POLICE BHAVAN KALABURAGI

POLICE BHAVAN KALABURAGI

25 October 2015

KALABURAGI DISTRICT REPORTED CRIMES

ಅಪಘಾತ ಪ್ರಕರಣ:
ಜೇವರ್ಗಿ ಪೊಲೀಸ ಠಾಣೆ: ದಿ 24.10.2015 ರಂದು ಫಿರ್ಯಾದಿ ಶ್ರೀ ಶಿವರಾಜ ತಂ. ಬಸವರಜಾ ಬಿಲ್ಲಾಡ ಸಾ:ಜನಿವಾರ ಇವರು ಠಾಣೆಗೆ ಹಾಜರಾಗಿ ದಿ 23-10-2015 ರಂದು ಮಧ್ಯಾಹ್ನ ತಾನು ಮತ್ತು ನಿಂಗಣ್ಣ ಇಬ್ಬರೊ ಮೋಟಾರು ಸೈಕಲ್‌ ನಂ ಕೆ.ಎ47ಇ7484 ನೇದ್ದರ ಮೇಲೆ ಕುಳಿತುಕೊಂಡು ಗೌನಳ್ಳೀ ಗ್ರಾಮದ ವ್ಯಾಪ್ತಿಯ ಕುಲಕರ್ಣಿರವರ ಹೊಲದ ಹತ್ತಿರದಿಂದ  ಜೇವರಗಿ ಕಡೆಗೆ ಹೋಗುತ್ತಿರುವಾಗ ನಿಂಗಣ್ಣ ಮೋ.ಸೈಕಲ ಚಲಾಯಿಸುತ್ತಿರುವಾಗ ಎದುರಿನಿಂದ ಬರುತ್ತಿದ್ದ ಆಟೋ ರೀಕ್ಷಾ ನಂ ಕೆಎ32ಎ3907 ನೇದ್ದರ ಚಾಲಕನು ತನ್ನ ವಾಹನವನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ನಾವು ಹೋಗುತ್ತಿದ್ದ ಮೋಟಾರು ಸೈಕಲ್‌ಗೆ ಎದುರಿನಿಂದ ಡಿಕ್ಕಿ ಪಡಿಸಿ ನನಗೆ ಮತ್ತು ಸವಾರ ನಿಂಗಣ್ಣನಿಗೆ ಸಾದಾ ಮತ್ತು ಭಾರಿ ಗಾಯಪಡಿಸಿದ್ದು ಮತ್ತು ಸದರಿ ಆಟೋ ಚಾಲಕನಿಗೆ ಗಾಯಗಳಾಗಿದ್ದು ಕಾರಣ ಸದರಿ ಆಟೋ ಚಾಲಕನ ಮೇಲೆ ಕಾನೂನು ಕ್ರಮ ಕೈಕೊಳ್ಳುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಹಲ್ಲೆ ಪ್ರಕರಣ:
ನಿಂಬರ್ಗಾ ಪೊಲೀಸ ಠಾಣೆ:  ದಿನಾಂಕ 24/10/2015 ರಂದು ಶ್ರೀ ನಾನಾಗೌಡ ತಂದೆ ಅಣ್ಣಾರಾವ ಪೊಲೀಸ ಪಾಟೀಲ ಸಾ|| ಯಳಸಂಗಿ ಇವರು ಠಾಣೆಗೆ ಹಾಜರಾಗಿ ದಿ.24/10/2014 ರಂದು ತಾನು ಎಮ್ಮೆ ಕಟ್ಟುವ ಸಾರ್ವಜನಿಕ ಜಾಗೆಯಲ್ಲಿ ಅಶೋಕಗೌಡ ತಂದೆ ಶ್ರೀಮಂತರಾವ ಪಾಟೀಲ ಮತ್ತು ಅಪ್ಪಾರಾವ ತಂದೆ ಶ್ರೀಮಂತರಾವ ಪಾಟೀಲ ಇವರು ಕಲ್ಲು ಹಾಕುತ್ತಿರುವದನ್ನು ಕಂಡು ನಾನು ಅದನ್ನು ಕೇಳಲು ಹೋದಾಗ ಇಬ್ಬರೂ ಸೇರಿ ತಡೆದು ಅವಾಚ್ಯ ಶಬ್ದಗಳಿಂದ ಬೈದು ಹೊಡೆ ಬಡೆ ಮಾಡಿ ಜೀವ ಭಯಪಡಿಸಿದ್ದು. ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಸಿ ತನಿಖೇ ಕೈಕೊಳ್ಳಲಾಗಿದೆ