POLICE BHAVAN KALABURAGI

POLICE BHAVAN KALABURAGI

05 September 2020

KALABURAGI DISTRICT REPORTED CIRMES

 ರಸ್ತೆ ಅಪಘಾತ ಪ್ರಕರಣ:-

ಮುಧೋಳ ಪೊಲೀಸ ಠಾಣೆ 

         ದಿನಾಂಕ: 04-09-2020  ರಂದು 06.00 ಪಿಎಮ್ ಕ್ಕೆ ಫಿರ್ಯಾದಿ ಶ್ರೀಮತಿ ಪಾರ್ವತಿ ಗಂಡ ಸುರೇಶ ಚವ್ಹಾಣ ವ|| 22 ವರ್ಷಜಾ|| ಲಂಬಾಣಿ ಸಾ|| ಕೋನಾಪೂರ ಎಸ್.ಎನ್. ತಾಂಡಾ ಇವರು ಫಿರ್ಯಾದು ನೀಡಿದ ಸಾರಾಂಶವೆನೆಂದರೆ, ದಿನಾಂಕ 30-08-2020 ರಂದು ಸಾಯಂಕಾಲ 06.30 ಗಂಟೆ ಸುಮಾರಿಗೆ ನನ್ನ ಗಂಡ ಸುರೇಶ ಹಾಗೂ ವೆಂಕಟೇಶ ಇಬ್ಬರು ಕೂಡಿ ಮೋಟರ್ ಸೈಕಲ ನಂ ಕೆಎ-32 ಇಜೆ-0534 ನೇದ್ದರ ಮೇಲೆ ಕೋಲಕುಂದಾ ಗ್ರಾಮದಿಂದ ಕೋನಾಪೂರ ಎಸ್.ಎನ್. ತಾಂಡಾಕ್ಕೆ ಹೋಗುವಾಗ ಆರೋಪಿತ ವೆಂಕಟೇಶನು ತನ್ನ ಮೋಟರ್ ಸೈಕಲನ್ನು ಅತಿವೇಗವಾಗಿ ಮತ್ತು ನಿಷ್ಕಾಳಜೀತನದಿಂದ ಚಲಾಯಿಸಿ ನಿಯಂತ್ರಣ ತಪ್ಪಿ ಅಪಘಾತ ಮಾಡಿದ್ದರಿಂದ ಗಾಯಾಳು ನನ್ನ ಗಂಡ ಸುರೇಶ ಇತನಿಗೆ ತಲೆಗೆ ಹಾಗೂ ಮೈಕೈಗೆ ಭಾರಿರಕ್ತ ಮತ್ತು ಗುಪ್ತಗಾಯಗಳಾಗಿರುತ್ತವೆ ಅಂತಾ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಮುಧೋಳ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

ಮನುಷ್ಯ ಕಾಣೆಯಾದ ಬಗ್ಗೆ :-

ಅಫಜಲಪೂರ ಪೊಲೀಸ ಠಾಣೆ 

            ಇಂದು ದಿ:04-09-2020 ರಂದು 1:45 ಪಿ.ಎಮ್. ಕ್ಕೆ ಶ್ರೀಮತಿ ಸವೀತಾ ಗಂಡ ಲಿಂಬಾಜಿ ರಾಠೋಡ ಸಾ|| ಬಾಳು ತಾಂಡಾ (ಮಾಶಾಳ) ತಾ||ಅಫಜಲಪೂರ ಇವರು ಠಾಣೆಗೆ ಹಾಜರಾಗಿ ದೂರು ಸಲ್ಲಿಸಿದ  ಸಾರಾಂಶವೇನೆಂದರೆ, ದಿನಾಂಕ: 01-09-2020 ರಂದು ಸಾಯಂಕಾಲ 4-00 ಗಂಟೆಯ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನನ್ನ ಗಂಡನಾದ ಲಿಂಬಾಜಿ ಇತನು ಸ್ವಲ್ಪ ಕೆಲಸವಿದೆ ಹೊರಗಡೆ ಹೋಗಿ ಬರುತ್ತೇನೆ ಅಂತಾ ಮೋಟಾರ ಸೈಕಲ್ ನಂ ಕೆಎ-32 ಈಟಿ- 0889 ನೇದ್ದನ್ನು ತೆಗೆದುಕೊಂಡು ಹೋಗಿದ್ದು ರಾತ್ರಿಯಾದರು ಮರಳಿ ಮನೆಗೆ ಬಂದಿರುವುದಿಲ್ಲಾ ನಾನು ಮತ್ತು ನನ್ನ ಭಾವನಾದ ರೂಪಸಿಂಗ ತಂದೆ ನಾಮದೇವ ರಾಠೋಡ ಕೂಡಿಕೊಂಡು ನನ್ನ ಗಂಡನಿಗೆ ಎಲ್ಲಾಕಡೆಗೆ ಹುಡುಕಾಡಿದರು ಸಿಕ್ಕಿರುವುದಿಲ್ಲಾ ಮತ್ತು ನಮ್ಮ ಸಂಬಂಧಿಕರಲ್ಲಿ ಪೋನ ಮಾಡಿ ವಿಚಾರಿಸಲಾಗಿ ಬಂದಿರುವುದಿಲ್ಲಾ ಅಂತಾ ತಿಳಿಸಿರುತ್ತಾರೆ.  

ಕಾಣೆಯಾದ ನನ್ನ ಗಂಡನ   ಚಹರಾಪಟ್ಟಿ

ಹೆಸರು ಮತ್ತು ವಿಳಾಸ :- ಲಿಂಬಾಜಿ ತಂದೆ ನಾಮದೇವ ರಾಠೋಡ ವ|| 37 ವರ್ಷ ಜಾ|| ಲಂಬಾಣಿ ಸಾ|| ಬಾಳು ತಾಂಡಾ (ಮಾಶಾಳ) ತಾ|| ಅಫಜಲಪೂರ ಜಿ: ಕಲಬುರಗಿ                               

 ಎತ್ತರ :-   ಅಂದಾಜು 5 ಪೀಟ್  05 ಇಂಚು

ಮುಖ  ಚಹರೆ : ಕೋಲಿ ಮುಖ, ಸಾದಾಗಪ್ಪು ಬಣ್ಣ, ಸಾದಾರಣ ಮೈಕಟ್ಟು ಇರುತ್ತದೆ

ಕಾಣೆಯಾದ ದಿನದಂದು ಧರಸಿದ ಉಡುಪುಗಳು :- ಬಿಳಿ ಶರ್ಟ್, ನೀಲಿ ಪ್ಯಾಂಟ

ಮಾತನಾಡುವ ಬಾಷೆಗಳು :- ಕನ್ನಡ, ಲಂಬಾಣಿ

           ಕಾರಣ ಕಾಣೆಯಾದ ನನ್ನ ಗಂಡನನ್ನು ಹುಡುಕಿಕೊಡಬೇಕು ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಅಫಜಲಪೂರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.