೆ ಸಂಶಯವಿರುತ್ತದೆ. ಕಾರಣ ನಮ್ಮ ಮನೆಯಲ್ಲಿದ್ದ 14 ಸುತ್ತುಂಗರಗಳು.  ಸುಮಾರು 90 ಗ್ರಾಂ ಬಂಗಾರದ 14 ಸುತ್ತುಂಗುರಗಳು ಅ|| ಕಿ|| 2.70.000/- ರೂ ನೇದ್ದವುಗಳು  ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮೀಣ ಠಾಣೆ : ಶ್ರೀಮತಿ. ಶಿವಲೀಲಾ ಗಂಡ ಅನೀಲ ಕುಮಾರ ಬಿರಾದರ ಸಾ;ನ್ಯೂ ಆದರ್ಶ ಕಾಲೂನಿ ಬೀದರ  ರವರು ದಿನಾಂಕ. 23-10-2013 ರಂದು ಮದ್ಯಾನ 2-30 ಗಂಟೆಯ ಸುಮಾರಿಗೆ ತಾನು ಗುಲಬರ್ಗಾ ದಿಂದ ಬೀದರಕ್ಕೆ ಹೋಗುವ ಕುರಿತು ಹುಮನಾಬಾದ ರಿಂಗರೋಡನಲ್ಲಿ ಬಸ್ಸ ಹತ್ತುವಾಗ  ಇಬ್ಬರು ಅಪರಿಚಿತ ಹೆಣ್ಣು ಮಕ್ಕಳು ದಬ್ಬಾಡಿದ್ದು ತಾನು ಹಾಗೆ ಬಸ್ಸ ಹತ್ತಿ ಬಸ್ಸು ಕುರಕೋಟ ಹತ್ತಿರ ಹೋದಾಗ ತನ್ನ ಗಂಡನಿಗೆ ಮಾತಾಡಬೇಕೆಂದು ವೆನಿಟಿ ಬ್ಯಾಗನಲ್ಲಿ ಕೈ ಹಾಕಿ ಮೋಬಾಯಿಲ್ ನೋಡುವಾಗ  ಸಣ್ಣ ಪರ್ಸ ಕಳುವಾಗಿದ್ದು ಅದರಲ್ಲಿಟ್ಟಿದ್ದ 4 ½ ತೊಲೆ ಬಂಗಾರದ ಮಂಗಳ ಸೂತ್ರ. ಅಕಿ. 1,12,500/- ಹಾಗೂ ಒಂದು ನೋಕಿಯಾ ಮೋಬಾಯಿಲ್ ಅಕಿ. 5000/- ರೂ  ಹೀಗೆ ಒಟ್ಟು ಅಕಿ. 1,17,500/- ಬೆಲೆಬಾಳುವದು ಇದ್ದವು , ಅವುಗಳನ್ನು ಹುಮನಾಬಾದ ರಿಂಗರೋಡ ಹತ್ತಿರ  ಸದರಿ ಇಬ್ಬರು ಅಪರಿಚಿತ ಹೆಣ್ಣು ಮಕ್ಕಳು  ನನ್ನ ಪರ್ಸ ಅದರಲ್ಲಿ ಬಂಗಾರದ ಮಂಗಳ ಸೂತ್ರ ಮತ್ತು ಮೋಬಾಯಿಲ್ ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರೋಜಾ ಠಾಣೆ : ಶ್ರೀಮತಿ ಅಖ್ತರ ಬೇಗಂ ಗಂಡ ಮಹ್ಮದ ಮೊಹಿನುದ್ದಿನ ಚಂಡರಕಿ, ಉ: ಸರಕಾರಿ ಹಿರಿಯ [ಕನ್ಯಾ] ಪ್ರಾಥಮಿಕ ಶಾಲೆಯ ರೋಜಾ ತೈನ ಪಾಶಾಪೂರ ಗುಲಬರ್ಗಾ ಮುಖ್ಯ ಗುರುಗಳು  ಸಾ: ಮನೆ ನಂ. 7-775/5ಎ ನಯಾಮೊಹಲ್ಲಾ ಮಿಜಗುರಿ ಡಾಕ್ಟರ್ ಮೋರೆ ಆಸ್ಪತ್ರೆಯ ಹತ್ತಿರ ಗುಲಬರ್ಗಾ ದಿನಾಂಕ: 21-10-2013 ರಂದು ಮದ್ಯಾನ 12:00 ಗಂಟೆಯ ಸುಮಾರಿಗೆ ಪ್ರೌಢಶಾಲೆಯ ಮುಖ್ಯಗುರುಗಳಾದ ಶ್ರೀ ದೌಲಪ್ಪಾ ಆನಂದಿ ರವರು ನನಗೆ ದೂರವಾಣಿ ಮೂಲಕ ನಿಮ್ಮ ಶಾಲೆಯ ಬಿಸಿ ಊಟ ಅಡುಗೆ ಮನೆಯ ಬಾಗಿಲಿನ ಕೀಲಿ ಇಲ್ಲಾ ಬಾಗಿಲು ತೆಗೆದಿದೆ ನೋಡಿ ಎಂದು ನನಗೆ ತಿಳಿಸಿದರು ನಾನು ಧೀಡಿರನೇ ಶಾಲೆಗೆ ಭೇಟಿ ನೀಡಿದೆ ಅಲ್ಲಿ ಪ್ರೌಢ ಶಾಲೆಯ ಪಿಯುನ್ ಇದ್ದನು ಅವನಿಗೆ ನಾನು ಏನಾಯಿತು ಅಂತಾ ಕೇಳಿದರೆ ಅವನು ನಾನು ನೋಡಿಲ್ಲಾ ಮೇಡಂ ಬಾಗಿಲು ಮಾತ್ರ ತೆರೆದಿದ್ದು ಇತ್ತು ಅಂತಾ ಹೇಳಿದರು ರೂಮ ಕೀಲಿ ಕೈಯು ಹೆಡ್ ಕುಕ್ಕರ ಆದ ಮಲ್ಲಮ್ಮ ಹತ್ತಿರ ಇರುತ್ತದೆ ಅಲ್ಲಿ ನಾನು ನೋಡಿದರೆ ಕೆಳಗೆ ತೋರಿಸಿದ ಸಾಮಾನುಗಳು ಕಳ್ಳತನವಾಗಿರುತ್ತವೆ. ಇಂಡಿಯನ ಗ್ಯಾಸ್ ಸಿಲೆಂಡರ್ ತುಂಬಿದ ಟ್ಯಾಂಕ  ತೊಗರಿ ಬೇಳೆ 50 ಕೆ.ಜಿ ಪಾಕಿಟಗಳು  ಅಲ್ಯೂಮಿನಿಯಂ ಅಡುಗೆ ಪಾತ್ರೆ  ಅಲ್ಯೂಮಿನಿಯಂ ಪರಾತ ದೊಡ್ಡದು ಅಡುಗೆ ಮಾಡುವ ಎಣ್ಣೆ 38 ಕೆ.ಜಿ. ಪಾಕಿಟಗಳು  ಊಟ ಮಾಡುವ ಸ್ಟೀಲ ಪ್ಲೇಟ್ [20] ಹೀಗೆ ಎಲ್ಲವೂ ಸೇರಿ ಒಟ್ಟು 10,700/-ರೂಪಾಯಿ ಬೆಲೆಯುಳ್ಳ ಸಾಮಾನುಗಳು ಕಳುವಾಗಿದ್ದು ದಿನಾಂಕ: 07-10-2013 ರಿಂದ 29-10-2013 ರ ವರೆಗೆ ರಜೆ ಇದ್ದಕಾರಣ ಶಾಲೆಯ ಸಿಬ್ಬಂದಿಗಳು ಯಾರೂ ಶಾಲೆಗೆ ಹೋಗಿರುವದಿಲ್ಲಾ ಸರಕಾರವು ಒಂದು ತಿಂಗಳ ಮುಂಚಿತವಾಗಿಯೇ ಬಿಸಿ ಊಟದ ಅನಾಜುಗಳನ್ನು ಕೊಟ್ಟಿರುತ್ತಾರೆ ಆದರೆ ರೂಮ ಕೀಲಿ ಕೈಯು ಹೆಡ್ ಕುಕ್ಕರ ಆದ ಮಲ್ಲಮ್ಮ ಹತ್ತಿರ ಇರುತ್ತದೆ ದಿನಾಂಕ: 18/10/2013 ರಂದು ವಾಲ್ಮಿಕಿ ಜಯಂತಿಯಂದು ನಾವು ಶಾಲೆಗೆ ಬಂದಾಗ ಯಾವುದೇ ರೀತಿಯಿಂದ ಸಾಮಾನುಗಳು ಕಳ್ಳತನವಾಗದೇ ಸುರಕ್ಷಿತವಾಗಿ ಇದ್ದವು ದಿನಾಂಕ: 18-10-2013 ರಂದು ರಾತ್ರಿಯಿಂದ ದಿನಾಂಕ: 21-10-2013 ರ ವರೆಗಿನ 12:00 ಗಂಟೆಯ ಅವಧಿಯಲ್ಲಿ ಕಳ್ಳತನವಾಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೋಜಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಮಟಕಾ ಜುಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ಅಫಜಲಪೂರ ಠಾಣೆ : ದಿನಾಂಕ 23-10-2013 ರಂದು 6:30 ಪಿ.ಎಮ್ ಕ್ಕೆ ಮಲ್ಲಾಬಾದ ಗ್ರಾಮದ ಬಸ್ಸನಿಲ್ದಾಣದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಠಾಣೆ ಸಿಬ್ಬಂದಿ ಜನರನ್ನು ಕರೆದುಕೊಂಡು ಪಂಚರೊಂದಿಗೆ ಮಾನ್ಯ ಸಿ.ಪಿ.ಐ ಸಾಹೇಬರು ಅಫಜಲಪೂರ ರವರ ಮಾರ್ಗದರ್ಶನದಂತೆ ಠಾಣೆಯ ಜೀಪಿನಲ್ಲಿ ಮಲ್ಲಾಬಾದ ಗ್ರಾಮದ ಬಸ್ ನಿಲ್ದಾಣದ ಹತ್ತಿರ 7:15 ಪಿ ಎಮ್ ಕ್ಕೆ ಹೊಗಿ ಸ್ವಲ್ಪ ದೂರು ಮರೆಯಾಗಿ ನಿಂತುಕೊಂಡು ನೋಡಲಾಗಿ. ಬಸ್ ನಿಲ್ದಾಣದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು, ಹೊಗಿ ಬರುವ ಸಾರ್ವಜನಿಕರಿಗೆ 1 ರೂಪಾಯಿಗೆ 80 ರೂಪಾಯಿ ಅಂತಾ ಸಾರ್ವಜನಿಕರ ಮನವೊಲಿಸಿ ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಯನ್ನು ಕೊಟ್ಟು, ಮಟಕಾ ಬರೆದು ಕೋಳ್ಳುವದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ದಾಳಿ ಮಾಡಿ ಗಣಪತಿ ತಂದೆ ಬಸಣ್ಣ ಕಂಚೋಳಿ ಸಾ|| ಮಾತೋಳಿ ವಶಕ್ಕೆ ತೆಗೆದುಕೊಂಡು  ಮಟಕಾಕ್ಕೆ ಸಂಬಂದಿಸಿದ 5380/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಹಾಗೂ ಒಂದು ಬಾಲ ಪೆನ್ನಗಳನ್ನು ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡು ಸದರ ಆರೋಪಿತನ ವಿರುದ್ದ  ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.