POLICE BHAVAN KALABURAGI

POLICE BHAVAN KALABURAGI

05 October 2013

GULBARGA DIST REPORTED CRIME

ಮಟಕಾ ಪ್ರಕರಣ:
ಬ್ರಹ್ಮಪೂರ ಪೊಲೀಸ್ ಠಾಣೆ:
ಗುಲಬರ್ಗಾ ನಗರದ ಬ್ರಹ್ಮಪೂರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಸಿ.ಟಿ.ಬಸ್ ನಿಲ್ದಾಣದ ಹತ್ತಿರ ಮಟಕಾ ಜೂಜಾಟ ಬರೆದುಕೊಳ್ಳುತ್ತಿದ್ದ ಖಚಿತವಾದ ಬಾತ್ಮಿ ಬಂದ ಮೇರೆಗೆ ಮಾನ್ಯ ಅಮೀತಸಿಂಗ ಐ.ಪಿ.ಎಸ್. ಎಸ್.ಪಿ.ಸಾಹೇಬ ಗುಲಬರ್ಗಾ ಮತ್ತು ಮಾನ್ಯ ಕಾಶಿನಾಥ ತಳಕೇರಿ ಅಪರ ಪೊಲೀಸ್ ಅಧೀಕ್ಷಕರು ಗುಲಬರ್ಗಾ ಹಾಗು ಮಾನ್ಯ ಬಿ.ಎಸ್.ಸವಿಶಂಕರ ನಾಯ್ಕ ಡಿ.ಎಸ್.ಪಿ.ಎ ಉಪ-ವಿಭಾಗ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ಶ್ರೀ ಶರಣಬಸವೇಶ್ವರ ಬಿ. ಪಿ.ಐ. ಬ್ರಹ್ಮಪೂರ ಠಾಣೆಯ ರವರ ನೇತೃತ್ವದಲ್ಲಿ ಮತ್ತು ರೌಡಿ ನಿಗ್ರಹ ದಳದ ಸಿಬ್ಬಂದಿಯವರಾದ ಮಾರುತಿ ಎ,ಎಸ್,, ಶಿವಕುಮಾರ ಹೆಚ್.ಸಿ 08, ರಫೀಯೋದ್ದೀನ ಸಿಪಿಸಿ 370, ಶಿವಪ್ರಕಾಶ ಸಿಪಿಸಿ 615, ರಾಮು ಪವಾರ ಸಿಪಿಸಿ 761, ದೇವಿಂದ್ರಪ್ಪ 212, ಸುಭಾಷ ಸಿಪಿಸಿ 447 ರವರೆಲ್ಲರೂ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತರಾದ 1) ಅಂಬ್ರೇಶ @ ಅಂಬು ತಂದೆ ಸಂಗಣ್ಣ ಕೌಲಗಿ ವಯ|| 26 ವರ್ಷ ಉ|| ಮಟಕಾ ಬರೆದುಕೊಳ್ಳುವದು. ಸಾ|| ಆಳಂದ ಚಕ್ಕಪೋಸ್ಟ ಹತ್ತಿರ ಗುಲಬರ್ಗಾ ಇವನ ಕಡೆಯಿಂದ  1) ನಗದು ಹಣ 1,01625/- ರೂಪಾಯಿ 2) ಎಂಟು ಮಟಕಾ ಚೀಟಿ 3) ಒಂದು ಮಟಕಾ  ನಂಬರ ಬರೆದುಕೊಳ್ಳುತ್ತಿದ್ದ ನೋಟ ಪುಸ್ತಕ ಅ||ಕಿ|| 00 4) ಒಂದು ಕಾರಬನ ಕಂಪನಿಯ ಮೋಬಾಯಿಲ ಫೋನ ಅ||ಕಿ|| 1000/- ರೂಪಾಯಿ 5) ಒಂದು ಬಾಲ ಪೇನ್ನ ಅ||ಕಿ|| 00 ದೊರೆತವು 2) ಗಂಗಾಧರ ತಂದೆ ನಾಗೇಂದ್ರಪ್ಪ ಪಾಟೀಲ ವಯ|| 24 ವರ್ಷ ಉ|| ಮಟಕಾ ಬರೆದುಕೊಳ್ಳುವದು. ಸಾ|| ಆಳಂದ ಕಾಲೋನಿ ಶೇಖ ರೋಜಾ ಗುಲಬರ್ಗಾ ಇವನ ಕಡೆಯಿಂದ  1) ನಗದು ಹಣ 91000/- ರೂಪಾಯಿ 2) ಐದು ಮಟಕಾ ಚೀಟಿ 3) ಒಂದು ಬಾಲ ಪೇನ್ನ ಅ||ಕಿ|| 00 ದೋರತ್ತಿದ್ದು, ಹೀಗೆ ಒಟ್ಟು 1,92,625/- ರೂಪಾಯಿಗಳು  ಜಪ್ತಿ ಮಾಡುವಲ್ಲಿ ಯಶ್ವಸಿಯಾಗಿದ್ದು ಈ ಬಗ್ಗೆ  ಜಿಲ್ಲಾ ಪೊಲೀಸ ಅಧೀಕ್ಷಕರು ಮತ್ತು ಅಪರ ಜಿಲ್ಲಾ ಪೊಲೀಸ ಅಧೀಕ್ಷಕರು ಪ್ರಶಂಸಿರುತ್ತಾರೆ.

ಅಪಘಾತ ಪ್ರಕರಣ :
ಮುಧೋಳ ಠಾಣೆ : ಶ್ರೀ ಶಕೀಲ ಅಹೇಮದ್ ತಂದೆ ಲಾಲ ಅಹೇಮದ್ ಸಾ: ಕೊನಾಪೂರ ದಿನಾಂಕ: 03-10-13 ರಂದು ಮಧ್ಯಾಹ್ನ 1200 ಗಂಟೆ ಸುಮಾರಿಗೆ ನಾನು ನನಗೆ ಪರಿಚಯವಿರುವ ಹಬೀಬ ಪಾಶಾ ತಂದೆ ಅಬ್ದುಲ್ ರಹೀಮ ಸಾ: ಮದಾನ ತಾ: ಸೇಡಂ ಇಬ್ಬರು ಕೂಡಿ ನಮ್ಮ ಅಳಿಯನಾದ ಮಹ್ಮದ ಮೀಯಾ ಸಾ: ಮುಧೋಳ ಇತನ ಮಧುವೆಯ ನಿಶ್ಚಯ ಕಾರಣಕ್ಕೆ ಕೊಡ್ಲಾ ಗ್ರಾಮಕ್ಕೆ ಹೊಗುವದಕ್ಕೆ ಹಿರೋ ಹೊಂಡಾ ಮೊ/ಸೈ ನಂ ಕೆಎ/32-ಇಡಿ-5824 ನೇದ್ದರ ಮೇಲೆ ಕುಳಿತು ಹೊಗುತ್ತಿದ್ದಾಗ ಮುಧೋಳದಿಂದ ಸೇಡಂಕ್ಕೆ ಹೊಗುವ ರಸ್ತೆಯ ಮೇಲೆ ಹಬೀಬ ಪಾಶಾ ಇತನು ಮೊ/ಸೈ ನ್ನು ಅತಿವೇಗ ಹಾಗು ನಿಷ್ಕಾಳಜಿತನದಿಂದ ನಡೆಸುತ್ತಾ ಬಂದು ಆಡಕಿ ಗೇಟ್ ಇನ್ನು 100 ಮೀಟರ್ ಅಂತರದಲ್ಲಿದ್ದಾಗ ರಸ್ತೆಯಲ್ಲಿ ದನಗಳು ಬರುತ್ತಾದ್ದಾಗ, ಹಬೀಬ ಪಾಶಾ ಇತನು ತನ್ನ ಮೊ/ಸೈನ ನಿಯಂತ್ರಣ ತಪ್ಪಿ ರಸ್ತೆಯ ಎಡಬದಿಯಲ್ಲಿರುವ ಬ್ರೀಡ್ಜ್ ಹತ್ತಿರ ಪ್ಲಟಿ ಮಾಡಿ ಅಪಘಾತ ಪಡಿಸಿದ್ದು, ಇದರಿಂದ ನನಗೆ ಬಲ ಕಪಾಳಕ್ಕೆ ಹಾಗು ಬಲ ಕಣ್ಣಿಗೆ ಭಾರಿ ರಕ್ತಗಾಯ ಹಾಗು ಗುಪ್ತಗಾಯವಾಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ಮಳಖೇಡ ಠಾಣೆ : ಚಂದ್ರಶೇಖರ ತಂದೆ ಭಿಮಶಾ ಬಡಿಗೇರ ಈತನು ಆರ್.ಸಿ.ಎಫ್ ಕಂಪನಿಯಲ್ಲಿ ಮೌಂಟೆನ್ ಅರ್ಥ ಮೂವರ್ಸ ಕಾಂಟ್ರ್ಯಾಕ್ಟರ್ ಹತ್ತಿರ ಲೋಡರ್ ಆಪರೇಟರ್ ಆಗಿ ಕೇಲಸ ಮಾಡುತ್ತಿದ್ದು ದಿನಾಂಕ 04-10-2013 ರಂದು ಬೇಳಗ್ಗೆ 10-30 ಗಂಟೆಗೆ ಕಂಪನಿಯಲ್ಲಿ ಕೇಲಸ ಮಾಡುತ್ತಿದ್ದಾಗ ಒಮ್ಮೆಲೆ ಎದೆ ನೋವು ಅಂತ ಹೃದಯಾಘಾತದಿಂದ ಕುಸಿದು ಬಿದ್ದನು ಆಗ ಉಪಚಾರಕ್ಕಾಗಿ ಆಸ್ಪತ್ರೆಗೆ ಸೇರಿಸುವಾಗ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ ಅಂತಾ ಶ್ರೀಮತಿ ಶಿವನಾಗಮ್ಮ ಗಂಡ ಚಂದ್ರಶೇಖರ ಬಡಿಗೇರ ಸಾ: ಮರಗೋಳ ಗ್ರಾಮ ತಾ: ಚಿತ್ತಾಪುರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.