POLICE BHAVAN KALABURAGI

POLICE BHAVAN KALABURAGI

01 November 2012

GULBARGA DISTRICT REPORTED CRIMES


ಹಲ್ಲೆ ಪ್ರಕರಣ:
ವಾಡಿ ಪೊಲೀಸ್ ಠಾಣೆ:ಶ್ರೀ, ಅಯ್ಯಪ್ಪಾ ತಂದೆ ನಿಂಗಪ್ಪಾ ರಾಜೊಳ ಸಾ|| ಜಾಂಬವೀರ ಕಾಲೋನಿ ವಾಡಿ ರವರು ನನಗೆ 2 ಗಂಡು,4 ಜನ ಹೆಣ್ಣು ಮಕ್ಕಳಿದ್ದು ಮರೆಮ್ಮಳ ಇವಳಿಗೆ ಸಾಬಣ್ಣಾ ಜೊತೆಗೆ ಮದುವೆ ಮಾಡಿದ್ದು,ಅಳಿಯ ಮಗಳು ಎಲ್ಲರೂ ಒಟ್ಟಿಗೆ ಇರುತ್ತೆವೆ. ದಿನಾಂಕ:31-10-2012 ರಂದು ರಾತ್ರಿ 9-00 ಗಂಟೆಯ ಸುಮಾರಿಗೆ ಸಾಬಣ್ಣ ಇತನು ಜಾಂಬವಿರ ಕಾಲೋನಿಯ ಕಮೀಟಿ ಹಾಲ್ ಮುಂದೆ ಬರುತ್ತಿರುವಾಗ ನಮ್ಮ ಓಣಿಯ ರಾಜು ಮತ್ತು ಮಲ್ಲು ಇವರು ಅವಾಚ್ಯವಾಗಿ ನಿಂದನೆ ಮಾಡಿರುತ್ತಾರೆ.  ರಾತ್ರಿಯಾಗಿದ್ದರಿಂದ ಮುಂಜಾನೆ ವಿಚಾರಣೆ ಮಾಡೊಣ ಅಂತಾ ಊಟಮಾಡಿ ಮಲಗಿಕೊಂಡೆವು. ದಿನಾಂಕ:01-11-2012 ರಂದು ಮುಂಜಾನೆ 7-00 ಗಂಟೆಯ ಸುಮಾರಿಗೆ ನಾನು ನನ್ನ ಹೆಂಡತಿ ಸರೂಬಾಯಿ, ಮಗ ಮಲ್ಲಿಕಾರ್ಜುನ ಮತ್ತು ಮಗಳು ಮರೆಮ್ಮಾ 4 ಜನರು ಕೂಡಿ ಲಕ್ಷ್ಮಣ ಇತನ ಮನೆಯ ಮುಂದೆ ಹೋಗಿ ಲಕ್ಷ್ಮಣನಿಗೆ ಕರೆದೆ. ಆಗ ಲಕ್ಷ್ಮಣ ಮತ್ತು ಆತನ ಹೆಂಡತಿ ಶಾಂತಮ್ಮಾ ಮಗ ರಾಜು ಮನೆಯ ಹೊರಗೆ ಬಂದರು ಅಷ್ಟರಲ್ಲಿ ಮಲ್ಲು ಕೂಡಾ ಬಂದರು ಯಾಕೆ ನಿನ್ನೆ ರಾತ್ರಿ ನನ್ನ ಅಳಿಯನಿಗೆ ಬೈದಿರಿ ಅಂತಾ ಕೇಳಿದರು ಭೊಸಡಿ ಮಕ್ಕಳೆ ನಿಮ್ಮ ಅಳಿಯನೇ ನಮ್ಮ ಅಣ್ಣ ಮಲ್ಲುನಿಗೆ ಹೊಡೆದು ಮತ್ತೆ ಮನೆತನ ಬಂದಿರಿ ಅಂತಾ ಬೈದು ರಾಜು ಇತನು ತನ್ನ ಮನೆಯಲ್ಲಿ ಹೋಗಿ ಬತಾಯಿ ನಮೂನೆಯ ಚಾಕು ತಂದವನೆ ನನ್ನ ಕುತ್ತಿಗೆಗೆ ಹೊಡೆಯಲು ಬಂದನು ಆಗ ನಾನು ತಪ್ಪಿಸಿಕೊಳ್ಳಲು ಆ ಏಟು ನನ್ನ ಬಲಗಡೆ ಗಲ್ಲಕ್ಕೆ ಹತ್ತಿತ್ತು, ಇನ್ನೊಂದು ಏಟು ಹೊಡೆಯಲು ಬಂದನು ನಾನು ತಪ್ಪಿಸಿಕೊಳ್ಳಲು ಬಲಗೈ ಮೊಳಕೈ ಕೇಳಗೆ ಬಿತ್ತು ಆಗ ನನ್ನ ಮಗ ಮಲ್ಲಿಕಾರ್ಜುನ, ಮಗಳು ಮರೆಮ್ಮಾ ನನ್ನ ಹೆಂಡತಿ ಸರೂಬಾಯಿ ಬಿಡಿಸಲು ಬಂದರೆ ನಿಮಗು ಇವತ್ತು ಬಿಡುವುದಿಲ್ಲಾ ಅಂತಾ ಅಂದವರೆ ಅದೆ ಚಾಕುವಿನಿಂದ ರಾಜು ಇತನು ನನ್ನ ಮಗ ಮಲ್ಲಿಕಾರ್ಜುನನಿಗೆ ಕತ್ತಿಗೆಗೆ ಹೊಡೆಯಲು ಹೋದ ತಪ್ಪಿಸಿಕೊಳ್ಳಲು ಅದು ಕುತ್ತಿಗೆಗೆ ಬಿತ್ತು ಮತ್ತೊಂದು ಏಟು ಕೂಡಾ ಕುತ್ತಿಗೆಗೆ ಹೊಡೆದನು ಅದರಿಂದ ಭಾರಿ ರಕ್ತಗಾಯವಾಗಿ ರಕ್ತ ಬರ ಹತ್ತಿತು ನನ್ನ ಹೆಂಡತಿಗೆ ಲಕ್ಷ್ನಣ ಇತನು ಕೈಮುಷ್ಟಿಮಾಡಿ ಹೊಟ್ಟೆಗೆ ಗುದ್ದಿದನು ಮಗಳು ಮರೆಮ್ಮಳಿಗೆ ಮಲ್ಲು ಕಲ್ಲಿನಿಂದ ತಲೆಗೆ ಹೊಡೆದನು. ಶಾಂತಮ್ಮಾ ಕೂಡಾ ಕಲ್ಲಿನಿಂದ ತಲೆಗೆ ಹೊಡೆದನು ನನ್ನ ಮಗ ಮಲ್ಲಿಕಾರ್ಜುನ ಇತನಿಗೆ ಕುತ್ತಿಗೆಗೆ ಹೊಡೆದು ಭಾರಿ ರಕ್ತಗಾಯಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:142/2012 ಕಲಂ,504, 323, 324, 307, 506 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಮುಧೋಳ ಠಾಣೆ:ಶ್ರೀ ಲಕ್ಷ್ಮಣ ತಂದೆ ಚಂದ್ರಯ್ಯಾ ಕಲಾಲ ವ|| 16 ಜಾ|| ಕಲಾಲ ಸಾ|| ಹೂಡಾ ಗ್ರಾಮ ತಾ|| ಸೇಡಂ ರವರು ನಮ್ಮ ತಂದೆಯವರಾದ ಚಂದ್ರಯ್ಯ ಇನ್ನೂ ನಾಲ್ಕು ಜನರು ಕೂಡಿಕೊಂಡು ದಿನಾಂಕ: 01-11-2012 ರಂದು ಮುಂಜಾನೆ 7-00 ಗಂಟೆಗೆ  ಕೊಂತನಪಲ್ಲಿ ಕ್ರಾಸ್ ಹತ್ತಿರ ಸೇಡಂ ರಸ್ತೆಯ ಎಡಭಾಗಕ್ಕೆ ಹೂಡಾ ಗ್ರಾಮದ ಕಡೆಗೆ ಬರುವುದಕ್ಕಾಗಿ ನಿಂತಾಗ ಮುದೋಳ ಕಡೆಯಿಂದ ಹೋರಟಿದ್ದ ಮಹಿಂದ್ರಾ ಮ್ಯಾಕ್ಸ್ ವಾಹನ ನಂ:ಕೆಎ-32 ಎ-0135 ನೇದ್ದರ ಚಾಲಕನಾದ ಪ್ರಭುಲಿಂಗ ತಂದೆ ಮಹಾಂತಪ್ಪಾ ಇತನು ತನ್ನ ವಾಹನವನ್ನು ಅತೀವೇಗ ಹಾಗು ನಿಸ್ಕಾಳಜಿತನದಿಂದ ನಡೆಸಿಕೊಂಡು ಬಂದು ಚಂದ್ರಯ್ಯಾ ಇತನಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದು ಉಪಚಾರ ಕುರಿತು ಸೇಡಂ ಕಡೆಗೆ ಕರೆದುಕೊಂಡು ಹೋಗುವಾಗ ಮೃತ ಪಟ್ಟಿರುತ್ತಾನೆ. ಸದರಿ ಚಾಲಕನ ವಿರುದ್ದ ಕಾನೂನು ಕ್ರಮ ಜರೂಗಿಸಬೇಕು ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆ ಗುನ್ನೆ ನಂ: 141/2012 ಕಲಂ,279,304(ಎ) ಐ.ಪಿ.ಸಿ ಸಂಗಡ 187 ಐ.ಎಮ್.ವಿ ಆಕ್ಟ್ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.