POLICE BHAVAN KALABURAGI

POLICE BHAVAN KALABURAGI

29 December 2013

Gulbargta District Reported Crimes

ಅಪಘಾತ ಪ್ರಕರಣಗಳು :
ಗ್ರಾಮೀಣ ಠಾಣೆ : ಶ್ರೀ ದುಂಡಪ್ಪ @ ಶಾಂತಪ್ಪ ತಂದೆ ಕಲ್ಲಪ್ಪ @ ಕಲ್ಯಾಣಿ ಉಪ್ಪಿನ ಸಾ|| ಹಿತ್ತಲ ಶಿರೂರ ಗ್ರಾಮ ತಾ|| ಆಳಂದ ರವರದು 407 ಟೆಂಪೋ ಕೆಎ-32-ಎ-3924 ಇರುತ್ತದೆ. ನಮ್ಮ ಟೆಂಪೋದ ಚಾಲಕ ನಮ್ಮೂರಿನ ನಾಗಪ್ಪ ತಂದೆ ಬಾಬು ಮಾಡಿಯಾಳ ಇರುತ್ತಾನೆದಿನಾಂಕ: 28.12.2013 ರಂದು ಸಂಜೆ 5:00 ಗಂಟೆ ಸುಮಾರಿಗೆ ನಮ್ಮೂರಿನ ಭೂತಾಳೆ ತಂದೆ ಹಾವಣ್ಣಾ ಪೂಜಾರಿ ಇವರ 20 ಚೀಲ, ತೊಗರಿ ಚೀಲಗಳನ್ನು ನಾನು ಮತ್ತು ನಾಗಪ್ಪ ಹಾಗೂ ಭೂತಾಳೆ ಪೂಜಾರಿ ಮೂವರು ನಮ್ಮ ಟೆಂಪೋದಲ್ಲಿ ಹಾಕಿಕೊಂಡು , ಅದರಲ್ಲಿ ಕುಳಿತುಕೊಂಡು ಸಂಜೆ 6:30 ಗಂಟೆ ಸುಮಾರಿಗೆ ಗುಲ್ಬರ್ಗಾಕ್ಕೆ ಗಂಜಿನಲ್ಲಿರುವ ಜಯಭಾವಾನಿ ಟ್ರೇಡರ್ಸನಲ್ಲಿ ತೊಗರಿ ಚೀಲಗಳನ್ನು ಹಚ್ಚಿ ವಾಪಸ್ಸು ಸ್ವಲ್ಪ ಸಮಯದಲ್ಲಿ ಹಿತ್ತಲ ಶಿರೂರ ವಾಪಸ್ಸು ಹೊರಟಿದ್ದು ಟೆಂಪೋ ಕೆಎ-32--3924 ಚಾಲಕ ನಾಗಪ್ಪನ ಪಕ್ಕದಲ್ಲಿ ಭೂತಾಳೆ, ಭೂತಾಳೆ ಪಕ್ಕದಲ್ಲಿ ನಾನು ಕುಳಿತುಕೊಂಡು ಹೊರಟಿದ್ದು , ರಾತ್ರಿ 9:15 ಗಂಟೆ ಸುಮಾರಿಗೆ ಗುಲ್ಬರ್ಗಾ ಆಳಂದ ರೋಡ ಇರುವ ರೈಲ್ವೆ ಓವರ್ ಬ್ರೀಡ್ಜ ಮೇಲೆ ಬಂದಾಗ ಎದುರಿನಿಂದ ಆಳಂದ ರೋಡ ಕಡೆಯಿಂದ ಒಬ್ಬ ಲಾರಿ ಟ್ಯಾಂಕರ್ ಚಾಲಕ ತನ್ನ ಲಾರಿಯನ್ನು ಅತಿ ವೇಗದಿಂದ ಮತ್ತು ನಿಷ್ಕಾಳಜಿತನದಿಂದ ನಡೆಸುತ್ತಾ ಬಂದವನೆ ನಮ್ಮ ಟೆಂಪೋಕ್ಕೆ ಡಿಕ್ಕಿ ಹೊಡೆದನು, ಇದರಿಂದಾಗಿ ನಾವೂ ಮೂವರು ಟೆಂಪೋದಲ್ಲಿ ಸಿಕ್ಕಿ ಬಿದ್ದಿದ್ದು, ನಾನು ನನ್ನ ಮೊಬಾಯಲನಿಂದ ಅಣ್ಣತಮಕಿಯ ಅಣ್ಣ ಶರಣಕುಮಾರ ಉಪ್ಪಿನ ಈತನಿಗೆ ಫೋನ ಮಾಡಿ ವಿಷಯ ತಿಳಿಸಲು ಸ್ವಲ್ಪ ಸಮಯದಲ್ಲಿ ಶರಣಕುಮಾರ & ಅರುಣಕುಮಾರ ಇವರು ಸ್ಥಳಕ್ಕೆ ಬಂದು ನಮ್ಮ ಮೂವರಿಗೆ ಹೊರಗೆ ತೆಗೆದಿದ್ದು ಅಪಘಾತದಿಂದಾಗಿ ನನಗೆ ಎಡಗಣ್ಣಿನ ಮೇಲೆ , ಬಲಹಣೆಯ ಮೇಲೆ ರಕ್ತಗಾಯವಾಗಿದ್ದು , ಬಲಮೊಳಕಾಲ ಕೆಳಗೆ ರಕ್ತಗಾಯವಾಗಿದ್ದು , ಎದೆಗೆ ಗುಪ್ತಗಾಯವಾಗಿದ್ದು, ಚಾಲಕ ನಾಗಪ್ಪನಿಗೆ ನೋಡಲಾಗಿ , ಅವನ ಬಲ ಮತ್ತು ಎಡಮೊಳಕಾಲ ಮೇಲೆ ಭಾರಿ ರಕ್ತಗಾಯವಾಗಿದ್ದು, ಬಲಗೈ ಅಂಗೈಯ ಮೇಲೆ ರಕ್ತಗಾಯವಾಗಿದ್ದು , ಮೂಗಿನಿಂದ ರಕ್ತ ಸೋರಿದ್ದು, ಭೂತಾಳೆ ಪೂಜಾರಿ ಈತನಿಗೆ ನೋಡಲಾಗಿ, ಅವನ ಬಲ ಹಣೆ ಒಡೆದು ಭಾರಿ ರಕ್ತಗಾಯವಾಗಿ ರಕ್ತಸ್ರಾವದಿಂದ ಸ್ಥಳದಲ್ಲಿಯೆ ಮೃತಪಟ್ಟಿದ್ದನು . ನಮಗೆ ಡಿಕ್ಕಿ ಹೊಡೆದ ಲಾರಿ ಟ್ಯಾಂಕರ ನಂ: ಎಂ.ಹೆಚ್- 12 ಹೆಚ್ ಡಿ 1804 ಇತ್ತು. ಅದರ ಚಾಲಕ ಲಾರಿಯನ್ನು ಸ್ಥಳದಲ್ಲಿಯೆ ನಿಲ್ಲಿಸಿ ಓಡಿ ಹೋಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 28-12-2013 ರಂದು ಸಾಯಂಕಾಲ 6-00 ಗಂಟೆ ಸುಮಾರಿಗೆ ನನ್ನ ಹೆಂಡತಿಯಾದ ಕಾಶಿಬಾಯಿ ಇವಳು ಸಿದ್ದಾರ್ಥ ನಗರ ಬುದ್ದ ಮಂದಿರ ಹತ್ತಿರ ಇರುವ ಬಯಲು ಜಾಗೆಯಲ್ಲಿ ಸಂಡಸಕ್ಕೆ ಹೋಗಿ ವಾಪಸ್ಸ ನಡೆದುಕೊಂಡು ರಸ್ತೆ ದಾಟುತ್ತಿರುವಾಗ ಸಿದ್ದಾರ್ಥ ನಗರ ಹತ್ತಿರ ಇರುವ ರೋಡ ಮೇಲೆ ಕಣ್ಣಿ ಮಾರ್ಕೆಟ ಕಡೆಯಿಂದ ಮಳೇಂದ್ರ ಇತನು ತನ್ನ ಮೋಟಾರ ಸೈಕಲ ನಂಬರ ಕೆಎ-32ಇಸಿ-0474 ನೇದ್ದನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಕಾಶಿಬಾಯಿ ಇವಳಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಭಾರಿಗಾಯಗೊಳಿಸಿ ತನ್ನ ಮೋಟಾರ ಸೈಕಲ ಅಲ್ಲೆ ನಿಲ್ಲಿಸಿ ಓಡಿ ಹೋಗಿರುತ್ತಾನೆ ಅಂತಾ ಶ್ರೀ ಸಂತೋಷ ತಂದೆ ವಿಠಳ ಸೂರ್ಯವಂಶಿ ಸಾ: ಸಿದ್ದಾರ್ಥ ನಗರ ಅಫಜಲಪೂರ ರೋಡ ಗುಲಬರ್ಗಾ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀಮತಿ ಮಹಾನಂದ ತಂದೆ ಸಾಯಬಣ್ಣಾ ಜಾಪೂರ ಸಾ: ಹೊನ್ನಕಿರಣಗಿ ತಾ: ಗುಲಬರ್ಗಾ ರವರು ದಿನಾಂಕ 27-12-2013 ರಂದು ಸಾಯಂಕಾಲ ತಮ್ಮ ಸಂಬಂದಿಯಾದ ವಾಸುದೇವ ಇವರು ಚಲಾಯಿಸುತ್ತಿರುವ ಮೊಟಾರ ಸೈಕಲ ನಂಬರ ಕೆಎ-32 ಇಸಿ-3833 ರ ಮೇಲೆ ಜಗತ ಸರ್ಕಲ ಮುಖಾಂತರ ನಮ್ಮೂರಿಗೆ ಹೋಗುವಾಗ ಮಿನಿ ವಿಧಾನ ಸೌಧ ಎದುರಿನ ರೋಡ ಮೇಲೆ ಹಿಂದಿನಿಂದ ಮೋಟಾರ ಸೈಕಲ ನಂಬರ ಕೆಎ-32 ಎಸ್-561 ರ ಸವಾರ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಮೋಟಾರ ಸೈಕಲಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ನನಗೆ ಭಾರಿಗಾಯಗೊಳಿಸಿ ತನ್ನ ಮೋಟಾರ ಸೈಕಲ ಅಲ್ಲೆ ಬಿಟ್ಟು ಓಡಿಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಸಂಚಾರಿ ಠಾಣೆ : ದಿನಾಂಕ 27-12-2013 ರಂದು 07-30  ಪಿ.ಎಮ್ ಕ್ಕೆ ಗಾಯಾಳು ಲಕ್ಷ್ಮಿಬಾಯಿ ಇವಳು ಗಂಜ ಬಸ್ ನಿಲ್ದಾಣ ಹತ್ತಿರ ಇರುವ ಲಾಹೋಟಿ ಕಲ್ಯಾಣ ಮಂಟಪದ ಎದರುಗಡೆ ರೋಡಿನ ರಸ್ತೆ ದಾಟುತ್ತಿದ್ದಾಗ ಯಾವುದೊ ಒಂದು ಮೋಟಾರ ಸೈಕಲ ಚಾಲಕನು ತನ್ನ ಮೋಟಾರ ಸೈಕಲನ್ನು ಹುಮನಾಬಾದ ಬೇಸ್ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಫಿರ್ಯಾದಿಗೆ ಡಿಕ್ಕಿ ಹೊಡೆದು ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾನಿ ಮಾಡಿದ ಪ್ರಕರಣ :

ದೇವಲಗಾಣಗಾಪೂರ ಠಾಣೆ : ದಿನಾಂಕ 28-12-2013 ರಂದು ಬೆಳಗಾಂವ ಮತಕ್ಷೇತ್ರ ಶಾಸಕರಾದ ಶ್ರೀ ಸಂಬಾಜಿರಾವ ಪಾಟೀಲ ಇವರು ದತ್ತಾತ್ರೇಯ ದೇವರ ದರ್ಶನಕ್ಕೆ ದೇವಲಗಾಣಗಾಪೂರಕ್ಕೆ ಬರುವವ ಇದ್ದುದರಿಂದ ಬಂದೋಬಸ್ತ ಕರ್ತವ್ಯಕ್ಕಾಗಿ ನಾನು ಮತ್ತು ಸಿಬ್ಬಂದಿಯವರಾದ ಪಿಸಿ-921, 1082, 795, 1043, 1083 ರವರ ಸಮೇತ ನಾನು ದತ್ತ ಮಂದಿರಕ್ಕೆ ಹೋಗಿ ಸಿಬ್ಬಂದಿಯವರಿಗೆ ಪಾಯಿಂಟ ಕರ್ತವ್ಯಕ್ಕೆ ನೇಮಿಸಿದೇನು, ಮಾನ್ಯ ಶಾಸಕರು ಮುಂಜಾನೆ 11-40 ಗಂಟೆಗೆ ಬೆಂಗಾವಲು ವಾಹನ ಸಮೇತ ದತ್ತಾತ್ರೇಯ ಮಂದಿರಕ್ಕೆ ಬಂದರು ಅವರಿಗೆ ಬೆಂಗಾವಲು ಸಿಬ್ಬಂದಿ ಮತ್ತು ನಾವು ಸೂಕ್ತ ಬಂದೋಬಸ್ತ ವೈವಸ್ಥೆ ಮಾಡಿ ದೇವರ ದರ್ಶನ ಮಾಡಿಸಿದೇವು, ಅವರು ಪೂಜೆ ವಿದಿ ವಿಧಾನಗಳನ್ನು ಪೂರೈಸಿದರು ದರ್ಶನ ಮುಗಿಸಿಕೊಂಡು ಬೆಂಗಾವಲು ವಾಹನ ಸಮೇತ ಮರಳಿ ಸಿಂದಗಿಗೆ ಮದ್ಯಾಹ್ನ  12-20 ಗಂಟೆ ಸುಮಾರಿಗೆ ದೇವಲಗಾಣಗಾಪೂರದ ಲಕ್ಷ್ಮೀ ಗುಡಿಯ ಹತ್ತಿರ ಹೊರಟಾಗ ಹಿಂದುಗಡೆಯಿಂದ ದೂರದಲ್ಲಿ ನಿಂತು ಇಬ್ಬರು ಶಾಸಕರ ಕಾರ ನಂ. ಕೆಎ-22 ಜೆಡ್-9945 ನೇದ್ದರ ಮೇಲೆ ಒಂದು ಕಲ್ಲು ಎಸೆದು ಹಿಂಬದಿಯ ಕಾರಿನ ಗ್ಲಾಸು ಒಡೆದರು.ಕನ್ನಡ ವಿರೋಧಿ ಶಾಸಕರಿಗೆ ಧಿಕ್ಕಾರ ಅಂತಾ ಘೋಷಣೆ ಕೂಗುತ್ತಿದ್ದಾಗ, ಅವರನ್ನು ನಾನು ಮತ್ತು ಸಿಬ್ಬಂದಿರವರು ಸಮೇತ ವಶಕ್ಕೆ ತೆಗದುಕೊಂಡು; ವಿಚಾರಿಸಲು ಅವರು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಅಂತಾ ತಿಳಿಯಿತು ಅವರ ಹೆಸರು ವಿಳಾಸ ವಿಚಾರಿಸಲು 1, ಶಿವುಕುಮಾರ ತಂದೆ ಮಲ್ಕಪ್ಪ ನಾಟೀಕಾರ, 2, ವಿಠ್ಠಲ ತಂದೆ ಅಡಿವೆಪ್ಪ ನಾಟೀಕಾರ ಸಾ|| ಇಬ್ಬರು ಹವಳಗಾ ಅಂತಾ ತಿಳಿಸಿದರು, ಸದರಿಯವರಿಗೆ ಠಾಣೆಗೆ ಕರೆದುಕೊಂಡು ಬಂದಿದ್ದು, ಶಾಸಕರ ಕಾರ ಮೇಲೆ ಕಲ್ಲು ಎಸೆದು  ಕಾರಿನ ಗ್ಲಾಸ ಒಡೆದು ಹಾನಿ ಮಾಡಿ, ಶಾಸಕರ ದೈಹಿಕ ಸುರಕ್ಷೆತೆಗೆ ಅಪಾಯವನ್ನುಂಟು ಮಾಡಿದವರ ವಿರುದ್ದ ದೇವಲ ಗಾಣಗಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.