POLICE BHAVAN KALABURAGI

POLICE BHAVAN KALABURAGI

13 January 2019

KALABURAGI DISTRICT REPORTED CRIMES

ಅಧಿಕಾರ ದುರುಪಯೊಗಪಡಿಸಿಕೊಂಡು ಸರಕಾರಕ್ಕೆ ಮೊಸ ಮಾಡಿದ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ನಾಗೇಂದ್ರಪ್ಪ ತಂದೆ ಬಸಣ್ಣ ಕೂಡಿ ಉ; ಕಾರ್ಯದರ್ಶಿ ಗ್ರೇಡ 1, ಪ್ರಭಾರ ಪಿ.ಡಿ.ಓ ಕರಕಿಹಳ್ಳಿ ಗ್ರಾಮ ಪಂಚಾಯತ ರವರು ದಿನಾಂಕ 01-10-2018 ರಿಂದ ಕರಕಿಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಪ್ರಭಾರಿ ಪಿ.ಡಿ.ಓ ಅಂತಾ ಕರ್ತವ್ಯನಿರ್ವಹಿಸುತ್ತಿರುತ್ತೇನೆ, ಈ ಪಂಚಾಯತಿಯಲ್ಲಿ ವೈಜನಾಥ ತಂದೆ ದುಂಡಪ್ಪ ಮೊರಟಗಿ ಸಾ|| ಹರನಾಳ(ಬಿ) ಎಂಬುವರು ಕಂಪ್ಯೂಟರ ಆಪರೇಟರ್ ಅಂತಾ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ, ಈ ಮೊದಲು ಇದ್ದ ಪಿ.ಡಿ.ಓ ರವರು ತಮ್ಮ ಹೆಚ್ಚಿನ ಕರ್ತವ್ಯದ ಒತ್ತಡದಿಂದ ಪ್ರಧಾನ ಮಂತ್ರಿ ಅವಾಸ ಯೋಜನೆ, ಬಸವ ವಸತಿ ಯೋಜನೆ, ಡಾ|| ಬಿ.ಆರ್ ಅಂಬೇಡ್ಕರ್ ಯೋಜನೆ ಅಡಿಯಲ್ಲಿ ಮನೆಗಳ ಜಿ.ಪಿ.ಎಸ್ ಮಾಡಲು ಕಂಪ್ಯೂಟರ ಆಪರೇಟರಾದ ವೈಜನಾಥ ರವರಿಗೆ ಆದೇಶಿಸಿದ್ದು ಇರುತ್ತದೆ. ಅದರಂತೆ ವೈಜನಾಥ ರವರು 2016-17 ನೇ ಸಾಲಿನಲ್ಲಿ ಪ್ರಧಾನ ಮಂತ್ರಿ ಅವಾಸ ಯೋಜನೆ ಅಡಿಯಲ್ಲಿ ಯಾವುದೇ ಗ್ರಾಮ ಸಭೆ ಮಾಡದೆ ಮತ್ತು ಯಾವುದೇ ದಾಖಲಾತಿಗಳನ್ನು ತಯ್ಯಾರಿಸದೇ ಈ ಕೆಳಕಂಡ ಫಲಾನುಭವಗಳ ಹೆಸರಿಗೆ ಮನೆಗಳು ಮಂಜುರು ಮಾಡಿದಂತೆ ಮಾಡಿ ಅವರ ಹೆಸರಿನಿಂದ ಹಣ ತನ್ನ ಸ್ವಂತಕ್ಕೆ ದುರುಪಯೋಗಿ ಪಡಿಸಿಕೊಂಡಿರುತ್ತಾನೆ, ಹೀಗೆ ಒಟು 09 ಮನೆಗಳನ್ನು ಯಾರ ಗಮನಕ್ಕು ತರದೇ ಯಾವುದೋ ಖೋಟ್ಟಿ ಜಿಪಿಎಸ್ ಮಾಡಿ ಒಟ್ಟು 7,48,800/- ರೂ ಗಳನ್ನು ತನ್ನ ಸ್ವಂತಕ್ಕೆ ದುರುಪಯೋಗಿ ಪಡಿಸಿಕೊಂಡಿರುತ್ತಾನೆ, ಅದರಂತೆ 2016-17 ನೇ ಸಾಲಿನಲ್ಲಿ ಪ್ರಧಾನ ಮಂತ್ರಿ ಅವಾಸ ಯೋಜನೆ ಅಡಿಯಲ್ಲಿ ಇನ್ನು ಕೆಲವು ಮಂಜುರಾದ ಮನೆಗಳ ಪೈಕಿ 03 ಮನೆಗಳು ಒಂದೆ ಕುಟುಂಬದವರಿಗೆ ಮಂಜುರು ಮಾಡಿರುತ್ತಾರೆ, ಮತ್ತು ಒಂದು ಮನೆಯನ್ನು ತಮ್ಮ ತಾಯಿ ರಾಯಮ್ಮ ಗಂಡ ದುಂಡಪ್ಪ ಮೋರಟಗಿ ರವರ ಹೆಸರಿಗೆ ಮತ್ತು ಇನ್ನೊಂದು ಮನೆಯನ್ನು ತನ್ನ ತಂಗಿ ಮಹಾಲಕ್ಷ್ಮೀ ತಂದೆ ದುಂಡಪ್ಪ ಮೋರಟಗಿ ಇವರ ಹೆಸರಿಗೆ ಹಾಕಿದ್ದು ಇರುತ್ತದೆ, ಈ ಮೊದಲು ಮಹಾಲಕ್ಷ್ಮೀ ರವರಿಗೆ ಸಿಂದಗಿ ತಾಲೂಕಿನ ಬಳಗಾನೂರ ಗ್ರಾಮದ ಅಮೋಘ ಎಂಬುವರೊಂದಿಗೆ ಮದುವೆ ಮಾಡಿಕೊಟ್ಟಿದ್ದು, ಅವರ ಗಂಡ ಕೆ.ಎಸ್.ಅರ್.ಟಿ.ಸಿ ಯಲ್ಲಿ ನಿರ್ವಾಹಕನಾಗಿರುತ್ತಾರೆ, ಕಮಲಾಕ್ಷಿ ಗಂಡ ಭೀಮರಾಯ ಇವರು ಗಾಣಿಗ ಸಮಾಜಕ್ಕೆ ಸೇರಿದವರಿದ್ದು, ಅವರಿಗೆ ಪರಿಶೀಷ್ಟ್ ಜಾತಿ ಅಂತಾ ನಮೂದಿಸಿ ಅವರಿಗೆ ಒಂದು ಮನೆ ಮಂಜುರು ಮಾಡಿರುತ್ತಾರೆ ಅದರಂತೆ ಮೇಲ್ಕಂಡವರ ಹೆಸರಗಳು ಈ ಕೆಳಗಿನಂತರ ಇರುತ್ತವೆ. 06 ಜನರಿಗೆ ಮಂಜುರಾದ ಮನೆಗಳನ್ನು ಕಟ್ಟಡ ಮಾಡದೇ ವೈಜನಾಥ ಈತನು ಸುಳ್ಳು ಜಿಪಿಎಸ್ ಮಾಡಿ ಸುಮಾರು 11,54,997/- ಹಣವನ್ನು ತನ್ನ ಸ್ವಂತಕ್ಕೆ ದುರೂಪಯೋಗ ಪಡಿಸಿಕೊಂಡಿರುತ್ತಾನೆ, ವೈಜನಾಥ ಈತನು ನಮ್ಮ ಗ್ರಾಮ ಪಂಚಾಯತಿಯಲ್ಲಿ ಕಂಪ್ಯೂಟರ ಆಪರೇಟರ ಇದ್ದು, ದಿನಾಂಕ 19-05-2016 ರಿಂದ 25-05-2016 ರವರೆಗೆ ಗ್ರಾಮ ಪಂಚಾಯತ ಹಾಜರಿ ಪುಸ್ತಕದಲ್ಲಿ ಸಹಿ ಮಾಡಿ ಕಂಪ್ಯೂಟರ ಕೆಲಸ ಮಾಡಿರುತ್ತಾರೆ, ಆದರೆ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ದಿನಾಂಕ 19-05-2016 ರಿಂದ 25-05-2016 ರವರೆಗೆ ಒಟ್ಟು 6 ದಿನ ತಾನು ಕೂಲಿ ಕಾರ್ಮಿಕನಾಗಿ ಕೆಲಸ ಮಾಡಿರುವುದಾಗಿ ನಮೂದಿಸಿಕೊಂಡು ಒಟ್ಟು 1,344/- ರೂ ಹಣವನ್ನು ತನ್ನ ಸ್ವಂತಕ್ಕೆ ದುರೂಪಯೋಗ ಪಡಿಸಿಕೋಂಡಿರುತ್ತಾನೆ, ಈ ರೀತಿಯಾಗಿ ವೈಜನಾಥ ರವರು ಕಂಪ್ಯೂಟರನಲ್ಲಿ ಖೊಟ್ಟಿ ದಾಖಲಾತಿಗಳನ್ನು ಸೃಷ್ಠಿಸಿ ಸರಕಾರಕ್ಕೆ ನಂಬಿಕೆ ದ್ರೋಹ ಮಾಡಿ ಒಟ್ಟು 19,05,141/- ರೂ ಗಳನ್ನು ತನ್ನ ಸ್ವಂತಕ್ಕೆ ದುರೂಪಯೋಗ ಪಡಿಸಿಕೊಂಡು ವಂಚನೆ ಮಾಡಿರುತ್ತಾರೆ, ಈ ಬಗ್ಗೆ ನಮ್ಮ ಮೇಲಾಧಿಕಾರಿಗಳ ಆದೇಶದಂತೆ, ಮತ್ತು ಅವರ ಸೂಚನೆಯ ಮೇರೆಗೆ ದೂರು ಸಲ್ಲಿಸಲು ತಡವಾಗಿರುತ್ತದೆ, ಆದ್ದರಿಂದ ವೈಜನಾಥನ ವಿರುದ್ದ ಕಾನೂನ ರೀತಿ ಕ್ರಮ ಕೈಗೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ಶರಣಪ್ಪ ತಂದೆ ಮಲ್ಲಪ್ಪ ಹರಿಜನ ಸಾ|| ಹಂಗರಗಾ(ಬಿ) ತಾ|| ಜೇವರ್ಗಿ ಜಿಲ್ಲಾ|| ಕಲಬುರಗಿ ರವರು ತಮ್ಮದೊಂದು ಹೊರಿ ಕರವನ್ನು ತಮ್ಮ ಸಂಸಾರದ ಅಡಚಣೆ ಸಲುವಾಗಿ ಯಾಳಗಿ ಗ್ರಾಮದ ಮಹಿಬೂಬ ತಂದೆ ಖಾಸಿಮಸಾಬ ಚೌಧರಿ ಎಂಬುವರಿಗೆ ಮಾರಾಟ ಮಾಡಿದ್ದು ಇರುತ್ತದೆ, ಅದರಂತೆ ನಮ್ಮ  ಅಣ್ಣತಮ್ಮಕಿಯ ಚಂದ್ರಶಾ ತಂದೆ ಯಲ್ಲಪ್ಪ ಹರಿಜನ ರವರದೊಂದು ಹೊರಿ ಇದ್ದು, ಅದನ್ನು ಸಹ ತನ್ನ ಸಂಸಾರದ ಅಡಚಣೆ ಸಲುವಾಗಿ ಮೇಲ್ಕಂಡ ಚೌಧರಿಗೆ ಮಾರಾಟ ಮಾಡಿರುತ್ತಾರೆ, ಅದರಂತೆ ನಮ್ಮೂರಿನ ಕೆಲವುರು ಸಹ ತಮ್ಮ ದನಗಳನ್ನು ಮಾರಾಟ ಮಾಡಿರುತ್ತಾರೆ, ದಿನಾಂಕ 12-01-2019 ರಂದು ಯಾಳಗಿ ಗ್ರಾಮದ 1] ಮಹಿಬೂಬ ತಂದೆ ಖಾಸಿಮಸಾಬ ಚೌಧರಿ, ಮತ್ತು ಅವರ ಅಣ್ಣ 2] ಚಾಮದಸಾಬ ತಂದೆ ಖಾಸಿಮಸಾಬ ಚೌಧರಿ ರವರಿಬ್ಬರೂ ಕೂಡಿಕೊಂಡು ಒಂದು ಗೂಡ್ಸ್ ವಾಹನ ತೆಗೆದುಕೊಂಡು ನಮ್ಮೂರಿಗೆ ಬಂದು ನಮ್ಮ ಮತ್ತು ಇತರರ ಒಟ್ಟು 05 ಹೋರಿ ಕರಗಳನ್ನು ತನ್ನ ವಾಹನದಲ್ಲಿ ತುಂಬಿಕೊಂಡು ಹೋಗಿರುತ್ತಾನೆ, ನಂತರ ಬೆಳಿಗ್ಗೆ 10;00 ಗಂಟೆ ಸುಮಾರಿಗೆ ಮಹಿಬೂಬ ಚೌಧರಿ ಈತನು ನಮಗೆ ಫೋನ ಮಾಡಿ ನಿಮ್ಮೂರಿನ ಕೆಲವರು ಬಂದು ನಮ್ಮ ವಾಹನವನ್ನು ನಿಲ್ಲಿಸಿದ್ದಾರೆ ಅಂತಾ ಹೇಳಿದ್ದರಿಂದ ನಾನು ಮತ್ತು ನಮ್ಮ ತಮ್ಮನ ಮಗ ಸುಧೀರ ತಂದೆ ಚಂದ್ರಶಾ ಹರಿಜನ, ಪರಶುರಾಮ ತಂದೆ ಭಾಗಪ್ಪ ಹರಿಜನ, ಶ್ರೀಮಂತ ತಂದೆ ಸಿದ್ದಪ್ಪ ಹರಿಜನ ರವರ ಕೂಡಿಕೊಂಡು ಟಂಟಂ ತೆಗೆದುಕೊಂಡು ಯಲಗೋಡ ಸೀಮೆಯ ಜೆ.ಬಿ.ಸಿ 32 ನಂ ಕೇನಾಲ ಬ್ರಿಡ್ಜ್ ಹತ್ತಿರ ಹೋಗಿ ನೋಡಿದಾಗ ಅಲ್ಲಿ ನಮ್ಮೂರ 1] ಸಿದ್ರಾಮಪ್ಪ ತಂದೆ ಮಲ್ಲಪ್ಪ ನಾಯ್ಕೋಡಿ, 2] ಬಸಪ್ಪಗೌಡ ತಂದೆ ಸಿದ್ರಾಮಪ್ಪಗೌಡ ಜವಳಗಿ ರವರು ಕೂಡಿ ದನಗಳ ವಾಹನವನ್ನು ನಿಲ್ಲಿಸಿದ್ದರು, ನಂತರ ನಾವು ಅವರ ಹತ್ತಿರ ಹೋಗಿ ಯಾಕ ವಾಹನ ನಿಲ್ಲಿಸಿದ್ದಿರಿ, ನಾವು ನಮ್ಮ ಸಂಸಾರದ ಅಡಚಣೆ ಸಲುವಾಗಿ ಮಾರಾಟ ಮಾಡಿರುತ್ತೇವೆ, ಬೇಕಾದರೇ, ನೀವೆ ದನಗಳನ್ನು ತೆಗೆದುಕೊಂಡು ನಮಗೆ ಹಣ ಕೊಡರಿ ಅಂತಾ ಹೇಳಿದೇನು, ಆಗ ಸಿದ್ರಾಮಪ್ಪ ಈತನು ನಮಗೆ ಏ ಹೊಲೆ ಸುಳಿಮಕ್ಕಳ್ಯಾ ನೀವು ಇಲ್ಲಿಗಿ ಯಾಕ ಬಂದಿರಿ,  ನಿಮ್ಮಿಂದೆ ಇದು ಬೆಂಕಿ ಹತ್ತಿದ್ದು ಅಂತಾ ಕಾಲಿನಿಂದ ನನ್ನ  ಹೊಟ್ಟೆಗೆ ಒದ್ದನು, ಆಗ ನಾನು ನೆಲದ ಮೇಲೆ ಬಿದ್ದಾಗ ಬಸಪ್ಪಗೌಡ ಇವನು ಕಾಲಿನಿಂದ ನನ್ನ ಬೆನ್ನಿನ ಮೇಲೆ ಒದ್ದನು, ಅಷ್ಟರಲ್ಲಿ ನಮ್ಮೊಂದಿಗೆ ಇದ್ದವರು ಬಿಡಿಸಿಕೊಂಡಿರುತ್ತಾರೆ, ಇನ್ನೊಮ್ಮೆ ನಿವು, ಚೌದ್ರಿಗಳಿಗೆ ದನ ಮಾರಿದರೆ ನಿಮಗ ಜೀವ ಸಹಿತ ಬಿಡುವುದಿಲ್ಲಾ ಅಂತಾ ಅಂದು ಅಲ್ಲಿಂದ ಹೋಗಿರುತ್ತಾರೆ,  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ಪಾರ್ವತಿ ಗಂಡ ಶ್ರೀಕಾಂತ ಚವ್ಹಾಣ ಸಾ|| ಯಡ್ರಾಮಿ ತಾಂಡಾ ರವರಿಗೆ ಸಿಂದಗಿ ತಾಲೂಕಿನ ಮೋಸಳಗಿ ತಾಂಡಾದ ಶ್ರೀಕಾಂತ ತಂದೆ ಸಾಜು ಚವ್ಹಾಣ ರವರೊಂದಿಗೆ ಮದುವೆ ಮಾಡಿಕೊಟ್ಟಿದ್ದು ಇರುತ್ತದೆ, ಸದ್ಯ ನನಗೆ ಇಬ್ಬರು ಗಂಡು ಮಕ್ಕಳಿರುತ್ತಾರೆ, ನನ್ನ ಗಂಡ ಈಗ 1 ವರ್ಷದ ಹಿಂದೆ ಬೇರೆ ಮದುವೆ ಮಾಡಿಕೊಂಡಿದ್ದರಿಂದ ನಾನು ಯಡ್ರಾಮಿ ತಾಂಡಾದಲ್ಲಿ ನಮ್ಮ ತಂದೆ ತಾಯಿಯೊಂದಿಗೆ ನನ್ನ ಮಕ್ಕಳ ಸಮೇತ ವಾಸವವಾಗಿರುತ್ತೇನೆ, ಈ ಮೊದಲು ನಮ್ಮೂರಿನ  ಹಿರಿಯರಾದ, ಚಂದ್ರಶೇಖರ ಪುರಾಣಿಕ, ರಜಾಕ ಮನಿಯಾರ ರವರ ಸಮಕ್ಷಮದಲ್ಲಿ ನನ್ನ ಉಪಜೀವನ ಸಲುವಾಗಿ ನನ್ನ ಗಂಡನಿಂದ 3 ಲಕ್ಷ ರೂಪಾಯಿ ಕೊಡಿಸುವುದಾಗಿ ಮಾತನಾಡಿದ್ದು ಇರುತ್ತದೆ, ಆದರೆ ನನ್ನ ಗಂಡನಿಗೆ ಆ ಹಣವನ್ನು ಕೇಳಿದರೇ ನನಗೆ ಇಲ್ಲಿಯವರೆಗೆ ಕೊಟ್ಟಿರುವುದಿಲ್ಲಾ, ದಿನಾಂಕ 10-01-2019 ರಂದು 7;30 ಪಿ.ಎಂ ಸುಮಾರಿಗೆ ನಮ್ಮ ಮನೆಯ ಮುಂದೆ ನಾನು ಮತ್ತು ನಮ್ಮ ತಂದೆ ಮೋತು, ನಮ್ಮ ತಾಯಿ ಬನಕಿಬಾಯಿ ರವರು ಕೂಡಿಕೊಂಡು ಲೈಟಿನ ಬೆಳಕಿನಲ್ಲಿ ಮಾತಾಡುತ್ತಾ ಕುಳಿತಾಗ ನನ್ನ ಗಂಡ ಮೋಟರ ಸೈಕಲ ಮೇಲೆ ನಮ್ಮ ಹತ್ತಿರ ಬಂದು ನನಗೆ ಏ ರಂಡಿ ಈ ಮೊದಲು ನನ್ನ ಮೇಲೆ ಕೇಸು ಮಾಡಿಸಿದ್ದಲ್ಲದೆ ಈಗ ನನಗೆ ಹಣ ಕೇಳತಿಯಾ, ನಾನು ಹಣ ಕೊಡುವುದಿಲ್ಲಾ, ಇವತ್ತ ನಿನಗ ಖಲಾಸೇ ಮಾಡುತ್ತೇನೆ ಅಂತಾ ಅಂದು ನನಗೆ ಕೈ ಹಿಡಿದು ಎಳೆದಾಡಿ ಕೈಯಿಂದ ನನ್ನ ಬೆನ್ನಿನ ಮೇಲೆ ಹೊಡೆ ಬಡೆ ಮಾಡುತ್ತಿದ್ದಾಗ ನಮ್ಮ ತಂದೆಯವರು ಬಿಡಿಸಲು ಬಂದರು, ಆಗ ನನ್ನ ಗಂಡ, ನಮ್ಮ ತಂದೆಗೆ ಇದಕ್ಕೆಲ್ಲಾ ನೀನೆ ಕಾರಣ ಇದಿ ರಂಡಿ ಮಗನೆ, ಇವತ್ತ ನಿನಗ ಸಾಯಿಸೆಬಿಡತಿನಿ ಅಂತಾ ಅಂದು ನಮ್ಮ ತಂದೆಗೆ ನೆಲಕ್ಕೆ ಕೆಡವಿ ಕುತ್ತಿಗೆ ಹಿಡಿದು ಕೊಲೆ ಮಾಡುವ ಉದ್ದೇಶದಿಂದ ಅವರ ತೊರಡುಹಿಸುಕಲು ಮುಂದಾದಾಗ ನಮ್ಮ ಅಣ್ಣ ವಿಲ್ಲಾಸ, ಹಾಗು ನಮ್ಮ ತಾಂಡಾದ ವಿನೋದ ತಂದೆ ವಿಠ್ಠಲ ರಾಠೋಡ, ಆನಂದ ತಂದೆ ತಿಪ್ಪು ಪವಾರ, ದಿಲೀಪ ತಂದೆ ಶಂಕ್ರು ಪವಾರ ರವರು ಬಂದು ಬಿಡಿಸಿಕೋಂಡಿರುತ್ತಾರೆ, ಇಲ್ಲದಿದ್ದರೆ ನಮ್ಮ ತಂದೆಗೆ ಸಾಯಿಸಿ ಬಿಡುತ್ತಿದ್ದ, ಆಗ ಅಲ್ಲಿ ಹೆಚ್ಚಿನ ಜನರು ಸೇರುತ್ತಿದ್ದರಿಂದ ನನ್ನ ಗಂಡ ಅಂಜಿ ತನ್ನ ಮೋಟರ ಸೈಕಲ ನಂ ಕೆ.-28/.ಕ್ಯೂ-1377 ನೇದ್ದನ್ನು ಸ್ಥಳದಲ್ಲೆ ಬಿಟ್ಟು ಓಡಿ ಹೋಗಿರುತ್ತಾನೆ, ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.