POLICE BHAVAN KALABURAGI

POLICE BHAVAN KALABURAGI

25 July 2012

GULBARGA DIST REPORTED CRIME


ವರದಕ್ಷೀಣೆ ಕಿರುಕುಳ ಪ್ರಕರಣ:
ಮಹಿಳಾ ಪೊಲೀಸ್ ಠಾಣೆ: ಶ್ರೀಮತಿ, ಆಯೇಷಾ ಪರ್ವಿನ ಗಂಡ ಮಹ್ಮದ ರಿಜ್ವಾನ ಸಾ|| ಜೀವನ ಭಾಗ ಪಿರದೋಜ ಅಪಾರ್ಟಮೆಂಟ ನೆಲ ಮಹಡಿ ಮುಮ್ರಾ ಥಾಣಾ ಮುಂಬಯಿ ಮಹಾರಾಷ್ಟ್ರ ಹಾ||ವ||ಹೆಚ್.ಐ.ಜಿ-30 ಹೌಸಿಂಗ ಬೋರ್ಡ ಕಾಲೋನಿ ಪಿ.ಟಿ ಕಾಲೋನಿ ಹತ್ತಿರ ಗುಲಬರ್ಗಾ ರವರು ನನ್ನ ಮದುವೆಯು ದಿನಾಂಕ:04-03-2012 ರಂದು ಬಂದೇ ನವಾಜ ದರ್ಗಾದಲ್ಲಿ ಮಹ್ಮದ ರಿಜ್ವಾನ ತಂದೆ ಮಹ್ಮದ ಇಕ್ಬಾಲ (ಪೀರಮಹ್ಮದ) ಸಾ:ಮುಮ್ರ್ರಾ ಥಾಣಾ ಜಿಲ್ಲೆ ಮುಂಬಯಿ ಇವರೊಂದಿಗೆ ನಿಖಾವಾಗಿದ್ದುಮದುವೆಯಲ್ಲಿ ನಮ್ಮ ತಂದೆಯವರು ವರದಕ್ಷಿಣೆ ಅಂತಾ 51,000/-ರೂಪಾಯಿಗಳು,  5 ತೊಲೆ ಬಂಗಾರಮದುವೆಯಲ್ಲಿ ಸುಮಾರು ಒಂದೂವರೆ ಲಕ್ಷಕ್ಕೂ ಮೇಲ್ಪಟ್ಟು ಖರ್ಚು ಮಾಡಿರುತ್ತಾರೆ. ನಾನು ಗಂಡನ ಮನೆಗೆ ಹೋಗಿ ಒಂದು ತಿಂಗಳವರೆಗೆ ಸಂಸಾರ ಮಾಡಿರುತ್ತೇನೆ ಆದರೆ ಗಂಡ ಮಹ್ಮದ ರಿಜ್ವಾನ ಹಾಗೂ ಮಾವ ಮಹ್ಮದ ಇಕ್ಬಾಲ ನಾದಿನಿ ಅಲ್ಮಾಜ ಬಾನು ಮತ್ತು ನಾದಿನಿಯ ಗಂಡ ಇರ್ಪಾನಶೇಖ ಎಲ್ಲರೂ ನನಗೆ ತವರು ಮನೆಯಿಂದ  25,000/-ರೂಪಾಯಿ ತರುವಂತೆ ಒತ್ತಾಯಿಸಿ ದಿನಾಲು ಕಿರುಕುಳ ಕೊಡುತ್ತಿದ್ದರು. ಹಲವು ಬಾರಿ ನನಗೆ ನನ್ನ ಗಂಡ ಮಾವ ನಾದಿನಿ ನಾದಿನಿ ಗಂಡ ಕೂಡಿಕೊಂಡು ಕೈಯಿಂದ ರಾಡಿನಿಂದ ಹೊಡೆದಿರುತ್ತಾರೆ. ನಮ್ಮ ತಂದೆಯವರು ಬಡವರಾಗಿರುವದರಿಂದ ಹಣ ಜಮಾಯಿಸಲು ಆಗಿರುವದಿಲ್ಲಾ ಕಾರಣ ನಾನು ಇಲ್ಲಿಯವರೆಗೆ ನಮ್ಮ ತಂದೆಯವರ ಮನೆಯಲ್ಲಿಯೇ ಉಳಿದಿರುತ್ತೇನೆ.ನಾನು ಹಣ ತೆಗೆದುಕೊಂಡು ಹೋಗದೆ ಇರುವದೆ ಇರುವದರಿಂದ ದಿನಾಂಕ17-07-2012 ರಂದು ಬೆಳಿಗ್ಗೆ 9-30 ಗಂಟೆಗೆ ನಮ್ಮ ತಂದೆ ಮನೆಯಲ್ಲಿ ಇಲ್ಲದ ಸಮಯದಲ್ಲಿ ಬಂದು ನನ್ನನ್ನು ಎಳದಾಡಿ ಕೈಯಿಂದ ಹೊಡೆದುಸಿಕ್ಕಾಪಟ್ಟೆ ಎಳೆದಾಡಿರುವದರಿಂದ ನಾನು ಕಿರುಚಿದಾಗ ಅಕ್ಕ-ಪಕ್ಕದ ಮನೆಯವರು ಬಂದು ಬಿಡಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: ನಂ:56/2012 ಕಲಂ 498(ಎ) 143, 323, 504, ಸಂಗಡ 34 ಐಪಿಸಿ ಮತ್ತು 3 ಮತ್ತು 4 ಡಿಪಿ ಆಕ್ಟ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.