POLICE BHAVAN KALABURAGI

POLICE BHAVAN KALABURAGI

12 December 2012

GULBARGA DISTRICT

ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ಶ್ರೀ ಬಸವರಾಜ  ತಂದೆ ಅವಣ್ಣಾ ಕಂಡಗೋಳ  ವಯಾ: 40 ಉ: ಅಟೋ ಚಾಲಕ  ಸಾ: ಕಮುನಿಟಿ ಹಾಲ ಹತ್ತಿರ ಬಿ.ಶಾಮ ಸುಂದರ ನಗರ ಎಸ.ಬಿ.ಕಾಲೇಜ ರೋಡ ಗುಲಬರ್ಗಾರವರು ನಾನು ದಿನಾಂಕ 11-12-12 ರಂದು ರಾತ್ರಿ 9-45 ಗಂಟೆ ಸುಮಾರಿಗೆ ಟಂಟಂ ನಂ:ಕೆಎ-28/ಎ-1004 ನೇದ್ದರ ಚಾಲಕ ಕಲ್ಯಾಣಿ ಇವರ ಜೊತೆಗೆ   ಟಂಟಂ ದಲ್ಲಿ ಕುಳಿತು  ರಾಮ ಮಂದಿರ ರಿಂಗ ರೋಡ ದಿಂದ ಆರ್.ಪಿ.ಸರ್ಕಲ್  ಕಡೆಗೆ ಹೋಗುತ್ತಿದ್ದಾಗ ರೈಲ್ವೆ ಓವರ ಬ್ರೀಜ್ ಸಮಿಪದ ಕೊಠಾರಿ ಭವನ ಟಂ ಟಂ ಚಾಲಕನು ತನ್ನ ಟಂಟಂನ್ನು  ಅತಿವೇಗವಾಗಿ ಮತ್ತು ಅಲಕ್ಷತನ ದಿಂದ ಚಲಾಯಿಸಿ ಒಮ್ಮೇಲೆ ಕಟ್ಟ ಹೊಡೆದು ಟಂಟಂ ಪಲ್ಟಿಮಾಡಿದ್ದರಿಂದ ನನಗೆ ಗಾಯಗಳಾಗಿರುತ್ತವೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 121/12  ಕಲಂ: 279,338 ಐ.ಪಿ.ಸಿ   ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DISTRICTಆಳಂದ ಉಪ-ವಿಭಾಗದ ಪೊಲೀಸ್ ಅಧಿಕಾರಿಗಳಿಂದ ವಾಹನ ಕಳ್ಳನ ಬಂದನ, ಸುಮಾರು 5, 00,000/- ಮೌಲ್ಯದ್ದ ವಾಹನಗಳ ಜಪ್ತಿ.
ಶ್ರೀ ಎಸ್ ಬಿ ಸಂಬಾ ಡಿ ಎಸ್ ಪಿ ಆಳಂದ ಉಪ ವಿಭಾಗ ಮತ್ತು ಶ್ರೀ. ಜಿ ಎಸ್ ಉಡಗಿ ಸಿ.ಪಿ.ಐ ಆಳಂದ ಇವರ ನೇತ್ರತ್ವದಲ್ಲಿ ಶ್ರೀ. ವಿನಾಯಕ ಪಿ ಎಸ್ ಐ ನರೋಣಾ ಪೊಲೀಸ ಠಾಣೆ ಶ್ರೀ. ಬಂಡೆಪ್ಪ ಎಎಸ್ಐ ನರೋಣಾ ಪೊಲೀಸ ಠಾಣೆ ಮತ್ತು ಸಿಬ್ಬಂದಿಯವರಾದ ಚಂದ್ರಶೇಖರ ಕಾರಭಾರಿ, ಲಕ್ಷ್ಮಿಪುತ್ರ, ಬಸವರಾಜ,ಬಸವರಾಜ,ರವರನೊಳಗೊಂಡ ಒಂದು ತಂಡ ರಚಿಸಿದ್ದು, ನರೊಣಾ ಗ್ರಾಮದಲ್ಲಿ ದಿನಾಂಕ:07/12/2012 ರಂದು ಸಾಯಂಕಾಲ 4-30 ಗಂಟೆಗೆ ವಾಹನ ಕಳ್ಳತನ ಮಾಡುವ ನರೋಣಾ ಗ್ರಾಮದ ಕೈಲಾಸ್ ತಂದೆ ಅರ್ಜುನ  ದೇಖೂನ ಸಾ:ನರೋಣಾ ಇವನನ್ನು ವಶಕ್ಕೆ ತೆಗೆದುಕೊಂಡು ಅವನ ತಾಬದಲ್ಲಿದ್ದ ಕಳ್ಳತನದ ದ್ವಿ-ಚಕ್ರ ವಾಹನ ಸಂ ಕೆಎ-32/ಎಕ್ಸ 773 ವಶಪಡಿಸಿಕೊಂಡು ಹೆಚ್ಚಿನ ವಿಚಾರಣೆ ಮಾಡಿದಾಗ ಆಳಂದ ತಾಲೂಕ ಮತ್ತು ನೆರೆಯ ಮಹಾರಾಷ್ಟ್ರದಲ್ಲಿ ಮೋಟಾರ ಸೈಕಲ್ ಮತ್ತು ಟಾಟಾ ಸುಮೋ ವಾಹನ ಕಳುವು ಮಾಡಿರುವದನ್ನು ಅರಿತು ಮತ್ತೆ  ಅವನಿಂದ ಟಾಟಾ ಸುಮೋ ಮತ್ತು 3 ದ್ವಿ-ಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವುಗಳ ಅ||ಕಿ|| 5,00,000 ರೂಪಾಯಿ ಬೆಲೆ ಬಾಳುವದಾಗಿರುತ್ತವೆ. ಕೈಲಾಸ್ ಇತನು ಕುಖ್ಯಾತಿ ಕಳ್ಳನಿದ್ದು ವಿಜಾಪೂರ ಜಿಲ್ಲೆಯ ಇಂಡಿ ಮತ್ತು ಸೊಲ್ಲಾಪೂರ, ಆಳಂದ ಮುಂತಾದ ಕಡೆ ವಾಹನ ಕಳ್ಳತನ ಮಾಡಿರುತ್ತಾನೆ. ಈ ಮೋಟಾರ ಸೈಕಲ ಪತ್ತೆ ಕಾರ್ಯ ಮಾಡಿ ಆರೋಪಿ ಮತ್ತು ಮಾಲು ವಾಹನಗಳನ್ನು ವಶಪಡಿಸಿಕೊಂಡಿದ್ದಕಾಗಿ ಮಾನ್ಯ ಎಸ.ಪಿ ಸಾಹೇಬರು ಇವರ ಕಾರ್ಯ ಸಾಧನೆಯನ್ನು ಶ್ಲಾಘಿಸಿರುತ್ತಾರೆ.
ವಶಪಡಿಸಿಕೊಳ್ಳಲಾದ ವಾಹನಗಳ ಮಾಹಿತಿ:ಒಂದು ಟಾಟಾ ಸುಮೊ ನಂ: ಕೆಎ-01/ಎ-9892, ಹಿರೋ ಹೊಂಡಾ ಮೋಟಾರ ಸೈಕಲ ನಂ:ಕೆಎ-32/ಎಕ್ಸ್-7973, ಹಿರೋ ಹೊಂಡಾ ಸ್ಪೇಲಂಡರ್ ನಂ:ಕೆಎ-32/ಎಕ್ಸ್-733, ಪಲ್ಸರ್ ಕೆಎ-32/ಎಕ್ಸ್-358, ಮತ್ತು ಒಂದು ಬಜಾಜಾ ಡಿಸ್ಕವರಿ ಮೋಟಾರ ಸೈಕಲ ನಂ:ಕೆಎ-29/ಎಲ್-9931 ನೇದ್ದವುಗಳು.