POLICE BHAVAN KALABURAGI

POLICE BHAVAN KALABURAGI

25 March 2014

Gulbarga District Reported Crimes

ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂದನ
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ದಿನಾಂಕ 24-03-2014 ರಂದು 04:30 ಪಿ.ಎಂ ಎಂ.ಬಿ ನಗರ ಠಾಣಾ ಸರಹದ್ದಿನಲ್ಲಿ
ಬರುವ ಬಂದೆನವಾಜ್ ಕಾಲೋನಿಯಲ್ಲಿ ಖುರೇಷಿ ಜನಾಂಗದ ಖಬರಸ್ತಾನದ ಬೇವಿನ ಗಿಡಿದ ಕೆಳಗೆ ದುಂಡಾಗಿ ಕುಳಿತು ಕೆಲವು ಜನರು ಅಂದರ ಬಾಹರ ಎಂಬ ಇಸ್ಪೀಟ ಜೂಜಾಟ ಆಡುತ್ತಿರುವ ಬಗ್ಗೆ ಬಾತ್ಮಿ ಮೇರೆಗೆ ಪಿಎಸ್ಐ ಮತ್ತು ಸಿಬ್ಬಂದಿಯವರು ಹಾಗು ಪಂಚರೊಂದಿಗೆ ಸ್ಥಳಕ್ಕೆ ಹೋಗಿ  ದಾಳಿ ಮಾಡಿ 04 ಜನರನ್ನು ಹಿಡಿದು ವಿಚಾರಿಸಲು 1.ಮುಸ್ತಾಕ ತಂದೆ ವಾಜಿದ ಅಲಿ ಸಾಃ  ಯಾದುಲ್ಲಾ ಕಾಲೋನಿ ಗುಲಬರ್ಗಾ 2. ಅಬ್ದುಲ್ ಖಲೀಲ ತಂದೆ ಅಬ್ದುಲ್ ಗನಿ  ಸಾಃ ಪಾಶಾಪೂರ ಛೋಟಾ ರೋಜಾ  ಮಹ್ಮದ ತನ್ವೀರ ತಂದೆ ಮಹ್ಮದ ಸತ್ತಾರ ಸಾಃ ಮೆಕ್ಕಾ ಕಾಲೋನಿ ಗುಲಬರ್ಗಾ 4. ಮಹ್ಮದ ಬಾಬುಲಾಲ ತಂದೆ ಮಹ್ಮದ ಅಲಿಸಾಬ ಸಾಃ ಯಾದುಲ್ಲಾ ಕಾಲೋನಿ ಗುಲಬರ್ಗಾ  ರವರಿಂದ ನಗದು ಹಣ ಒಟ್ಟು 5,660/- ರೂ. ಹಾಗು 52 ಇಸ್ಪೇಟ್ ಎಲೆಗಳನ್ನು ಜಪ್ತಿ ಮಾಡಿಕೊಂಡು ಮರಳಿ ಠಾಣೆಗೆ ಬಂದು ಸದರಿಯವರ ವಿರುದ್ಧ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.  
ಜಾತಿ ನಿಂದನೆ ಪ್ರಕರಣ :
ಸೇಡಂ ಠಾಣೆ : ಶ್ರೀ ಆನಂದ ತಂದೆ ಚಂದ್ರಪ್ಪ ಶೆಟ್ಟಿ ಹುಡಾ ಸಾ:ಬಸವ ನಗರ ಸೇಡಂ ರವರು ನಾಂಕ: 24-03-2014 ರಂದು ಸಾಯಾಂಕಾಲ 5-30 ಗಂಟೆಯ ಸುಮಾರಿಗೆ ತಾನು ಮತ್ತು ತನ್ನ ಗೆಳೆಯನಾದ  ಬಸವರಾಜ ಕಾಳಗಿ ಇಬ್ಬರೂ ಕೂಡಿ ಸೇಡಂ ಪಟ್ಟಣದಲ್ಲಿಯ ಪ್ರಕಾಶ ಧಾಬಾಕ್ಕೆ ಹೋಗಿ ಸೆರೆ ಕುಡಿಯಲು ಆಫೀಸರ್ ಚ್ವಾಯಿಸ್ ಬಾಟಲ್ ಕೊಡು ಅಂತ ಕೇಳಿದೆನು ನನ್ನೊಂದಿಗೆ ಇದ್ದ ಬಸವರಾಜ ಇತನು ಸ್ವಲ್ಪ ಹಿಂದೆ ಬರುತ್ತಿದನು. ಆಗ ಪ್ರಕಾಶ ಧಾಭಾದ  ಮ್ಯಾನೇಜರಿಗೆ ಆಫೀಸರ್ ಚ್ವಾಯಿಸ್ ಬಾಟಲ ಕೊಡುವ ಹಣದಲ್ಲಿ ನಾನು 60 ರೂ ಕೊಟ್ಟಿದ್ದು ಇನ್ನೂಳಿದ 30 ರೂಪಾಯಿ ಕೊಡುತ್ತೇನೆ ನಮ್ಮವನು ಬರುತ್ತಿದ್ದಾನೆ. ಅಂತ ಹೇಳಿದೆನು. ಆಗ ಧಾಬಾದ ಮ್ಯಾನೇಜರ ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ ಬಾಟಲ್ ಇಲ್ಲಿ ಇಡು ಅಂತ ಬೈದನು ಆಗ ನಾನು ಅಣ್ಣ ನನ್ನ ಹತ್ತಿರ 500 ರೂ ನೊಟು ಇದೆ ನನ್ನ ಜೋತೆಗೆ ಇದ್ದವನು ಬರುತ್ತಾನೆ ಆವನು ಬಂದ  ಬಳಿಕ ಉಳಿದ ಹಣ ಕೊಡುತ್ತೇನೆ. ಅಂತ ಹೇಳಿದಾಗ ಆಗ ಧಾಬಾದ ಮ್ಯಾನೇಜರ  ಸೇರಿ 8, 10 ಜನರು ಕೂಡಿಕೊಂಡು ನೀನು ಬಹಳ ದಿಮಾಖ ಮಾಡ್ತಿ ಚೋದಿ ಮಗನೆ ಅಂತ ಬೈದು ಕೈಯಿಂದ ಹಾಗು ಬಡಿಗೆಯಿಂದ ನನ್ನ ಎಡಗೈ ರಟ್ಟೆಗೆ ಮತ್ತು ಮಣಕಟ್ಟಿಗೆ ಹೊಡೆದು ಭಾರಿ ರಕ್ತ ಗಾಯ ಗುಪ್ತ ಗಾಯ ಮಾಡಿದ್ದು ಆಗ ಬಸವರಾಜ ಇತನು ಬಿಡಿಸಲು ಬಂದರೆ ಆತನಿಗೂ ಸಹ ಕೈಯಿಂದ ಹೊಡೆದಿರುತ್ತಾರೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 24-03-2014 ರಂದು 11:30 ಎಮ್ ಗಂಟೆ ಸುಮಾರಿಗೆ ಶ್ರೀ ಅಬ್ದುಲ ಗನಿ ತಂದೆ ದಸ್ತಗೀರ ಸಾಬ ಕುಂಬಾರಿ ಸಾ : ಹೊಸುರ ರವರು ಮತ್ತು ಹೆಂಡತಿ ತಮೀಜಾ ಮತ್ತು ನನ್ನ ಮಗ ಫಿರೋಜಾ ಮೂರು ಜನರು ಸೇರಿ ನಮ್ಮ ಗ್ರಾಮದ ಮಸೀದಿಗೆ ಕಡಿ ತಗೆದುಕೊಂಡು ಬರಲು ಹೊಗಿರುತ್ತೆವೆನಾವು ಮೂರು ಜನರು ಮಸೀದಿಯ ಮುಂದೆ ಸಿಂಮೆಂಟ ಚೀಲದಲ್ಲಿ ಕಡಿ ತುಂಬುತ್ತಿದ್ದಾಗ, ನಮ್ಮ ಗ್ರಾಮದ ಹುಸೇನಸಾಬ ತಂದೆ ಸೈಫನಸಾಬ ಜಾನೂಲಾ, ಅಸ್ಲಾಂ ತಂದೆ ಅಬ್ಬಾಸಲಿ ಜಾನೂಲಾ ಮತ್ತು ಚಾಂದಸಾಬ ತಂದೆ ಸಲೀಂಸಾಬ ಇನಾಮದಾರ ಮೂರು ಜನರು ನನ್ನ ಹತ್ತಿರ ಬಂದು ಏನೊ ಸೂಳೆ ಮಗನೆ ಯಾರಿಗೆ ಕೇಳಿ ಕಡಿ ತಗೊಂಡು ಹೊಂಟಿದಿ, ಮಸೀದಿ ಕಡಿ ಅಂದ್ರ ಅದು ನಿಮ್ಮಪ್ಪಂದು ಅಂತಾ ಅವಾಚ್ಯವಾಗಿ ಬೈಯುತ್ತಾ ಹುಸೇನಸಾಬ ಈತನು ಅಲ್ಲಿಯೆ ಬಿದ್ದ ಒಂದು ಬಡಿಗೆ ತಗೆದುಕೊಂಡು ನನ್ನ ತಲೆಯ ಮೇಲೆ ಹೊಡೆದನು. ಅಸ್ಲಾಂ ಜಾನೂಲಾ ಮತ್ತು ಚಾಂದಸಾಬ ಇನಾಮದಾರ ಇಬ್ಬರು ಸೂಳಿ ಮಗನಿಗೆ ಬಿಡಬೇಡಾ ಎಂದು ಕೈಯಿಂದ ಇಬ್ಬರು ನನ್ನ ಮೈ ಕೈಗೆ ಹೊಡೆದು ಗಾಯಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೃಹಿಣಿಗೆ ಕಿರುಕಳ ಪ್ರಕರಣ :
ಅಫಜಲಫರ ಠಾಣೆ : ಶ್ರೀಮತಿ ಸಾವಿತ್ರಿ ರುಕ್ಮೋಜಿ ಸಲಗರ ಸಾ : ಉಡಚಣ ರವರು ಉಡಚಾಣ ಗ್ರಾಮದಲ್ಲಿ ಹೊಲ ಮನೆಕೆಲಸ ಮಾಡಿಕೊಂಡು ಗಂಡ ಮಕ್ಕಳೊಂದಿಗೆ ಉಪಜೀವಿಸುತ್ತಿದ್ದೇನೆ. ನನ್ನ ತವರು ಮನೆ ಅಕ್ಕಲಕೋಟ ತಾಲೂಕಿನ ಕರ್ಜೋಳ ಗ್ರಾಮವಿದ್ದು, ಸುಮಾರು 05 ವರ್ಷದ ಹಿಂದೆ  ಉಡಚಾಣ ಗ್ರಾಮದ ರಕ್ಮೋಜಿ ತಂದೆ ಸಿದ್ದಣ್ಣ ಸಲಗರ ರವರೊಂದಿಗೆ ಮದುವೆಮಾಡಿಕೊಟ್ಟಿದ್ದು ಇರುತ್ತದೆ. ಸದ್ಯ ನಮಗೆ 3 ಜನ ಗಂಡು  ಮಕ್ಕಳಿರುತ್ತವೆ. ನಮ್ಮ ಮನೆ ಉಡಚಾಣ ಸಿಮೇಯ ನಮ್ಮ ಹೊಲದಲ್ಲಿ ಇದ್ದು, ಮನೆಯಲ್ಲಿ ನನ್ನ ಗಂಡ, ನಮ್ಮ ಮಾವ ಸಿದ್ದಣ್ಣ, ಅತ್ತೆ ಕಲ್ಲವ್ವ, ಮತ್ತು ಮೈದುನರಾದ ಶರಣು, ರಮೇಶ ಇವರು ಇರುತ್ತಾರೆ. ನನ್ನ ಗಂಡನ ಮನೆಯವರು ಈಗ ಸುಮಾರು 3-4 ವರ್ಷಗಳಿಂದ ನನ್ನ ಮೇಲೆ ವಿನಾಕಾರಣ ಸಂಶಯ ಪಟ್ಟು ಅವಾಚ್ಯವಾಗಿ ಬೈಯುವುದು, ಹೊಡೆಯುವುದು ಮಾಡಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ಕೊಡುತ್ತಾ ಬಂದಿರುತ್ತಾನೆ. ಈ ವಿಷಯವನ್ನು ನಾನು ನನ್ನ ತವರು ಮನೆಯವರಿಗೆ ಆಗಾಗ ಹೇಳುತ್ತಾ ಬಂದಿರುತ್ತೇನೆ. ನನ್ನ ತವರು ಮನೆಯವರು ಕೂಡ ನನ್ನ ಗಂಡನಿಗೆ ಹಾಗು ನಮ್ಮ ಅತ್ತೆ- ಮಾವ, ಮೈದುನರಿಗೆ ಬುದ್ದಿವಾದ ಹೇಳಿರುತ್ತಾರೆ. ಆದರು ಸಹ ನನ್ನ ಗಂಡನ ಮನೆಯವರು ನನಗೆ ಹಿಂಸಿಸುತ್ತಾ ಬಂದಿರುತ್ತಾರೆ. ನಮ್ಮ ಅಕ್ಕನ ಮಗಳಾದ ಉಜ್ವಲಾ ಗಂಡ ನವನಾಥ ದೇಶಮುಖ ಸಾ|| ಆಲಮೇಲ ಇವಳ ಗಂಡ ತಿರಿಕೊಂಡಿದ್ದರಿಂದ ಅವಳನ್ನು ಕೆಲವು ದಿನ ಅಂತಾ ನಮ್ಮ ಮನೆಗೆ ಕರೆದುಕೊಂಡು ಬಂದಿರುತ್ತೇನೆ. ದಿನಾಂಕ 21-03-2014 ರಂದು 2;00 ಪಿ.ಎಂ ಕ್ಕೆ ನಾನು ಮತ್ತು ನಮ್ಮ ಅಕ್ಕನ ಮಗಳಾದ ಉಜ್ವಲಾ ಇವಳೊಂದಿಗೆ ಮಾತಾಡುತ್ತಾ ಕುಳಿತಾಗ ನನ್ನ ಗಂಡ ನನಗೆ ಅವಾಚ್ಯವಾಗಿ ಬೈಯುತ್ತಿದ್ದನು. ನಾನು ಯಾಕ ಬೈಯುತ್ತಿರಿ ಅಂತಾ ಕೇಳಿದ್ದಕ್ಕೆ ಏ ರಂಡಿ ನನ್ನೊಂದಿಗೆ ವಾದ ಮಾಡತಿಯೇನೆ ಅಂತಾ ಅಂದು ಕೈಯಿಂದ ನನ್ನ ಎಡ ಕಪಾಳ ಮೇಲೆ, ನನ್ನ ತಲೆಯ ಮೇಲೆ ಹೋಡೆದರು ನಾನು ವಿರೊಧ ಮಾಡಿದ್ದಕ್ಕೆ ನಮ್ಮ ಮಾವ ಸಿದ್ದಣ್ಣ ಇವರು ಈ ರಂಡಿಗಿ ಸ್ವಕ್ಕೆ ಬಹಳಾದ ಹೊಡೆದು ಖಲಾಸ ಮಾಡರೊ ಅಂತಾ ಅಂದನು ಆಗ ನನ್ನ ಮೈದುನ ಶರಣು ಇವನು ಅಲ್ಲೆ ಇದ್ದ ಬಡಿಗೆಯಿಂದ ನನ್ನ ಎರಡು ಮೊಳಕಾಲ ಕೆಲಗೆ ಹೊಡೆದನು ಆಗ ನಾನು ನೆಲದ ಮೇಲೆ ಬಿದ್ದು ಒದ್ದಾಡುತ್ತಿದ್ದಾಗ ರಮೇಶ ಇವನು ಒಂದು ಕಬ್ಬು ತಂದು ಅದರಿಂದ ನನ್ನ ಬೆನ್ನಿನ ಮೇಲೆ ಹೊಡೆದನು. ಆಗ ನಾನು ಚಿರಾಡುತ್ತಿದ್ದಾಗ ನಮ್ಮ ಅತ್ತೆ ಕಲ್ಲವ್ವ ಇವರು ಈ ರಂಡಿ ಬಾಯಾಗ ಮಣ್ಣ ಹಾಕಿ ಖಲಾಸ ಮಾಡರೋ ಬೈದಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಅಫಜಲಪೂರ ಠಾಣೆ : ಶ್ರೀ ದಾದಾಗೌಡ ತಂದೆ ಮಲ್ಕಾಜಪ್ಪಗೌಡ ಮಾಲಿ ಪಾಟೀಲ ಸಾ : ಹಾವಳಗಾ ರವರ  ಮಕ್ಕಳ ಜವಳ ಕಾರ್ಯಕ್ರಮ ಇದ್ದಿದ್ದರಿಂದ ದಿನಾಂಕ 24-03-2014 ರಂದು ಮದ್ಯಾಹ್ನ 1;00 ಗಂಟೆ ನಾನು ಮತ್ತು ನಮ್ಮ ಮಾವ ಈರಣ್ಣ ತಂದೆ ಸಂಗಣಗೌಡ ಪಾಟೀಲ ಸಾ|| ಮಿಣಜಗಿ ರವರು ಕೂಡಿಕೊಂಡು ನನ್ನ ಹಿರೋ ಹೊಂಡಾ ಮೋಟರ ಸೈಕಲ ನಂ ಎಮ್.ಹೆಚ್-14 ಸಿ.ಟಿ-7147 ನೇದ್ದರ ಮೇಲೆ ನಮ್ಮೂರಿಂದ ಅಫಜಲಪೂರಕ್ಕೆ ಗ್ಯಾಸ ತರಲು ಬಂದಿರುತ್ತೇವೆ. ನಂತರ 4;30 ಗಂಟೆಗೆ ಅಫಜಲಪೂರ ಬಸ್ಸ್ ನಿಲ್ದಾಣದಿಂದ ನಾನು ಮತ್ತು ನಮ್ಮ ಮಾವ ಇಬ್ಬರು ಕೂಡಿ ನಮ್ಮ ಮೋಟರ ಸೈಕಲ ಮೇಲೆ ಗ್ಯಾಸ ಅಂಗಡಿಗೆ ಹೋಗುತ್ತಿದ್ದಾಗ ಲಿಂಗದಳ್ಳಿ ಮೋಟರ ಸೈಕಲ್ ಶೋರುಮ ಹತ್ತಿ ಇದ್ದಾಗ ಎದುರುಗಡೆಯಿಂದ ಒಂದು ಕಮಾಂಡರ ಜೀಪ ಬರುತ್ತಿದ್ದು, ಅದರ ಚಾಲಕನು ಅತೀವೇಗವಾಗಿ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನಮಗೆ ಡಿಕ್ಕಿಪಡಿಸಿದನು. ಆಗ ನಾವು ರೋಡಿನ ಮೇಲೆ ಬಿದ್ದಿದ್ದು, ನನ್ನ ಹಣೆಯ ಮೇಲೆ ಭಾರಿ ರಕ್ತಗಾಯ ಹಾಗು ಮೈ ಕೈಗೆ ಗುಪ್ತ ಪೆಟ್ಟುಗಾಳಾದವು ನನ್ನ ಹಿಂದೆ ಕುಳಿತ ನಮ್ಮ ಮಾವನಿಗೆ ಮೂಗಿನ ಮೇಲೆ, ಬಲಗಡೆ ಹಣೆಯ ಮೇಲೆ ಮತ್ತು ಮೆಲಕಿನ ಹತ್ತಿರ ಸಾದಾ ರಕ್ತಗಾಯ ಹಾಗು ಮೈ ಕೈಗೆ ಒಳ ಪೆಟ್ಟು ಆಗಿರುತ್ತವೆ. ನಮಗೆ ಅಪಘಾತ ಪಡಿಸಿದ ಕಮಾಂಡರ ಜೀಪ ಚಾಲಕ ಓಡಿ ಹೋದನು ಸದರಿ ಕಮಾಂಡರ ಜೀಪ ನಂ ನೋಡಲಾಗಿ ಎಮ್.ಹೆಚ್-08 ಸಿ-0806 ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ಶ್ರೀ ಸಂಜಯಕುಮಾರ ತಂದೆ ಸೂರ್ಯಕಾಂತ ಬಿರಾದಾರ ಸಾ:ಕೊಟಿಗ್ಯಾಳ  ತಾ: ಔರಾದ(ಬಿ) ಜಿ: ಬೀದರ ರವರು  ದಿನಾಂಕ 22-03-2014 ರಂದು ರಾತ್ರಿ 10.30 ಗಂಟೆಗೆ ನಾನು ನಮ್ಮೂರಿಗೆ ಬರುವ ಸಲುವಾಗಿ ನಮ್ಮ ಟ್ರಾನ್ಸಪೋರ್ಟದ ಐಚೆರ ಡಿಸಿಎಮ್ ವಾಹನ ನಂ ಎಪಿ-23 ವಾಯ್-9607 ನೆದ್ದನ್ನು ಕೊಪ್ಪಳದಲ್ಲಿನ ಹಿಂದೂಸ್ಥಾನ ಕೋಕೋ ಕೋಲಾ ಬ್ರೈವರೇಜ ಪ್ರೈವೆಟ ಲಿಮಿಟೆಡ ಕಂಪನಿಯಲ್ಲಿ ಕೋಕೊ ಕೋಲಾ ಲೋಡ ಮಾಡಿಕೊಂಡು ಬೀದರನ ಶಾಮ ಎಜನ್ಸಿಗೆ ತೆಗೆದುಕೊಂಡು ಬರುತ್ತಿದ್ದೆವು.ಸದರಿ ವಾಹನವನ್ನು ಚಲಾಯಿಸುತ್ತಿದ್ದ ಚಾಲಕನ ಹೆಸರು ಗೊತ್ತಿರುವುದಿಲ್ಲಾ. ದಿನಾಂಕ 23-03-2014 ರಂದು ನಸುಕಿನ ಜಾವ 4.30 ಗಂಟೆಗೆ ರಾಷ್ಟ್ರೀಯ ಹೆದ್ದಾರಿ 218 ರಸ್ತೆಯ ಮೂಖಾಂತರ ಸರಡಗಿ(ಬಿ) ಕ್ರಾಸ ಹತ್ತಿರ ಬರುತ್ತಿರುವಾಗ ರಸ್ತೆಯ ಎಡಬದಿಗೆ ಯಾವುದೇ ಸೂಚನೆಯಿಲ್ಲದೆ,ಇಂಡಿಕೇಟರ ಹಾಕದೇ ನಿಲ್ಲಿಸಿದ ಲಾರಿಗೆ ನಮ್ಮ ಐಚೆರ ಡಿಸಿಎಮ್ ವಾಹನ ನಂ ಎಪಿ-23 ವಾಯ್-9607  ನೆದ್ದರ ಚಾಲಕನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಸದರಿ ಲಾರಿಗೆ ಡಿಕ್ಕಿ ಪಡಿಸಿರುತ್ತಾನೆ. ಇದರಿಂದ ನನಗೆ ಎಡಗಾಲಿನ ತೊಡೆಗೆ ಭಾರಿ ರಕ್ತಗಾಯ,ಎಡಗೈ ಸಾದಾಗಾಯವಾಗಿದ್ದು ಮತ್ತು ಹಣೆಯ ಮೇಲೆ ತೆರಚಿದ ರಕ್ತಗಾಯವಾಗಿದ್ದು ಇರುತ್ತದೆ. ನಂತರ ಲಾರಿ ನಂ ನೋಡಲಾಗಿ ಕೆಎ 04-ಎ. 6994 ನೆದ್ದು ಇರುತ್ತದೆ. ಸದರಿ ಚಾಲಕನು ತನ್ನ ಲಾರಿಯನ್ನು ರಾಷ್ಟ್ರೀಯ ಹೆದ್ದಾರಿ ಮೇಲೆ ನಿಲ್ಲಿಸಿ ಯಾವುದೇ ಸೂಚನೆ ,ಇಂಡಿಕೇಟರ ಹಾಕದೇ ನಿಲ್ಲಿಸಿ ಹೋಗಿರುತ್ತಾನೆ.ನಮ್ಮ ಚಾಲಕನು ತನ್ನ ವಾಹನವನ್ನು ಸ್ಥಳದಲ್ಲಿ ಬಿಟ್ಟು ಓಡಿಹೋಗಿರುತ್ತಾನೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರಥಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ರಾಮು ತಂದೆ ಲಕ್ಷ್ಮಣ ರವರು ದಿನಾಂಕ 24-03-2014 ರಂದು ರಾತ್ರಿ ಮನೆಯಿಂದ ತನ್ನ ಮೋಟಾರ ಸೈಕಲ ನಂಬರ ಕೆಎ-32 ಇಎ-5387 ರ ಮೇಲೆ ಸುಪರ ಮಾರ್ಕೆಟಕ್ಕೆ ಮನೆಯ ಸಾಮನುಗಳನ್ನು ತರುವ ಸಲುವಾಗಿ ಹೋಗಿ ವಾಪಸ್ಸ ಜಗತ ಸರ್ಕಲ ಮುಖಾಂತರ ಹೋಗುವಾಗ ಡಾ: ಮುರಳಿಧರ ಆಸ್ಪತ್ರೆಯ ಎದುರಿನ ರೋಡ ಮೇಲೆ ಮೋಟಾರ ಸೈಕಲ ಇಂಡಿಕೇಟರ ಹಾಕಿ ಸನ್ನೆ ಮಾಡಿ ಕೋರ್ಟ ರೋಡ ಕಡೆಗೆ ಮೋಟಾರ ಸೈಕಲ ತಿರುಗಿಸುವಾಗ ಎಸ್.ವಿ.ಪಿ ಸರ್ಕಲ ಕಡೆಯಿಂದ ಮೋಟಾರ ಸೈಕಲ ನಂಬರ ಕೆಎ-03 ಹೆಚ್.ಎಮ್-9434 ರ ಸವಾರನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮೋಟಾರ ಸೈಕಲಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ನನಗೆ ಭಾರಿಗಾಯಗೊಳಿಸಿ ತಾನು ಗಾಯಹೊಂದಿ ತನ್ನ ಮೋಟಾರ ಸೈಕಲ ಸ್ಥಳದಲ್ಲಿ ಬಿಟ್ಟು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ:-22-03-2014 ರಂದು ಮದ್ಯಾಹ್ನ 3:30 ಗಂಟೆಗೆ ರಮೇಶ ಆರ್ ಸೆಟ್ಟಿ ಸಾ: ಅಫಜಲಪೂರ ಇವನು ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯ ಭಾವ ಚಿತ್ರದ ಜೊತೆಗೆ ಜಾಹೀರಾತು ಮತ್ತು ಪಕ್ಷದ ಯೋಜನೆಗಳು ಹಾಗೂ ಸಾಧನೆಗಳ ಕುರಿತು ತನ್ನ ಎಸ್.ಸಿ.ಎನ್ ಕೇಬಲ್ ಚಾನಲ್ಲಿನಲ್ಲಿ ಪೂರ್ವಾನುಮತಿ ಪಡೆಯದೆ ಜಾಹೀರಾತನ್ನು ಹಾಕಿ ಚುನಾವಣಾ ನೀತಿ ಸಂಹೀತೆ ಉಲ್ಲಂಘನೆ ಮಾಡಿರುತ್ತಾನೆ ಅಂತಾ ಶ್ರೀ ಮಹಮ್ಮದ ಯೂಸುಫ ಸಾಹಯಕ ಚುನಾವಣೆ ಅಧಿಕಾರಿಗಳು ಅಫಜಲಪೂರ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.