POLICE BHAVAN KALABURAGI

POLICE BHAVAN KALABURAGI

05 December 2011

GULBARGA DIST REPORTED CRIMES

ಕೊಲೆ ಪ್ರಕರಣ:

ರೋಜಾ ಠಾಣೆ : ಶಾಕಿರಾಬೇಗಂ ಗಂಡ ಮಹ್ಮದ ಖಾದರ ಆಟೋವಾಲೆ ಸಾ:ರಾಜಾಗ್ರೂಪ್ ಕಲ್ಫಾಕಾಲೋನಿ ವಿಕಾರಾಬಾದ ತಾ||ವಿಕಾರಾಬಾದ ಜಿ:ರಂಗಾರೆಡ್ಡಿ ಆಂದ್ರ ಪ್ರದೇಶ ರಾಜ್ಯ ಹಾ|||| ಸೈಯ್ಯದ ಗಲ್ಲಿ ಗುಲಬರ್ಗಾ ರವರು ನಾನು ಮೋಹರಂ ಹಬ್ಬ ಇರುವದರಿಂದ ಗುಲಬರ್ಗಾಕ್ಕೆ ಬಂದು ನೇರವಾಗಿ ನಾನು ಮತ್ತು ನನ್ನ ಗಂಡ ನನ್ನ ತವರು ಮನೆ ಸೈಯ್ಯದ ಗಲ್ಲಿಯಲ್ಲಿ ಬಂದು ರಾತ್ರಿ ಉಳಿದುಕೊಂಡಿದ್ದು ಇಂದು ದಿನಾಂಕ:05/12/2011 ರಂದು ಅಂದಾಜು 1:00 ಗಂಟೆಯ ಸುಮಾರಿಗೆ ನನ್ನ ಗಂಡ ಮಹ್ಮದ ಖಾದರ ಈತನು ನಾನು ನನ್ನ ತಂದೆ ತಾಯಿಯವರ ಮನೆಗೆ ಹೋಗಿ ಅವರಿಗೆ ಮಾತನಾಡಿಸಿಕೊಂಡು ಮತ್ತು ಅಲ್ಲಿಯೇ ಶೇವಿಂಗ್ ಮತ್ತು ಸ್ನಾನ ಮಾಡಿಕೊಂಡು ಬರುವದಾಗಿ ಹೇಳಿ ಮನೆಯಿಂದ ಒಂದು ಜೊತೆ ಬಟ್ಟೆಯನ್ನು ತೆಗೆದುಕೊಂಡು ಮನೆಯಿಂದ ಹೋಗಿದ್ದು ಅಂದಾಜು 2:30 ಗಂಟೆಯ ಸುಮಾರಿಗೆ ಸ್ನಾನ ಮಾಡಿಕೊಳ್ಳದೇ ಶೇವಿಂಗ ಮಾಡಿಕೊಳ್ಳದೇ ಮೈಮೇಲಿನ ಶರ್ಟ ಹರಿದುಕೊಂಡು ಭಾರಿ ಗುಪ್ತ ಗಾಯಹೊಂದಿ ನಿತ್ರಾಣ [ನಿಶಕ್ತ] ಸ್ಥಿತಿಯಲ್ಲಿ ನಡೆದುಕೊಂಡು ಮನೆಗೆ ಬಂದು ಬಿದ್ದನು ಇದನ್ನು ನೋಡಿ ನಾನು ಗಾಬರಿಯಾಗಿದ್ದು ನನ್ನ ಗಂಡ ಮಹ್ಮದ ಖಾದರ ಈತನಿಗೆ ವಿಚಾರಿಸಲು ನನ್ನ ಗಂಡ ಮಹ್ಮದ ಖಾದರ ಈತನು ನನಗೆ ತಮ್ಮ ಮಹ್ಮದ ಈತನು ನನಗೆ ಹೊಡೆದಿರುತ್ತಾನೆ ಅಂತಾ ತಿಳಿಸಿದ್ದು ನಂತರ ನನ್ನ ಗಂಡನಿಗೆ ಆಟೋದಲ್ಲಿ ಹಾಕಿಕೊಂಡು ಉಪಚಾರಕ್ಕಾಗಿ 16:00 ಗಂಟೆಗೆ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿಯ ವೈದ್ಯರು ನನ್ನ ಗಂಡನಿಗೆ ಪರಿಕ್ಷಿಸಿ ಮೃತಪಟ್ಟಿರುವ ಬಗ್ಗೆ ತಿಳಿಸಿರುತ್ತಾರೆ. ನನ್ನ ಗಂಡನಿಗೆ ಕೊಲೆ ಮಾಡಿರುವ ನನ್ನ ಮೈದುನನಾದ ಮಹ್ಮದ ತಂದೆ ಮಹ್ಮದ ಪಾಶಾಮಿಯಾ ಈತನ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ.114/2011 ಕಲಂ.302 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

GULBARGA DIST REPORTED CRIMES

ಕಳ್ಳತನ ಪ್ರಕರಣ:

ಕಮಲಾಪೂರ ಠಾಣೆ: ಶ್ರೀ. ಗುರುಶಾಂತ ತಂದೆ ನರಸಪ್ಪ ಸಾ; ಓಕಳಿ ತಾ;ಜಿ; ಗುಲಬರ್ಗಾ ವರು ನನ್ನ ಹೊಲ ಸರ್ವೆ ನಂ: 61/4 ನೇದ್ದರಲ್ಲಿ ನೀರಾವರಿ ಕುರಿತು ಬಾವಿ ತೋರಿದ್ದು ನೀರು ಪೂರೈಕೆ ಕುರಿತು ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದು ಹೊಲದಲ್ಲಿ ಒಟ್ಟು 12 ಲೈಟಿನ ಕಂಬಗಳು (ಪಿಸಿಸಿ) ಹಾಕಿಕೊಂಡು ಬಾವಿಯ ಹತ್ತಿರ ಟಿ.ಸಿ ಕೂಡಿಸಿರುತ್ತೇನೆ. ದಿನಾಂಕ: 03/11/2011 ರಂದು ನಾನು ಹೊಲದ ಕೆಲಸಕ್ಕೆ ಹೋಗಿ ಮರಳಿ ರಾತ್ರಿ 7-00 ಗಂಟೆಗೆ ಮನೆಗೆ ಬಂದಿದ್ದು, ದಿನಾಂಕ: 04/11/2011 ರಂದು ಬೆಳೆಗ್ಗೆ 9-00 ಗಂಟೆ ಸುಮಾರಿಗೆ ನಮ್ಮ ಹೊಲಕ್ಕೆ ಹೋದಾಗ ನಮ್ಮ ಹೊಲದಲ್ಲಿನ ಒಟ್ಟು 6 ಲೈಟಿನ ಕಂಬಗಳ ಅಲ್ಯೂಮಿನಿಯಂ ವೈರಗಳು ಕಂಬದ ಮೇಲೆ ಇರಲಿಲ್ಲ. ಕಂಬಕ್ಕೆ ಹಾಕಿದ ಅಲ್ಯೂಮಿನಿಯಂ ವೈರ್ ಅಂದಾಜು 1000 ಫೂಟ್ ಉದ್ದ ಇದ್ದು ಅದರ ಅ.ಕಿ. 6000/- ರೂಪಾಯಿಗಳಾಗಬಹುದು, ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 151/2011 ಕಲಂ 379 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಗ್ರಾಮ ಪಂಚಾಯತ ಸದಸ್ಯಳ ಅಪಹರಣ:

ಚಿತ್ತಾಪೂರ ಠಾಣೆ: ಶ್ರೀ ಚಂದ್ರಾಮ ದಂಡೋತಿ ಸಾ|| ಅಲ್ಲೂರ(ಕೆ) ರವರು ಹೆಂಡತಿಯಾದ ದೇವಕಿ ಇವಳು ಗ್ರಾಮ ಪಂಚಾಯತ ಸದಸ್ಯೆ ಇದ್ದು ಸುಮಾರು 20 ದಿವಸಗಳ ಹಿಂದೆ ಅತ್ತೆ ನೀಲಮ್ಮ ಹಾಗೂ ಮಾವ ಚಂದ್ರಾಮ ರವರು ಅಧ್ಯಕ್ಷರಾಗುವ ರಾಮ ತಂದೆ ಕೃಷ್ಣಪ್ಪ ನಾಟಿಕಾರ ರವರ ಕಡೆಯಿಂದ ಹಣ ತಗೆದುಕೊಂಡು ಅವಳನ್ನು ಅಪಹರಿಸಿಕೊಂಡು ಹೋಗಿರುತ್ತಾರೆ ಅವಳನ್ನು ಯಾವ ಊರಿನಲ್ಲಿ ಇಟ್ಟಿರುತ್ತಾರೆ ಎಂಬುವದು ಖಚಿತವಾಗಿ ತಿಳಿದು ಬಂದಿರುವದಿಲ್ಲ ತನ್ನ ಹೆಂಡತಿಯನ್ನು ಅಪಹರಿಸಿಕೊಂಡು ಹೋದ ನೀಲಮ್ಮ ಗಂಡ ಚಂದ್ರಾಮ ಖತಾಲ, ಚಂದ್ರಾಮ ತಂದೆ ದುರ್ಗಪ್ಪ ಖತಾಲ , ರಾಮ ತಂದೆ ಕೃಷ್ಣಪ್ಪ ನಾಟಿಕಾರ ಸಾ|| ಅಲ್ಲೂರ(ಬಿ) ರವರ ಮೇಲೆ ಕಾನೂನ ಪ್ರಕಾರ ಕ್ರಮ ಕೈಕೊಳ್ಳಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 117/2011 ಕಲಂ 365 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

GULBARGA DIST REPORTED CRIMES

ಅಪಘಾತ ಪ್ರಕರಣ:

ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ : ಶ್ರೀಮತಿ ಭೀಮಬಾಯಿ ಗಂಡ ಭೀಮರಾಯ ಬಾವಿಕಟ್ಟಿ ಸಾ; ಕಲ್ಲೂರ ಹಾ.ವ:ನೃಪತುಂಗಾ ಕಾಲೋನಿ ಹತ್ತಿರ ಶಹಾಬಾದ ರೋಡ ಗುಲಬರ್ಗಾ ರವರು ನಾನು ದಿನಾಂಕ 04-12-2011 ರಂದು 14.45 ಗಂಟೆಗೆ ನಗರದ ಕೆಂದ್ರ ಬಸ್ ನಿಲ್ದಾಣದಲ್ಲಿ ರೋಡಿನ ಮೇಲೆ ಬಸ್ಸಿಗೆ ಹೋಗಲು ಕಾಯುತ್ತಾ ನಿಂತಾಗ ಬಸ್ಸ ನಂ: ಕೆ.ಎಸ್.ಆರ್.ಟಿ.ಬಸ್ ನಂ:ಕೆಎ 32 ಎಫ್ 1099 ನೆದ್ದರ ಚಾಲಕ ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿ ಅಪಘಾತ ಪಡಿಸರುತ್ತಾನೆ ಅಂತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 156/2011 ಕಲಂ 279, 337 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ದರೋಡೆ ಪ್ರಕರಣ:

ಗುಲಬರ್ಗಾ ಗ್ರಾಮೀಣ ಠಾಣೆ: ಶ್ರೀ ಗಜೇಂದ್ರ ತಂದೆ ಗುರುಲಿಂಗಪ್ಪ ತುಕ್ಕೋಜಿ ಸಾ: ಕಲ್ಲಹಂಗರಗಾ ತಾ: ಜಿ: ಗುಲಬರ್ಗಾ ರವರು ನಾನು ದಿನಾಂಕ 21/9/2011 ರಂದು ರಾತ್ರಿ 11:45 ಗಂಟೆಯ ಸುಮಾರಿಗೆ ನನ್ನ ಮೋಟಾರ ಸೈಕಲ ಮೇಲೆ ಕಲ್ಲಹಂಗರಗಾ ಗ್ರಾಮಕ್ಕೆ ಹೊರಟಾಗ ತಾಜಸುಲ್ತಾನಪೂರ ಗ್ರಾಮ ದಾಟಿದ ಮೇಲೆ ಪೂಲಿನ ಹತ್ತಿರ 4 ಜನ ಹುಡಗರು ಕುಳಿತಿದ್ದು ಅವರು ನನ್ನ ಮೋಟಾರ ಸೈಕಲಿಗೆ ಕಲ್ಲಿನಿಂದ ಹೊಡೆದಾಗ ನಾನು ಮೋಟಾರ ಸೈಕಲದವೇಗ ಕಡಿಮೆ ಮಾಡಿದ್ದರಿಂದ ಅವರೆಲ್ಲರೂ ಓಡಿ ಬಂದು ಹೆದರಿಸಿ ನನ್ನ ಮತ್ತು ನನ್ನ ಸಂಗಡ ಇದ್ದವನ ಹತ್ತಿರದಿಂದ 2 ಮೋಬೈಲ ಹಾಗೂ ನಗದು ಹಣ 16700/- ರೂ ಗಳು ಹೀಗೆ ಒಟ್ಟು 19500/- ರೂ ಗಳನ್ನು ಸುಲಿಗೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 362/2011 ಕಲಂ 392 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ

ಅಲಕ್ಷತನ ಪ್ರಕರಣ:

ಶಹಾಬಾದ ನಗರ ಪೊಲಿಸ ಠಾಣೆ. ಶ್ರೀ ಗಣೇಶ ತಂದೆ ಸೊಮಲಾ ಚವ್ಹಾಣ ಉ:ಲಾರಿ ಟ್ಯಾಂಕರ ನಂ: ಕೆ.ಎ-32/ಬಿ-4529 ನೇದ್ದರ ಮಾಲಿಕ ಸಾ|| ಬಲರಾಮ ಚೌಕ ವಾಡಿ ರವರು ದಿನಾಂಕ: 4/12/2011 ರಂದು ಮುಂಜಾನೆ ನಮ್ಮ ಟ್ಯಾಂಕರ ಡ್ರೈವರ ಮಶಾಕ ಇತನು ಟ್ಯಾಂಕರ ನಂ: ಕೆ.ಎ-32/ಬಿ-4529 ನೇದ್ದರಲ್ಲಿ ಮಾಹರಾಷ್ಟ್ರರಾಜ್ಯದ ಪರಲಿಯಿಂದ ಬೂದಿ ತುಂಬಿಕೊಂಡು ವಾಡಿಗೆ ಬರುತ್ತಿರುವಾಗ ಶಹಾಬಾದ ನಂತರ ಶಂಕ್ರವಾಡಿ ಬಸ ಸ್ಟಾಂಡ ಹತ್ತಿರ ಟ್ಯಾಂಕರ ಚಾಲಕನು ಟ್ಯಾಂಕರನ್ನು ಅತೀವೇಗ ಮತ್ತು ನಿಷ್ಕಾಳಜಿತನದಿಂದ ನಡೆಸಿಕೊಂಡು ಎದುರುಗಡೆ ಯಾವುದೋ ಲಾರಿ ಬಂದಿದ್ದರಿಂದ ನಮ್ಮ ಟ್ಯಾಂಕರ್ ಚಾಲಕನು ಒಮ್ಮೇಲೆ ಕಟ್ಟ ಮಾಡಿದ್ದರಿಂದ ಟ್ಯಾಂಕರ ರೋಡಿನ ಎಡಗಡೆ ಪಲ್ಟಿಯಾಗಿ ಬಿದ್ದು ಟ್ಯಾಂಕರ ಎದುರಿನ ಗ್ಲಾಸ ಮುರಿದು ಟ್ಯಾಂಕರ್ ಬಾಡಿ ಮತ್ತು ಟ್ಯಾಂಕ ಬೆಂಡ ಆಗಿರುತ್ತದೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 188/2011 ಕಲಂ: 279 ಐಪಿಸಿ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಮೋಟಾರ ಸೈಕಲ್ ಕಳ್ಳತನ ಪ್ರಕರಣ:

ಬ್ರಹ್ಮಪೂರ ಠಾಣೆ: ಶ್ರೀ.ಸತ್ಯನಾರಾಯಣ ಪಿ.ಎಸ್.ಐ ರವರು ಮತ್ತು ಅಪರಾದ ವಿಭಾಗದ ಸಿಬ್ಬಂದಿಯವರಾದ ದೇವಿಂದ್ರ ಕುಡಿಕೊಂಡು ದಿನಾಂಕ: 04/12/2011 ರಂದು 2000 ಗಂಟೆಗೆ ಟ್ಯಾಂಕ ಬಂಡ ರೋಡಿಗೆ ಇರುವ ಯಲ್ಲಮ್ಮ ಗುಡಿಯ ಎದುರುಗಡೆ ಮೋಟರ ವಾಹನಗಳನ್ನು ಚೆಕ್ ಮಾಡುತ್ತಿರುವಾಗ ಅಂದಾಜು 21-30 ಗಂಟೆಯ ಸುಮಾರಿಗೆ ಗೋವಾ ಹೊಟೇಲ ಕಡೆಯಿಂದ ಒಬ್ಬ ಮೋಟರ ಸೈಕಲ ಸವಾರನು ಮೋಟರ ಸೈಕಲನ್ನು ಅತೀ ವೇಗದಿಂದ ಚಲಾಯಿಸಿಕೊಂಡು ಬರುತ್ತಿದ್ದನ್ನು ಗಮನಿಸಿ ಆತನನ್ನು ನಿಲ್ಲಿಸಿ ಆತನ ಹತ್ತಿರ ಮೋಟರ ಸೈಕಲ ಬಗ್ಗೆ ಮತ್ತು ಲೈಸನ್ಸ ದಾಖಲಾತಿಗಳ ಬಗ್ಗೆ ವಿಚಾರಿಸಲು ಅವನ ಹತ್ತಿರ ಯಾವುದೇ ದಾಖಲೆಗಳು ಇದಿರುವದಿಲ್ಲ. ಮೋಟರ ಸೈಕಲ ನಂಬರ ನೋಡಲು ಹೀರೊ ಹೊಂಡಾ ಕಂಪನಿಯ (ಹೀರೊ ಹೊಂಡಾ ಫ್ಯಾಶನ್) ಕೆಎ 5/1229 ಅ||ಕಿ|| 25,000/- ಬೆಲೆಬಾಳುವದು ಇದ್ದು, ಸದರಿ ವಾಹನದ ಬಗ್ಗೆ ಸಮರ್ಪಕವಾದ ಉತ್ತರವನ್ನು ಕೊಡದೆ ಇದ್ದಾಗ ನಮಗೆ ಸಂಶಯಬಂದು ಮೋಟರ ಸೈಕಲ ಕಳ್ಳತನ ಮಾಡಿಕೊಂಡು ಬಂದಿರಬಹುದು ಅಂತಾ ಅವನ ಬಗ್ಗೆ ವಿಳಾಸ ವಿಚಾರಿಸಲು ಮಾಜೀದ ತಂದೆ ಸೈಯದ ಹುಸೇನಿ ವಯ|| 29, || ವ್ಯಾಪಾರ, ಸಾ|| ಎಮ್.ಎಸ್.ಕೆ.ಮಿಲ ಜಿಲಾನಾಬಾದ ಗುಲಬರ್ಗಾ ಅಂತಾ ಹೇಳಿದ್ದು ಆತನಿಂದ ಮೋಟಾರ ಸೈಕಲ್ ವಶಪಡಿಸಿಕೊಂಡು ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.