ಕಳ್ಳತನ ಪ್ರಕರಣ:
ಕಮಲಾಪೂರ ಠಾಣೆ: ಶ್ರೀ. ಗುರುಶಾಂತ ತಂದೆ ನರಸಪ್ಪ ಸಾ; ಓಕಳಿ ತಾ;ಜಿ; ಗುಲಬರ್ಗಾ ರವರು ನನ್ನ ಹೊಲ ಸರ್ವೆ ನಂ: 61/4 ನೇದ್ದರಲ್ಲಿ ನೀರಾವರಿ ಕುರಿತು ಬಾವಿ ತೋರಿದ್ದು ನೀರು ಪೂರೈಕೆ ಕುರಿತು ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದು ಹೊಲದಲ್ಲಿ ಒಟ್ಟು 12 ಲೈಟಿನ ಕಂಬಗಳು (ಪಿಸಿಸಿ) ಹಾಕಿಕೊಂಡು ಬಾವಿಯ ಹತ್ತಿರ ಟಿ.ಸಿ ಕೂಡಿಸಿರುತ್ತೇನೆ. ದಿನಾಂಕ: 03/11/2011 ರಂದು ನಾನು ಹೊಲದ ಕೆಲಸಕ್ಕೆ ಹೋಗಿ ಮರಳಿ ರಾತ್ರಿ 7-00 ಗಂಟೆಗೆ ಮನೆಗೆ ಬಂದಿದ್ದು, ದಿನಾಂಕ: 04/11/2011 ರಂದು ಬೆಳೆಗ್ಗೆ 9-00 ಗಂಟೆ ಸುಮಾರಿಗೆ ನಮ್ಮ ಹೊಲಕ್ಕೆ ಹೋದಾಗ ನಮ್ಮ ಹೊಲದಲ್ಲಿನ ಒಟ್ಟು 6 ಲೈಟಿನ ಕಂಬಗಳ ಅಲ್ಯೂಮಿನಿಯಂ ವೈರಗಳು ಕಂಬದ ಮೇಲೆ ಇರಲಿಲ್ಲ. ಕಂಬಕ್ಕೆ ಹಾಕಿದ ಅಲ್ಯೂಮಿನಿಯಂ ವೈರ್ ಅಂದಾಜು 1000 ಫೂಟ್ ಉದ್ದ ಇದ್ದು ಅದರ ಅ.ಕಿ. 6000/- ರೂಪಾಯಿಗಳಾಗಬಹುದು, ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 151/2011 ಕಲಂ 379 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಗ್ರಾಮ ಪಂಚಾಯತ ಸದಸ್ಯಳ ಅಪಹರಣ:
ಚಿತ್ತಾಪೂರ ಠಾಣೆ: ಶ್ರೀ ಚಂದ್ರಾಮ ದಂಡೋತಿ ಸಾ|| ಅಲ್ಲೂರ(ಕೆ) ರವರು ಹೆಂಡತಿಯಾದ ದೇವಕಿ ಇವಳು ಗ್ರಾಮ ಪಂಚಾಯತ ಸದಸ್ಯೆ ಇದ್ದು ಸುಮಾರು 20 ದಿವಸಗಳ ಹಿಂದೆ ಅತ್ತೆ ನೀಲಮ್ಮ ಹಾಗೂ ಮಾವ ಚಂದ್ರಾಮ ರವರು ಅಧ್ಯಕ್ಷರಾಗುವ ರಾಮ ತಂದೆ ಕೃಷ್ಣಪ್ಪ ನಾಟಿಕಾರ ರವರ ಕಡೆಯಿಂದ ಹಣ ತಗೆದುಕೊಂಡು ಅವಳನ್ನು ಅಪಹರಿಸಿಕೊಂಡು ಹೋಗಿರುತ್ತಾರೆ ಅವಳನ್ನು ಯಾವ ಊರಿನಲ್ಲಿ ಇಟ್ಟಿರುತ್ತಾರೆ ಎಂಬುವದು ಖಚಿತವಾಗಿ ತಿಳಿದು ಬಂದಿರುವದಿಲ್ಲ ತನ್ನ ಹೆಂಡತಿಯನ್ನು ಅಪಹರಿಸಿಕೊಂಡು ಹೋದ ನೀಲಮ್ಮ ಗಂಡ ಚಂದ್ರಾಮ ಖತಾಲ, ಚಂದ್ರಾಮ ತಂದೆ ದುರ್ಗಪ್ಪ ಖತಾಲ , ರಾಮ ತಂದೆ ಕೃಷ್ಣಪ್ಪ ನಾಟಿಕಾರ ಸಾ|| ಅಲ್ಲೂರ(ಬಿ) ರವರ ಮೇಲೆ ಕಾನೂನ ಪ್ರಕಾರ ಕ್ರಮ ಕೈಕೊಳ್ಳಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 117/2011 ಕಲಂ 365 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
No comments:
Post a Comment