POLICE BHAVAN KALABURAGI

POLICE BHAVAN KALABURAGI

22 March 2018

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ನರೋಣಾ ಠಾಣೆ : ಶ್ರೀಮತಿ ಚಾನ್ಸಬಾಯಿ ಗಂಡ ಮಲ್ಲಯ್ಯ ಗುತ್ತೇದಾರ ಸಾ||ಕಲ್ಲಹಂಗರಗಾ ಇವರು ನನಗೆ ಇಬ್ಬರು ಗಂಡು ಮಕ್ಕಳು ಒಬ್ಬಳೆ ಹೆಣ್ಣುಗಳಿದ್ದು ಕಿರಿಯ ಮಗನಾದ ಸುರೇಶನಿಗೆ ಹೊರತು ಪಡಿಸಿ ಉಳಿದವರ ಇಬ್ಬರ ಮದುವೆಯಾಗಿದ್ದು ಎಲ್ಲರು ಈಗ ಸದ್ಯ ಪುಣೆಯಲ್ಲಿ ವಾಸವಾಗಿದ್ದು ಊರಲ್ಲಿ ನಾನು ಮತ್ತು ನನ್ನ ಗಂಡ ಮಾತ್ರ ವಾಸವಾಗಿರುತ್ತೇವೆ. ನಮ್ಮೂರಿನಿಂದ ಚಿಂಚನಸೂರ ಗ್ರಾಮಕ್ಕೆ ಹೋಗುವ ಮುಖ್ಯ ರಸ್ತೆ ಪಕ್ಕದಲ್ಲಿ ಚಿಂಚನಸೂರ ಸೀಮಾಂತರದಲ್ಲಿ ನಮಗೆ 4 ಎಕರೆ ಜಮೀನಿದ್ದು ಸದರಿ ಜಮೀನಿನಲ್ಲಿ ಜೋಳದ ಬೆಳೆ ಇರುತ್ತದೆ. ರಾತ್ರಿ ವೇಳೆಯಲ್ಲಿ ಜೋಳಕ್ಕೆ ಹಂದಿ ಹೊಡೆಯುತ್ತಿದ್ದರಿಂದ ಈಗ 2-3 ದಿವಸಳಗಳಿಂದ ನನ್ನ ಗಂಡನು ದಿನಾಲು ರಾತ್ರಿ ಹೊಲಕ್ಕೆ ಹೋಗಿ ಅಲ್ಲಿಯೇ ಮಲಗುತ್ತಿದ್ದನು ಅದರಂತೆ ನಿನ್ನೆ ದಿನಾಂಕ:04-02-2018 ರಂದು ರಾತ್ರಿ ನನ್ನ ಗಂಡನು ನಮ್ಮ ಹೊಲಕ್ಕೆ ಹೋಗುತ್ತೇನೆಂದು ಹೇಳಿ ಮನೆಯಿಂದ ಹೋದರು, ನಂತರ ರಾತ್ರಿ 9-30 ಗಂಟೆ ಸುಮಾರಿಗೆ ನಮ್ಮೂರಿನ ಗುಂಡಪ್ಪ ತಂದೆ ರೇವಣಪ್ಪ ಹುಬ್ಬಣಿ ಇವರು ನಮ್ಮ ಮನೆಗೆ ಬಂದು ನನ್ನ ಗಂಡನಾದ ಮಲ್ಲಯ್ಯ ಇವರು ನಮ್ಮ ಹೊಲಕ್ಕೆ ನಡೆದುಕೊಂಡು ಹೋಗುವಾಗ ಹಿಂದಿನಿಂದ ಮೊಟಾರ್ ಸೈಕಲ್ ನಂ ಕೆಎ32-ಇಪಿ3044 ನೆದ್ದರ ಚಾಲಕ ಅತೀವೇಗ ಮತ್ತು ನಿರ್ಲಕ್ಷತನಿಂದ ಚಲಾಯಿಸಿಕೊಂಡು ಬಂದು ವಿಠಲ್ ಕಮಲಾಪೂರ ಇವರ ಹೊಲದ ಹತ್ತಿರ ಡಿಕ್ಕಿಪಡಿಸಿ ಗಾಯಪಡಿಸಿರುತ್ತಾನೆಂದು ತಿಳಿಸಿದ ಮೇರೆಗೆ ನಾನು ತಕ್ಷಣವೆ ನಮ್ಮೂರಿನ ಗುರುಬಸಪ್ಪ ತಂದೆ ರೇವಪ್ಪ ದಣ್ಣೂರ ಇವರೊಂದಿಗೆ ಮೊಟಾರ್ ಸೈಕಲ್ ಮೇಲೆ ಸದರಿ ಸ್ಥಳಕ್ಕೆ ಹೋಗಿ ನೋಡಲಾಗಿ ನನ್ನ ಗಂಡನಿಗೆ ಮೊಳಕಾಲ ಕೆಳಭಾಗಗಕ್ಕೆ ರಕ್ತಗಾಯವಾಗಿದ್ದು ಗುತ್ತಿಗೆಗೆ ಮತ್ತು ಎಡಗಡೆ ಮೇಲಕಿಗೆ ತರಚಿದಗಾಯವಾಗಿ ಬಿದ್ದಿದ್ದು. ಮಾತನಾಡಿಸಲು ಮಾತಮಾಡುವ ಸ್ಥತಿಯಲ್ಲಿ ಇರಲಿಲ್ಲ. ಅಪಘಾತ ಪಡಿಸಿದ ಮೊಟಾರ್ ಸೈಕಲ್ ನಂ ಕೆಎ32-ಇಪಿ3044 ನೇದ್ದು ಕೂಡ ಅಲ್ಲಿಯೇ ಬಿದ್ದಿತ್ತು ನಂತರ ನಾನು ಅಂಬ್ಯೂಲೇನ್ಸಲ್ಲಿ ನನ್ನ ಗಂಡನಿಗೆ ಹಾಕಿಕೊಂಡು ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆ ಕಲಬುಗಿಗೆ ತಂದು ಸೇರಿಕೆ ಮಾಡಿದ್ದು ನನ್ನ ಗಂಡನು ಸದ್ಯ ಉಪಚಾರ ಪಡೆಯುತ್ತಿದ್ದು ಮಾತನಾಡುವ ಸ್ಥಿತಿಯಲ್ಲಿ ಇರುವುದಿಲ್ಲ ನನ್ನ ಗಂಡನಿಗೆ ಅಪಘಾತ ಪಡಿಸಿದ ಚಾಲಕ ಹೆಸರು ಅಂಬರೀಷ ತಂದೆ ಹಣಮಂತಪ್ಪ ಚಿಂಚನಸೂರ ಸಾ||ಜವಳಗಾ(ಬಿ) ಮತ್ತು ಹಿಂದೆ ಕುಳಿತಿದ್ದ ವ್ಯಕ್ತಿಯ ಹೆಸರು ನಿಂಗಪ್ಪ ಹಿರೆಪೂಜಾರಿ ಸಾ||ಜವಳಗಾ (ಬಿ) ಎಂದು ನನಗೆ ನಂತರ ಗೊತ್ತಾಗಿರುತ್ತದೆ. ಸದರಿ ಚಾಲಕನು ಆ ದಿಸವ ಅಪಘಾತ ಪಡಿಸಿ ಮೊಟಾರ್ ಸೈಕಲ್ ಬಿಟ್ಟು ಓಡಿಹೋಗಿದ್ದು ದಿನಾಂಕ 04-02-2018 ರಂದು ಅಪಘಾತ ಹೊಂದಿದ ಹಿನ್ನೆಲೆಯಲ್ಲಿ ಭಾರಿಗಾಯವಾಗಿದ್ದರಿಂದ ಸದರಿ ಗಾಯದ ಹಿನ್ನೆಲೆಯಲ್ಲಿ ಕಾಲಕಾಲಕ್ಕೆ ಆಸ್ಪತ್ರೆಗೆ ಹೋಗಿ ಉಪಚಾರ ಪಡೆಯುತ್ತಿದ್ದು ಸದರಿ ಚಿಕಿತ್ಸೆ ಫಲಕಾರಿಯಾಗದೆ ಇದ್ದುದ್ದರಿಂದ ದಿನಾಂಕ 21-03-2018 ರಂದು 0030 ಗಂಟೆಗೆ ಮೃತಪಟ್ಟಿರುತ್ತಾರೆ ಅಂತಾ  ಸಲ್ಲಿಸಿದ ದೂರು ಸಾರಾಶಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ಇಬ್ರಾಹೀಮ್ ತಂದೆ ಹಮೀದ್ ಪಟೇಲ ಸಾ||ಬೋಗನಳ್ಳಿ ತಾ||ಅಫಜಲಪೂರ ರವರು ದಿನಾಂಕ 19/03/2018 ರಂದು ನಮ್ಮೂರಿನಿಂದ ನಾನು ಹಾಗು ಅಣ್ಣತಮ್ಮಕ್ಕಿಯಾದ ಮಜೀದ ಪಟೇಲ ತಂದೆ ನಬಿಲಾಲ ಪಟೇಲ ಸಾ||ಬೋಗನಳ್ಳಿ ಇಬ್ಬರು ಕೂಡಿಕೊಂಡು ನನ್ನ ಅಳಿಯನ ಮೋಟಾರ ಸೈಕಲ ನಂ ಕೆಎ32 ಇಪಿ 7192 ನೇದ್ದರ ಮೇಲೆ ಕುಳಿತುಕೊಂಡು ಗಾಣಗಾಪೂರಕ್ಕೆ ಹೋಗುತಿದ್ದೇವು ಮೋಟಾರ ಸೈಕಲ ನಬಿಲಾಲನು ನಡೆಸುತಿದ್ದನು ಆನೂರ ಬಿಲ್ವಾಡ ಮದ್ಯ ಹೋಗುತಿದ್ದಾಗ  ಸಮುಯ ಸುಮಾರು 11.45 ಎಎಮ್ ಕ್ಕೆ ಎದುರುಗಡೆಯಿಂದ ಒಬ್ಬ ಕ್ರೂಜರ್ ವಾಹನ  ಚಾಲಕನು ತನ್ನ ವಾಹನವನ್ನು ಅತಿವೇಗ ಹಾಗು ಅಲಕ್ಷತನದಿಂದ ನಡೆಸಿಕೊಂಡು ಬಂದು ಡಿಕ್ಕಿ ಪಡಿಸಿದ್ದು ನಾವಿಬ್ಬರು ಕೆಳಗೆ ಬಿದ್ದೆವು ಅದೇ ಸಮಯದಲ್ಲಿ ಹಿಂದಿನಿಂದ ಬರುತಿದ್ದ ಲಾಲಾಪಟೇಲ ತಂದೆ ಮಶಾಕ ಪಟೇಲ, ಅಬ್ದುಲಗನಿ ತಂದೆ ಬಾಬಾಸಾಬ ಅವರಾದ ಸಾ|| ಭೋಗನಳ್ಳಿ ಇವರು ಬಂದು ಎಬ್ಬಿಸಿದ್ದು ನನಗೆ ಬಲಗಾಲ ಮೋಳಕಾಲಿಗೆ, ಹಾಗು ಮೊಳಕಾಲಿನ ಕೆಳಗೆ ಭಾರಿ ಒಳಪೆಟ್ಟು ಗಾಯವಾಗಿರುತ್ತದೆ ಕ್ರೂಜರ್ ವಾಹನ ನಂಬರ ನೋಡಲು ಕೆಎ-48 ಎಮ್ 7109 ಇದ್ದು ಚಾಲಕನ ಹೆಸರು ಯಲ್ಲಪ್ಪ ಕನ್ನಾಳ ಸಾ||ಸಾವಳಗಾ ತಾ||ಜಮಖಂಡಿ ಅಂತ ಗೊತ್ತಾಗಿರುತ್ತದೆ. ಕ್ರೂಜರ ವಾಹನ ಅಲ್ಲೆ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.