POLICE BHAVAN KALABURAGI

POLICE BHAVAN KALABURAGI

10 October 2012

GULBARGA DISTRICT REPORTED CRIME


ಗಾಂಜ ಜಪ್ತಿ:
ಯಡ್ರಾಮಿ ಪೊಲೀಸ್ ಠಾಣೆ:ದಿನಾಂಕ 10-10-2012 ರಂದು ಮಧ್ಯಾಹ್ನ 12-30 ಗಂಟೆಗೆ ಹಳ್ಳಿ ಬೇಟ್ಟಿ  ಕುರಿತು ಪಿ.ಎಸ.ಐ ರವರು ಹೋರಟಾಗ ಮಳ್ಳಿ ಸಿಮಾಂತರದಲ್ಲಿಯ ಹೊಲ ಸರ್ವೇ ನಂ 91 ರಲ್ಲಿ ಅಕ್ರಮವಾಗಿ ಗಾಂಜಾದ ಗಿಡಗಳು ಬೆಳಸಿರುವುದಾಗಿ ತಿಳಿದು ಬಂದಿದ್ದರಿಂದ ಪಂಚರ ಸಮಕ್ಷಮ  ಸ್ಥಳಕ್ಕೆ ಹೋಗಿ ಪರಿಶೀಲಿಸಿ ನೋಡಲು  ನಾನಾಗೌಡ ತಂದೆ ಗೋಲ್ಲಾಳಪ್ಪಗೌಡ ಪೊಲೀಸ್ ಪಾಟೀಲ ವಯ: 52 ವರ್ಷ ಜಾ: ರಡ್ಡಿ ಉ: ಒಕ್ಕಲುತನ ಸಾ: ಬಿರಾಳ ಸರ್ವೇ ನಂ 91 ರಲ್ಲಿ ಕಬ್ಬಿನ ಬೆಳೆಯಲ್ಲಿ 3 ಗಾಂಜಾದ ಗಿಡಗಳಿದ್ದು, ಸುಮಾರು 5 ಕೆ.ಜಿ ತೂಕದ ಅಂದಾಜು ಕಿಮ್ಮತ್ತು 15,000=00 ರೂಪಾಯಿ ಮೌಲ್ಯದನ್ನು ಸಿದ್ದರಾಮೇಶ್ವರ ಎ ಗಡೇದ ಪಿ.ಎಸ್.ಐ ರವರು ಜಪ್ತಿ ಮಾಡಿಕೊಂಡು ಠಾಣೆ ಗುನ್ನೆ ನಂ 108/2012 ಕಲಂ 8(ಬಿ), 20(ಎ) ಎನ್.ಡಿ.ಪಿ.ಎಸ್. ಆಕ್ಟ 1985 ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DISTRICT REPORTED CRIME


ಕೊಲೆ ಪ್ರಕರಣ:
ಆಳಂದ ಪೊಲೀಸ್ ಠಾಣೆ: ಶ್ರೀ ಶ್ರವಣಕುಮಾರ ತಂದೆ ಅರ್ಜುನ ಕಾಂಬಳೆ ರವರು ನನ್ನ ಮಗಳಾದ ಮಾಹಾದೇವಿಗೆ ಜಮಗಾ [ಕೆ] ಗ್ರಾಮದ ಜೈಭೀಮ ಬನಸೋಡೆ ಜೋತೆ ಸುಮಾರು 15 ವರ್ಷಗಳ ಹಿಂದೆ ಮದುವೆ ಮಾಡಿ ಕೊಟ್ಟಿದ್ದು, ಆವಳಿಗೆ 3 ಮಕ್ಕಳಿರುತ್ತವೆ. ಈಗ ಒಂದು ತಿಂಗಳ ಹಿಂದೆ ಅವಳ ಗಂಡನ ಮತ್ತು ಗಂಡನ ಮನೆಯವರು ಹಲ್ಲೆ ತಾಳಲಾರದೆ ನನ್ನ ಮಗಳ ನನ್ನ ಮನೆಗೆ ಬಂದಿದ್ದಳು ದಿನಾಂಕ:07-10-2012 ರಂದು ನನ್ನ ಆಳಿಯನಾದ ಜೈಭೀಮ ನನ್ನ ಮನೆಗೆ ಬಂದು ನನ್ನ ಮಗಳಿಗೆ ಅವಾಚ್ಯ ಶಬ್ದಗಳಿಂದ ಬೈದು ಅವಳಿಗೆ ಹೊಡೆದು ತನ್ನ ಸಂಗಡ ಜಮಗಾ [ಕೆ] ಗ್ರಾಮಕ್ಕೆ ಕರೆದುಕೊಂಡು ಹೋದನು. ದಿನಾಂಕ:09-10-2012 ರಂದು ನನ್ನ ಮಗಳ ಸಾವಿನ ಸುದ್ದಿ ತಿಳಿದಿದ್ದು, ಮಗಳ ಮೃತ ದೇಹ ಬಾವಿಯಲ್ಲಿ ತೆಲುತ್ತಿತ್ತು ಮೃತದೇಹ ಬಾವಿಯಿಂದ ಹೋರಗೆ ತೆಗೆದು ನೋಡಿದಾಗ ಅವಳ ದೇಹದ ಮೇಲೆ ಗಾಯದ ಗುರುತುಗಳು ಕಂಡು ಬಂದಿರುತ್ತವೆ. ಅಂದರೆ ಅವಳ ಎರಡು ಕಣ್ಣುಗಳು ಮುಚ್ಚಿದ್ದು, ಕಣ್ಣುಗಳಿಂದ ರಕ್ತ ಬಂದಿದ್ದು ಹಣೆಯ ಮೇಲೆ ರಕ್ತಗಾಯಳಾಗಿವೆ. ಮೂಗಿನಿಂದ ರಕ್ತ ಸ್ರಾವ ಆಗಿದೆ ಮತ್ತು ಹೊಕ್ಕಳು ಕೆಳಭಾಗ ಗುಪ್ತಗಾಯಗಳು ಕಂದು ಬಣ್ಣ ಕಾಣಿಸಿರುತ್ತೆವೆ. ನನ್ನ ಮಗಳು ಮಾಹಾದೇವಿ ಅವಳ ಗಂಡ  ಜೈಭೀಮ, ಮತ್ತು ಬಾಬುರಾವ, ರಾಮ, ರೂಪಾ, ಸುರೇಖಾ, ಅಂಬವ್ವಾ ಇವರೆಲ್ಲರೂ ಕೂಡಿಕೊಂಡು ಕೊಲೆ ಮಾಡಿದ್ದಾರೆ ಅಂತಾ  ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 197/2012 ಕಲಂ, 302, ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.