POLICE BHAVAN KALABURAGI

POLICE BHAVAN KALABURAGI

06 November 2014

Kalaburagi District Reported Crimes

ಹುಡುಗ ಕಾಣೆಯಾದ ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ. ಕೃಷ್ಣ ತಂದೆ ಪಾಂಡುರಂಗ ಟಿಕೋಳೆ ವಿಳಾಸ: ಸ್ಟೇಷನ ಗಾಣಗಾಪೂರ ತಾ: ಅಫಜಲಪೂರ ಜಿ: ಕಲಬುರಗಿ ರವರ ಮಗನಾದ ಕುಶಾಲ ಇತನಿಗೆ ದಿನಾಂಕ: 28/10/2014 ರಂದು 2-3 ದಿವಸ ಕಾಲೇಜಿಗೆ ಹೋಗದೆ ಇರುವದಕ್ಕೆ ನನ್ನ ಹಿರಿಮಗ ವಿಶಾಲನು ಕಾಲೇಜಿಗೆ ಯ್ಯಾಕೆ ಹೋಗುತಿಲ್ಲ ಅಂತ ಬೈದಿದ್ದನಂತೆ ಅದಕ್ಕೆ ಕುಶಾಲನು ಸಿಟ್ಟು ಮಾಡಿಕೊಂಡು ದಿನಾಂಕ:29/10/2014 ರಂದು ಬೆಳಿಗ್ಗೆ 5:30 ಗಂಟೆ ಸುಮಾರಿಗೆ 3 ಜೋತೆ ಬಟ್ಟೆ ಬ್ಯಾಗನಲ್ಲಿ ಹಾಕಿಕೊಂಡು ಯಾರಿಗು ಹೇಳದೆ ಕೇಳದೆ ಸಾಯಿ ಮಂದಿರದ ಹತ್ತಿರ ಇರುವ ನಮ್ಮ ಅಳಿಯನ ಮನೆಯಿಂದ ಹೋಗಿರುತ್ತಾನೆ ನಾವೆಲ್ಲರು ಗುಲಬರ್ಗಾದಲ್ಲಿ ಮತ್ತು ನಮ್ಮ ಸಂಬಂಧಿಕರಿಗೆ ಫೋನ ಮಾಡಿ ವಿಚಾರಿಸಿ ಎಲ್ಲಾಕಡೆ ಹುಡುಕಾಡಿದ್ದು ಎಲ್ಲೂ ಸಿಕ್ಕಿರುವದಿಲ್ಲ ಕಾಣೆಯಾಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೃಹಿಣಿಗೆ ಕಿರುಕಳ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ರುಕ್ಸಾನ ಗಂಡ ಚಾಂದಸಾಬ ಜಮಾದಾರ ಸಾ|| ಕರಜಗಿ ರವರು ಪತಿಯಾದ ಚಾಂದ ಸಾಬ  ಹಾಗೂ ಅತ್ತೆ ಮಾವ ಹಾಗೂ ನಾದಿನಿ ಇವರೆಲ್ಲರು ನನಗೆ ದಿನಾಂಕ 21/10/2014 ರಂದು 9 ಎಎಮ್ ಕ್ಕೆ ಹೊಡೆ ಬಡೆ ಮಾಡಿ ನನಗೆ ಜೀವ ಬೇದರಿಕೆ ಹಾಕಿದ್ದು ತಾವು ನನಗೆ ಸಾಹಾಯ ಮಾಡಿ ಜೀವನ ನಡೆಸಲು ಸಾಹಾಯ ಮಾಡಲು ಸಂಭಂಧ ಪಟ್ಟ ಠಾಣೆ ಹಾಗೂ ಅಧಿಕಾರಿಗಳಿಗೆ ಆದೇಶಿಸಿ ನನಗೆ ನ್ಯಾಯಾ ದೋರಕಿಸಿ ಕೊಡಲು ಮನವಿ ಇಲ್ಲದ ಪಕ್ಷದಲ್ಲಿ ಗಂಡ, ಅತ್ತೆ, ನಾದಿನಿ, ಮಾವ ಇವರೆಲ್ಲರು ನನ್ನ ಜೀವ ತಗೆಯುವ ಸಂಬವ ಇರುತ್ತದೆ ಆದ್ದರಿಂದ ಮಾನ್ಯರು ನನಗೆ ನ್ಯಾಯ ದೊರಕಿಸಿಕೊಡಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Kalaburagi District Reported Crimes

ಮಟಕಾಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಅಫಜಲಪೂರ ಟಾಣೆ : ದಿನಾಂಕ 04-11-2014 ರಂದು, ಘತ್ತರಗಿ ಗ್ರಾಮದ ಭಾಗ್ಯವಂತಿ ಕಲ್ಯಾಣ ಮಂಟಪದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಮಾನ್ಯ ಸಿ.ಪಿ.ಐ ಸಾಹೇಬರು ಅಫಜಲಪೂರ ರವರ ಮಾರ್ಗದರ್ಶನದಲ್ಲಿ ಘತ್ತರಗಾ ಗ್ರಾಮದ ಭಾಗ್ಯವಂತಿ ಕಲ್ಯಾಣ ಮಂಟಪದ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಲು ಭಾಗ್ಯವಂತಿ ಕಲ್ಯಾಣ ಮಂಟಪದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳು ಕೊಡುತ್ತಿದ್ದದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ರಾಜಕುಮಾರ ತಂದೆ ದೌಲತ್ರಾಯ ರಮಗಾ ಸಾ|| ಘತ್ತರಗಾ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 610/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ವಶಪಡಿಸಿಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 04-11-2014 ರಂದು 9:10 ಪಿ.ಎಂ ಕ್ಕೆ ಠಾಣೆಯಲ್ಲಿದ್ದಾಗ ಖಚಿತ ಬಾತ್ಮಿ ಬಂದಿದ್ದೆನೆಂದರೆ ಅಫಜಲಪೂರ ಪಟ್ಟಣದ ಘತ್ತರಗಿ ರೋಡಿಗೆ ಇರುವ ಲಕ್ಷ್ಮೀ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಮಾನ್ಯ ಸಿ.ಪಿ.ಐ ಸಾಹೇಬರು ಅಫಜಲಪೂರ ರವರ ಮಾರ್ಗದರ್ಶನದಲ್ಲಿ ಅಫಜಲಪೂರ ಪಟ್ಟಣದ ಲಕ್ಷ್ಮೀ ಗುಡಿಯಿಂದ ಸ್ವಲ್ಪ ದೂರದಲ್ಲಿ  ಮರೆಯಾಗಿ ನಿಂತು ನೋಡಲು ಲಕ್ಷ್ಮೀ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳು ಕೊಡುತ್ತಿದ್ದದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಶ್ರೀಶೈಲ ತಂದೆ ಶರಣಪ್ಪ ಮೋಗಿನ ಸಾ|| ಘತ್ತರಗಾ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 835/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ವಶಪಡಿಸಿಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಶೇಖ್ ಅಬ್ದುಲ್ ಸಲೀಂ ತಂದೆ ಶೇಖ್ ಅಮಿರೂದ್ದಿನ ಇವರ ಮಕ್ಕಾಳಾದ ಶೇಖ್ ಜಮಿರೂದ್ದಿನ ಈತನು ಮೋಟಾರ ಸೈಕಲ ನಂ. ಕೆ.ಎ 32 ಎಲ್ 5765 ನೇದ್ದು ನಡೆಸುತ್ತಿದ್ದು ಅದರ ಹಿಂದೆ ಇನ್ನೊಬ್ಬ ಮಗ ಶೇಖ್ ನಿಜಾಮೋದ್ದಿನ ಇವನು ಕುಳಿತಿದ್ದು ಇವರು  ದಿನಾಂಕಃ 05/11/2014 ರಂದು ಸಾಯಂಕಾಲ 05:00 ಗಂಟೆಯ ಸಮಯಕ್ಕೆ ರೈಲ್ವೆ ಸ್ಟೇಷನದಿಂದ ಖಾಸಗಿ ಕೆಲಸ ಮುಗಿಸಿಕೊಂಡು ಮರಳಿ ಸೇಡಂ ರೋಡ್ ದಿಂದ ಹುಮನಾಬಾದ ರಿಂಗ್ ರೋಡ್ ಕಡೆಗೆ ಖಮರ ಕಾಲೋನಿಯಲ್ಲಿರುವ ಮನೆಗೆ ಬರುತ್ತಿರುವಾಗ ಟೊಯೊಟೋ ಶೋ ರೂಮ್ ಸಮೀಪ ಎದುರುಗಡೆ ರೋಡಿನ ಮೇಲೆ MH 13 AX- 2265 ನೇದ್ದರ ಚಾಲಕನು ಮುಂದೆ ಅತಿವೇಗ ಮತ್ತು ನಿಸ್ಕಾಳಜಿತನದಿಂದ ನಡೆಸಿಕೊಂಡು ಹೋಗುತ್ತಿದ್ದು ಸದರಿ ನಮ್ಮ ಮಕ್ಕಳು ತನ್ನ ಮೋಟಾರ ಸೈಕಲಕ್ಕೆ ಸೈಡ ಕೊಡಲು ಹಾರ್ನ ಹಾಕಿದ್ದು ಅವರಿಗೆ ಲಾರಿ ಚಾಲಕನು ಮೋಟಾರ ಸೈಕಲಕ್ಕೆ ಸೈಡ್ ಕೊಟ್ಟಂತೆ ಮಾಡಿದ್ದು ನನ್ನ ಮಕ್ಕಳು ಸದರಿ ಮೋಟಾರ ಸೈಕಲ ಒಮ್ಮೇಲೆ ಸೈಡ್ ತೆಗೆದುಕೊಂಡು ಮೋಟಾರ ಸೈಕಲಕ್ಕೆ ಡಿಕ್ಕಿ ಪಡಿಸಿದ್ದರಿಂದ ಸದರಿಯವರು ಕೆಳಗೆ ಬಿದಿದ್ದು ಆವಾಗ ಶೇಕ್ ನಿಜಾಮ ಇತನ ಮುಖದ ಮೇಲೆ ಚಕ್ರ ಹಾಯ್ದಿ ಭಾರಿ ರಕ್ತಗಾಯವಾಗಿದ್ದು ಸ್ಥಳದಲ್ಲಿ ಮೃತ ಪಟ್ಟಿದ್ದು, ಶೇಖ್ ಜಮಿರೂದ್ದಿನ ಈತನಿಗೆ ಭಾರಿ ರಕ್ತಗಾಯವಾಗಿ ಇವರಿಬ್ಬರೂ ರಸ್ತೆ ಅಪಘಾತದಲ್ಲಿ ಮೃತ ಪಟ್ಟಿದ್ದು ಸದರಿ ಟ್ಯಾಂಕ್ ಚಾಲಕನು ತನ್ನ ಟ್ಯಾಂಕರ ಲಾರಿಯನ್ನು ಅಲ್ಲೇ ಬಿಟ್ಟು ಓಡಿ ಹೋಗಿರುತ್ತಾನೆ ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ನಿಂಬರ್ಗಾ ಠಾಣೆ : ಶ್ರೀ ಕಲ್ಯಾಣಿ ತಂದೆ ಹಣಮಂತ್ರಾಯ ಭೂಸನೂರ, ಸಾ|| ಕವಲಗಾ  ಇವರು ತನ್ನ ಹೊಲದಲ್ಲಿ ಬಿದ್ದ ಮಳೆಯ ನೀರು ತನ್ನ ಮಗ್ಗಲು ಹೊಲದವನಾದ ಶ್ರೀಮಂತ ತಂದೆ ಸಿದ್ದಣ್ಣ ಭೂಸನೂರ ಇವರ ಹೊಲದಲ್ಲಿ ಹೋಗಿ ನಾಲಕ್ಕೆ ಹೋಗುತ್ತವೆ ಇದು ಹಿಂದಿನಿಂದಲೂ ನಡೆದು ಬಂದಿದ್ದು ಇದರ ಸಂಭಂಧ ದ್ವೇಶ ಕಟ್ಟಿಕೊಂಡು ಶ್ರೀಮಂತ ತಂದೆ ಸಿದ್ದಣ್ಣ ಭೂಸನೂರ ಮತ್ತು ಆತನ ಅಣ್ಣನಾದ ಧರ್ಮಣ್ಣ ತಂದೆ ಸಿದ್ದಣ್ಣ ಭೂಸನೂರ ಇಬ್ಬರು ದಿನಾಂಕ 05/11/2014 ರಂದು 2030 ಗಂಟೆಗೆ ತಮ್ಮ ಮನೆಯ ಹತ್ತಿರ ನನಗೆ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಕಲ್ಲಿನಿಂದ ಹಣೆಗೆ ಹೊಡೆದು ರಕ್ತಗಾಯಪಡಿಸಿ ಜೀವ ಭಯ ಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಂಬರ್ಗಾ ಠಾಣೆ : ಶ್ರೀ ಶ್ರೀಮಂತ ತಂದೆ ಸಿದ್ದಣ್ಣ ಭೂಸನೂರ ಸಾ|| ಕವಲಗಾ  ಇವರು ತನ್ನ ಹೊಲದಲ್ಲಿ ತನ್ನ ಬಾಜು ಹೊಲದವನಾದ ಕಲ್ಯಾಣಿ ತಂದೆ ಹಣಮಂತ್ರಾಯ ಭೂಸನೂರ ಇವನ ಹೊಲದಲ್ಲಿ ಬಿದ್ದ ನೀರು ಹಾದು ಹೋಗುತ್ತಿದ್ದು ಸದರಿ ಮಳೆಯ ನೀರನ್ನು ತನ್ನ ಕೆಳಗಿನ ಪಟ್ಟಿಯಲ್ಲಿ ಬಿಡುವಂತೆ ಹೇಳಿದ್ದಕ್ಕೆ ಕಲ್ಯಾಣಿ ತಂದೆ ಹಣಮಂತ್ರಾಯ ಭೂಸನೂರ ಮತ್ತು ಆತನ ಮಗನಾದ ಹಣಮಂತ ತಂದೆ ಕಲ್ಯಾಣಿ ಭೂಸನೂರ ಇಬ್ಬರು ದಿನಾಂಕ 05/11/2014 ರಂದು 2030 ಗಂಟೆಗೆ ಫಿರ್ಯಾದಿಯ ಮನೆಯ ಮುಂದೆ ಸಾರ್ವಜನಿಕ ರಸ್ತೆಯ ಮೇಲೆ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಕಲ್ಲಿನಿಂದ ಹಣೆಗೆ ಹೊಡೆದು ರಕ್ತಗಾಯಪಡಿಸಿ ಜೀವ ಭಯ ಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.