POLICE BHAVAN KALABURAGI

POLICE BHAVAN KALABURAGI

06 September 2014

Gulbarga District Reported Crimes

ಹಲ್ಲೆ ಪ್ರಕರಣಗಳು :
ಅಫಜಲಪೂರ ಠಾಣೆ : ಶ್ರೀ ಗಂಗಪ್ಪ ತಂದೆ ರೇವಪ್ಪ ಪೂಜಾರಿ ಸಾ|| ಮಾಶಾಳ ಇವರು ದಿನಾಂಕ 06-09-2014 ರಂದು ಬೆಳಿಗ್ಗೆ 08;00 ಗಂಟೆಗೆ ನಮ್ಮೂರ ಸಿಮೆಯಲ್ಲಿ ಇರುವ ರಾಜೇಶ ಶಾಹಾ ರವರ ಹೊಲದಲ್ಲಿ ಗಳೆ ಹೊಡೆಯಲು ನನ್ನ ಎತ್ತುಗಳು ತೆಗೆದುಕೊಂಡು ಹೋಗಿದ್ದು ಅಲ್ಲಿ ನಾನು ಮತ್ತು ಹೊಲದಲ್ಲಿ ಕೆಲಸ ಮಾಡುತ್ತಿದ್ದ ಮಡೆಪ್ಪ ಐನಾಪೂರ ರವರು ಇದ್ದಿರುತ್ತೇವೆ. ನಂತರ 11;30 .ಎಂ ಸುಮಾರಿಗೆ ನಮ್ಮೂರ 1] ಸಿದ್ರಾಮ ತಂದೆ ಯಲ್ಲಪ್ಪ ಗೊಲ್ಲರ, 2] ಲಕ್ಷ್ಮಣ ತಂದೆ ಯಲ್ಲಪ್ಪ ಗೊಲ್ಲರ, 3] ಕರೆಪ್ಪ ತಂದೆ ಸೋಮಣ್ಣ ಗೊಲ್ಲರ, 4] ಶಂಕ್ರೆಪ್ಪ ತಂದೆ ಗುರಪ್ಪ ಗೊಲ್ಲರ, 5] ಖಾಜಪ್ಪ ತಂದೆ ಗುರಪ್ಪ ಗೊಲ್ಲರ ರವರು ತಮ್ಮ ಕೈಯಲ್ಲಿ ಬಡಿಗೆಗಳು ಹಿಡಿದುಕೊಂಡು ನನ್ನ ಹತ್ತಿರ ಬಂದು ಅವಾಚ್ಯ ಶಬ್ದಗಳಿಂದ ಬೈದು ತಮ್ಮ ಕೈಯಲ್ಲಿದ್ದ ಬಿಡಿಗೆಯಿಂದ ಹೊಡೆದು ನೆಲದ ಮೇಲೆ ಖೆಡವಿ, ಕೈಯಿಂದ ಮತ್ತು ಕಾಲಿನಿಂದ ನನ್ನ ಮೈ ಕೈಗೆ ಹೊಡೆಯುದು ಖಲಾಸ ಮಾಡುತ್ತೇವೆ ಅಂತಾ ಅಂದು ಗಾಯಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಫಜಲಪೂರ ಠಾಣೆ : ಶ್ರೀ ಆನಂದ ತಂದೆ ಪಾಂಡುರಂಗ ಪೂಜಾರಿ ಸಾ|| ಮಾತೋಳಿ ಇವರು ದಿನಾಂಕ 03-09-2014 ರಂದು ನಾನು ರಾತ್ರಿ ನಮ್ಮ ಹೊಲ sಸರ್ವೇ ನಂ 73/2 ಇಸಾ 1 ನೇದ್ದರ ಹೊಲದಲ್ಲಿರುವ ಗುಡಿಸಲಿನಲ್ಲಿ ಮಲಗಿದ್ದಾಗ ಯಾರೊ ಮಾತಾಡುತ್ತಿದ್ದ ಸಪ್ಪಳ ಕೇಳಿ ನಾನು ಎದ್ದು ಹೋಗಿ ನೋಡಲು ನಮ್ಮ ಬಾಂದಾರಿಯಲ್ಲಿ ಯಾರೊ 4 ಜನ ಬಾಂದಾರಿ ಹಡ್ಡುತ್ತಿದ್ದರು. ಆಗ ನಾನು ಗಾಬರಿಯಿಂದ ಅವರ ಹತ್ತಿರ ಹೋಗಿ ನೋಡಲಾಗಿ ನಮ್ಮ ಕಾಕಾ ಲಕ್ಷ್ಮಣ ಪೂಜಾರಿ ಮತ್ತು ಅವನ ಮ್ಕಕಳು ಇದ್ದರು, ಸದರಿಯವರಿಗೆ ನಾನು ಬಾಂದಾರಿ ಯಾಕೆ ಹಡ್ಡುತ್ತಿದ್ದಿರಿ, ಇಲ್ಲಿ ಸಾಂಡ ಬಿಡಬಾರದು ಎಂದು ಕೋರ್ಟೆ ಹೇಳಿದೆ ಅಂತಾ ಅಂದೆನು, ಅದಕ್ಕೆ ಲಕ್ಷ್ಮಣ ಪೂಜಾರಿ ಈತನು ಮಗನೆ ನಾವು ಇಲ್ಲೆ ಬಿಡುತ್ತೆವೆ ಎನು ಮಾಡಿಕೊಳ್ಳುತ್ತಿ ಮಾಡಿಕೊ ಎಂದು ನನ್ನ ಏದೆಯ ಮೇಲಿನ ಅಂಗಿ ಹಿಡಿದು ನನಗೆ ಕೈಯಿಂದ ಹೊಡೆದನು, ಆಗ ನಾನು ಅವರಿಗೆ ಅಂಜಿ ಓಡಿ ಹೋಗುತ್ತಿದ್ದಾಗ ಅವನ ಮಕ್ಕಳಾದ ಸಿದ್ದಾರಾಮ, ಯಲ್ಲಾಲಿಂಗ, ಶಿವಾನಂದ ಮೂರು ಜನರು ನನಗೆ ಹೋಗದಂತೆ ತಡೆದು ನಿಲ್ಲಿಸಿ, ಮೂರು ಜನರು ನನಗೆ ಕಾಲಿನಿಂದ ಒದೆಯುವುದು ಮತ್ತು ಕೈಯಿಂದ ಹೊಡೆಯುವುದು ಮಾಡಿ, ಮಗನೆ ನಿನಗೆ ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೇದರಿಕೆ ಹಾಕಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾದನಹಿಪ್ಪರಗಾ ಠಾಣೆ : ಶ್ರೀ ರಾಜೇಂದ್ರ ತಂದೆ ಪಕೀರಪ್ಪ ಪೂಜಾರಿ ಸಾ: ಸಕ್ಕರಗಾ ರವರು ದಿನಾಂಕ: 05-09-2014 ರಂದು ನಾನು ನಮ್ಮ ಹೋಲಕ್ಕೆ ಕೂರುಕಾಯಲು ಹೋಗಿದ್ದು ಸಾಯಂಕಾಲ 05;00 ಗಂಟೆ ಸುಮಾರಿಗೆ ಕೂರಿಗಳು ಹೊಡೆದುಕೊಂಡು ಶಿವಶರಣ ಕಂಬಾರ ಇವರ ಹೊಲದ ಪಕ್ಕದಿಂದ ಹಾಯ್ದು ನಾನು ಬುರುತ್ತಿರುವಾಗ ನಮ್ಮೂರಿನ ಗುರಪ್ಪ ತಂದೆ ಶಿವಶರಣ ಕಂಬಾರ ಮತ್ತು ಆತನ ಅಣ್ಣ ಮುತ್ತಣ್ಣ ತಂದೆ ಶಿವಶರಣ ಕಂಬಾರ ಇವರಿಬ್ಬರೂ ನನಗೆ ನೋಡಿ ಏ ಭೋಸಡಿ ಮಗನೆ ಅಲ್ಲಿಂದ ಯಾಕೇ? ಹಾಯ್ದು ಹೊಗುತ್ತೀದ್ದಿ ಅಂತಾ ನನ್ನ ಹತ್ತೀರ ಅವರ ಹೊಲದಿಂದ ಓಡಿ ಬರುವಾಗ ನಾನು ಅಂಜಿ ಓಡಿ ಊರಿಗೆ ಬರುವಾಗ ನಮ್ಮಊರ ಹತ್ತೀರು ಇರುವ ಗುತ್ತೇದಾರ ಶಾಲೆ ಹತ್ತೀರ ರಸ್ತೆ ಮೇಲೆ ಬರುತ್ತಿರುವಾಗ ರಸ್ತೆಯ ಮೇಲೆ ಇವರಿಬ್ಬರು ಬಂದು  ನನಗೆ ತಡೆದು ನಿಲ್ಲಿಸಿ ಭೋಸಡಿ ಮಗನೆ ನೀನನಗೆ ನಮ್ಮ ಹೋಲದ ಪಕ್ಕದಿಂದ ಹೊಗಬೇಡ ಅಂತಾ ತಾಕೀತು ಮಾಡಿದರು ಮತ್ತೇ ಹೊಗುತ್ತೇನು ಭೋಸಡಿ ಮಗನೇ ಅಂತಾ ಗುರುಪ್ಪ ಕಂಬಾರ ಇತನು ಒಂದು ಹಿಡಿ ಗಾತ್ರದ ಕಲ್ಲಿನೀಂದ ಬಲ ಕಣ್ಣಿನ ಕೇಳಗೆ ಹೊಡೆದು ರಕ್ತಗಾಯ ಮಾಡಿದನು ಆಗ ಮುತ್ತಣ್ಣ ಕಂಬಾರ ಇತನು ಒಂದು ಬಡಿಗೆಯಿಂದ ಎಡ ಕಾಲಿನ ಮೋಲಕಾಲಿನ ಕೇಳಗೆ ಬೆನ್ನಿನ ಮೇಲೆ ಮತ್ತು ಮೂಗಿನ ಮೇಲೆ ಹೊಡೆದು ರಕ್ತಗಾಯ ಹಗು ಗುಪ್ತಗಾಯ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ನಾಗೇಂದ್ರಪ್ಪ ತಂದೆ ಮಲ್ಕಪ್ಪ ಗೋಬ್ಬುರ ಸಾ|| ತಾಜ ಸುಲ್ತಾನಪುರ ಹೊಸ ಬಡಾವಣೆ , ಮಲಿಕ್ ಸಾಬ ದರ್ಗಾ ಸುಲ್ತಾನಪುರ ರಸ್ತೆ ಗುಲಬರ್ಗಾ ಇವರು ನ್ಯಾಯಾಲಯದಲ್ಲಿ ನೀಡಿದ ದೂರಿನ ಸಾರಾಂಶವೆನೆಂದರೆ, ಫಿರ್ಯಾದಿದಾರರು ತಾಜ ಸುಲ್ತಾನಪುರ ಸೀಮಾಂತರದ ಸರ್ವೆ ನಂ: 129/5 ರಲ್ಲಿಯ ಕಬ್ಜೆದಾರರಿದ್ದು, ಸದರಿ ಜಮೀನು ಎರಡು ಎಕ್ಕರೆ 15 ಗುಂಟೆ ಜಮೀನು ಇದ್ದು ಅದರಲ್ಲಿ ಕೆ.ಎಸ್.ಆರ್.ಪಿ ಬಟಾಲಿಯನ್ ರವರು 32 ಗುಂಟೆ ಜಮೀನು ವಶಪಡಿಸಿಕೊಂಡು ಉಳಿದ 1 ಎಕ್ಕರೆ 20 ಗುಂಟೆ ಜಮೀನು ಇದ್ದು, ನನ್ನ ತಂದೆ ತೀರಿ ಕೊಂಡ ನಂತರ ಸದರಿ ಜಮೀನು ನನ್ನ ಹೆಸರಿಗಿದ್ದು, ಸದರಿ ಜಮೀನಿನ ಸುತ್ತಲೂ ಸಿಮೆಂಟ್ ಕಂಬಗಳನ್ನು ಕಾಂಕ್ರೀಟ್ ಹಾಕಿಸಿ ಮುಳ್ಳು ತಂತಿ ಬಿಗಿಸಿದ್ದೆ ದಿನಾಂಕ: 06/08/2014 ರಂದು ಬೆಳಿಗ್ಗೆ ನನ್ನ ಜಮೀನಿಗೆ ಹೋಗಿ ನೋಡಲಾಗಿ , ಶಿವಪುತ್ರಪ್ಪ ತಂದೆ ರೇವಣಸಿದ್ದಪ್ಪ ಗುಂಡೆ, ಪ್ರಕಾಶ ತಂದೆ ಹಣಮಂತ, ರಾಜು ತಂದೆ ಹಣಮಂತ, ದೇವೇಂದ್ರಪ್ಪ ತಂದೆ ಹಣಮಂತ ಇವರು ದಿನಾಂಕ: 05/08/2014 ರಂದು ನಮ್ಮ ಭೂಮಿಗೆ ಹಾಕಿದ ಮುಳ್ಳು ತಂತಿ ಸಿಮೆಂಟ್ ಕಂಬ ಜೆಸಿಪಿಯಿಂದ ಧ್ವಂಶ ಮಾಡಿದ್ದು, ಅಮೀತ ಕುಮಾರ ತಂದೆ ಪುಂಡಲಿಕ್, ಮತ್ತು ಸೋಮಲಿಂಗ್ ತಂದೆ ನಾಗಪ್ಪ ಇವರು ಪ್ರತ್ಯಕ್ಷ ಸಾಕ್ಷಿದಾರರಾಗಿರುತ್ತಾರೆ. ಸದರಿ ಆರೋಪಿತರು ನಾನು ಬಿಗಿಸಿದ 2 ಕ್ವೀಂಟಾಲ್ ಮುಳ್ಳು ತಂತಿ ಹಾಗೂ 50 ಸಿಮೇಂಟ್ ಕಂಬಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಅವುಗಳ ಅಂದಾಜು ಕಿಮ್ಮತ್ತು 1,50,000 ರೂ ದಿಂದ 2,00,000 ರೂಪಾಯಿಯ ವರೆಗೆ ಖರ್ಚು ಮಾಡಲಾಗಿದ್ದು, ಹಾಗೂ 20,000 ಸಾವಿರ ರೂಪಾಯಿ ಲೇಬರ್ ಚಾರ್ಜ ಆಗಿದ್ದು, ಸದರಿಯವರು ಮುಳ್ಳು ತಂತಿ ಮತ್ತು ಕಂಬಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರಿಂದ ಮಾನ್ಯ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದರ ಸಾರಾಂಸದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.