POLICE BHAVAN KALABURAGI

POLICE BHAVAN KALABURAGI

04 January 2019

KALABURAGI DISTRICT REPORTED CRIMES

ಹರಿತವಾದ ಆಯುಧ ಹಿಡಿದುಕೊಂಡು ಜನರಲ್ಲಿ ಭಯಭೀತಿಗೊಳಿಸಿದ ಪ್ರಕರಣ :
ಕಮಲಾಪೂರ ಠಾಣೆ : ದಿನಾಂಕ:01.01.2019 ರಂದು ರಾತ್ರಿ 08.30 ಗಂಟೆಯ ಸೂಮಾರಿಗೆ ಸದರಿ ಖಾಜಿ ಮೋಹಲ್ಲಾ ಕಮಲಾಪೂರನ ನಿವಾಸಿತನಾದ ಸೈಯದ್ ಇಮ್ರಾನ ತಂದೆ ನಬಿಸಾಬ ನಾಗೂರ ಈತನು ತನ್ನ ಹುಟ್ಟು ಹಬ್ಬದ ಪಾರ್ಟಿಯನ್ನು ಸದರಿ ಏರಿಯಾದ ಮೈನೋದ್ದೀನ ಚೌದರಿ ಇವರ ಮನೆಯ ಮುಂದಗಡೆ ರೋಡಿನ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಆಚರಣೆಯನ್ನು ಮಾಡಿಕೊಂಡಿದ್ದು. ಸದರಿ ಹುಟ್ಟು ಹಬ್ಬದ ಆಚರಣೆಯ ಕಾಲಕ್ಕೆ ಸೈಯದ್ ಇಮ್ರಾನ ನಾಗೂರ ಈತನು ತನ್ನ ಕೈಯಲ್ಲಿ ಉದ್ದವಾದ ತಲವಾರ ಹಿಡಿದು ಕೇಕ ಕತ್ತಿರಿಸಿದ್ದು. ಅಲ್ಲದೆ ಆತನ ಗೆಳೆಯರಾದ ಕಲಕೋರಾ ದೇವಿ ತಾಂಡಾದ ಆಕಾಶ ತಂದೆ ಜೈಚಂದ ಜಾಧವ ಈತನು ತನ್ನ ಕೈಯಲ್ಲಿ ತಲವಾರ ಹಿಡಿದುಕೊಂಡಿದ್ದು. ಅದರಂತೆ ಕಲಬುರಗಿಯಿಂದ ಬಂದಿದ್ದ ಮಜರ್ ಅಲಿ @ ಮಜ್ಜುಭಾಯಿ ಇನಾಮದಾರ ಈತನು ತನ್ನ ಕೈಯಲ್ಲಿ ಒಂದು ಹರಿತವಾದ ಜೆಂಬ್ಯಾ ಹಿಡಿದು ಅದರಂತೆ ಇನ್ನೂ 10-15 ಜನ ಸೈಯದ್ ಇಮ್ರಾನ ನಾಗೂರ ಈತನ ಗೆಳೆಯರು ಕೂಡಿಕೊಂಡು ಹುಟ್ಟು ಹಬ್ಬದ ಆಚರಣೆ ಮಾಡಿದ್ದು. ಕೇಕ ಕತ್ತರಿಸಿದ ನಂತರ ಅಕ್ರಮವಾಗಿ ಆಯುಧಗಳನ್ನು ಹಿಡಿದುಕೊಂಡಿದ್ದವರು ಚಿರಾಡುತ್ತ ಒದರಾಡುತ್ತ ಸಾರ್ವಜನಿಕರಿಗೆ ಭಯ ಹುಟ್ಟಿಸುವ ರೀತಿಯಲ್ಲಿ ಹುಟ್ಟು ಹಬ್ಬದ ಆಚರಣೆಯನ್ನು ಮಾಡಿಕೊಂಡಿದ್ದು. ಸದ್ಯ ಮೋಹಲ್ಲಾದ ಜನರು ಏರಿಯಾದಲ್ಲಿ ಭಯದಿಂದ ತಿರುಗಾಡುತ್ತಿರುವ ಬಗ್ಗೆ ಹೇಳಿದ್ದು. ಅಲ್ಲದೆ ಹುಟ್ಟು ಹಬ್ಬದ ಆಚರಣೆ ಕಾಲಕ್ಕೆ ಗುಪ್ತವಾಗಿ ತೆಗೆದ ಕೈಯಲ್ಲಿ ತಲವಾರ ಹಾಗೂ ಜಂಬ್ಯಾ ಹಿಡಿದುಕೊಂಡಿರುವ 3 ಭಾವ ಚಿತ್ರಗಳನ್ನು ಹಾಜರ ಪಡಿಸಿದ್ದು. ಅದನ್ನು ಪಡೆದುಕೊಂಡು ಇಂದೇ 04.00 ಪಿ.ಎಮ್.ಕ್ಕೆ ಠಾಣೆಗೆ ಮರಳಿ ಬಂದು ಪೋಲಿಸ್ ಬಾತ್ಮಿದಾರನ್ನು ಕೋಟ್ಟ 3 ಭಾವ ಚಿತ್ರಗಳನ್ನು ಹಾಜರ ಪಡಿಸುತ್ತಿದ್ದು. ಕಾರಣ ಮಾನ್ಯರು ಸದರಿ ಸೈಯದ್ ಇಮ್ರಾನ ನಾಗೂರ ಹಾಗೂ ಆತನ ಗೆಳೆಯರಾದ ಆಕಾಶ ಜಾಧವ ಮತ್ತು ಮಜರ್ ಅಲಿ @ ಮಜ್ಜುಭಾಯಿ ಇನಾಮದಾರ ಇವರ ಅಕ್ರಮವಾಗಿ ಹೊಂದಿದ್ದ ಆಯುಧಗಳನ್ನು ಕೈಯಲ್ಲಿ ಹಿಡಿದು ಸಾರ್ವಜನಿಕರಿಗೆ ಭಯ ಹುಟ್ಟಿಸುವ ರೀತಿಯಲ್ಲಿ ಹುಟ್ಟು ಹಬ್ಬದ ಆಚರಣೆ ಮಾಡಿದ ಮೇಲೆ ಹೇಳಿದ ಮುರು ಜನರ ವಿರುದ್ದ ಕಾನೂನ ಕ್ರಮ ಜರುಗಿಸಬೇಕು ಅಂತಾ ಶ್ರೀ ಜಗದೀಶ ಸಿಪಿಸಿ.192 ಕಮಲಾಪೂರ ಠಾಣೆ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಫರತಾಬಾದ ಠಾಣೆ : ದಿನಾಂಕ 03/01/18ರಂದು ರಾಷ್ಟ್ರೀಯ ಹೇದ್ದಾರಿ 218ರ ಸಿರನೂರ ಕ್ರಾಸ ಹತ್ತಿರ ರೋಡಿನ ಮೇಲೆ ಕಾರ ನಂ ಕೆಎ-32 ಎನ್-6936 ನೇದ್ದರ ಚಾಲಕ ಕಾಶಪ್ಪ ತಂದೆ ಪ್ರಭಾಕರ್ ಜಾಜಿ ತನ್ನ ವಶದಲ್ಲಿದ್ದ  ಕಾರನ್ನು  ಅತೀ ವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿದ್ದರಿಂದ ನಿಯಂತ್ರಣ ತಪ್ಪಿ ರೋಡಿನ ಕೆಳಗೆ ತಗ್ಗಿನಲ್ಲಿ ಹೊಗಿದ್ದರಿಂದ ಶ್ರೀ ಆಸಿಸ ತಂದೆ ವಿಜಯಕುಮಾರ ಜಾಜಿ ಸಾಃ ಅಳಂದ ಕಾಲೊನಿ ಕಲಬುರಗಿ ಮತ್ತು  ಇತರರಿಗೆ ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.