POLICE BHAVAN KALABURAGI

POLICE BHAVAN KALABURAGI

30 April 2017

KALABURAGI DISTRICT REPORTED CRIMES

ಕಿರುಕುಳ ಪ್ರಕರಣ:

ಮಹಿಳಾ ಪೊಲೀಸ ಠಾಣೆ : ದಿನಾಂಕ: 29/04/17 ರಂದು ಶ್ರೀಮತಿ ಅಶ್ವಿತಾ ಗಂಡ ಅಮೀತ ಕುಮಾರ ಸಾ: ನವಜೀವನ ನಗರ ಪಿ.&.ಟಿ ಕ್ವಾರ್ಟಸ ಕಲಬುರಗಿ ಇವರು ಠಾಣೆಗೆ ಹಾಜರಾಗಿ ತನಗೆ 2 ವರ್ಷದ ಹಿಂದೆ ಕಲಬುರಗಿಯ ಅಮೀತ ಕುಮಾರ ಇತನೊಂದಿಗೆ ಮದುವೆಯಾಗಿದ್ದು ಮದುವೆ ವರನಿಗೆ ಮದುವೆಯಲ್ಲಿ 15 ಲಕ್ಷ ರೂಪಾಯಿ 20 ತೊಲೆ ಬಂಗಾರ 1 ಕೆ.ಜಿ ಬೆಳ್ಳಿ ಕೊಟ್ಟಿದ್ದು. ಸದ್ಯ ನನಗೆ ಈಗ ಒಂದು ಗಂಡು ಮಗುವಿದ್ದು.  ನನ್ನ ಗಂಡ ಅಮೀತ ಕುಮಾರ ಫೈನಾನ್ಸ ವ್ಯವಹಾರ ಮಾಡಿಕೊಂಡಿದ್ದು ಮದುವೆಯಾದ 1 ತಿಂಗಳ ನಂತರ ನನ್ನ ಗಂಡ ಅಮಿತಕುಮಾರ , ಅತ್ತೆ ಜಯಶ್ರೀ,  ನಾದಿನಿ ಅಮೃತಾ ಇವರು ನನಗೆ ಇನ್ನು 5 ಲಕ್ಷ ರೂಪಾಯಿ 10 ತೊಲೆ ಬಂಗಾರ ನಿನ್ನ ತವರು ಮನೆಯಿಂದ ತೆಗೆದುಕೊಂಡು ಬಾ ಅಂತಾ ಕಿರುಕುಳ ಕೊಡುತ್ತಾ ಸಣ್ಣ ಪುಣ್ಣ ವಿಷಯಕ್ಕೆ ಜಗಳ ತೆಗೆದು ಹೊಡೆ ಬಡೆ ಮಾಡಿ ಮಾನಸಿಕ ಹಾಗೂ ದೈಹಿಕ ಹಿಂಸೆ ಕೊಡುತ್ತಿದ್ದು ಈ ವಿಷಯವನ್ನು ನಾನು ನಮ್ಮ ತಂದೆ ತಾಯಿಗೆ ತಿಳಿಸಿದಾಗ ಅವರು ಅನುಕೂಲವಾದಾಗ ಉಳಿದ ವರದಕ್ಷಿಣೆ ಹಣ ಬಂಗಾರ ತಂದು ಕೊಡುತ್ತೇವೆ ಅಂತಾ ಹೇಳಿರುತ್ತಾರೆ ಆದರೋ ನನ್ನ ಗಂಡ ಅತ್ತೆ , ನಾದಿ ಇವರು ನನಗೆ ಒಂದು ಗತಿ ಕಾಣುಸುತ್ತೇವೆ ನಿನ್ನ ಜೀವ ತೆಗೆದು ಇನ್ನೊಂದು ಮದುವೆ ಮಾಡುತ್ತೆವೆ ಅಂತಾ ಹೆದರಿಸಿರುತ್ತಾ. ದಿನಾಂಕ: 28/04/2017 ರಂದು  ನನ್ನ ಗಂಡ, ಅತ್ತೆ, ನಾದಿನಿ ಜಗಳ ಮಾಡಿ ಕೈಯಿಂದ ಹೊಡೆ ಬಡೆ ಮಾಡಿ ಊಟ ಕೊಡದೆ ಮನೆಯಿಂದ ಹೊರಗೆ ಹಾಕಿದ್ದು ನಾನು ಈ ಬಗ್ಗೆ ನಮ್ಮ ತಂದೆ ತಾಯಿಗೆ ತಿಳಿಸಲು ಅವರು ದಿನಾಂಕ: 29/04/2017 ರಂದು ನಮ್ಮ ಮನೆಗೆ ಬಂದು ನನ್ನ ಗಂಡ ಅತ್ತೆ ನಾದಿನಿಯವರಿಗೆ ಅನುಕೂಲವಾದಾಗ ನಿಮ್ಮ ವರದಕ್ಷಿಣೆ ಹಣ ತಂದು ಕೊಡುತ್ತೇವೆ ಅಂತಾ ಹೇಳಲು ಹೊದಾಗ ಈ ಮೂರು ಜನರು ಕೂಡಿ ನಮ್ಮ ತಂದೆ ತಾಯಿಯವರಿಗೆ ಹೊಡೆ ಬಡೆ ಮಾಡಿ ಕಾಲಿನಿಂದ ಒದ್ದು ಗುಪ್ತ ಪೆಟ್ಟುಪಡಿಸಿರುತ್ತಾರೆ ನಮ್ಮ ತಂದೆ ತಾಯಿಯೊಂದಿಗೆ ಬಂದವರು ಜಗಳವನ್ನು ಬಿಡಿಸಿರುತ್ತಾರೆ. ವರದಕ್ಷಿಣೆ ಹಣ ಬಂಗಾರ ಕೊಟ್ಟರೆ ಸರಿ ಇಲ್ಲವಾದರೆ ನಿಮ್ಮ ಮಗಳಿಗೆ ಕರೆದುಕೊಂಡು ಹೋಗಿ ಇಲ್ಲದ್ದಿದರೆ ಕೊಲೆ ಮಾಡುವುದಾಗ ಜೀವದ ಬೆದರಿಕೆ ಹಾಕರಿತ್ತಾರೆ. ಕಾರಣ ನನ್ನ ತವರು ಮನೆಯಿಂದ ವರದಕ್ಷಿಣೆ ಹಣ ತರುವಂತೆ ಹೊಡೆ ಬಡೆ ಮಾಡಿ ಕಿರುಕುಳ ನೀಡುತ್ತಿರುವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ