POLICE BHAVAN KALABURAGI

POLICE BHAVAN KALABURAGI

25 December 2016

Kalaburagi District Reported Crimes

ಅಪಘಾತ ಪ್ರಕರಣ :
ಆಳಂದ ಠಾಣೆ : ಶ್ರೀ ಅಣ್ಣರಾವ ತಂದೆ ಭೀಮಶ್ಯಾ ಪೊಲೀಸ್ ಪಾಟಿಲ್‌ ಸಾ: ಬಂಗರಗಾ ತಾ: ಆಳಂದ ಜಿ: ಕಲಬುರಗಿರವರ ಮಗ  ಭೀಮಾ @ ಭೀಮಶ್ಯಾ ತಂದೆ ಅಣ್ಣರಾವ 5 ದಿವಸ ಶಾಲೆಗಳು ರಜೆ ಇರುವದರಿಂದ ಮದ್ಯಾಹ್ನ ನನ್ನೊಂದಿಗೆ ಪೋನಿನಲ್ಲಿ ಮಾತಾಡಿ ಊರಿಗೆ ಬರುತ್ತೇನೆ ಎಂದು ಹೇಳಿ ಊರಿಗೆ ಹೊರಟಿದ್ದು ದಿನಾಂಕ: 24/12/2016 ರಂದು ಸಾಯಂಕಾಲ 06-30 ಗಂಟೆಗೆ ನಮ್ಮ ಸಂಬಂದಿಯಾದ ಬಸವರಾಜ ತಂದೆ ಗುಂಡಪ್ಪ ನಗದೆ ಸಾ: ಕೊಡಲ ಹಂಗರಗಾ ಇವರು ಪೋನ್‌ ಮಾಡಿ ವಿಷಯ ತಿಳಿಸಿದೆನೆಂದರೆ ಸಾಯಂಕಾಲ 05-45 ಗಂಟೆಯ ಸುಮಾರಿಗೆ ನಿಮ್ಮ ಮಗ ಭೀಮಾ @ ಭೀಮಶ್ಯಾ ಈತನು ಆಳಂದ ಪಟ್ಟಣದಲ್ಲಿ ರೇವಣಸಿದ್ದೇಶ್ವರ ಕ್ರಾಸ್‌ ಹತ್ತಿರ ರಜವಿ ರೋಡಿನ ಮೇಲೆ ಬಸ್‌ ನಿಲ್ದಾಣದ ಕಡೆಗೆ ಬರಲು ರೋಹನ್‌ ಮೆಡಿಕಲ್‌ ಎದುರಿಗೆ ನಡೆದುಕೊಂಡು ಬರುವಾಗ ಅವನ ಹಿಂದಿನಿಂದ ಅಂದರೆ ಉಮರ್ಗಾ ಕಡೆಯಿಂದ ಒಬ್ಬ ಲಾರಿ ನಂ: MH-16 AY-3639 ನೇದ್ದರ ಚಾಲಕನು ತನ್ನ ವಶದಲ್ಲಿದ್ದ ಲಾರಿಯನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಓಡಿಸುತ್ತಾ ಬಂದು ಡಿಕ್ಕಿ ಪಡಿಸಿದ್ದರಿಂದ ಅವನು ಕೆಳಗಡೆ ಬಿದ್ದಾಗ ಅವನ ತಲೆ ಮೇಲೆ ಲಾರಿ ಹಾದು ಭಾರಿ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಮುಖ ಎಲ್ಲಾ ಜೆಜ್ಜಿದಂತೆ ಆಗಿರುತ್ತದೆ. ಸದ್ಯ ಶವ ಆಸ್ಪತ್ರೆಗೆ ತೆಗೆದುಕೊಂಡು ಹೋಗಿರುತ್ತಾರೆ. ನಿಮ್ಮ ಮಗನಿಗೆ ಡಿಕ್ಕಿ ಪಡಿಸಿದ ಚಾಲಕನ ಹೆಸರು ವಿಚಾರಿಸಲು ತನ್ನ ಹೆಸರು ಬಾಳಾಸಾಬ ತಂದೆ ಕುಂಡಲಿಕ್ ವೀರ  ಸಾ: ಆನಪಟವಾಡಿ ತಾ: ಪಾಟೋದಾ ಜಿ: ಬೀಡ ಎಂದು ಗೊತ್ತಾಗಿರುತ್ತದೆ. ಸದರ ಘಟನೆಯನ್ನು ರೋಡಿನ ಮೇಲೆ ಹೋಗುವ ಜನರು ಮತ್ತು ಅಕ್ಕ ಪಕ್ಕದವರು ನೋಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶೆಡ್ಡಿಗೆ ಬೆಂಕಿ ಹಚ್ಚಿದ ಪ್ರಕರಣ :
ಫರತಾಬಾದ ಠಾಣೆ : ದಿನಾಂಕ 23/12/16 ರಂದು ಮದ್ಯಾಹ್ನ 2:30 ಗಂಟೆಯ ಸುಮಾರಿಗೆ ಶ್ರೀ ಶಿವರಾಯ  ತಂದೆ ಹಣಮಂತ ರಾಯ ಮಾಲಿ ಪಾಟೀಲ ಸಾ: ಸೀತನೂರ  ತಾ: ಕಲಬುರಗಿ ರವರಿಗೆ ಸಂಬಂದ ಪಟ್ಟ ಗ್ರಾಮದ ಮುಂದೆ ಇರುವ ಹೊಲದಲ್ಲಿರುವ ಪತ್ರಾಸ ಶೆಡ್ಡಿಗೆ ಶರಣಪ್ಪ ತಂದೆ ಬಸಣ್ಣ ಇನ್ನೂ 7 ಜನರು ಸಾ: ಎಲ್ಲರೂ ಸೀತನೂರ ಗ್ರಾನ ರವರು ಬೆಂಕಿ ಹಚ್ಚಿ ಅದರಲ್ಲಿದ್ದ ಒಕ್ಕಲುತನಕ್ಕೆ ಸಂಬಂದಿಸಿದ್ದ ವಸ್ತುಗಳು ಹಾಗೂ ಫರಸಿ, ಫತ್ರಾಸ ಇತರೆ ಸಾಮಾನುಗಳು ಹೀಗೆ ಒಟ್ಟು 70,000/- ರೂಪಾಯಿಗಳು ಕಿಮ್ಮತ್ತಿನ ವುಗಳನ್ನು ಸುಟ್ಟಿರುತ್ತಾರೆ ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.