POLICE BHAVAN KALABURAGI

POLICE BHAVAN KALABURAGI

18 January 2012

GULBARGA DIST REPORTED CRIMES

ಅಪಘಾತ ಪ್ರಕರಣ:
ಅಫಜಲಪೂರ ಪೊಲೀಸ್ ಠಾಣೆ :
ಶ್ರೀ ಜಳಬಾ ತಂದೆ ಮಾರುತಿ ಗೋಸನರ ಸಾ ಪಂಫಳಗುಟ್ಟಾ ತಾ ಮುಖ್ಯಾಡ ಜಿ ನಾಂದೇಡರವರು ನಾನು ಮತ್ತು ಸಚೀನ ಸರಪತಿ ಇಬ್ಬರೂ ದಿನಾಂಕ 07/01/2012 ರಂದು 10 ಗಂಟೆ ಸಮಯಕ್ಕೆ ಹಿರೋ ಹೊಂಡಾ ಮೊಟಾರ ಸೈಕಲ ನಂ. ಎಮ್ ಹೆಚ್-20 ಜಿ-5445 ನೇದ್ದರ ಮೇಲೆ ಅಫಜಲಪೂರಕ್ಕೆ ಬಂದು ಮರಳಿ ಪ್ಯಾಕ್ಟರಿ ಕಡೆಗೆ ಹೋಗುತ್ತಿದ್ದಾಗ ಮೋಟಾರ ಸೈಕಲ್ ನ್ನು ಸಚೀನನು ನಡೆಸುತ್ತಿದ್ದು ಘತ್ತರಗಾ ರೋಡ ಕಡೆಯಿಂದ ಒಂದು ಟ್ರ್ಯಾಕ್ಟರ ಟ್ರಾಲಿ ನಂ. ಕೆ ಎ-32 ಟಿ-0646 ಟ್ರ್ಯಾಲಿ ನಂ. ಕೆ ಎ-32 ಟಿ ಎ-0525 ನೇದ್ದನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಅಪಘಾತ ಪಡೆಸಿದ್ದರಿಂದ ನನಗೆ ಮತ್ತು ಸಚೀನ ಇತನಿಗೆ ಭಾರಿ ರಕ್ತಗಾಯವಾಗಿರುತ್ತದೆ. ಉಪಚಾರ ಸಲುವಾಗಿ ಅಫಜಲಪೂರ ಸರ್ಕಾರಿ ಆಸ್ಪತ್ರೆಗೆ ಸೇರಿಕೆಯಾಗಿದ್ದು, ಉಪಚಾರ ಪಡೆಯುತ್ತಾ ಸಚಿನ ಇತನು ಮೃತಪಟ್ಟಿರುತ್ತಾನೆ ಟ್ರಾಕ್ಟರ ಚಾಲಕ ಟ್ರಾಕ್ಟರ ಅಲ್ಲಿಯೆ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 12/2012 ಕಲಂ 279 337 304 (ಎ) ಐ ಪಿ ಸಿ ಸಂ. 187 ಐ ಎಮ್ ವಿ ಆಕ್ಟ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ದರೋಡೆ ಪ್ರಕರಣ:
ರೋಜಾ ಪೊಲೀಸ್ ಠಾಣೆ:
ಶ್ರೀ ಹಸನಲಿ ಜಾಹೀದ ತಂದೆ ಮಿರಾನಸಾಬ ಸಾ:ಖಮರ ಕಾಲೋನಿ ಗುಲಬರ್ಗಾ ರವರು ನಾನು ನ್ಯೂಜ ಪೇಪರ ಓದುತ್ತಾ ಕುಳಿತಿದ್ದ, ಮಗನಾದ ಇರ್ಪಾನ ಇತನು ಅಂಗಡಿಗೆ ಹೋದನು, ನನ್ನ ಹೆಂಡತಿಯಾದ ಜಾಹಿದಾ ಬೇಗಂ ಇವರು ಮಗಳ ಮನೆಗೆ ಹೋಗಿದ್ದು, ಸೊಸೆಯಾದ ಅಜಮತ ಯಾಸ್ಮಿನ ಇವಳು ಸ್ನಾನ ಮಾಡಲು ಸ್ನಾನದ ಕೋಣೆಗೆ ಹೋಗಿದ್ದಳು ಸಮಯ ಬೆಳಗಿನ 11:30 ಗಂಟೆಯಾಗಿದ್ದು ನಮ್ಮ ಸೊಸೆಯಾದ ಅಜಮತ ಯಾಸ್ಮೀನ ಇವಳು ಒಮ್ಮೆಲೆ ಚೀರಿದ ಶಬ್ದ ಕೇಳಿ ಹೊರಗಡೆ ಹಾಲಿನಲ್ಲಿ ಬಂದು ನೋಡಿದಾಗ ಒಬ್ಬ ಅಪರಿಚಿತ ಮನುಷ್ಯನು ಮತ್ತು ಒಬ್ಬಳು ಬುರ್ಕಾದ ಹೆಣ್ಣು ಮಗಳು ಬಾಗಿಲಿನಿಂದ ಹೊರಗಡೆ ಓಡಿ ಹಿಂದಿನ ಬಾಗಿಲದಿಂದ ಓಡಿ ಹೋದರು ನಂತರ ನನ್ನ ಸೊಸೆಗೆ ಕೈಗೆ ನೋಡಲು ರಕ್ತಗಾಯವಾಗಿರುತ್ತದೆ, ಸೊಸೆ ಅಪರಿಚಿತ ಮನುಷ್ಯನಿಗೆ ತಡೆಗಟ್ಟಲು ಹೋದಾಗ ಆತನು ಚಾಕುದಿಂದ ಹೊಡೆದು ಗಾಯ ಪಡೆಸಿರುತ್ತಾನೆ ಅಂತಾ ತಿಳಿಸಿದಳು ಬೆಡ್ ರೂಮಿನಲ್ಲಿ ಬಂದು ನೋಡಲು ಅಲಮಾರಿ ಲಾಕರ ಮುರಿದು ಬಾಕ್ಸದಲ್ಲಿ ಇಟ್ಟಿದ್ದ ಬಂಗಾರದ ಆಭರಣಗಳು ಒಂದು ಲೇಡಿಸ್ ರಿಸ್ಟ್ ವಾಚ್ ಹೀಗೆ ಒಟ್ಟು 79,000/- ರೂಪಾಯಿ ಬೆಲೆಬಾಳುವ ಬಂಗಾರದ ಆಭರಣ ಮತ್ತು ಲೇಡೀಜ ವಾಚ್ ದೋಚಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:04/2012 ಕಲಂ 394 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DIST REPORTED CRIME

ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:
ಶ್ರೀ ಜಗದೇವಪ್ಪ @ ಜಗನ್ನಾಥ ತಂದೆ ಮಾಧುರಾಯ ರೇವಣಿ ಸಾ: ಕಲ್ಲಹಂಗರಗಾರವರು ನಾನು ದಿ: 17/1/12 ರಂದು ಮದ್ಯಾಹ್ನ 1 ಗಂಟೆಯ ಸುಮಾರಿಗೆ ಮೋಟಾರ ಸೈಕಲ್ ನಂ ಕೆಎ 32 ಡಬ್ಲು 6393 ನೇದ್ದರ ಮೇಲೆ ಪಟ್ಟಣ್ಣ ಗ್ರಾಮಕ್ಕೆ ಹೊರಟಾಗ ಆಳಂದ ರಸ್ತೆಯ ಶಾಂತಪ್ಪ ಕಾರವಾರಿ ಇವರ ಹೊಲದ ಹತ್ತಿರ ಟಾಟಾ ಇಂಡಿಕಾ ಕಾರ ನಂ ಕೆಎ 32 ಎಮ್‌ 7590 ನೇದ್ದರ ಚಾಲಕ ತನ್ನ ಕಾರನ್ನು ಅತೀವೇಗ & ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನನ್ನ ಮೋಟಾರ ಸೈಕಲಗೆ ಡಿಕ್ಕಿ ಪಡೆಯಿಸಿ ಭಾರಿ ಹಾಗೂ ಸಾದಾ ಗುಪ್ತಗಾಯ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:11/2012 ಕಲಂ 279, 338 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.