POLICE BHAVAN KALABURAGI

POLICE BHAVAN KALABURAGI

14 March 2013

GULBARGA DISTRICT REPORTED CRIMES


ಕೊಲೆ ಪ್ರಕರಣ:
ಗ್ರಾಮೀಣ ಪೊಲೀಸ ಠಾಣೆ :ಶ್ರೀ ಹೀರೂ ತಂದೆ ಶಾಮರಾವ ಪವಾರ ಜಾ: ಪಾರ್ದಿ ಉ: ಕಟ್ಲೆ ಸಾಮಾನು ಮಾರುವದು ಸಾ: ಚೌಪಟ್ಟಿ  ಸುಪರ ಮಾರ್ಕೆಟ ಗುಲಬರ್ಗಾ ಹಾ: ವ: ಸಿಂದಗಿ (ಬಿ) ತಾ: ಗುಲಬರ್ಗಾ ರವರು ನಾನು ಪ್ರತಿ ದಿವಸದಂತೆ ವ್ಯಾಪಾರ ಮಾಡಲು ಗುಲಬರ್ಗಾಕ್ಕೆ ದಿನಾಂಕ.14-03-2013 ರಂದು ಮುಂಜಾನೆ 8-00 ಗಂಟೆಯ ಸುಮಾರಿಗೆ ಸಿಂದಗಿ(ಬಿ) ಗ್ರಾಮದಿಂದ  ಗುಲಬರ್ಗಾಕ್ಕೆ ಬರುತ್ತಿರುವಾಗ ಹೀರಾಪೂರ ರೈಲ್ವೆ ಗೇಟ ಹತ್ತಿರ ಬಂದಾಗ  ಅಮೃತ ಇವರ ಮನೆಯ  ಹಿಂದುಗಡೆ  ಬಯಲು ಜಾಗೆಯಲ್ಲಿ ಜನರು ನೆರೆದಿದ್ದರು, ನಾನು ಹೋಗಿ ನೋಡಲು ಒಬ್ಬ ಪಾರ್ದಿ ವ್ಯಕ್ತಿಯ ಕೊಲೆಯಾಗಿ ಬಿದ್ದಿದ್ದು, ಆತನ ವಯಸ್ಸು ಅಂದಾಜು 20-22 ವರ್ಷದವನಾಗಿದ್ದು, ಎತ್ತರ 5 5 ಕೊಲು ಮುಖ, ತೆಳ್ಳನೆ ಸದೃಡ ಮೈಕಟ್ಟು ಹೊಂದಿದ್ದು , ಮೈ ಮೇಲೆ ಒಂದು ಕಪ್ಪು ಜ್ಯಾಂಗ ಮಾತ್ರ ಇರುತ್ತದೆ. ಒಂದು ಬಿಳಿ ಪ್ಯ್ಲಾಸ್ಟೀಕ್ ಚೀಲದ ಮೇಲೆ ಅಂಗಾತವಾಗಿ ಬಿದ್ದಿರುತ್ತಾನೆ. ಅವನ ಎದೆಯ ಎಡಭಾಗದಲ್ಲಿ ಯಾವುದೋ ಚಾಕು ಅಥವಾ ಚೂಪಾದ ರಾಡನಿಂದ  ಹೊಡೆದು ಕೊಲೆ ಮಾಡಿದ್ದು ಕಂಡು ಬರುತ್ತದೆ. ಇತನು ಗಾಯಪಾರ್ದಿ ಜನಾಂಗದವನಂತೆ ಕಂಡುಬರುತ್ತಾನೆ. ಆದರೆ ನಮ್ಮ ಪಾರ್ದಿ ಜನಾಂಗದವನಾಗಿರುವದಿಲ್ಲಾ. ಕೆಲವು ಪಾರ್ದಿ ಜನಾಂಗದವರು ತಮ್ಮ ಜೋಪಡಿಗಳು ಖಾಲಿ ಮಾಡಿಕೊಂಡು ಹೋಗಿದ್ದು ಕಂಡು ಬರುತ್ತದೆ, ಈ ಘಟನೆಯು ದಿನಾಂಕ:13-03-2013 ರ ರಾತ್ರಿ ವೇಳೆಯಲ್ಲಿ ಅವರವರಲ್ಲಿ ಯಾವುದೋ ಕಾರಣಕ್ಕಾಗಿ ಜಗಳವಾಗಿರಬಹುದು, ಜಗಳದಲ್ಲಿ  ಸದರಿಯವನಿಗೆ ಚೂಪಾದ ರಾಡ ಅಥವಾ ಚಾಕುವಿನಿಂದ ಹೊಡೆದು ಕೊಲೆ ಮಾಡಿರಬಹುದು ಅಂತಾ ಹೀರೂ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ.135/2013 ಕಲಂ.302 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಜೇವರ್ಗಿ ಪೊಲೀಸ್ ಠಾಣೆ:ದಿನಾಂಕ:13/03/2013 ರಂದು ರಾತ್ರಿ 11-45 ಗಂಟೆಯಿಂದ ದಿನಾಂಕ: 14/03/2013 ರ ಬೆಳಗಿನ ಜಾವ 5-00 ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ನಮ್ಮ ಮನೆಯ ಬಾಗಿಲು ಕೀಲಿ ಮುರಿದು ಅಲಮಾರಿಯಲ್ಲಿಟ್ಟಿದ್ದ 15 ಗ್ರಾಂ ಬಂಗಾರ ಅ.ಕಿ 42,000-00 ರೂ ಹಾಗೂ ನಗದು ಹಣ 37,500 ರೂಪಾಯಿಗಳು ಮತ್ತು ಪಕ್ಕದ ಮನೆಯ ಮಲ್ಲು ಇತನ ಕೆ.ಎನ್.ಎಕ್ಸ ಮೋಬೈಲ ಪೋನ ಅ||ಕಿ||800/- ರೂಪಾಯಿ ಹೀಗೆ ಒಟ್ಟು 80300-00 ರೂಪಾಯಿ ಕಿಮ್ಮತ್ತಿನ ಸಾಮಾನುಗಳು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಶ್ರೀ ವೀರಪ್ಪ ತಂದೆ ಗವಿಯಪ್ಪ ಅಂಗಡಿ ಸಾ: ಟೀಚರ್ಸ ಕಾಲೋನಿ ಜೇವರ್ಗಿ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ  ಠಾಣೆ ಗುನ್ನೆ ನಂಬರ 37/2013 ಕಲಂ 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

GULBARGA DISTRICT REPORTED CRIMES


ಅಪಘಾತ ಪ್ರಕರಣ:
ಮಳಖೇಡ ಪೊಲೀಸ್ ಠಾಣೆ:ದಿನಾಂಕ:13-03-2013 ರಂದು ಸೇಡಂ ಮಳಖೇಡದ ರೋಡಿನ ನಂದೂರ ಮಹಾದೇವಪ್ಪ ಇವರ ಹೊಲದ ಸಮೀಪ ರೋಡಿನಲ್ಲಿ ಸುಮಾರು 30 ರಿಂದ 35 ವರ್ಷದ ವ್ಯಕ್ತಿ , 5 4 ಎತ್ತರ, ಗೋದಿ ಮೈಬಣ್ಣ, ಬೂದು ಬಣ್ಣದ ಚೌಕಡಿ ರೆಡಿಮೇಡ ಶರ್ಟ, ಕಪ್ಪು ಬಣ್ಣದ ರೆಡಿಮೆಡ್ ಪ್ಯಾಂಟ್, ಹಸಿರು ಬಣ್ಣದ ಬನಿಯನ್ ಇರುವ ಒಬ್ಬ ಅಪರಿಚಿತ ವ್ಯಕ್ತಿಗೆ ಯಾವುದೋ ವಾಹನ ಚಾಲಕನು ತನ್ನ ವಾಹನವನ್ನು ಅತಿವೇಗದಿಂದ ಮತ್ತು ಅಲಕ್ಷ್ಯತನದಿಂದ ನಡೆಸಿ ಅಪರಿಚಿತ ಮನುಷ್ಯನಿಗೆ ಡಿಕ್ಕಿ ಹೊಡೆದಿದ್ದರಿಂದ ಸದರಿಯವನ ತಲೆಯಿಂದ ಭಾರಿ ರಕ್ತಸ್ರಾವವಾಗಿ ಮೃತ ಪಟ್ಡಿದ್ದರಿಂದ ಮಳಖೇಡ ಠಾಣೆ ಗುನ್ನೆ ನಂ:22/2013. ಕಲಂ, 279. 304 (ಎ) ಐ,.ಪಿ.ಸಿ ಸಂಗಡ 187 ಎಂ.ಎಮ.ವಿ. ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಪೊಲೀಸ್ ಪೇದೆ ಮೇಲೆ ಹಲ್ಲೆ:
ಅಶೋಕ ನಗರ ಪೊಲೀಸ್ ಠಾಣೆ:ಶ್ರೀ ದೊಡ್ಡಪ್ಪ ಪೊಲೀಸ್ ಪೇದೆ ರವರು ಠಾಣೆ ಪ್ರಕರಣದ ಆರೋಪಿ ಪತ್ತೆ ಕುರಿತು ದಿನಾಂಕ:13-03-2013 ರಂದು ಶಾಂತಿನಗರ ಬಡಾವಣೆಯಲ್ಲಿ ಹೋಗಿರುವಾಗ ಶಾಂತಿ ನಗರ ಹನುಮಾನ ಗುಡಿ ಹತ್ತಿರ ಬೀಟ ಕರ್ತವ್ಯದಲ್ಲಿರುವ ಶಂಕರಲಿಂಗ್ ಪೊಲೀಸ್ ಪೇದೆ ಸಂಗಡ ಆರೋಪಿತರ ಬಗ್ಗೆ ಮಾಹಿತಿ ವಿನಿಯೋಗ ಮಾಡಿಕೊಳ್ಳುತ್ತಿರುವಾಗ ರಾತ್ರಿ 9-00 ಗಂಟೆ ಸುಮಾರಿಗೆ ಚಾಣಿಕ್ಯ ಶಾಲೆ ಕಡೆಯಿಂದ ಒಂದು ಸಿಲ್ವರ ಕಲರ್ ಇನೋವಾ ಗಾಡಿ ನಂ. ಕೆಎ-33 ಎಮ್.-8999 ನೇದ್ದರ ಚಾಲಕನು ನಿರ್ಲಕ್ಷತನದಿಂದ ಒಮ್ಮೇಲೆ ದೋಡ್ಡಪ್ಪಾ ಪಿಸಿ ರವರ ಕೈಯಿಗೆ ವಾಹನವನ್ನು ತಾಗಿಸಿಕೊಂಡು (ಸವರಿ) ಮುಂದೆ ಹೋಗಿದ್ದರಿಂದ ಸದರಿ ಪಿಸಿ ರವರು ವಾಹನದ ಚಾಲಕನಿಗೆ ನಿಂತಿರುವದು ಕಾಣುವದಿಲ್ಲವೇನು ಅಂತಾ ವಿಚಾರಿಸುತ್ತಿರುವಾಗ ವಾಹನದಿಂದ ಕೆಳಗಿಳಿದ ಮೂರು ಜನರು ಅವಾಚ್ಯವಾಗಿ ಬೈದು ಕರ್ತವ್ಯಕ್ಕೆ ಅಡ್ಡಿ ಪಡಿಸಿ ಡ್ರೈವರ ಸಂಜೀವ ತಂದೆ ಮಲ್ಲಿಕಾರ್ಜುನ ಅನ್ನುವವನು ಮತ್ತು ಗಾಡಿ ಒಳಗಡೆ ಇದ್ದ ಮಾಲಿಕ ಶರಣಪ್ಪ ಕಾಂಟ್ರೇಕ್ಟರ, ಅವರ ಮಗ ಅಭಿಷೇಕ ತಂದೆ ಶರಣಪ್ಪ ಈ ಮೂರು ಜನರು ಸಮವಸ್ತ್ರ ಹರಿದು ಡ್ರೈವರ ಸಂಜೀವ ಎನ್ನುವವನು ಕಲ್ಲಿನಿಂದ ದೋಡ್ಡಪ್ಪ ಪಿಸಿ ರವರಿಗೆ ತಲೆಗೆ ಹೊಡೆದಿದ್ದರಿಂದ ತಲೆ ಒಡೆದು ಭಾರಿ ರಕ್ತ ಸ್ರಾವವಾಗಿರುತ್ತದೆ. ವಾಹನದ ಮಾಲಿಕ ಶರಣಪ್ಪ ಮತ್ತು ಅವರ ಮಗ ಅಭಿಷೇಕ ಇವರು ಸಹ ಹಲ್ಲೆ ಮಾಡಿರುತ್ತಾರೆ. ಹಾಗೂ ಜೋತೆಗಿದ್ದ  ಬೀಟ ಕರ್ತವ್ಯದ ಪಿಸಿ ರವರ ಮೇಲೆ ಹಲ್ಲೆ ಮಾಡಿದ್ದರಿಂದ ಮೂರು ಜನರ ಮೇಲೆ ಠಾಣೆ ಗುನ್ನೆ ನಂ:38/2013 ಕಲಂ.353,332,333,504 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.
ಹೆಂಡತಿ ಮೇಲೆ ಹಲ್ಲೆ:
ಮಹಿಳಾ ಪೋಲಿಸ ಠಾಣೆ: ಶ್ರೀಮತಿ, ಸಂಗಮ್ಮಾ ಗಂಡ ಬಸವರಾಜ ಇಸ್ರಿ ಉ||ಶಿಕ್ಷಕಿ ಸಾ|| ಸಿದ್ರಾಮಯ್ಯ ಹಿರೇಮಠರವರ ಮನೆಯಲ್ಲಿ ಬಾಡಿಗೆ ದನಗರಗಲ್ಲಿ ಕೋರಿ ಮಠದ ಹತ್ತಿರ ಬ್ರಹ್ಮಪೂರ ಗುಲಬರ್ಗಾರವರು ನನ್ನ ಮದುವೆಯು 2000 ನೇ ಸಾಲಿನಲ್ಲಿ ಕಡಣಿ ಗ್ರಾಮದ ಮಲಕಾಜಪ್ಪಾ ಇಸ್ರಿಯವರ ಮಗನಾದ ಬಸವರಾಜ ಇತನೊಂದಿಗೆ ಸಂಪ್ರದಾಯದಂತೆ ಮದುವೆ ಮದುವೆಯಾಗಿದ್ದು, ಮದುವೆಯಾದ ನಂತರ ನನ್ನ ಗಂಡನು ಕುಡಿಯುವ ಚಟಕ್ಕೆ ಬಿದ್ದು ಸಾಲ ಮಾಡುವುದು ನನಗೆ ಬಂದು ಹಣ ಕೇಳುವುದು ಕೊಡದೇ ಇದ್ದರೆ ಹೊಡೆಯುವುದು ಮಾಡುತ್ತಿದ್ದನು. ನಮಗೆ ಮೂರು ಜನರು ಮಕ್ಕಳಿರುತ್ತಾರೆ ಇವತ್ತಲ್ಲಾ ನಾಳೆ ಸರಿ ಹೋಗಬಹುದು ಅಂತಾ ಸಹಿಸುಕೊಂಡು ಬರುತ್ತಿದ್ದೆ. ನನ್ನ ಗಂಡ ಬಸವರಾಜನಿಗೆ ಹುಮನಬಾದದಲ್ಲಿ ಸಂರ್ದಶನ ಇರುವದರಿಂದ ನನ್ನ ಹತ್ತಿರದಿಂದ ಹಣ ಪಡೆದುಕೊಂಡಿದ್ದನ್ನು ಹಾಗೇ ಕಡಣಿ ಗ್ರಾಮಕ್ಕೆ ಹೋಗಿ ನಮ್ಮ ಭಾವನರಿಂದ ಹಣ ಕೇಳುತ್ತಿದ್ದ ಬಗ್ಗೆ ನನ್ನ ಭಾವನವರು ನನಗೆ ತಿಳಿಸಿದ್ದರಿಂದ ನಾನು ಅವರಿಗೆ ನಾನು ಈಗಾಗಲೇ ಹಣ ಕೊಟ್ಟಿದ್ದೆನೆ, ನೀವು ಕೊಡಬೇಡ ಅಂತಾ ಹೇಳಿದಕ್ಕೆ ಊರಿನಿಂದ ದಿನಾಂಕ:13.03.2013 ರಂದು ಮನೆಗೆ ಬಂದು ಕುಡಿದ ಅಮಲಿನಲ್ಲಿ ಮನೆಯಲ್ಲಿರುವ ಸಾಮಾನುಗಳು ಒಡೆದಿರುತ್ತಾನೆ. ನಾನು ಯ್ಯಾಕೆ ಈ ರೀತಿ ಮಾಡಿರುವೆ ಅಂತಾ ಕೇಳಿದಕ್ಕೆ  ಮನೆಯಲ್ಲಿರುವ ಒಣಕಿಯಿಂದ ಹೊಡೆದಿರುತ್ತಾನೆ. ನಾನು ಪ್ರಜ್ಞೆ ತಪ್ಪಿ ಬಿದ್ದಿದರಿಂದ ನನ್ನ ಮಗ ಅಳುತ್ತಾ ಮನೆಯ ಪಕ್ಕದವರಿಗೆ ತಿಳಿಸಿದ್ದರಿಂದ ಪಕ್ಕದ ಮನೆಯವರು ಅಂಬುಲೇನ್ಸ ಮೂಲಕ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ ಅಂತಾ ಸಂಗಮ್ಮ ರವರು ದೂರು ಸಲ್ಲಿಸಿದ ಮೇಲಿಂದ ನಮ್ಮ ಠಾಣೆ ಗುನ್ನೆ ನಂ:13/2013 ಕಲಂ 498(ಎ), 307 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ ಠಾಣೆ:ದಿನಾಂಕ:13-03-2013 ರಂದು   ರಾತ್ರಿ  11=05 ಗಂಟೆಗೆ  ನಾನು ಮತ್ತು ರಿಯಾಜ ಮತ್ತು ಅಬ್ದುಲ ಸತ್ತಾರ ಮೂರು ಜನರು ಕೂಡಿಕೊಂಡು  ಮೋಟಾರ ಸೈಕಲ್ ನಂ:ಕೆಎ-32 ಇಎ-432 ನೇದ್ದರ ಮೇಲೆ ಮೋಮಿನಪೂರಕ್ಕೆ ಹೋಗುವ ಕುರಿತು ಐ-ವಾನ ಈ ಶಾಹಿ ದಿಂದ ಲಾಹೋಟಿ  ಕ್ರಾಸ್ ಮುಖಾಂತರ  ಹೋರಟಿದ್ದು ಹಿಂದುಗಡೆ ರಿಯಾಜ ತಂದೆ ಚಾಂದ ಪಾಶಾ ಮತ್ತು ಅಬ್ದುಲ ಸತ್ತಾರ  ಕುಳಿತಿದ್ದರು. ಏಷಿಯನ್ ಮಹಲ್ ಎದುರಿನ ರೋಡಿನ ಮೇಲೆ 108 ಅಂಬುಲೇನ್ಸ ವಾಹನ  ನಂ:ಕೆಎ-42/ಜಿ-239 ನೇದ್ದರ ಚಾಲಕನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮೋಟಾರ ಸೈಕಲ್ ಗೆ  ಎದುರಿನಿಂದ  ಡಿಕ್ಕಿ ಪಡಿಸಿ ಅಪಘಾತ ಪಡಿಸಿದನು. ರಿಯಾಜ, ಅಬ್ದುಲ್ ಸತ್ತಾರ ನನಗೆ  ಭಾರಿ ಗಾಯಗಳಾಗಿದ್ದು, 108 ಅಂಬುಲೇನ್ಸ ವಾಹನವು ಸ್ಥಳದಲ್ಲಿಯೇ ಬಿಟ್ಟು ಚಾಲಕ ಓಡಿ ಹೋದನು. ಅಬ್ದುಲ ಸತ್ತಾರ  ಈತನಿಗೆ ತಲೆಗೆ ಭಾರಿ ರಕ್ತ ಗಾಯವಾಗಿದ್ದರಿಂದ ಉಪಚಾರ ಹೊಂದುತ್ತಾ ಬಸವೇಶ್ವರ ಆಸ್ಪತ್ರೆಯಲ್ಲಿ ಮೃತ ಪಟ್ಟಿರುತ್ತಾನೆ. ಅಂತಾ  ²æà ಅತ್ತರ  ತಂದೆ ಅಬ್ದುಲ ರಹಿಮ ಮಹಾಗಾಂವಿ ಸಾ: ಬಟ್ಲೆ ಅಲವಾ ಮೋಮಿನಪೂರ ಗುಲಬರ್ಗಾರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ  ಠಾಣೆ ಗುನ್ನೆ ನಂ:18/2013 ಕಲಂ,279, 337, 304 (ಎ)  ಐ.ಪಿ.ಸಿ. ಸಂಗಡ  187 ಐ,ಎಮ್,ವಿ ಆಕ್ಟ  ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.