POLICE BHAVAN KALABURAGI

POLICE BHAVAN KALABURAGI

18 July 2013

GULBARGA DIST REPORTED CRIMES

ಮಹಿಳಾ ಪೊಲೀಸ್ ಠಾಣೆ :
ವರದಕ್ಷಿಣೆ ಕಿರುಕಿಳ ಪ್ರಕರಣ:

ಶ್ರೀಮತಿ ಸರಸ್ವತಿ ಗಂಡ ಸಿದ್ದರಾಮ್ ಅಲ್ಲಾಪೂರ  ಸಾ:ವಿವೇಕಾನಂದ ನಗರ  ಖಾದ್ರೀ ಚೌಕ ಗುಲಬರ್ಗಾ ಇವರ ಮದುವೆಯು 14 ವರ್ಷಗಳ ಹಿಂದೆ ಸಿದ್ದರಾಮ್ ಇತನೊಂದಿಗೆ ದಂಗಾಪೂರ ಗ್ರಾಮದಲ್ಲಿ ನಡೆದಿದ್ದು ಈಗ ಮಿನಾಕ್ಷೀ ಎಂಬ 10 ವರ್ಷದ ಮಗಳು ಹಾಗೂ ಆಕಾಶ ಎಂಬ 8 ವರ್ಷದ ಮಗನಿರುತ್ತಾನೆ. ಮದುವೆಯಾದ ಕೆಲವು ದಿನಗಳ ನಂತರ ಸಿದ್ದರಾಮ್ ಇತನು ಪ್ರತಿದಿನ ಕುಡಿದು ಬಂದು ಹೊಡೆ ಬಡೆ ಮಾಡಿ ತವರು ಮನೆಯಿಂದ 20 ಸಾವಿರ ರೂಪಾಯಿ ತೆಗೆದುಕೊಂಡು ಬರುವಂತೆ ಒತ್ತಾಯಿಸಿದ್ದು  ತವರು ಮನೆಯಿಂದ 20 ಸಾವಿರ ರೂಪಾಯಿ ತಂದುಕೊಟ್ಟರು ಸಹ ಹೊಡೆ ಬಡೆ ಮಾಡುತ್ತಾ ಮಾನಸಿಕ ದೈಹಿಕ ಹಿಂಸೆ ಕೊಡುತ್ತಿದ್ದು. ಅಲ್ಲದೆ ಶ್ರೀಮಂತರಾಯ ತಂದೆ ಈರಪ್ಪಾ ಮತ್ತು ಬಸಮ್ಮಾ ಗಂಡ ಬಸವರಾಜ ಸಾ:ಯಲಗುಂಡಾ ತಾ: ಬಸವಕಲ್ಯಾಣ  ಇವರ ಸಹಾಯದಿಂದ ದಿನಾಂಕ:24.08.2009 ರಂದು ಸವೀತಾ @ ಸಂಗಿತಾ ,  ಬಸವರಾಜ ತಂ. ನಿರಂಜನ ಸಾ: ದುತ್ತರಗಾವ ಇವಳೋಂದಿಗೆ ಮದುವೆಯಾಗಿದ್ದು ಸರಸ್ವತಿಗೆ ಆರೋಪಿ ಸಂಗಿತಾ , ಶ್ರೀಶೈಲ್ , ಬಸವರಾಜ, ಬಸಮ್ಮಾ, ಶ್ರೀಶೈಲ್ ತಂ. ಶ್ರೀಮಂತರಾಯ, ಬಸಮ್ಮಾ ಗಂಡ ಬಸವರಾಜ ಎಲ್ಲರೊ ತವರು ಮನೆಯಿಂದ ಇನ್ನು ಹಣ ತರುವಂತೆ ಪಿಡಿಸಿ ಮಾನಸಿಕ ಹಾಗೂ ದೈಹಿಕ ಹಿಂಸೆ ಕೊಟ್ಟು ವರದಕ್ಷಣೆ ಕಿರುಕುಳ ನೀಡಿದ ಬಗ್ಗೆ ಸಲ್ಲಿಸಿದ ಖಾಸಗಿ ದೂರಿನ ಅನ್ವಯ ಮಹಿಳಾ ಪೊಲೀಸ ಠಾಣೆಯಲ್ಲಿ  ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ